Home
ಸುದ್ದಿಜಾಲ

ಸಿಮ್‌ ಕಾರ್ಡ್‌ ಮಾರಾಟ, ಖರೀದಿಗೆ ಮತ್ತೆ ಕಠಿಣ ನಿಯಮ ಜಾರಿ... 10 ಲಕ್ಷ ರೂ. ದಂಡ!

ಇದೇ ವರ್ಷದ ಆಗಸ್ಟ್‌ ತಿಂಗಳಲ್ಲಿ ಸರ್ಕಾರ ಸಿಮ್ ಕಾರ್ಡ್‌ (SIM card) ಸಂಬಂಧ ಕೆಲವು ಕಠಿಣ ನಿಯಮಗಳನ್ನು ಘೋಷಣೆ ಮಾಡಿತ್ತು. ಇದಾಗಿ ಕೆಲವೇ ವಾರಗಳ ನಂತರ ಅಂದರೆ ಈಗ ಈ ವಿಷಯದಲ್ಲಿ ನಿಯಮಗಳನ್ನು ಇನ್ನಷ್ಟು ಬಿಗಿಗೊಳಿಸುತ್ತಿದೆ. ಈ ಮೂಲಕ ಯಾರೇ ಆದರೂ ಇನ್ಮುಂದೆ ಸಿಮ್‌ಗಳನ್ನು ಅಷ್ಟೊಂದು ಸುಲಭವಾಗಿ ಖರೀದಿ ಮಾಡಲು ಸಾಧ್ಯ ಆಗುವುದಿಲ್ಲ. ಹಾಗೆಯೇ ಮಾರಲು ಸಾಧ್ಯವಿಲ್ಲ.

ಹೌದು, ಭಾರತದಲ್ಲಿ ಸಿಮ್ ಕಾರ್ಡ್‌ಗಳನ್ನು ಹೇಗೆ ಮಾರಬಹುದು ಮತ್ತು ಬಳಸಬಹುದು ಎಂಬುದನ್ನು ಟೆಲಿಕಾಂ ಇಲಾಖೆ (Department of Telecom) ನಿರ್ಧಾರ ಮಾಡುತ್ತದೆ. ಅದರಂತೆ ಈಗ ಈ ಮೂಲಕ ಸಿಮ್ ಕಾರ್ಡ್‌ ಖರೀದಿ ಹಾಗೂ ಸಕ್ರಿಯಗೊಳಿಸಿಕೊಳ್ಳುವ ನಿಯಮಗಳನ್ನು ಇನ್ನಷ್ಟು ಬಿಗಿಗೊಳಿಸಿ ಹೊಸ ನಿಯಮಗಳನ್ನು ಹೊರತಂದಿದೆ. ಈ ಸಂಬಂಧ DoT ಎರಡು ಸುತ್ತೋಲೆಗಳನ್ನು ಹೊರಡಿಸಿದೆ. ಹಾಗಿದ್ರೆ, ಬನ್ನಿ ಸಿಮ್‌ ಖರೀದಿಯಲ್ಲಿ ಇರುವ ಹೊಸ ನಿಯಮಗಳೇನು?, ಇದರಿಂದ ಸರ್ಕಾರಕ್ಕೆ ಏನು ಲಾಭ? ಎಂಬಿತ್ಯಾದಿ ಮಾಹಿತಿಯನ್ನು ತಿಳಿಯೋಣ.

ಸಿಮ್‌ ಕಾರ್ಡ್‌ ಮಾರಾಟ, ಖರೀದಿಗೆ ಮತ್ತೆ ಕಠಿಣ ನಿಯಮ ಜಾರಿ... 10 ಲಕ್ಷ ರೂ. ದಂಡ!

ಸಿಮ್‌ ಕಾರ್ಡ್‌ ಸಂಬಂಧ ಹೊಸ ನಿಯಮ: ಈಗ ಹೊರಡಿಸಲಾದ ಎರಡು ನಿರ್ದೇಶನಗಳಲ್ಲಿ ಒಂದು ಸಿಮ್‌ ಬಳಕೆದಾರರಿಗೆ ಸಂಬಂಧಿಸಿದ್ದರೆ ಇನ್ನೊಂದು ಇನ್ನೊಂದು ಏರ್‌ಟೆಲ್ ಮತ್ತು ಜಿಯೋದಂತಹ ಟೆಲಿಕಾಂ ಕಂಪನಿಗಳಿಗೆ ಸಂಬಂಧಿಸಿದೆ. ಭಾರತದಲ್ಲಿ ಸಿಮ್ ಕಾರ್ಡ್‌ಗಳನ್ನು ಹೇಗೆ ಮಾರಾಟ ಮಾಡಲಾಗುತ್ತದೆ ಎಂಬುದನ್ನು ಕೂಲಂಕಷವಾಗಿ ಪರಿಶೀಲಿಸಲು ಆಶಿಸುತ್ತಿರುವ ಟೆಲಿಕಾಂ ಕಂಪನಿಗಳಿಗೆ ಇದು ಸಹ ಎರಡನೇ ನಿರ್ದೇಶನವಾಗಿದೆ.

ಹೊಸ ನಿಯಮಗಳ ಪ್ರಕಾರ ಭಾರತದಲ್ಲಿ ಸಿಮ್ ಕಾರ್ಡ್‌ಗಳನ್ನು ಮಾರಾಟ ಮಾಡುವ ರೀತಿಯಲ್ಲಿ ಸುರಕ್ಷತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದ್ದರೂ, ನಿರ್ದಿಷ್ಟವಾಗಿ ಗಮನಿಸಬೇಕಾದ ಅಂಶವೆಂದರೆ ಸಿಮ್ ಕಾರ್ಡ್‌ಗಳನ್ನು ಮಾರಾಟ ಮಾಡುವ ಅಂಗಡಿಗಳಿಗೆ ಹೆಚ್ಚು ಕಠಿಣವಾದ ಕೆವೈಸಿ ಅನ್ನು ಕಡ್ಡಾಯಗೊಳಿಸುವ ನಿಯಮಗಳನ್ನು ಹೇರಲಾಗಿದೆ. ಅಷ್ಟೇ ಅಲ್ಲದೆ ಏರ್‌ಟೆಲ್ ಮತ್ತು ಜಿಯೋದಂತಹ ಟೆಲಿಕಾಂ ಕಂಪನಿಗಳು ತಮ್ಮ ಸಿಮ್ ಕಾರ್ಡ್‌ಗಳನ್ನು ಮಾರಾಟ ಮಾಡುವ ಅಂಗಡಿಗಳ ಸಂಪೂರ್ಣ ಕೆವೈಸಿ ಅನ್ನು ಮಾಡಬೇಕು ಎಂದು DoT ಉಲ್ಲೇಖಿಸಿದೆ.

ಇನ್ನು ನಿಯಮ ಪಾಲನೆಯಲ್ಲಿ ತಪ್ಪಾದರೆ ಪ್ರತಿ ಅಂಗಡಿಗೆ 10 ಲಕ್ಷ ರೂ. ದಂಡ ವಿಧಿಸಲಾಗುತ್ತದೆ ಎಂಬ ಗಂಭೀರ ಎಚ್ಚರಿಕೆ ನೀಡಲಾಗಿದೆ. ಅಕ್ಟೋಬರ್ 1, 2023 ರಿಂದ ಈ ನಿಯಮ ಜಾರಿಗೆ ಬರಲಿದ್ದು, ಸಿಮ್ ಕಾರ್ಡ್‌ಗಳನ್ನು ಮಾರಾಟ ಮಾಡುವ ಅಸ್ತಿತ್ವದಲ್ಲಿರುವ ಅಂಗಡಿಗಳು ಸಹ ಸೆಪ್ಟೆಂಬರ್ 30, 2024 ರೊಳಗೆ ಹೊಸ ನಿಯಮಗಳ ಪ್ರಕಾರ ತಮ್ಮ ಕೆವೈಸಿ ಅನ್ನು ಮಾಡಿಸಬೇಕು ಎಂದು ತಿಳಿಸಲಾಗಿದೆ.

ದೂರಸಂಪರ್ಕ ಸೇವೆಗಳನ್ನು ಒದಗಿಸುವುದಕ್ಕಾಗಿ ಒಬ್ಬ ಪರವಾನಗಿದಾರನು ಗ್ರಾಹಕರನ್ನು ಪಡೆಯಲು ಪಾಯಿಂಟ್ ಆಫ್ ಸೇಲ್ (PoS) ಅನ್ನು ನೇಮಿಸಿದರೆ, ರಾಷ್ಟ್ರದ ಭದ್ರತೆಯ ಹಿತದೃಷ್ಟಿಯಿಂದ ಆ ಪರವಾನಗಿದಾರನು ಪಾಯಿಂಟ್ ಆಫ್ ಸೇಲ್ ಅನ್ನು ನೋಂದಾಯಿಸಲು ಕಡ್ಡಾಯವಾಗಿರುತ್ತದೆ. ಅಂದರೆ ಪ್ರತಿ ಫ್ರಾಂಚೈಸಿ, ಏಜೆಂಟ್ ಮತ್ತು ವಿತರಕರನ್ನು ಪ್ರತ್ಯೇಕವಾಗಿ ನೋಂದಾಯಿಸಬೇಕು ಎಂದು DoT ನಿರ್ದೇಶನ ನೀಡಿದೆ.

ಅಂದರೆ ಏರ್‌ಟೆಲ್ ಮತ್ತು ಜಿಯೋದಂತಹ ಕಂಪನಿಗಳು ತಮ್ಮ ಸಿಮ್ ಕಾರ್ಡ್‌ಗಳನ್ನು ಯಾರು ಮತ್ತು ಯಾವ ರೀತಿಯಲ್ಲಿ ಮಾರಾಟ ಮಾಡುತ್ತಿದ್ದಾರೆ ಎಂಬುದರ ಮೇಲೆ ಹದ್ದಿನ ಕಣ್ಣನ್ನು ಇಡಬೇಕು ಎಂಬುದನ್ನು ಇಲ್ಲಿ ಒತ್ತಿ ಹೇಳಲಾಗಿದೆ. ಅದರಲ್ಲೂ ಅಸ್ಸಾಂ, ಕಾಶ್ಮೀರ ಮತ್ತು ಈಶಾನ್ಯದಂತಹ ಕೆಲವು ಪ್ರದೇಶಗಳಲ್ಲಿ, ಟೆಲಿಕಾಂ ಆಪರೇಟರ್‌ಗಳು ಔಪಚಾರಿಕ ಒಪ್ಪಂದಕ್ಕೆ ಪ್ರವೇಶಿಸುವ ಮೊದಲು ಹಾಗೂ ಹೊಸ ಸಿಮ್ ಕಾರ್ಡ್‌ಗಳನ್ನು ಮಾರಾಟ ಮಾಡಲು ಅನುಮತಿಸುವ ಮೊದಲು ಆಯಾ ಅಂಗಡಿಗಳ ಪೊಲೀಸ್ ಪರಿಶೀಲನೆಯನ್ನು ಪ್ರಾರಂಭಿಸಬೇಕಾಗುತ್ತದೆ.

ಸಿಮ್‌ ಖರೀದಿ ಮಾಡುವವರು ಈ ನಿಯಮ ಪಾಲನೆ ಮಾಡಬೇಕು: ಸಿಮ್ ಕಾರ್ಡ್‌ಗಳನ್ನು ಖರೀದಿಸುವ ಗ್ರಾಹಕರಿಗೂ ನಿಯಮಗಳನ್ನು ಮಾರ್ಪಡಿಸಲಾಗಿದೆ. ಕೆವೈಸಿ ಪ್ರಕ್ರಿಯೆಯೊಂದಿಗೆ ಸಿಮ್‌ ಖರೀದಿ ಮಾಡಿದರಾದರೂ ಹೊಸ ನಿಯಮಗಳ ಪ್ರಕಾರ ಅಸ್ತಿತ್ವದಲ್ಲಿರುವ ಕಾರ್ಡ್ ಹಾನಿ ಅಥವಾ ಕಳೆದುಹೋದ ವೇಳೆ ಸಿಮ್ ಕಾರ್ಡ್ ಅನ್ನು ಮರು-ಪಡೆಯಲು ಮತ್ತೆ ಹೊಸ ರೀತಿಯ ಕೆವೈಸಿ ಅಗತ್ಯ ಇದೆ ಎಂದು ತಿಳಿಸಲಾಗಿದೆ.

ಸಿಮ್‌ ಕಾರ್ಡ್‌ ಮಾರಾಟ, ಖರೀದಿಗೆ ಮತ್ತೆ ಕಠಿಣ ನಿಯಮ ಜಾರಿ... 10 ಲಕ್ಷ ರೂ. ದಂಡ!

ಯಾವ ಉದ್ದೇಶಕ್ಕೆ ಈ ಕಠಿಣ ನಿಯಮ?: ಸ್ಪ್ಯಾಮ್ ಸಂದೇಶ ಕಳುಹಿಸುವಿಕೆ ಮತ್ತು ಸೈಬರ್ ವಂಚನೆಗಳನ್ನು ಪರಿಶೀಲಿಸಲು ಈ ನಿಯಮಗಳನ್ನು ಬಿಗಿಗೊಳಿಸಲಾಗುತ್ತಿದೆ. ಹಾಗೆಯೆ ಹೆಚ್ಚಿನ ಖರೀದಿಯ ಸಿಮ್‌ ಕಾರ್ಡ್‌ಗಳ ದುರುಪಯೋಗವನ್ನು ನಿಲ್ಲಿಸುವ ಗುರಿಯನ್ನು ಇದು ಹೊಂದಿವೆ. ಇದರೊಂದಿಗೆ ಡೀಫಾಲ್ಟ್ ಆಗಿ ಬೃಹತ್ ಸಿಮ್ ಕಾರ್ಡ್ ಮಾರಾಟವನ್ನು ಸಹ ನಿಷೇಧಿಸಲಾಗಿದೆ.

Best Mobiles in India

English summary
The Department of Telecom decides how SIM cards can be sold and used in India. Accordingly, the rules for buying and activating SIM cards have been tightened and new rules have been brought out.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+