ಟ್ರೂ ಕಾಲರ್ ಆಪ್‌ಗೆ ಟಕ್ಕರ್ ಕೊಡಲಿದೆ ಸ್ವದೇಶಿ ನಿರ್ಮಿತ ಭಾರತ್ ಕಾಲರ್ ಆಪ್‌!

|

ಇಂದಿನ ದಿನಗಳ ಎಲ್ಲವೂ ಸ್ಮಾರ್ಟ್‌ ಆಗಿದೆ. ಬಳಸುವ ಸ್ಮಾರ್ಟ್‌ಫೋನ್‌ನಿಂದ ಹಿಡಿದು ಅದರೊಳಿನ ಆಪ್‌ಗಳು ಸ್ಮಾರ್ಟ್‌ ಫೀಚರ್ಸ್‌ ಹೊಂದಿವೆ. ಇಂತಹ ಆಪ್‌ಗಳಲ್ಲಿ ಟ್ರೂ ಕಾಲರ್ ಆಪ್ ಕರೆ ಮಾಡುವವರ (ಕಾಂಟ್ಯಾಕ್ಟ್‌ ಲಿಸ್ಟ್‌ನಲ್ಲಿ ಇರದಿದ್ದಲ್ಲಿ) ಹೆಸರನ್ನು ತಿಳಿಸುವ ಆಪ್ ಆಗಿ ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದಿದೆ. ಈ ಆಪ್‌ ಪ್ರೀಮೀಯಂ ಆವೃತ್ತಿಯನ್ನು ಹೊಂದಿದ್ದು, ಹೆಚ್ಚಿನ ಫೀಚರ್ಸ್‌ಗಳನ್ನು ಒದಗಿಸಲಿದೆ. ಆದರೆ ಟ್ರೂ ಕಾಲರ್‌ಗೆ ಅಪ್ಲಿಕೇಶನ್‌ಗೆ ಟಕ್ಕರ್ ನೀಡಲು ಇದೀಗ ಸ್ವದೇಶಿ ನಿರ್ಮಿತ ಹೊಸ ಆಪ್ ಅನಾವರಣ ಆಗಿದೆ.

ಅನಾವರಣ

ಹೌದು, ಟ್ರೂ ಕಾಲರ್‌ ಆಪ್‌ಗೆ ಸೆಡ್ಡು ಹೊಡೆಯಲು ಸ್ವದೇಶಿ ನಿರ್ಮಿತ ಭಾರತ್ ಕಾಲರ್ ಆಪ್ (Bharat Caller App) ಬಿಡುಗಡೆ ಮಾಡಲಾಗಿದೆ. ಈ ಅಪ್ಲಿಕೇಶನ್ ಅನ್ನು ಆಗಸ್ಟ್ 15, 2021 ರಂದು ಅನಾವರಣ ಮಾಡಲಾಗಿದೆ. ಭಾರತ್ ಕಾಲರ್ ಆಪ್ ಭಾರತದ ಕೆಲವು ಎಂಜಿನಿಯರ್ ಗಳು ಮಾಡಿದ ಕಾಲರ್ ಐಡಿ ಆಪ್ (Caller ID App) ಆಗಿದೆ. ಈ ಆಪ್ ಅನ್ನು ಟ್ರೂ ಕಾಲರ್ ಗೆ ಪರ್ಯಾಯವಾಗಿ ಭಾರತದಲ್ಲಿ ಪರಿಗಣಿಸಬಹುದು.

ಟ್ರೂಕಾಲರ್

ಇದು ಸಂಪೂರ್ಣವಾಗಿ ಸುರಕ್ಷಿತವಾಗಿದೆ ಎಂದು ಬೆಂಗಳೂರಿನ ಐಐಎಂನ (IIM) ಹಳೆ ವಿದ್ಯಾರ್ಥಿ ಮತ್ತು ಆಪ್ ನಿರ್ಮಾಣ ತಂಡದ ಪ್ರಮುಖ ಸದಸ್ಯ ಪ್ರಜ್ವಲ್ ಸಿನ್ಹಾ ಹೇಳಿದ್ದಾರೆ. ಕೆಲವು ಸಮಯದ ಹಿಂದೆ ಭಾರತೀಯ ಸೇನೆಯು ಟ್ರೂ ಕಾಲರ್ ಅನ್ನು ಭಾರತದಲ್ಲಿ ನಿಷೇಧಿಸಿತ್ತು. ಆ ಸಮಯದಲ್ಲಿ ಭಾರತವು ತನ್ನದೇ ಆದ ಕಾಲರ್ ಐಡಿ ಆಪ್ ಅನ್ನು ಹೊಂದುವಂತಾಗಬೇಕು ಎಂದು ಕೊಂಡು, ಪ್ರಜ್ವಲ್ ಮತ್ತು ಆತನ ಸ್ನೇಹಿತರು ಈ ಆಪ್ ಮಾಡಲು ನಿರ್ಧರಿಸಿದ್ದರಂತೆ.

ಸರ್ವರ್

ಈ ಆಪ್ ಇತರ ಆಪ್‌ಗಳಿಗಿಂತ (App) ಭಿನ್ನವಾಗಿದೆ. ಇದು ಬಳಕೆದಾರರ ಸಂಪರ್ಕಗಳನ್ನು ಮತ್ತು ಕಾಲ್ ಲಾಗ್‌ಗಳನ್ನು ತನ್ನ ಸರ್ವರ್‌ನಲ್ಲಿ ಸೇವ್ ಮಾಡಿಕೊಳ್ಳುವುದಿಲ್ಲ. ಅಲ್ಲದೆ, ಈ ಆಪ್‌ನ ಎಲ್ಲಾ ಡೇಟಾ ಎನ್‌ಕ್ರಿಪ್ಟ್ ಫಾರ್ಮಾಟ್ ನಲ್ಲಿ ಸೇವ್ ಆಗಿರುತ್ತದೆ. ಅದರ ಸರ್ವರ್ ಅನ್ನು ಭಾರತದ ಹೊರಗಿನ ಯಾರಿಗೂ ಬಳಸಲಾಗುವುದಿಲ್ಲ. ಹಾಗಾಗಿ ಭಾರತ್ ಕಾಲರ್ ಆಪ್ ಸಂಪೂರ್ಣ ಸುರಕ್ಷಿತ ಮತ್ತು ಯುಸರ್ ಫ್ರೆಂಡ್ಲಿ ಆಗಿರುತ್ತದೆ.

ಆಂಡ್ರಾಯ್ಡ್

ಭಾರತ್ ಕಾಲರ್ ಅನ್ನು ಇಂಗ್ಲಿಷ್, ಹಿಂದಿ, ತಮಿಳು, ಗುಜರಾತಿ, ಬಾಂಗ್ಲಾ, ಮರಾಠಿ ಮುಂತಾದ ವಿವಿಧ ಭಾರತೀಯ ಭಾಷೆಗಳಲ್ಲಿ ಆರಂಭಿಸಲಾಗಿದೆ. ಪ್ರತಿಯೊಬ್ಬ ಭಾರತೀಯನು ತನ್ನ ಆಯ್ಕೆಯ ಭಾಷೆಯನ್ನು ಆರಿಸಿಕೊಂಡು ಆ ಭಾಷೆಯಲ್ಲಿ ಆಪ್ ಅನ್ನು ಬಳಸಬಹುದು. ಆಂಡ್ರಾಯ್ಡ್ ಮತ್ತು ಐಒಎಸ್ (IOS) ಬಳಕೆದಾರರು ಈ ಆಪ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.

Best Mobiles in India

English summary
Swadeshi BharatCaller App To Compete With Truecaller.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X