Home
ಸುದ್ದಿಜಾಲ

UPI ಬಳಕೆದಾರರಿಗೆ ಶಾಕಿಂಗ್ ನ್ಯೂಸ್‌: ಈ ಪಾವತಿಗೆ ಶುಲ್ಕ ತೆರಬೇಕು!

ಭಾರತದ ಬಹುಪಾಲು ಆರ್ಥಿಕ ವಿಚಾರದಲ್ಲಿ ಡಿಜಿಟಲೀಕರಣವಾಗಿದೆ. ಇದಕ್ಕೆ ಉದಾಹರಣೆ ಎಂಬಂತೆ ಬೀದಿ ಬದಿ ವ್ಯಾಪಾರಿಯಿಂದ ದೊಡ್ಡ ದೊಡ್ಡ ಹೋಟೆಲ್‌ವರೆಗೂ ಯುಪಿಐ ಪಾವತಿ ಬಳಕೆಯಲ್ಲಿದೆ. ಆದರೆ, ಇನ್ಮುಂದೆ ಫೋನ್‌ ಪೇ ಹಾಗೂ ಗೂಗಲ್‌ಪೇ ಸೇರಿದಂತೆ ಇನ್ನಿತರೆ ಆಪ್‌ಗಳ ಮೂಲಕ ಪಾವತಿ ಮಾಡುವವರು ಹೆಚ್ಚುವರಿ ಶುಲ್ಕ ನೀಡಬೇಕಿದೆ.

ಹೌದು, ಯುನಿಫೈಡ್ ಪೇಮೆಂಟ್ ಇಂಟರ್ಫೇಸ್ ಅಂದರೆ ಯುಪಿಐ ಸಾಮಾನ್ಯ ಜನರ ಜೀವನದ ಅವಿಭಾಜ್ಯ ಅಂಗವಾಗಿದ್ದು, ಈ ನಡುವೆ ಶಾಕಿಂಗ್‌ ವರದಿಯೊಂದನ್ನು ನೀಡಿದೆ, ಅದರಂತೆ ವ್ಯಾಪಾರಿ ವಹಿವಾಟುಗಳ ಮೇಲೆ ಪ್ರಿಪೇಯ್ಡ್ ಪೇಮೆಂಟ್ ಇನ್‌ಸ್ಟ್ರುಮೆಂಟ್ಸ್ (PPI) ಶುಲ್ಕವನ್ನು ಜಾರಿಗೊಳಿಸಲಾಗುತ್ತದೆ. ಹಾಗಿದ್ರೆ, ಎಷ್ಟು ಪ್ರಮಾಣದ ಶುಲ್ಕವನ್ನು ಪಾವತಿ ಮಾಡಬೇಕು?, ಯಾರಿಗೆ ಈ ಶುಲ್ಕದಿಂದ ವಿನಾಯಿತಿ ಇದೆ?, ಎಂಬಿತ್ಯಾದಿ ಮಾಹಿತಿಯನ್ನು ತಿಳಿಸಿಕೊಡಲಾಗಿದೆ ಓದಿರಿ.

UPI ಬಳಕೆದಾರರಿಗೆ ಶಾಕಿಂಗ್ ನ್ಯೂಸ್‌: ಈ ಪಾವತಿಗೆ ಶುಲ್ಕ ತೆರಬೇಕು!

ಫೋನ್‌ಪೇ, ಗೂಗಪ್‌ಪೇ, ಪೇಟಿಎಮ್ ಪಾವತಿಯಲ್ಲಿ ಶುಲ್ಕ: ಈಗಾಗಲೇ ನೀವು ಯುಪಿಐ ಬಳಕೆ ಮಾಡಿಕೊಂಡು ರೀಚಾರ್ಜ್‌ ಮಾಡಿದರೆ ಇಂತಿಷ್ಟು ಎಂದು ಹೆಚ್ಚುವರಿ ಶುಲ್ಕ ಪಾವತಿ ಮಾಡಬೇಕು. ಇದೇ ಮಾದರಿಯಲ್ಲಿ ಈಗ ಬಳಕೆದಾರರು ಶುಲ್ಕ ಪಾವತಿ ಮಾಡಬೇಕಿದೆ. UPIಅನ್ನು ನಿರ್ವಹಿಸುತ್ತಿರುವ ಭಾರತೀಯ ರಾಷ್ಟ್ರೀಯ ಪಾವತಿ ನಿಗಮ(NPCI) ಮಾರ್ಚ್ 24,2023 ರಂದು ಹೊರಡಿಸಲಾದ ಸುತ್ತೋಲೆ ಪ್ರಕಾರ UPI ನಿಂದ ವ್ಯಾಪಾರಿ ವಹಿವಾಟುಗಳ ಮೇಲೆ ಪ್ರಿಪೇಯ್ಡ್ ಪಾವತಿ ಸಾಧನ (PPI) ಶುಲ್ಕವನ್ನು ಜಾರಿಗೊಳಿಸಲಾಗುವುದು ಎಂದು ಉಲ್ಲೇಖಿಸಿದೆ.

ಎಷ್ಟು ಮೊತ್ತದ ಹಣಕ್ಕೆ ಶುಲ್ಕ?: ಓರ್ವ ವ್ಯಕ್ತಿಯು ಮೊಬೈಲ್ ವ್ಯಾಲೆಟ್‌ಗಳಂತಹ ಪ್ರಿಪೇಯ್ಡ್ ಪಾವತಿ ಸಾಧನಗಳ ಮೂಲಕ 2,000 ರೂ.ಗಿಂತ ಹೆಚ್ಚಿನ ಹಣವನ್ನು ವ್ಯಾಪಾರಿಗಳಿಗೆ ವರ್ಗಾಯಿಸಿದರೆ ಆ ವೇಳೆ ಅವನು 1.1 ಪ್ರತಿಶತ ಹಣವನ್ನು ಇಂಟರ್ಚೇಂಜ್ ಶುಲ್ಕವಾಗಿ ಪಾವತಿ ಮಾಡಬೇಕಾಗುತ್ತದೆ ಎಂದು ಆದೇಶದಲ್ಲಿ ಉಲ್ಲೇಖ ಮಾಡಲಾಗಿದೆ. ಅದಾಗ್ಯೂ ಈ NPCI ವಿವಿಧ ಪ್ರದೇಶಗಳಿಗೆ ವಿಭಿನ್ನ ವಿನಿಮಯ ಶುಲ್ಕಗಳನ್ನು ನಿಗದಿಪಡಿಸಿದ್ದು, ಅದರಲ್ಲೂ ಕೃಷಿ ಮತ್ತು ದೂರಸಂಪರ್ಕ ವಲಯಕ್ಕೆ ಕಡಿಮೆ ವಿನಿಮಯ ಶುಲ್ಕವನ್ನು ವಿಧಿಸಲಾಗಿದೆ.

UPI ಬಳಕೆದಾರರಿಗೆ ಶಾಕಿಂಗ್ ನ್ಯೂಸ್‌: ಈ ಪಾವತಿಗೆ ಶುಲ್ಕ ತೆರಬೇಕು!

ಎಲ್ಲರೂ ಈ ಶುಲ್ಕ ಪಾವತಿ ಮಾಡಬೇಕೆ?: ಭಾರತದಲ್ಲಿ ಬಹುಪಾಲು ಮಂದಿ ಫೋನ್‌ಪೇ, ಗೂಗಲ್‌ಪೇ ಹಾಗೂ ಪೇಟಿಎಮ್‌ ಸೇರಿದಂತೆ ಇನ್ನಿತರೆ ಆಪ್‌ಗಳ ಮೂಲಕ ನಿತ್ಯ ವ್ಯವಹಾರ ನಡೆಸುತ್ತಾರೆ. ಅದರಂತೆ ಎಲ್ಲರೂ ಸಹ ಈ ಶುಲ್ಕ ಪಾವತಿ ಮಾಡಬೇಕೇ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಿಸಬಹದು. ಇದಕ್ಕೆ ಉತ್ತರ ಖಂಡಿತಾ ಇಲ್ಲ.ಅಂದರೆ ಬ್ಯಾಂಕ್ ಖಾತೆಗಳು ಮತ್ತು PPI ವ್ಯಾಲೆಟ್‌ಗಳ ನಡುವಿನ ಪೀರ್-ಟು-ಪೀರ್ (P2P) ಮತ್ತು ಪೀರ್-ಟು-ಪೀರ್-ಮರ್ಚೆಂಟ್ (P2PM) ವಹಿವಾಟಿನ ಮೇಲೆ ಯಾವುದೇ ಶುಲ್ಕವನ್ನು ವಿಧಿಸಲಾಗುವುದಿಲ್ಲ.

ಸೆಪ್ಟೆಂಬರ್ 30, 2023 ರ ಮೊದಲು ಪರಿಶೀಲನೆಗೆ ನಡೆಸಲಾಗುತ್ತದೆ: ಇನ್ನು UPI ಪಾವತಿ ವ್ಯವಸ್ಥೆಯು ಪ್ರಸ್ತುತ ಶೂನ್ಯ-ವ್ಯಾಪಾರಿ ರಿಯಾಯಿತಿ ದರ (MDR) ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಹೊಸ ನಿಯಮದ ನಂತರ ಹೆಚ್ಚುವರಿ ಶುಲ್ಕವನ್ನು ವಿಧಿಸಬಹುದು. ಪರಿಣಾಮ ಇದನ್ನು ಸೆಪ್ಟೆಂಬರ್ 30, 2023 ರ ಮೊದಲು NPCI ಪರಿಶೀಲನೆಗೆ ಒಳಪಡಿಸಲಿದೆ. ಆದರೆ, ಇಲ್ಲಿಯವರೆಗೆ ಹೆಚ್ಚುವರಿ ಶುಲ್ಕ ವಿಧಿಸುವ ಪ್ಲ್ಯಾನ್‌ನಲ್ಲಿ ಬಹಳಷ್ಟು ಗೊಂದಲವಿದೆ.

UPI ಬಳಕೆದಾರರಿಗೆ ಶಾಕಿಂಗ್ ನ್ಯೂಸ್‌: ಈ ಪಾವತಿಗೆ ಶುಲ್ಕ ತೆರಬೇಕು!

ಹೆಚ್ಚುತ್ತಿರುವ ಆನ್‌ಲೈನ್ ವಂಚನೆ: ಇನ್ನು ಈ ಯುಪಿಐ ಆಧಾರಿತ ಪಾವತಿ ಬಳಕೆ ಹೆಚ್ಚಾದಂತೆ ಹ್ಯಾಕರ್ಸ್‌ಗಳು ಸಹ ನಿಮ್ಮ ಬ್ಯಾಂಕ್‌ ವ್ಯವಹಾರ ಹಾಗೂ ನಿಮ್ಮ ಡಿವೈಸ್‌ಗಳಲ್ಲಿನ ಖಾಸಗಿ ಮಾಹಿತಿಯನ್ನು ಕದಿಯುವ ಕೆಲಸಕ್ಕೆ ಕೈ ಹಾಕುತ್ತಿದ್ದಾರೆ. ಹೀಗಾಗಿ ನಿಮ್ಮ ಫೋನ್‌ಗೆ ಬರುವ ಅನಾಮಿಕ ಲಿಂಕ್‌ಗಳು ಹಾಗೂ ಎಸ್‌ಎಮ್‌ಎಸ್‌ಗಳಲ್ಲಿ ಕಂಡು ಬರುವ ಮಾಹಿತಿಗೆ ಮಾರುಹೋಗದಿರಿ. ಈ ಮೂಲಕ ನಿಮ್ಮ ಬ್ಯಾಂಕ್‌ ವ್ಯವಹಾರವನ್ನು ಭದ್ರಪಡಿಸಿಕೊಳ್ಳಿ.

Best Mobiles in India

English summary
UPI payments in India will have to pay a 1.1% charge on the payments above Rs 2,000, while using PPI.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+