ಒಪ್ಪೋದ ಈ ಫೋನ್ ಬೆಲೆಯಲ್ಲಿ ಸಖತ್ ಇಳಿಕೆ; ಗ್ರಾಹಕರಿಗೆ ಫುಲ್ ಖುಷಿ!
ಜನಪ್ರಿಯ ಒಪ್ಪೋ ಮೊಬೈಲ್ ಬ್ರ್ಯಾಂಡ್ ಭಿನ್ನ ಮಾದರಿಯ ಫೋನ್‌ಗಳ ಮೂಲಕ ಭಾರತೀಯ ಮಾರುಕಟ್ಟೆಯಲ್ಲಿ ಸದ್ದು ಮಾಡಿದೆ. ಆ ಪೈಕಿ ಕಂಪನಿ ಬಜೆಟ್ ದರದ ಫೋನ್‌ಗಳು ಕೂಡಾ ಆಕರ್ಷಕ ಎನಿಸಿವೆ. ಸಂಸ್ಥೆಯ ಒಪ್ಪೋ A38 ಮೊಬೈಲ್ ಆಕರ್ಷಕ ಫೀಚರ್ಸ್, ಸ್ಟೈಲಿಶ್ ಲುಕ್ ಹಾಗೂ ಅಗ್ಗದ ದರ ಮೂಲಕ ಗ್ರಾಹಕರ ಗಮನ ಸೆಳೆದಿದೆ. ಈ ಮೊಬೈಲ್ ಇದೀಗ ಫ್ಲಿಪ್‌ಕಾರ್ಟ್ ಇ ಕಾಮರ್ಸ್ ಪ್ಲಾಟ್‌ಫಾರ್ಮ್ನಲ್ಲಿ ಅತ್ಯುತ್ತಮ ಬೆಲೆ ಇಳಿಕೆಯಲ್ಲಿ ಕಾಣಿಸಿಕೊಂಡಿದ್ದು, ಗ್ರಾಹಕರು ಸಂತಸ ನೀಡಿದೆ.
ಹೌದು, ಒಪ್ಪೋ A38 ಮೊಬೈಲ್ ಫ್ಲಿಪ್‌ಕಾರ್ಟ್ ಇ ಕಾಮರ್ಸ್ ವೆಬ್‌ಸೈಟ್‌ನಲ್ಲಿ ಶೇ. 41% ರಷ್ಟು ಭರ್ಜರಿ ಡಿಸ್ಕೌಂಟ್ ದರದಲ್ಲಿ ಕಾಣಬಹುದಾಗಿದೆ. ಈ ಮೊಬೈಲ್‌ನ 4 GB RAM + 128 GB ಸ್ಟೋರೇಜ್ ವೇರಿಯಂಟ್ 9,999ರೂ. ಗಳ ಡಿಸ್ಕೌಂಟ್ ಬೆಲೆಯಲ್ಲಿ ಖರೀದಿ ಮಾಡಬಹುದು. ಇದರ ಜೊತೆಗೆ ಗ್ರಾಹಕರು ಆಯ್ದ ಕೆಲವು ಬ್ಯಾಂಕ್‌ಗಳ ಆಫರ್ ಕೂಡಾ ಪಡೆಯಲು ಅವಕಾಶ ಇದೆ.

ಅಂದಹಾಗೆ ಒಪ್ಪೋ A38 ಮೊಬೈಲ್ ಗ್ಲೋಯಿಂಗ್ ಗೋಲ್ಡ್ ಮತ್ತು ಗ್ಲೋಯಿಂಗ್ ಬ್ಲ್ಯಾಕ್ ಕಲರ್ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ. ಹಾಗೆಯೇ ಈ ಫೋನ್ ಮೀಡಿಯಾಟೆಕ್ ಹಿಲಿಯೋ G85 SoC ಪ್ರೊಸೆಸರ್ ಪವರ್ ಅನ್ನು ಪಡೆದಿದ್ದು, ಇದು 5,000 mAh ಬ್ಯಾಟರಿ ಸಾಮರ್ಥ್ಯದ ಸೌಲಭ್ಯ ಸಹ ಒಳಗೊಂಡಿದೆ. ಇನ್ನುಳಿದಂತೆ ಒಪ್ಪೋ A38 ಫೋನಿನ ಇತರೆ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ಒಪ್ಪೋ A38 ಫೋನ್ - ಫೀಚರ್ಸ್
ಒಪ್ಪೋ A38 ಮೊಬೈಲ್ 6.56 ಇಂಚಿನ HD+ ಡಿಸ್‌ಪ್ಲೇ ಅನ್ನು ಹೊಂದಿದ್ದು, ಈ ಡಿಸ್‌ಪ್ಲೇ 1612 x 720 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇದು 90Hz ರಿಫ್ರೆಶ್ ರೇಟ್ ಸಪೋರ್ಟ್ ಜೊತೆಗೆ ಇದೆ. ಇನ್ನು ಡಿಸ್‌ಪ್ಲೇ 720 ನೀಟ್ಸ್ ಗರಿಷ್ಠ ಬ್ರೈಟ್‌ನೆಸ್ ಲೆವೆಲ್ ಅನ್ನು ಸಪೋರ್ಟ್ ಮಾಡಲಿದ್ದು, ಈ ಡಿಸ್‌ಪ್ಲೇ 84.2% ಸ್ಕ್ರೀನ್ ಟು ಬಾಡಿ ನಡುವಿನ ಅನುಪಾತವನ್ನು ಒಳಗೊಂಡಿದೆ. ಇದು 20:9 ರಚನೆಯ ಅನುಪಾತವನ್ನು ಹೊಂದಿದೆ.
ಒಪ್ಪೋ A38 ಮೊಬೈಲ್ ಮೀಡಿಯಾಟೆಕ್ ಹಿಲಿಯೋ G85 SoC ಪ್ರೊಸೆಸರ್ ವೇಗವನ್ನು ಪಡೆದಿದ್ದು, ಇದು ಆಂಡ್ರಾಯ್ಡ್ 13 ಆಧಾರಿತ ColorOS 13.1 ನೊಂದಿಗೆ ಕೆಲಸ ನಿರ್ವಹಿಸಲಿದೆ. ಹಾಗೆಯೇ 4GB RAM ಮತ್ತು 128GB ಆಂತರೀಕ ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿದೆ. ಇದಲ್ಲದೆ ಮೆಮೊರಿ ಕಾರ್ಡ್ ಬೆಂಬಲದೊಂದಿಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದಾಗಿದೆ.
ಒಪ್ಪೋ A38 ಮೊಬೈಲ್ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಅನ್ನು ಪಡೆದಿದ್ದು, ಇದರ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ AI ಬೆಂಬಲಿತ ಸೆನ್ಸಾರ್ ಇದೆ ಹಾಗೂ ದ್ವಿತೀಯ ಕ್ಯಾಮೆರಾ 2 ಮೆಗಾಪಿಕ್ಸೆಲ್ ಸೆನ್ಸಾರ್ ಪಡೆದಿದೆ. ಇದಲ್ಲದೆ 5 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಪಡೆದಿದೆ. ಕ್ಯಾಮೆರಾ ಫೀಚರ್ಸ್‌ಗಳಲ್ಲಿ ಎಲ್ಇಡಿ ಫ್ಲ್ಯಾಷ್, ಹೆಚ್‌ಆರ್‌ಡಿ, ಪನೋರಮಾ ಆಯ್ಕೆಗಳನ್ನು ನೀಡಲಾಗಿದೆ. ಇದರಲ್ಲಿ 1080p@30fpsನಲ್ಲಿ ವೀಡಿಯೊ ರೆಕಾರ್ಡಿಂಗ್ ಮಾಡಬಹುದಾಗಿದೆ.
ಒಪ್ಪೋ A38 ಮೊಬೈಲ್ 5,000mAh ಸಾಮರ್ಥ್ಯದ ಬ್ಯಾಟರಿ ಅನ್ನು ಒಳಗೊಂಡಿದೆ. ಇದು 33W ವೈರ್ಡ್ SuperVOOC ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಸಹ ಪಡೆದಿದೆ. ಇನ್ನು ಕನೆಕ್ಟಿವಿಟಿ ಸೌಲಭ್ಯಗಳಲ್ಲಿ ವೈಫೈ 5, ಬ್ಲೂಟೂತ್ 5.3, 3.5 ಎಂಎಂ ಹೆಡ್‌ಫೋನ್ ಜ್ಯಾಕ್ ಮತ್ತು ಯುಎಸ್‌ಬಿ ಟೈಪ್-ಸಿ ಪೋರ್ಟ್ ಅನ್ನು ಪಡೆದಿದೆ. ಇದಲ್ಲದೆ ಸ್ಮಾರ್ಟ್‌ಫೋನ್ ಸೈಡ್ ಮೌಂಟೆಡ್ ಫಿಂಗರ್‌ಪ್ರಿಟ್ ಸೆನ್ಸಾರ್, ಜೊತೆಗೆ ಗ್ಲೋಯಿಂಗ್ ಗೋಲ್ಡ್ ಮತ್ತು ಗ್ಲೋಯಿಂಗ್ ಬ್ಲ್ಯಾಕ್ ಕಲರ್ ಆಯ್ಕೆಗಳಲ್ಲಿ ಲಭ್ಯ.


Click it and Unblock the Notifications








