Subscribe to Gizbot

ಸುಪ್ರೀಂ ಕೋರ್ಟ್‌ ವೆಬ್‌ಸೈಟಿಗೆ ಕನ್ನ ಹಾಕಿದ ಬ್ರೆಜಿಲ್ ಹ್ಯಾಕರ್ಸ್.!

Written By:

ದೇಶದಲ್ಲಿ ದಿನೇ ದಿನೇ ಹ್ಯಾಕಿಂಗ್ ಪ್ರಕರಣಗಳು ಹೆಚ್ಚಾಗಿದ್ದು, ಹೆಚ್ಚಾಗಿ ಸರಕಾರಿ ನಿರ್ವಹಣೆಯಲ್ಲಿರುವ ವೆಬ್‌ಸೈಟ್‌ಗಳಿಗೆ ಹ್ಯಾಕರ್ಸ್ ಸುಲಭವಾಗಿ ಕನ್ನ ಹಾಕುತ್ತಿದ್ದಾರೆ. ಇದೇ ಮಾದರಿಯಲ್ಲಿ ಕೆಲವು ದಿನಗಳ ಹಿಂದೆ ರಕ್ಷಣಾ ಇಲಾಖೆ ವೆಬ್‌ಸೈಟಿಗೆ ಕನ್ನ ಹಾಕಿದ ರೀತಿಯಲ್ಲಿಯೇ ಇಂದು ಸುಪ್ರೀಂ ಕೋರ್ಟ್‌ ವೆಬ್‌ಸೈಟ್‌ ಅನ್ನು ಹ್ಯಾಕ್ ಮಾಡಲಾಗಿದೆ ಎನ್ನಲಾಗಿದ್ದು, ಬ್ರೆಜಿಲ್ ಮೂಲದ ಹ್ಯಾಕರ್ಸ್‌ಗಳು ಈ ದಾಳಿಯ ಹಿಂದಿದ್ದಾರೆ ಎನ್ನುವ ಮಾತು ಕೇಳಿ ಬಂದಿದೆ.

ಸುಪ್ರೀಂ ಕೋರ್ಟ್‌ ವೆಬ್‌ಸೈಟಿಗೆ ಕನ್ನ ಹಾಕಿದ ಬ್ರೆಜಿಲ್ ಹ್ಯಾಕರ್ಸ್.!

ಇಂದು (ಗುರುವಾರ) ಮಧ್ಯಾಹ್ನ 12.10ರ ಸುಮಾರಿಗೆ ಸುಪ್ರೀಂ ಕೋರ್ಟ್‌ ವೆಬ್‌ಸೈಟ್‌ ಹ್ಯಾಕ್ ಆಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿಯನ್ನು ಹಂಚಿಕೊಂಡ ನಂತರದಲ್ಲಿ ಹ್ಯಾಕ್ ಆಗಿರುವ ವಿಚಾರ ಬೆಳಕಿಗೆ ಬಂದಿದೆ. ಹಲವರು ಈ ವಿಷಯವನ್ನು ತಮ್ಮ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ. ಸ್ಕ್ರಿನ್‌ ಶಾಟ್ ಸಹ ಲಭ್ಯವಾಗಿದೆ.

ಓದಿರಿ: ವಾಟ್ಸ್‌ಆಪ್‌ಗೆ ಸೆಡ್ಡು ಹೊಡೆದ ಫೇಸ್‌ಬುಕ್: ಶೀಘ್ರವೇ FB ಪೇಮೆಂಟ್ ಸೇವೆ..!

ಸುಪ್ರೀಂ ಕೋರ್ಟ್‌ ವೆಬ್‌ ಸೈಟ್ ಹ್ಯಾಕ್ ಮಾಡಿರುವ ಬ್ರೆಜಿಲ್ ಹ್ಯಾಕರ್ಸ್, ವೆಬ್‌ಸೈಟ್‌ನಲ್ಲಿ ಬ್ರೆಜಿಲ್‌ ದೇಶದ ಮರಿಜಿನಾ ಹೂವಿನ ಚಿತ್ರವನ್ನು ಪ್ರಕಟಿಸಿದ್ದಾರೆ ಹಾಗೂ 'ಹೈಟೆಕ್‌ ಬ್ರೆಜಿಲ್‌ ಹ್ಯಾಕ್ ಟೀಂ' ಎಂದು ಬರೆದುಕೊಂಡಿದ್ದಾರೆ. ಹ್ಯಾಕರ್ಸ್ ಬ್ರೆಜಿಲ್‌ ನಿಂದಲೇ ವೆಬ್‌ಸೈಟ್‌ ಹ್ಯಾಕ್ ಮಾಡಿರುವ ಶಂಕೆ ವ್ಯಕ್ತವಾಗಿದೆ. ಇದಲ್ಲದೇ ಪೋರ್ಚುಗಲ್ ಭಾಷಯಲ್ಲಿಯೇ ಕೆಲವು ಪದಗಳನ್ನು ಬರೆಯಲಾಗಿದೆ.

What is Jio Cricket Gold Pass? How to Buy it
ಸುಪ್ರೀಂ ಕೋರ್ಟ್‌ ವೆಬ್‌ಸೈಟಿಗೆ ಕನ್ನ ಹಾಕಿದ ಬ್ರೆಜಿಲ್ ಹ್ಯಾಕರ್ಸ್.!

ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಸುಪ್ರೀಂ ಕೋರ್ಟ್‌ ವೆಬ್‌ ಸೈಟ್ ಹ್ಯಾಕ್ ಆಗಿರುವ ಕುರಿತು ಮಾಹಿತಿಯನ್ನು ನೀಡಿದೆ. ಸದ್ಯ ಸುಪ್ರೀಂ ಕೋರ್ಟ್ ವೆಬ್‌ಸೈಟ್‌ ಬಳಕೆಗೆ ತಡೆಒಡ್ಡಲಾಗಿದೆ. ಈ ತಿಂಗಳ ಆರಂಭದಲ್ಲಿ ರಕ್ಷಣಾ ಇಲಾಖೆ ಸೇರಿದಂತೆ ಇತರೆ ಸರ್ಕಾರಿ ಇಲಾಖೆಗಳ ವೆಬ್‌ಸೈಟ್‌ಗಳನ್ನು ಹ್ಯಾಕ್ ಮಾಡಲಾಗಿತ್ತು.

English summary
Supreme Court website hacked, Brazilian group suspected behind attack. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot