'ಗ್ಯಾಲಕ್ಸಿ ಎಂ40' ಲಾಂಚ್!..ಶಿಯೋಮಿಗೆ ಭಯ ಮೂಡಿಸಿದ ಬೆಲೆ ಮತ್ತು ಫೀಚರ್ಸ್!!

|

ಭಾರತದ ಮೊಬೈಲ್ ಮಾರುಕಟ್ಟೆ ಬಹು ನಿರೀಕ್ಷೆಯಿಂದ ಕಾಯುತ್ತಿದ್ದ ಸ್ಯಾಮ್‌ಸಂಗ್ 'ಗ್ಯಾಲಕ್ಸಿ ಎಂ40' ಸ್ಮಾರ್ಟ್‌ಫೋನ್ ದೇಶದ ಮಾರುಕಟ್ಟೆಗೆ ಅದ್ದೂರಿಯಾಗಿ ಬಿಡುಗಡೆಯಾಗಿದೆ. ನೆನ್ನೆ(ಜೂನ್ 11)ಸಂಜೆ 6 ಗಂಟೆಯ ವೇಳೆಗೆ ಸ್ಯಾಮ್‌ಸಂಗ್‌ ಆಯೋಜಿಸಿದ್ದ ಮೊಬೈಲ್ ಬಿಡುಗಡೆ ಕಾರ್ಯಕ್ರಮದಲ್ಲಿ 'ಗ್ಯಾಲಕ್ಸಿ ಎಂ40' ಬಿಡುಗಡೆಗೊಂಡಿದ್ದು, ಮೊಬೈಲ್ಮಾರುಕಟ್ಟೆಯ ನಿರೀಕ್ಷೆಯಂತೆಯೇ ಶಿಯೋಮಿ ಕಂಪೆನಿಗೆ ಸೆಡ್ಡು ಹೊಡೆಯಲು ಸ್ಯಾಮ್‌ಸಂಗ್ ಸಂಪೂರ್ಣ ತಯಾರಾಗಿ ಬಂದಿದೆ.!

ಹೌದು, ಬಜೆಟ್ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಶಿಯೋಮಿಯನ್ನು ಹತ್ತಿಕ್ಕಲು ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ ಸರಣಿ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿತ್ತು. ಕಳೆದ ಜನವರಿಯಿಂದ ಇಲ್ಲಿಯವರೆಗೂ ಎಂ30, ಎಂ20 ಹಾಗೂ ಎಂ10 ಸ್ಮಾರ್ಟ್‌ಫೋನ್‌ಗಳು ಬಿಡುಗಡೆಯಾಗಿ ಸುಮಾರು ಎರಡು ಮಿಲಿಯನ್‌ಗಿಂತಲೂ ಹೆಚ್ಚು ಮಾರಾಟವನ್ನು ಕಂಡಿದ್ದವು. ಅತ್ಯಂತ ಕಡಿಮೆ ಬೆಲೆಗೆ ಮಾರುಕಟ್ಟೆಯಲ್ಲಿ ಲಭ್ಯವಿದ್ದ ಉತ್ತಮ ಫೋನ್‌ಗಳು ಇವಾಗಿದ್ದರಿಂದ ಮೊಬೈಲ್ ಪ್ರಿಯರು ಸಹ ಮನಸೋತಿದ್ದರು.

'ಗ್ಯಾಲಕ್ಸಿ ಎಂ40' ಲಾಂಚ್!..ಶಿಯೋಮಿಗೆ ಭಯ ಮೂಡಿಸಿದ ಬೆಲೆ ಮತ್ತು ಫೀಚರ್ಸ್!!

ಇದೀಗ ಇದೇ ಯಶಸ್ಸನ್ನು ಮತ್ತೆ ಪಡೆಯುವ ಸಲುವಾಗಿ 'ಗ್ಯಾಲಕ್ಸಿ ಎಂ40' ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಲಾಗಿದೆ. ಸ್ಯಾಮ್ಸಂಗ್ ಇಂಡಿಯಾದ ಹಿರಿಯ ಉಪಾಧ್ಯಕ್ಷ ಅಸಿಮ್ ವಾರ್ಸಿ ಅವರು ದೃಢಪಡಿಸಿದಂತೆ 'ಗ್ಯಾಲಕ್ಸಿ ಎಂ40' ಸ್ಮಾರ್ಟ್‌ಫೋನ್ 19,990 ರೂಪಾಯಿಗಳಿಗೆ ಮಾರುಕಟ್ಟೆಗೆ ಎಂಟ್ರಿ ನೀಡಿದೆ. ಹಾಗಾದರೆ, ನೆನ್ನೆ ಬಿಡುಗಡೆಗೊಂಡು ಶಿಯೋಮಿಗೆ ಭಯ ಮೂಡಿಸಿರುವ 'ಗ್ಯಾಲಕ್ಸಿ ಎಂ40' ಸ್ಮಾರ್ಟ್‌ಫೋನ್ ಫೀಚರ್ಸ್ ಮತ್ತು ವಿಶೇಷತೆಗಳೇನು ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಸ್ಯಾಮ್ಸಂಗ್ ಗ್ಯಾಲಕ್ಸಿ M40 ವಿನ್ಯಾಸ!

ಸ್ಯಾಮ್ಸಂಗ್ ಗ್ಯಾಲಕ್ಸಿ M40 ವಿನ್ಯಾಸ!

ಮಾರುಕಟ್ಟೆಗೆ ತರುವ ಮುನ್ನವೇ ಗ್ಯಾಲಕ್ಸಿ M40 ಫೋನ್ ಅನ್ನು ಅಮೆಜಾನ್‌ನಲ್ಲಿ ಪ್ರದರ್ಶನಕ್ಕೆ ಇಡಲಾಗಿತ್ತು. ಅದರಂತೆ ಗ್ಯಾಲಕ್ಸಿ M40 ಬಹುತೇಕ ಪೂರ್ಣ ಡಿಸ್‌ಪ್ಲೇ ಹೊಂದಿರುವಂತೆ ಕಾಣುತ್ತಿದೆ.ಡಿಸ್‌ಪ್ಲೇ ಎಡಭಾಗದ ಮೂಲೆಯಲ್ಲಿ ಸೆಲ್ಫೀ ಕ್ಯಾಮೆರಾವನ್ನು ನೀಡಲಾಗಿದೆ. ಇನ್ನು ಹಿಂಬಾಗದಲ್ಲಿ ಮೂರು ಕ್ಯಾಮೆರಾಗಳು ಮತ್ತು ಫಿಂಗರ್ ಪ್ರಿಂಟ್ ಆಯ್ಕೆಯನ್ನು ಫೋನ್ ಹೊಂದಿದೆ.

ಸ್ಯಾಮ್ಸಂಗ್ ಗ್ಯಾಲಕ್ಸಿ M40 ಡಿಸ್‌ಪ್ಲೇ

ಸ್ಯಾಮ್ಸಂಗ್ ಗ್ಯಾಲಕ್ಸಿ M40 ಡಿಸ್‌ಪ್ಲೇ

ಮೊದಲೇ ತಿಳಿದಂತೆ ಗ್ಯಾಲಕ್ಸಿ M40 ಫೋನ್ 6.3-ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಹೊಂದಿದೆ. 1080×2340 ಪಿಕ್ಸೆಲ್‌ಗಳ ಸಾಮರ್ಥ್ಯದಲ್ಲಿ ಇನ್ಫಿನಿಟಿ ಓ ಪ್ರದರ್ಶನ ಫಲಕವನ್ನು ನೀಡಿ ಸ್ಯಾಮ್‌ಸಂಗ್ ಗಮನಸೆಳೆದಿದೆ. ಫೋನ್ ಸ್ಕ್ರೀನ್ ಧ್ವನಿ ತಂತ್ರಜ್ಞಾನವನ್ನು ಒಳಗೊಂಡಿರುವ ವಿಶೇಷತೆಯಲ್ಲಿ ಗ್ಯಾಲಕ್ಸಿ M40 ಡಿಸ್‌ಪ್ಲೇ ಅತ್ಯುತ್ತಮವಾಗಿ ಮೂಡಿಬಂದಿದೆ,.

ಸ್ಯಾಮ್ಸಂಗ್ ಗ್ಯಾಲಕ್ಸಿ M40 ಪ್ರೊಸೆಸರ್

ಸ್ಯಾಮ್ಸಂಗ್ ಗ್ಯಾಲಕ್ಸಿ M40 ಪ್ರೊಸೆಸರ್

ಗ್ಯಾಲಕ್ಸಿ M40 ಸ್ಮಾರ್ಟ್‌ಫೋನಿನಲ್ಲಿ 2GHz ಆಕ್ಟಾ-ಕೋರ್ ಸ್ನಾಪ್ಡ್ರಾಗನ್ 675 ಪ್ರೊಸೆಸರ್ ಅನ್ನು ಅಳವಡಿಸಲಾಗಿದೆ. 6GB RAM ಮತ್ತು 128GB ಆಂತರಿಕ ಸಂಗ್ರಹಣಾ ಮಾದರಿಯಲ್ಲಿ ಬಿಡುಗಡೆಯಾಗಿರುವ ಫೋನಿನ ಮೆಮೊರಿಯನ್ನು ಮೈಕ್ರೊ SD ಕಾರ್ಡ್ ಮೂಲಕ 512GB ವರೆಗೆ ವಿಸ್ತರಿಸಬಹುದಾಗಿದ್ದು, ಅಡ್ರಿನೊ 612 ಜಿಪಿಯು ಇರುವುದು ಗೇಮಿಂಗ್‌ಗೆ ಅತ್ಯುತ್ತಮವಾಗಿದೆ.

 ಸ್ಯಾಮ್ಸಂಗ್ ಗ್ಯಾಲಕ್ಸಿ M40 ಕ್ಯಾಮೆರಾ!

ಸ್ಯಾಮ್ಸಂಗ್ ಗ್ಯಾಲಕ್ಸಿ M40 ಕ್ಯಾಮೆರಾ!

ಗ್ಯಾಲಕ್ಸಿ ಎಂ40 ಸ್ಮಾರ್ಟ್‌ಫೋನ್ ತ್ರಿವಳಿ ಕ್ಯಾಮೆರಾ ಸೆಟಪ್‌ನೊಂದಿಗೆ ಬರುತ್ತದೆ. ಪ್ರಾಥಮಿಕ ಕ್ಯಾಮೆರಾ 32 ಮೆಗಾಪಿಕ್ಸೆಲ್ ಸಾಮರ್ಥ್ಯವನ್ನು ಹೊಂದಿದ್ದರೆ, 8MP ಅಲ್ಟ್ರಾ ವೈಡ್-ಆಂಗಲ್ ಲೆನ್ಸ್ ಮತ್ತು 5MP ಆಳ ಸಂವೇದಕಗಳು ಕ್ಯಾಮೆರಾ ತಂತ್ರಜ್ಞಾನಕ್ಕೆ ಹಿಡಿದ ಕನ್ನಡಿಗಳು ಎನ್ನಬಹುದು. ಇದರಲ್ಲಿ 4K ರೆಸೊಲ್ಯೂಶನ್ ವರೆಗೆ ವೀಡಿಯೊಗಳನ್ನು ರೆಕಾರ್ಡ್ ಮಾಡಬಹುದು.

ಸ್ಯಾಮ್ಸಂಗ್ ಗ್ಯಾಲಕ್ಸಿ M40 ಬ್ಯಾಟರಿ

ಸ್ಯಾಮ್ಸಂಗ್ ಗ್ಯಾಲಕ್ಸಿ M40 ಬ್ಯಾಟರಿ

ಗ್ಯಾಲಕ್ಸಿ ಎಂ40 ಫೋನ್ 3,500 mAh ಬ್ಯಾಟರಿಯನ್ನು ಹೊಂದಿರಲಿದೆ ಎಂ ಎಂಬುದು ನಿಜವಾಗಿದೆ. 15W ಯುಎಸ್ಬಿ-ಸಿ ಚಾರ್ಜರ್ನೊಂದಿಗೆ ಗ್ಯಾಲಕ್ಸಿ M30 ವೇಗದ ಚಾರ್ಜಿಂಗ್ ಬೆಂಬಲವನ್ನು ಹೊಂದಿದೆ. ಈ ಮೊದಲಿನ ಲೀಕ್ ವರದಿಗಳಲ್ಲಿ 5000 mAh ಬ್ಯಾಟರಿ ಇರಲಿದೆ ಎಂಬ ಗಾಳಿಸುದ್ದಿ ಇದ್ದವು. ಆದರೆ, ಬ್ಯಾಟರಿ ವಿಷಯದಲ್ಲಿ ಸ್ಯಾಮ್‌ಸಂಗ್ ಸ್ವಲ್ಪ ಹಿಂದುಳಿದಿದೆ ಎನ್ನಬಹುದು.

 ಸ್ಯಾಮ್ಸಂಗ್ ಗ್ಯಾಲಕ್ಸಿ ಇತರೆ ಫೀಚರ್ಸ್

ಸ್ಯಾಮ್ಸಂಗ್ ಗ್ಯಾಲಕ್ಸಿ ಇತರೆ ಫೀಚರ್ಸ್

ಗ್ಯಾಲಕ್ಸಿ M40 16-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮರಾವನ್ನು ಹೊಂದಿದೆ. ದುರದೃಷ್ಟವಶಾತ್, ಹೆಡ್ಫೋನ್ ಜ್ಯಾಕ್ ಫೋನಿನಿಂದ ಕಾಣೆಯಾಗಿದೆ.ಇಯರ್ಪೀಸ್ ಅನ್ನು ಬದಲಿಸಿ ಆಡಿಯೋ ಸೌಂಡ್ ತಂತ್ರಜ್ಞಾನದೊಂದಿಗೆ ಫೋನ್ ಬಿಡುಗಡೆಯಾಗಿದ್ದು, ಒನ್ ಯುಐ ಜೊತೆಗೆ ಆಂಡ್ರಾಯ್ಡ್ ಪೈ ಡಾಲ್ಬಿ ಅಟ್ಮಾಸ್ ಬೆಂಬಲ, ಎನ್ಎಫ್ಸಿ ಮತ್ತು ಬ್ಲೂಟೂತ್ 5.0 ತಂತ್ರಜ್ಞಾನಗಳು ಸೇರಿಕೊಂಡಿವೆ.

Best Mobiles in India

English summary
Galaxy M40 just announced with an Infinity-O display, triple camera and a capable Snadragon 675 chipset. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X