ವಾಟ್ಸಪ್‌ನಲ್ಲಿ ಈ ತಪ್ಪುಗಳನ್ನು ಮಾಡುತ್ತಿದ್ದರೇ, ಇಂದೇ ನಿಲ್ಲಿಸಿ!

|

ಅತೀ ಹೆಚ್ಚಿನ ಸಕ್ರಿಯ ಬಳಕೆದಾರರನ್ನು ಒಳಗೊಂಡಿರುವ ವಾಟ್ಸಪ್‌ ಅಪ್ಲಿಕೇಶನ್ ತನ್ನ ಬಳಕೆದಾರರಿಗೆ ಹಲವು ಮಹತ್ತರ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಅದಾಗ್ಯೂ ಬಹುತೇಕ ಬಳಕೆದಾರರು ವಾಟ್ಸಪ್‌ನಲ್ಲಿ ಪ್ರೈವೆಸಿ ಆಯ್ಕೆಯಲ್ಲಿ ಅನೇಕ ಮಿಸ್‌ಟೆಕ್‌ಗಳನ್ನು ಮಾಡುತ್ತಾರೆ. ಸಣ್ಣ ಪುಟ್ಟ ಮಿಸ್‌ಟೆಕ್‌ಗಳು ಅನೇಕ ಅಪಾಯಗಳಿಗೆ ದಾರಿ ಮಾಡಿಕೊಡುತ್ತದೆ. ಹೀಗಾಗಿ ವಾಟ್ಸಪ್‌ ಬಳಕೆದಾರರು ತಮ್ಮ ಪ್ರೈವೆಸಿ ಸುರಕ್ಷತೆಗೆ ಆದ್ಯತೆ ನೀಡಲು ಕೆಲವು ಕ್ರಮಗಳನ್ನು ಅನುಸರಿಸಬೇಕು.

ಫೇಸ್‌ಬುಕ್ ಒಡೆಯನ

ಹೌದು, ಫೇಸ್‌ಬುಕ್ ಒಡೆಯನದ ವಾಟ್ಸಪ್ ಬಳಕೆದಾರರ ಸುರಕ್ಷತೆಗೆ ಇತ್ತೀಚಿಗೆ ಬಳಕೆದಾರರ ಖಾತೆಯ ಭದ್ರತೆಗಾಗಿ ನೂತನ ಫೀಚರ್ಸ್‌ಗಳನ್ನು ಸೇರಿಸಿದೆ. ವಾಟ್ಸಪ್‌ನಲ್ಲಿ ಲಭ್ಯ ಆಗಿರುವ ಸುರಕ್ಷತೆಯ ಫೀಚರ್ಸ್‌ಗಳನ್ನು ಬಹುತೇಕ ಬಳಕೆದಾರರು ಬಳಕೆ ಮಾಡುವುದಿಲ್ಲ. ಆದರೆ ಪ್ರತಿಯೊಬ್ಬ ವಾಟ್ಸಪ್ ಬಳಕೆದಾರರು ಮರೆಯದೆ ಈ ಅಗತ್ಯ ಪ್ರೈವೆಸಿ ಫೀಚರ್ಸ್‌ಗಳನ್ನು ಬಳಕೆ ಮಾಡಬೇಕು. ಇದರಿಂದ ವಾಟ್ಸಪ್ ಮಾಹಿತಿ ಮತ್ತು ವಾಟ್ಸಪ್ ಖಾತೆ ಸುರಕ್ಷಿತವಾಗಿರುತ್ತದೆ.

ವಾಟ್ಸಪ್ ಖಾತೆ ಮುಕ್ತವಾಗಿ ಇಡಬೇಡಿ

ವಾಟ್ಸಪ್ ಖಾತೆ ಮುಕ್ತವಾಗಿ ಇಡಬೇಡಿ

ಫೋನ್ ಕಾಂಟ್ಯಾಂಕ್ಟ್‌ ಲಿಸ್ಟ್‌ನಲ್ಲಿರುವ ವಾಟ್ಸಪ್‌ ಬೆಂಬಲಿತ ನಂಬರ್‌ಗಳು ಕಾಣಿಸುತ್ತವೆ. ಆದರೆ ಇಲ್ಲಿರುವ ಎಷ್ಟೋ ನಂಬರ್‌ಗಳಿಗೆ ನೀವು ಮೆಸೆಜ್ ಮಾಡಿರುವುದೇ ಇಲ್ಲ ಮತ್ತು ಮಾಡುವ ಅಗತ್ಯವು ಇರುವುದಿಲ್ಲ. ಆದರೂ ನಿಮ್ಮ ವಾಟ್ಸಪ್‌ ಲಿಸ್ಟ್‌ನಲ್ಲಿ ಆ ನಂಬರ್ ಕಾಣಿಸುತ್ತಿರುತ್ತದೆ. ಎಂದೂ ಮೆಸೆಜ್ ಮಾಡದ ಕೆಲವೊಂದು ನಂಬರ್‌ಗಳನ್ನು ವಾಟ್ಸಪ್‌ ಖಾತೆಯಿಂದ ದೂರವಿಡಿ.

ವಾಟ್ಸಪ್ DP ಕಂಟ್ರೋಲ್ ಮಾಡಿ

ವಾಟ್ಸಪ್ DP ಕಂಟ್ರೋಲ್ ಮಾಡಿ

ವಾಟ್ಸಪ್‌ನಲ್ಲಿ ಪ್ರೋಫೈಲ್‌ ಪಿಚ್ಚರ್ ಆಯ್ಕೆಯನ್ನು ಕಂಟ್ರೋಲ್ ಮಾಡುವ ಆಯ್ಕೆ ಇದೆ. ನಿಮ್ಮ ಕಾಂಟ್ಯಾಕ್ಟ್‌ ಲಿಸ್ಟ್‌ನಲ್ಲಿರುವವರಿಗೆ ಮಾತ್ರ, ಎಲ್ಲರಿಗೂ ಮತ್ತು ಯಾರಿಗೂ ಇಲ್ಲ ಆಯ್ಕೆಗಳು ಇವೆ. ಒಂದು ವೇಳೆ ಡಿಪಿ ಫೋಟೊ ಎಲ್ಲರಿಗೂ ಕಾಣಿಸುವ ಆಯ್ಕೆ ಸೆಲೆಕ್ಟ್ ಮಾಡಿದ್ದರೇ, ಆಗ ನಿಮ್ಮ ವೈಯಕ್ತಿಕ ಹಾಗೂ ಕುಟುಂಬದ ಬಗ್ಗೆ ಹೆಚ್ಚು ಮಾಹಿತಿ ಬಿಂಬಿಸುವ ಫೋಟೊಗಳನ್ನು ಹಾಕಬೇಡಿರಿ.

ಟು ಸ್ಟೇಪ್ ವೇರಿಫಿಕೇಶನ್ ಮಾಡಿ

ಟು ಸ್ಟೇಪ್ ವೇರಿಫಿಕೇಶನ್ ಮಾಡಿ

ವಾಟ್ಸಪ್‌ ಖಾತೆಗೆ ಹೆಚ್ಚಿನ ಸುರಕ್ಷತೆ ಒದಗಿಸುವ ನಿಟ್ಟಿನಲ್ಲಿ ಟು ಸ್ಟೇಪ್ ವೇರಿಫೀಕೇಶನ್ ಫೀಚರ್ ಸೇರಿಸಲಾಗಿದೆ. ಈ ಆಯ್ಕೆಯು ಸೆಟ್ಟಿಂಗ್‌ನಲ್ಲಿ ಕಾಣಿಸಲಿದ್ದು, ಸಕ್ರಿಯ ಮಾಡಿಕೊಳ್ಳಿ. ಯಾರಾದರೂ ನಿಮ್ಮ ವಾಟ್ಸಪ್ ಖಾತೆಯನ್ನು ತೆರೆಯಲು ಪ್ರಯತ್ನಿಸಿದರೇ ಈ ಆಯ್ಕೆ ರಕ್ಷಣೆ ನೀಡಲಿದೆ.

ವಾಟ್ಸಪ್ ಸ್ಟೇಟಸ್‌ನಲ್ಲಿ ಖಾಸಗಿತನ ಕಾಪಾಡಿ

ವಾಟ್ಸಪ್ ಸ್ಟೇಟಸ್‌ನಲ್ಲಿ ಖಾಸಗಿತನ ಕಾಪಾಡಿ

ವಾಟ್ಸಪ್‌ನಲ್ಲಿನ ಸ್ಟೇಟಸ್‌ ಆಯ್ಕೆಯು ಈಗಾಗಲೇ ಸಿಕ್ಕಾಪಟ್ಟೆ ಟ್ರೆಂಡಿಂಗ್‌ನಲ್ಲಿದ್ದು, ಬಳಕೆದಾರರು ಅನೇಕ ಫೋಟೊಗಳನ್ನು ಸ್ಟೇಟಸ್‌ಗೆ ಅಪ್‌ಲೋಡ್ ಮಾಡುತ್ತಾರೆ. ನೀವು ಸೆಟ್ಟಿಂಗ್‌ನಲ್ಲಿ ಸ್ಟೇಟಸ್ ಎಲ್ಲರಿಗೂ ಕಾಣಿಸುವ ಆಯ್ಕೆ ಸೆಲೆಕ್ಟ್ ಮಾಡಿದ್ದರೇ, ಅದನ್ನು ಮೈ ಕಾಂಟ್ಯಾಂಕ್ಸ್ಟ್ ಅಥವಾ ನಿಮ್ಮ ಸ್ನೇಹಿತರಿಗೆ ಮತ್ತು ಕುಟುಂಬ ಸದಸ್ಯರಿಗೆ ಮಾತ್ರ ಕಾಣುವಂತೆ ಕಸ್ಟಮೈಸ್ ಮಾಡಿಕೊಳ್ಳಿ.

ಗ್ರೂಪ್ ಸೇರುವಲ್ಲಿ ಕಂಟ್ರೋಲ್ ಮಾಡಿ

ಗ್ರೂಪ್ ಸೇರುವಲ್ಲಿ ಕಂಟ್ರೋಲ್ ಮಾಡಿ

ಅನೇಕ ಸಂದರ್ಭಗಳಲ್ಲಿ ವಿವಿದೆಡೆ ಮೊಬೈಲ್ ನಂಬರ್ ನೀಡಿರುತ್ತಿರಿ. ಕೆಲವರು ಲಭ್ಯ ಇರುವ ನಂಬರ್‌ಗಳನ್ನು ಸೇರಿಸಿ ವಾಟ್ಸಪ್ ಗ್ರೂಪ್ ರಚಿಸುತ್ತಿರುತ್ತಾರೆ ಆ ಗ್ರೂಪ್‌ಗಳು ನಿಮಗೆ ಇಷ್ಟವಾಗದೇ ಇರಬಹುದು ಮತ್ತು ಖಾಸಗಿತನಕ್ಕೆ ಭಂಗವು ತರಬಹುದು. ಇಂಥ ಕಿರಿಕಿರಿಯಿಂದ ದೂರ ಇರಬೇಕು ಎಂದರೇ ಗ್ರೂಪ್ ಸೇರುವ ಆಯ್ಕೆಯಲ್ಲಿ ನಿಯಂತ್ರಣ ಮಾಡಿಕೊಳ್ಳಿ.

Most Read Articles
Best Mobiles in India

English summary
Here are few mistakes that you should stop doing on WhatsApp right now.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X