Home
ಸುದ್ದಿಜಾಲ

2019ನೇ ವಿಶ್ವಕಪ್ ಕ್ರಿಕೆಟ್ ಗೆಲ್ಲುವವರು ಯಾರು?..ಭವಿಷ್ಯ ನುಡಿದ ಗೂಗಲ್ ಸಿಇಓ!

ದೈತ್ಯ ಟೆಕ್ ಕಂಪೆನಿ ಗೂಗಲ್ ಸಿಇಓ ಮತ್ತು ಭಾರತೀಯ ಸಂಜಾತ ಸುಂದರ್ ಪಿಚೈ ಅವರು 2019ನೇ ವಿಶ್ವಕಪ್ ಕ್ರಿಕೆಟ್ ಫೈನಲ್ ಆಡುವ ತಂಡಗಳ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಭಾರತ-ಅಮೆರಿಕ ಕೌನ್ಸಿಲ್ ಆಯೋಜಿಸಿದ ಇಂಡಿಯಾ ಐಡಿಯಾಸ್ ಶೃಂಗಸಭೆಯಲ್ಲಿ ಮಾತನಾಡುತ್ತಾ ಭಾರತದ ಜೊತೆಗೆ ವಿಶ್ವಕಲ್ ಫೈನಲ್ ಆಡುವ ತಂಡಗಳು ಯಾವುವು ಎಂದು ಊಹಿಸಿದ್ದಾರೆ.!

ಹೌದು, ವಿಶ್ವಕಪ್ ಕ್ರಿಕೆಟ್​ನ 2019ರ ಸಾಲಿನ ವಿಶ್ವಕಪ್​ ಯಾವ ತಂಡದ ಪಾಲಾಗಲಿದೆ ಎಂಬುದರ ಬಗ್ಗೆ ಮಾಜಿ ಕ್ರಿಕೆಟಿಗರಿಂದ ಹಿಡಿದು ಕ್ರಿಕೆಟ್​ ವಿಶ್ಲೇಷಕರವರೆಗೂ ಭವಿಷ್ಯ ನುಡಿದಿದ್ದಾರೆ. ಇದೀಗ ಸುಂದರ್ ಪಿಚೈ ಅವರು ಕೂಡ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು, 2019ನೇ ವಿಶ್ವಕಪ್ ಕ್ರಿಕೆಟ್ ಫೈನಲ್​ನಲ್ಲಿ ಇಂಗ್ಲೆಂಡ್ ಹಾಗೂ ಭಾರತ ಮುಖಾಮುಖಿ ಆಗಲಿವೆ ಎಂದು ಹೇಳಿದ್ದಾರೆ.

2019ನೇ ವಿಶ್ವಕಪ್ ಕ್ರಿಕೆಟ್ ಗೆಲ್ಲುವವರು ಯಾರು?..ಭವಿಷ್ಯ ನುಡಿದ ಗೂಗಲ್ ಸಿಇಓ!

2019ನೇ ವಿಶ್ವಕಪ್ ಕ್ರಿಕೆಟ್ ಫೈನಲ್​​ಗೆ ಭಾರತ ಮತ್ತು ಇಂಗ್ಲೆಂಡ್ ತಂಡಗಳು ತಲುಪಬೇಕು. ಆದರೆ, ನಿಮಗೂ ಗೊತ್ತು, ಆಸ್ಟ್ರೇಲಿಯಾ ಹಾಗೂ ನ್ಯೂಜಿ​ಲ್ಯಾಂಡ್​ ತಂಡಗಳು ಸಹ ಅತ್ಯುತ್ತಮ ತಂಡಗಳೇ ಎಂದು​ ಪಿಚ್ಚೈ ಹೇಳಿದ್ದಾರೆ. ಜೊತೆಗೆ ಕ್ರಿಕೆಟ್ ಮೇಲೆ ತಮಗೆ ಇರುವ​ ಪ್ರೀತಿ ಬಗ್ಗೆ ಹಂಚಿಕೊಂಡಿರುವ ಪಿಚೈ, ತಾನು ಕ್ರಿಕೆಟ್​ನತ್ತ ಹೇಗೆ ವಾಲಿದೆ ಎಂಬುದನ್ನು ಸಹ ತಿಳಿಸಿದ್ದಾರೆ.

ನಾನು ಮೊದಲು ಇಲ್ಲಿಗೆ ಬಂದಾಗ ಬೇಸ್​ ಬಾಲ್​ಗೆ ಹೊಂದಿಕೊಳ್ಳಲು ಪ್ರಯತ್ನಿಸಿದೆ. ಆದರೆ ಅದು ಸ್ವಲ್ಪ ಸವಾಲಿನದ್ದಾಗಿತ್ತು. ಕ್ರಿಕೆಟ್​ನಲ್ಲಿ ನೀವು ಪಿಚ್​ನಲ್ಲಿ ಓಡುವಾಗ ಬ್ಯಾಟ್​ ಅನ್ನು ಜೊತೆಗೆ ತೆಗೆದುಕೊಂಡು ಓಡಬೇಕಾಗುತ್ತದೆ. ಬೇಸ್​ ಬಾಲ್ ಆಡುವಾಗಲೂ ನಾನು ಸ್ಟಿಕ್ ಜೊತೆಯಲ್ಲಿ ಓಡುತ್ತಿದ್ದೆ. ಇದು ಕಷ್ಟವೆಂದು ತಿಳಿದ ಮೇಲೆ ಸ್ಟಿಕ್​ನಿಂದ ಕ್ರಿಕೆಟ್​ನತ್ತ ವಾಲಿದೆ ಎಂದು ಹೇಳಿದ್ದಾರೆ.

2019ನೇ ವಿಶ್ವಕಪ್ ಕ್ರಿಕೆಟ್ ಗೆಲ್ಲುವವರು ಯಾರು?..ಭವಿಷ್ಯ ನುಡಿದ ಗೂಗಲ್ ಸಿಇಓ!

ಬೇಸ್‌ಬಾಲ್ ಆಡಿದ ನನ್ನ ಮೊದಲ ಪಂದ್ಯದಲ್ಲಿ ಚೆಂಡನ್ನು ನನ್ನ ಹಿಂಭಾಗದತ್ತ ಹೊಡೆದೆ. ಆದರೆ, ಇದೇ ಹೊಡೆತ ಕ್ರಿಕೆಟ್​ನಲ್ಲಿ ಹೊಡೆದರೆ ಅತ್ಯುತ್ತಮ ಹೊಡೆತವಾಗುತ್ತಿತ್ತು ಎಂದು ಹಾಸ್ಯ ಚಾಟಾಕಿಯನ್ನು ಸಹ ಹಾರಿಸಿದ ಪಿಚೈ, ಭಾರತ ತಂಡಕ್ಕೆ ಮುಂದಿನ ಪಂದ್ಯಗಳಲ್ಲಿ ಸಾಕಷ್ಟು ಸವಾಲುಗಳು ಎದುರಾಗಲಿವೆ ಎಂದು ಭವಿಷ್ಯ ನುಡಿದಿರುವುದು ನಿಖರ ವಿಶ್ಲೇಷಣೆಯಾಗಬಹುದು .

ಓದಿರಿ: 'ಗ್ಯಾಲಕ್ಸಿ ಎಂ40' ಲಾಂಚ್!..ಶಿಯೋಮಿಗೆ ಭಯ ಮೂಡಿಸಿದ ಬೆಲೆ ಮತ್ತು ಫೀಚರ್ಸ್!!

Best Mobiles in India

English summary
Google's Indian-American CEO Sundar Pichai has predicted that India and England would clash in the finals of the ICC Cricket World Cup 2019. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+