Home
ಸುದ್ದಿಜಾಲ

ಈತ ಆರ್ಡರ್‌ ಮಾಡಿದ್ದು ಆಪಲ್‌ ಲ್ಯಾಪ್‌ಟಾಪ್‌, ಆದರೆ ಬಾಕ್ಸ್‌ ತೆರೆದಾಗ ಕಾದಿತ್ತು ಶಾಕ್‌!

ಆನ್‌ಲೈನ್‌ ಶಾಪಿಂಗ್‌ ಗ್ರಾಹಕರಿಗೆ ಆಫರ್‌ಗಳ ನೀಡುವ ಜೊತೆಗೆ ಸಾಕಷ್ಟು ಅನುಕೂಲ ಒದಗಿಸುತ್ತದೆ. ಆದರೆ ಕೆಲವೊಮ್ಮೆ ಆನ್‌ಲೈನ್‌ ಶಾಪಿಂಗ್‌ ಗ್ರಾಹಕರಿಗೆ ಸಂಕಷ್ಟ ತಂದೊಡ್ಡುತ್ತದೆ. ಇದಕ್ಕೆ ತಾಜಾ ಉದಾಹರಣೆ ಎಂಬಂತೆ ಆಪಲ್‌ ಸಂಸ್ಥೆಯ ಲ್ಯಾಪ್‌ಟಾಪ್‌ ಆರ್ಡರ್‌ ಮಾಡಿದ ವ್ಯಕ್ತಿಗೆ, ಮನೆಗೆ ಬಂದ ವಸ್ತುವೇ ಬೇರೆ.

ಹೌದು, ಇ ಕಾಮರ್ಸ್‌ ದೈತ್ಯ ಫ್ಲಿಪ್‌ಕಾರ್ಟ್‌ ಪ್ಲಾಟ್‌ಫಾರ್ಮ್ ನಲ್ಲಿ ಅಥರ್ವ ಖಂಡೇಲ್ವಾಲ್ ಎಂಬ ವಿದ್ಯಾರ್ಥಿಯೋರ್ವ 76,000ರೂ. ಮೌಲ್ಯದ ಆಪಲ್‌ ಸಂಸ್ಥೆಯ ಮ್ಯಾಕ್‌ಬುಕ್‌ M1 ಲ್ಯಾಪ್‌ಟಾಪ್‌ ಅನ್ನು ಆರ್ಡರ್‌ ಮಾಡಿದ್ದಾನೆ. ಆದರೆ ಡೆಲಿವರಿ ಬಾಕ್ಸ್‌ ತೆರೆದಾಗ ಆ ವಿದ್ಯಾರ್ಥಿ ಫುಲ್‌ ಶಾಕ್‌.

ಈತ ಆರ್ಡರ್‌ ಮಾಡಿದ್ದು ಆಪಲ್‌ ಲ್ಯಾಪ್‌ಟಾಪ್‌, ಆದರೆ ಬಾಕ್ಸ್‌ ತೆರೆದಾಗ ಶಾಕ್‌!

ಅಥರ್ವ ಖಂಡೇಲ್ವಾಲ್ (@atharva_1913) X (ಹಿಂದಿನ ಟ್ವಿಟರ್) ನಲ್ಲಿ ಫ್ಲಿಪ್‌ಕಾರ್ಟ್‌ ತಾಣದಲ್ಲಿ ತನಗಾದ ಕೆಟ್ಟ ಶಾಪಿಂಗ್ ಅನುಭವವನ್ನು ಶೇರ್‌ ಮಾಡಿದ್ದಾನೆ. ಈತನು ಫ್ಲಿಪ್‌ಕಾರ್ಟ್ ಮೂಲಕ ಮ್ಯಾಕ್‌ಬುಕ್ M1 ಅನ್ನು ಬುಕ್ ಮಾಡಿರುವುದನ್ನು ಬಹಿರಂಗಪಡಿಸಿದನು. ನಿಗದಿಯಂತೆ ಆಗಸ್ಟ್ 13 ರಂದು ಡೆಲಿವರಿ ನೀಡಬೇಕಿತ್ತು. ಆದರೆ ಡೆಲಿವರಿ ನೀಡುವುದು ತಡವಾಯಿತು.

ಇನ್ನು ಡೆಲಿವರಿ ಏಜೆಂಟ್ ತನ್ನ ಫೋನ್ ಕರೆಗಳನ್ನು ಎರಡು ದಿನಗಳವರೆಗೆ ಅಂದರೆ ಆಗಸ್ಟ್ 15 ರವರೆಗೆ ತಪ್ಪಿಸಿದರು ಎಂದು ಖಂಡೇಲ್ವಾಲ್ ಹೇಳುತ್ತಾರೆ. ನಂತರ ವಿಳಂಬದಿಂದಾಗಿ ಆರ್ಡರ್‌ ಅನ್ನು ಪಡೆಯಲು ಫ್ಲಿಪ್‌ಕಾರ್ಟ್ ಡೆಲಿವರಿ ಹಬ್‌ಗೆ ಭೇಟಿ ನೀಡುವಂತೆ ಖಂಡೇಲ್ವಾಲ್ ಅವರನ್ನು ಕೇಳಲಾಯಿತು. ಆದರೆ ಲ್ಯಾಪ್‌ಟಾಪ್‌ ಪಡೆಯಲು ಡೆಲಿವರಿ ಹಬ್‌ಗೆ ತಲುಪಿದಾಗ ವಿದ್ಯಾರ್ಥಿಗೆ ಬಿಗ್‌ ಶಾಕ್‌.

ಏಕೆಂದರೆ, ಡೆಲಿವರಿ ಹಬ್‌ನಲ್ಲಿ ಡೆಲಿವರಿ ಬಾಕ್ಸ್‌ ತೆರೆದಾಗ ಆಪಲ್‌ ಮ್ಯಾಕ್‌ಬುಕ್‌ M1 ಲ್ಯಾಪ್‌ಟಾಪ್‌ ಬದಲಿ 3000 ರೂ. ಬೆಲೆಯ ಬೋಟ್‌ ಸ್ಪೀಕರ್‌ ಕಾಣಿಸಿದೆ. ಇನ್ನು ಡೆಲಿವರಿ ಬಾಕ್ಸ್ ಅನ್ನು ಏಜೆಂಟ್ ಅವರೇ ತೆರೆದಿದ್ದಾರೆ ಎನ್ನಲಾಗಿದೆ. ಈ ವೇಳೆ ಬಾಕ್ಸ್‌ನೊಳಗೆ ಲ್ಯಾಪ್‌ಟಾಪ್ ಇಲ್ಲದಿರುವುದನ್ನು ನೋಡಿದಾಗ ಆ ವಿದ್ಯಾರ್ಥಿ ದಂಗಾಗಿದ್ದಾನೆ. ಈ ಬಗ್ಗೆ ಮೈಸ್ಮಾರ್ಟ್‌ಪ್ರೈಸ್‌ ವೆಬ್‌ಸಯಟ್‌ ವರದಿ ಮಾಡಿದೆ.

ಉತ್ಪನ್ನದ ಅನ್‌ಬಾಕ್ಸಿಂಗ್ ಸೇರಿದಂತೆ ಎಲ್ಲಾ ನಿರ್ಣಾಯಕ ಘಟನೆಗಳನ್ನು ಖರೀದಿದಾರರು ವೀಡಿಯೊ-ರೆಕಾರ್ಡ್ ಮಾಡಿರುವುದು ಒಳ್ಳೆಯದು. ಫ್ಲಿಪ್‌ಕಾರ್ಟ್ ವಿತರಣಾ ಕೇಂದ್ರದ ಜನರು ಖರೀದಿದಾರರು ತಪ್ಪು ಉತ್ಪನ್ನವನ್ನು ಸ್ವೀಕರಿಸಿದ್ದಾರೆಂದು ವೀಡಿಯೊಗಳಲ್ಲಿ ಒಂದು ತೋರಿಸುತ್ತದೆ. ಎಲ್ಲಾ ಪುರಾವೆಗಳು ಇರುವುದರಿಂದ ಗ್ರಾಹಕರಿಗೆ ಕಂಪನಿಯು ನೆರವು ಮಾಡಲು ಸಾಧ್ಯವಾಗುತ್ತದೆ.

'ನೋ ರಿಟರ್ನ್ಸ್' ನೀತಿಯನ್ನು ಉಲ್ಲೇಖಿಸಿ ಫ್ಲಿಪ್‌ಕಾರ್ಟ್ ತನಗೆ ಮರುಪಾವತಿಯನ್ನು ನಿರಾಕರಿಸಿದೆ ಎಂದು ಅಥರ್ವ ಖಂಡೇಲ್ವಾಲ್ ಬಹಿರಂಗಪಡಿಸಿದ್ದಾರೆ. ಈ ಬಗ್ಗೆ ಖರೀದಿದಾರನು ರೆಡ್ಡಿಟ್‌ನಲ್ಲಿ ತನ್ನ ಅನುಭವವನ್ನು ಶೇರ್ ಮಾಡಿಕೊಂಡಿದ್ದಾದೆ. ಆ ಬಳಿಕ ಫ್ಲಿಪ್‌ಕಾರ್ಟ್ ತನ್ನನ್ನು ತಲುಪಿದೆ ಎಂದು ವಿದ್ಯಾರ್ಥಿ ಹೇಳಿದ್ದಾನೆ. ಆನ್‌ಲೈನ್ ಚಿಲ್ಲರೆ ವ್ಯಾಪಾರಿಗಳು ಮರುಪಾವತಿ ಮಾಡಲು ಸಿದ್ಧರಾಗಿದ್ದಾರೆ. ಅದಕ್ಕಾಗಿ ಆಗಸ್ಟ್ 28 ರ ವರೆಗೆ ಕಾಯಲು ತಿಳಿಸಿದ್ದಾರೆ ಎಂದು ಅಥರ್ವ ಖಂಡೇಲ್ವಾಲ್ ಹೇಳುತ್ತಾರೆ.

ಸದ್ಯ ಆನ್‌ಲೈನ್‌ ಪ್ಲಾಟ್‌ಫಾರ್ಮ್‌ ಮೂಲಕ ಶಾಪಿಂಗ್‌ ಗ್ರಾಹಕರಿಗೆ ಭಾರೀ ಅನುಕೂಲ ಎನಿಸಿದೆ. ಆನ್‌ಲೈನ್‌ ನಲ್ಲಿ ಗ್ರಾಹಕರಿಗೆ ಭರ್ಜರಿ ಆಫರ್‌, ಡಿಸ್ಕೌಂಟ್‌ ಕೊಡುಗೆಗಳು ಸಹ ಲಭ್ಯ ಆಗುತ್ತವೆ. ಹಾಗೆಯೇ ಆನ್‌ಲೈನ್‌ ಮೂಲಕ ಖರೀದಿಸುವಾಗ ಕೆಲವು ಸಂದರ್ಭಗಳಲ್ಲಿ ಮೋಸ ಆಗುವ ಸಾಧ್ಯತೆಗಳು ಇರುತ್ತವೆ.

ಹೀಗಾಗಿ ಗ್ರಾಹಕರು ಎಚ್ಚರ ವಹಿಸುವುದು ಮುಖ್ಯ ಆಗಿರುತ್ತದೆ. ಉತ್ಪನ್ನಗಳ ಡೆಲಿವರಿ ಓಟಿಟಿ ಶೇರ್ ಮಾಡುವ ಬಗ್ಗೆ ಎಚ್ಚರ ಇರಬೇಕು ಹಾಗೆಯೇ ಆರ್ಡರ್ ಮಾಡಿದ ಉತ್ಪನ್ನ ಕೈ ಸೇರಿದ ಬಳಿಕ ಆ ಬಾಕ್ಸ್‌ ಅನ್‌ಬಾಕ್ಸ್ ಪ್ರಕ್ರಿಯೆ ವಿಡಿಯೋ ಮಾಡಿಕೊಳ್ಳುವುದು ಉತ್ತಮ ಹೆಜ್ಜೆ ಆಗಿದೆ.

Best Mobiles in India

English summary
Student Orders Laptop Worth Rs 76,000 From Flipkart; received speakers worth Rs 3,000. all details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+