ಶಿಯೋಮಿ, ಒಪ್ಪೊ ಬಿಟ್ಟು 'ಹುವಾವೇ' ಮಾತ್ರ ಬ್ಯಾನ್ ಆಗಲು ಶಾಕಿಂಗ್ ಕಾರಣವಿದೆ!!

|

ಚೀನಾದ ಅತಿದೊಡ್ಡ ಸ್ಮಾರ್ಟ್‌ಫೋನ್‌ ತಯಾರಿಕೆ ಕಂಪನಿ ಹುವಾವೇ ವಿರುದ್ಧ ಹಲವು ನಿರ್ಬಂಧಗಳನ್ನು ಅಮೆರಿಕ ವಿಧಿಸಿದೆ. ಅಮೆರಿಕ ಮೂಲದ ಯಾವುದೇ ಕಂಪನಿಗಳೂ ಹುವಾವೇ ಜೊತೆಗೆ ವಹಿವಾಟು ನಡೆಸುವಂತಿಲ್ಲ ಎಂದು ಎಚ್ಚರಿಕೆ ನೀಡಿದೆ. ಇದಾದ ನಂತರ ಹುವಾವೇ ಕಂಪೆನಿ ಹಲವು ಸಮಸ್ಯೆಗಳನ್ನು ಎದುರಿಸುತ್ತಿರುವುದನ್ನು ನೋಡಬಹುದು. ಆದರೆ, ಚೀನಾದ ಹಲವು ಮೊಬೈಲ್ ಕಂಪೆನಿಗಳು ವಿಶ್ವದಾದ್ಯಂತ ದೊಡ್ಡ ಮಾರುಕಟ್ಟೆಯನ್ನು ಹೊಂದಿದ್ದರೂ ಸಹ ಅಮೆರಿಕಾಕ್ಕೆ ಹುವಾವೇ ಕಂಪೆನಿ ಮೇಲೆ ಮಾತ್ರ ಏಕೆ ಮುನಿಸು.?

ಇಂತಹದೊಂದು ಪ್ರಶ್ನೆ ನಿಮ್ಮಲ್ಲೂ ಮೂಡಿರಬಹದು. ಅಮೆರಿಕಾದಂತಹ ದೇಶವು ಒಂದು ಮೊಬೈಲ್ ಕಂಪನಿಯ ವಿರುದ್ಧ ಯಾಕೆ ಈ ಪರಿ ಒಂದು ದೇಶವೇ ಸಿಟ್ಟಾಗಿದೆ? ಯಾಕೆ ಶಿಯೋಮಿ, ಒನ್‌ಪ್ಲಸ್‌, ಒಪ್ಪೋದಂತಹ ಚೀನಾ ಮೂಲದ ಕಂಪನಿಗಳ ಮೇಲೆ ಈ ನಿಷೇಧ ವಿಧಿಸಿಲ್ಲ ಎಂಬ ಪ್ರಶ್ನೆಯೂ ಉದ್ಭವಿಸುತ್ತದೆ. ಅಥವಾ ಬಹುತೇಕರು ಅಂದುಕೊಂಡಿರುವಂತೆ, ಅಮೆರಿಕಾ ಹುವಾವೇ ಕಂಪೆನಿಯನ್ನು ಮಾತ್ರ ಟಾರ್ಗೆಟ್ ಮಾಡುತ್ತಿರುವ ಅದು ಮಾಹಿತಿ ಕದಿಯುವ ಸಾಧ್ಯತೆ ಇದೆ ಎಂದು. ಆದರೆ, ಇದೆಲ್ಲವನ್ನೂ ಮೀರಿದ ಕಥೆಗಳು ಇಲ್ಲಿವೆ.!

ಶಿಯೋಮಿ, ಒಪ್ಪೊ ಬಿಟ್ಟು 'ಹುವಾವೇ' ಮಾತ್ರ ಬ್ಯಾನ್ ಆಗಲು ಶಾಕಿಂಗ್ ಕಾರಣವಿದೆ!!

ಅಮೆರಿಕ ಮತ್ತು ಚೀನಾ ಮಧ್ಯೆ ಕಳೆದ ವರ್ಷದಿಂದ ಶುರುವಾದ ವ್ಯಾಪಾರ ಯುದ್ಧ ಒಂದೊಂದೇ ಕ್ಷೇತ್ರವನ್ನು ಬಾಧಿಸಲು ಶುರುವಾದ ನಂತರ ಇಂತಹದೊಂದು ಚರ್ಚೆ ಮುನ್ನೆಲೆಗೆ ಬಂದಿದೆ. ಚೀನಾದಂತಹ ಕಮ್ಯುನಿಷ್ಟ್ ದೇಶದ ಮೋಸದ ಆಟಕ್ಕೆ ಅಮೆರಿಕಾ ಬ್ರೇಕ್ ಹಾಕುತ್ತಿದೆ, ಅಮೆರಿಕಾ ಸ್ವಹಿತಾಸಕ್ತಿಗಾಗಿ ಇಂತಹ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ, ಹುವಾವೇ ಕಂಪೆನಿ ಚೀನಾ ಸರ್ಕಾರದ್ದೇ ಎಂದೆಲ್ಲಾ ಹೇಳಲಾಗುತ್ತಿದೆ. ಹಾಗಾಗಿ, ಇಂದಿನ ಲೇಖನದಲ್ಲಿ ಅಮೆರಿಕಾಕ್ಕೆ ಹುವಾವೇ ಕಂಪೆನಿ ಮೇಲೆ ಮಾತ್ರ ಏಕೆ ಮುನಿಸಿರಬಹುದು ಎಂಬುದನ್ನು ನೋಡೋಣ ಬನ್ನಿ.

ಈ ಕಥೆ ಶುರುವಾಗುವುದು ದಶಕದ ಹಿಂದೆ!

ಈ ಕಥೆ ಶುರುವಾಗುವುದು ದಶಕದ ಹಿಂದೆ!

ಅಮೆರಿಕವು ಚೀನಾದ ಅತಿದೊಡ್ಡ ಸ್ಮಾರ್ಟ್‌ಫೋನ್‌ ತಯಾರಿಕೆ ಕಂಪನಿ ಹುವಾವೆ ವಿರುದ್ಧ ಹಲವು ನಿರ್ಭಂಧಗಳನ್ನು ವಿಧಿಸಿರುವ ವಿಷಯ ಈಗ ಸುದ್ದಿಯಲ್ಲಿರಬಹುದು. ಆದರೆ, ಈ ವಿಷಯವು ಸುಮಾರು ಏಳು ವರ್ಷ ಹಿಂದಕ್ಕೆ ಹೋಗಿ ನಿಲ್ಲುತ್ತದೆ. 2012ರಲ್ಲಿ ಝೆಡ್‌ಟಿಇ ಕಂಪನಿಯ ಜೊತೆಗೆ ಅಮೆರಿಕ ಸಂಬಂಧ ಕಡಿದುಕೊಂಡಿದ್ದು ನಿಮಗೆ ತಿಳಿದಿರಬಹುದು. ಇಂತಹುದೇ ಪ್ರಕರಣ ಇದಾಗಿದೆ. ಹುವಾವೇಗೂ ಚೀನಾ ಕಮ್ಯುನಿಸ್ಟ್‌ ಪಾರ್ಟಿಗೂ ನೇರ ಸಂಪರ್ಕವಿದೆ ಎಂಬುದು ಅಮೆರಿಕದ ಆತಂಕಕ್ಕೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.

ಹುವಾವೇ ಚೀನಾ ಸರ್ಕಾರದ ಕಂಪೆನಿ?

ಹುವಾವೇ ಚೀನಾ ಸರ್ಕಾರದ ಕಂಪೆನಿ?

ಹುವಾವೇ ಕೇವಲ ಮೊಬೈಲ್ ಕಂಪನಿಯಷ್ಟೇ ಅಲ್ಲ. ಇದು ವಿಶ್ವಾದ್ಯಂತ ಟೆಲಿಕಾಂ ಸಾಧನಗಳನ್ನು ಉತ್ಪಾದಿಸುವ ಅತಿದೊಡ್ಡ ಕಂಪನಿಯಾಗಿದೆ. ಇದರ ಜತೆಗೆ ಹುವಾವೆಗೂ ಚೀನಾದ ಕಮ್ಯುನಿಸ್ಟ್ ಪಾರ್ಟಿಗೂ ನೇರ ಸಂಪರ್ಕವಿದೆ ಎಂಬುದು ಅಮೆರಿಕದ ಆತಂಕ. ಅಂದರೆ, ಒಂದು ಮೂಲಗಳ ಪ್ರಕಾರ ಹುವಾವೇ ಕಂಪೆನಿಯನ್ನು ಚೀನಾ ಸರ್ಕಾರವೇ ನಡೆಸುತ್ತಿದೆ ಎಂಬ ಅನುಮಾನಗಳಿವೆ. ಚೀನಾದ ಸೇನೆಯಲ್ಲಿ ಹಲವು ವರ್ಷ ಇಂಜಿನಿಯರ್‌ ಆಗಿ ಕೆಲಸ ಮಾಡಿದ್ದ ರೆನ್‌ ಝೆಂಗ್ ಫೀ ಈ ಕಂಪನಿಯ ಸ್ಥಾಪಕ ಎಂಬುದು ಇಲ್ಲಿ ಮುಖ್ಯವಾಗುತ್ತದೆ.

ಹುವಾವೇ ಸರ್ಕಾರದ ಕಂಪೆನಿ ಎನ್ನಲು ಸಾಕ್ಷಗಳು!

ಹುವಾವೇ ಸರ್ಕಾರದ ಕಂಪೆನಿ ಎನ್ನಲು ಸಾಕ್ಷಗಳು!

ಇಂದು ಚೀನಾ ಜಗತ್ತಿನ ಬಲಿಷ್ಠ ರಾಷ್ಟ್ರಗಳಲ್ಲಿ ಒಂದಾಗಿದೆ. 1983ರಲ್ಲಿ ಚೀನಾ ಆರ್ಥಿಕತೆ ಚೇತರಿಸಿಕೊಳ್ಳುವಾಗ ಹುಟ್ಟಿದ ಈ ಕಂಪನಿಯನ್ನು ಕೆಲವೇ ವರ್ಷಗಳಲ್ಲಿ ಚೀನಾ ಸರ್ಕಾರ ತಂತ್ರಜ್ಞಾನ ಸಲಕರಣೆಯ ಏಕಸ್ವಾಮ್ಯದ ಕಂಪನಿ ಎಂಬಂತೆ ಬಿಂಬಿಸಿದ್ದನ್ನು ಅಮೆರಿಕಾ ಸೇರಿದಂತೆ ವಿಶ್ವವೇ ನೋಡಿದೆ. ಕಂಪನಿ ವರ್ಷದಿಂದ ವರ್ಷಕ್ಕೆ ಶೇ. 10 ರಷ್ಟು ದರದಲ್ಲಿ ಪ್ರಗತಿ ಸಾಧಿಸಿರುವುದು ಕುಡ ಅನುಮಾನಕ್ಕೆ ಕಾರಣವಾಗಿದೆ. ಇದಾದ ನಂತರ ಹುವಾವೇ ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಕಾಲಿಟ್ಟಾಗ ಜಾಗತಿಕ ತಂತ್ರಜ್ಞಾನ ಪ್ರಪಂಚ ಒಂದು ರೀತಿ ಭಯಪಟ್ಟಿದೆ.

ಸರ್ಕಾರದ ಕಂಪೆನಿಯಾದರೆ ಭಯವೇಕೆ?

ಸರ್ಕಾರದ ಕಂಪೆನಿಯಾದರೆ ಭಯವೇಕೆ?

ಅಮೆರಿಕಾವನ್ನು ಮೀರಿ ವಿಶ್ವದ ಬಲಿಷ್ಠ ರಾಷ್ಟ್ರವಾಗಬೇಕು ಎಂಬ ಆಸೆಯನ್ನು ಚೀನಾ ಹೊತ್ತಿದೆ. ಇದಕ್ಕೆ ಪ್ರಸ್ತುತ ಮುಖ್ಯವಾಗಿರುವುದು ವ್ಯಾಪಾರ ವಹಿವಾಟು ಮತ್ತು ತಂತ್ರಜ್ಞಾನ. ಈಗಾಗಲೇ ಅಮೆರಿಕಾ ತಂತ್ರಜ್ಞಾನದ ಸಹಾಯದಿಂದ ಬಲಿಷ್ಠವಾಗಿರುವುದರಿಂದ ಚೀನಾ ಇದರ ಮೇಲೆ ಕಣ್ಣಿಟ್ಟಿದೆ. ಮಾಹಿತಿ ಯುಗ ಇದಾಗಿರುವುದರಿಂದ ತಾನು ತಂತ್ರಜ್ಞಾನದಲ್ಲಿ ಮುಂದುವರೆಯಬೇಕು ಎಂದು ಕುತಂತ್ರ ಮಾಡುತ್ತಿದೆ ಎಂದು ಅಮೆರಿಕಾ ಅಂದುಕೊಳ್ಳುತ್ತಿದೆ. ಇತ್ತೀಚಿಗೆ ಹುವಾವೇ ಮೇಲೆ ಬಂದ ಒಂದು ಕಪ್ಪುಚುಕ್ಕಿ ಕೂಡ ಇದಕ್ಕೆ ಕಾರಣ ಎಂದು ಹೇಳಬಹುದು.

ಹುವಾವೇ ವಿಶ್ವಾಸಾರ್ಹತೆಯ ಮೇಲೆ ಅನುಮಾನ!

ಹುವಾವೇ ವಿಶ್ವಾಸಾರ್ಹತೆಯ ಮೇಲೆ ಅನುಮಾನ!

ಇತ್ತೀಚಿಗೆ ಚೀನಾ ಮತ್ತು ಆಫ್ರಿಕಾ ದೇಶಗಳ ಮಧ್ಯೆ ಸಂಬಂಧ ಸುಧಾರಣೆಯಾಗಿ ವ್ಯಾಪಾರ ವಹಿವಾಟು ಹೆಚ್ಚಾದ ನಂತರ ಹುವಾವೇ ಇಥಿಯೋಪಿಯಾದಲ್ಲಿ ಒಂದು ಕಚೇರಿ ತೆರೆದಿತ್ತು. 2018ರಲ್ಲಿ ಲೆ ಮೊಂಡೆ ಎಂಬ ಪತ್ರಿಕೆಯು ಈ ಕೇಂದ್ರದಲ್ಲಿನ ಎಲ್ಲ ಮಾಹಿತಿಯೂ ಶಾಂಘೈಗೆ ರವಾನೆ ಆಗುತ್ತಿವೆ. ಇದರ ಸರ್ವರ್‌ಗಳು ಶಾಂಘೈಗೆ ಡೇಟಾ ರವಾನಿಸುತ್ತಿದೆ ಎಂದು ಹೇಳಿತ್ತು. ಇದಕ್ಕೆ ತಂತ್ರಜ್ಞಾನ ಒದಗಿಸಿದ್ದೇ ಹುವಾವೇ ಕಂಪನಿ ಎಂಬ ವರದಿ ಭಾರಿ ಆಘಾತ ಸೃಷ್ಟಿಸಿತ್ತು. ಇದರಿಂದ ಅಮೆರಿಕಾ ಮಾತ್ರವಲ್ಲ ವಿಶ್ವದ ದೃಷ್ಟಿಯಲ್ಲೂ ಕುಡ ಹುವಾವೇ ಕಳನಾಯಕನಾಗಿತ್ತು.

ವಿಶ್ವದ ಮೇಲೆ ಚೀನಾ ಸ್ಪೈ ಮಾಡುತ್ತಿದೆಯಾ?

ವಿಶ್ವದ ಮೇಲೆ ಚೀನಾ ಸ್ಪೈ ಮಾಡುತ್ತಿದೆಯಾ?

ಕಳೆದ ಒಂದು ದಶಕದಲ್ಲಿ ಚೀನಾವು ತಂತ್ರಜ್ಞಾನಗಳನ್ನು ಕದ್ದೊಯ್ಯುವ ಒಂದು ಭಾರಿ ಜಾಲವನ್ನೇ ಚೀನಾ ಸೃಷ್ಟಿಸಿದೆ. ಈಗ ನಾವು ಕೈಯಲ್ಲಿ ಹಿಡಿದುಕೊಂಡಿರುವ ಎಲ್ಲ ಚೀನಾ ಮೂಲದ ಮೊಬೈಲ್‌ಗ‌ಳಲ್ಲೂ ಈ ಕಳ್ಳ ದಾರಿಯಿಂದ ಸಿಕ್ಕ ತಂತ್ರಜ್ಞಾನಗಳೇ. ಇದೇ ತಂತ್ರಜ್ಞಾನದ ಸಹಾಯದಿಂದ ವಿಶ್ವದ ಬಹುತೇಕ ಡೇಟಾ ಕದ್ದು ಚೀನಾ ಅದನ್ನು ಕದ್ದು ನೋಡುತ್ತಿದೆ ಎನ್ನಲಾಗಿದೆ. ದೇಶದಲ್ಲಿ ತಂತ್ರಜ್ಞಾನ ಕಂಪೆನಿಗಳಿಗೆ ಸಹಾಯ ಮಾಡುವ ಮೂಲಕ ಭವಿಷ್ಯದಲ್ಲಿ ತಾನು ನಂ.1 ಆಗಲು ಏನೆಲ್ಲಾ ಬೇಕೋ ಅದನ್ನೇ ಮಾಡಿಕೊಳ್ಳುತ್ತಿದೆ ಎನ್ನುತ್ತವೆ ಹಲವು ವರದಿಗಳು.

ಭಾರತೀಯರು ಎಚ್ಚರವಾಗಿರಬೇಕು!

ಭಾರತೀಯರು ಎಚ್ಚರವಾಗಿರಬೇಕು!

ಜಗತ್ತಿಗೆ ಅತ್ಯಂತ ಕಡಿಮೆ ಬೆಲೆಯಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡುತ್ತಿರುವ ಚೀನಾ ಮೊಬೈಲ್ ಕಂಪೆನಿಗಳ ಬಗ್ಗೆ ಭಾರತ ಕೂಡ ಎಚ್ಚರವಹಿಸಬೇಕಾಗಿದೆ. ಭಾರತೀಯರ ಕೋಟ್ಯಂತರ ಗ್ರಾಹಕರ ಡೇಟಾ ಚೀನಾ ಮೊಬೈಲ್ ಕಂಪೆನಿಗಳ ಕೈಯಲ್ಲಿ ಈಗಾಗಲೇ ಸೇರಿಕೊಂಡಿದೆ. ಚೀನಾ ಸರ್ಕಾರದ ಆ ಡೇಟಾವನ್ನು ಕೇಳಿದರೆ ಆ ಕಂಪೆನಿಗಳು ಅದನ್ನು ಕೊಡದೇ ಇರಲು ಸಾಧ್ಯವಿಲ್ಲ. ಅಂದರೆ, ಚೀನಾ ಮೊಬೈಲ್ ಬಳಸುವ ಪ್ರತಿ ಭಾರತೀಯ ಮತ್ತು ಆತನ ವರ್ತನೆಗಳ ಬಗ್ಗೆ ಚೀನಾ ಸರ್ಕಾರಕ್ಕೆ ಮಾಹಿತಿ ಇರುತ್ತದೆ ಎಂದರ್ಥ.

Best Mobiles in India

Read more about:
English summary
THE REAL REASON WHY HUAWEI IS BANNED. What's wrong with Huawei, and why are countries banning. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X