ಸುಮಾರು 2000 ಅಸುರಕ್ಷಿತ ಆಪ್ಸ್‌ಗಳನ್ನು ಪ್ಲೇ ಸ್ಟೋರ್‌ನಿಂದ ಕಿತ್ತೊಗೆದ ಗೂಗಲ್!
ಟೆಕ್ ದೈತ್ಯ ಗೂಗಲ್ ಕಂಪನಿಯ ಪ್ಲೇ ಸ್ಟೋರ್‌ನಲ್ಲಿ ಪ್ರತಿಯೊಂದು ವಿಷಯಕ್ಕೆ ಸಂಬಂಧಿಸಿದಂತೆ ಅಸಂಖ್ಯಾತ ಅಪ್ಲಿಕೇಶನ್‌ಗಳು ಸೀಗುತ್ತವೆ. ಆದರೆ ಪ್ಲೇ ಸ್ಟೋರ್‌ನಲ್ಲಿ ಲಭ್ಯವಾಗುವ ಎಲ್ಲಾ ಆಪ್‌ಗಳು ಸುರಕ್ಷಿತವಲ್ಲ. ಅವುಗಳಲ್ಲಿ ಡೇಂಜರ್ಸ್ ಆಪ್‌ಗಳು ಸೇರಿಕೊಂಡಿರುತ್ತವೆ. ಆದ್ರೆ ಇದೀಗ ಗೂಗಲ್ ತ ತನ್ನ ಪ್ಲೇ ಸ್ಟೋರ್‌ನಲ್ಲಿ ಸುಮಾರು 2000 ಅಸುರಕ್ಷಿತ ಮಾಲ್ವೇರ್ ಅಪ್ಲಿಕೇಶನ್‌ಗಳನ್ನು ಪತ್ತೆ ಹಚ್ಚಿದೆ.

ಹೌದು, ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಸುಮಾರು 2000 ಅಸುರಕ್ಷಿತ ಆಪ್ಸ್‌ಗಳನ್ನು ಇತ್ತೀಚಿಗೆ ಸಿಡ್ನಿ ಯುನಿವರ್ಸಿಟಿಯ ಸಂಶೋಧಕರ ಮತ್ತು CSIRO's Data61 ತಂಡವು ಪತ್ತೆ ಮಾಡಿದೆ. ಈ ಸಂಶೋಧಕರ ತಂಡವು ಗೂಗಲ್ ಪ್ಲೇ ಸ್ಟೋರ್‌ನಿಂದ ಸುಮಾರು 1 ಮಿಲಿಯನ್ ಆಪ್ಸ್‌ಗಳನ್ನು ಸಂಶೋಧನೆಗೆ ಬಳಸಿಕೊಂಡಿದ್ದು, ಅವುಗಳಲ್ಲಿ ಸುಮಾರು 2000ಕ್ಕೂ ಅಧಿಕ ಅಪಾಯಕಾರಿ ಅಪ್ಲಿಕೇಶನ್‌ಗಳು ಪತ್ತೆಯಾಗಿವೆ.

ಅಸುರಕ್ಷಿತ ಆಪ್ಸ್‌ಗಳಲ್ಲಿ ಕೇಲವು ಜನಪ್ರಿಯ ಗೇಮ್ಸ್ ಆಪ್‌ಗಳು ಸೇರಿವೆ. ಹಾಗೆಯೇ ಇನ್ನು ಕೇಲವು ಆಪ್ಸ್‌ಗಳು ಅನಗತ್ಯವಾಗಿ ಗ್ಯಾಲರಿ, ಕಾಂಟ್ಯಾಕ್ಟ್ಸ್, ಕ್ಯಾಮೆರಾ ಆಯ್ಕೆಯ ಅಕ್ಸಸ್ ಕೇಳುತ್ತವೆ. ಗೂಗಲ್ 2018ರಲ್ಲಿ ಮಾಲ್ವೇರ್ ಆಪ್‌ಗಳು ಪ್ಲೇ ಸ್ಟೋರ್ ಸೇರದಂತೆ ಕ್ರಮ ಕೈಗೊಂಡಿತ್ತು. ಆದರೂ ಕಳೆದ ವರ್ಷಕ್ಕೆ ಹೋಲಿಸಿದರೇ ಪ್ಲೇಸ್ಟೋರ್‌ನಲ್ಲಿ ಅಪಾಯಕಾರಿ ಆಪ್ಸ್‌ಗಳ ಸಂಖ್ಯೆಯಲ್ಲಿ ಶೇ.55% ರಷ್ಟು ಹೆಚ್ಚಳವಾಗಿದೆ ಎನ್ನಲಾಗಿದೆ.

ಪ್ಲೇ ಸ್ಟೋರ್‌ನಲ್ಲಿ ಕೇಲವು ಆಪ್ಸ್‌ಗಳು ಇತರೆ ಆಪ್ಸ್‌ಗಳ ಐಕಾನ್ ಕಾಪಿ ಮಾಡಿದ್ದು, ಮತ್ತು ಡಿಸ್ಕ್ರಿಪ್ಶನ್ ಸಹ ಕಾಪಿ ಮಾಡಿರುವುದು ಸಂಶೋಧನೆಯ ವೇಳೆ ಬೆಳಕಿಗೆ ಬಂದಿವೆ. ಸಂಶೋಧಕರು ಪ್ರೈವೇಟ್ API ಆನ್‌ಲೈನ್ ಮಾಲ್ವೇರ್ ಅನಾಲಿಸಿಸ್ ಟೂಲ್ ವೈರಸ್‌ಟೂಟಲ್ ಮೂಲಕ ಮಾಲ್ವೇರ್ ಆಪ್‌ಗಳನ್ನು ಪರಿಶೀಲಿಸಿದ್ದು, ಸುಮಾರು 2040 ಅತೀ ಅಪಾಯಕಾರಿ ಆಪ್ಸ್‌ಗಳನ್ನು ಗುರುತಿಸಿದ್ದಾರೆ.
ಗೂಗಲ್ ಫ್ಲೆಕ್ಸಿಬಲ್ ಮತ್ತು ಕಸ್ಟಮೈಸ್ ಮಾದರಿಯಲ್ಲಿರುವುದರಿಂದ ಯಾರಾದರೂ ಅಪ್ಲಿಕೇಶನ್ ಸಿದ್ಧಪಡಿಸಬಹುದಾಗಿದೆ. ಹೀಗಾಗಿ ಸರಳವಾಗಿ ಪ್ಲೇ ಸ್ಟೋರ್‌ನಲ್ಲಿ ದುರುದ್ದೇಶದ ಆಪ್ಸ್‌ಗಳು ಸೇರಿಕೊಳ್ಳುತ್ತವೆ. ಆದರೆ ಪ್ಲೇ ಸ್ಟೋರ್‌ನಲ್ಲಿನ ಮಾಲ್ವೇರ್ ಆಪ್ಸ್‌ಗಳಿಂದ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ತೊಂದರೆ ಆಗದಂತೆ ಬೇಗನೇ ಪರಿಹಾರ ಕಂಡುಕೊಳ್ಳಬೇಕಿದೆ ಎನ್ನುವುದು ಸಂಶೋಧಕರ ಅಭಿಪ್ರಾಯವಾಗಿದೆ. ಅಂಥಹ ಆಪ್ಸ್‌ಗಳನ್ನು ಈಗಾಗಲೇ ಗೂಗಲ್ ತೆಗೆದು ಹಾಕಿದೆ.


Click it and Unblock the Notifications








