ಕನ್ನಡ ಭಾಷಾ ಬೆಂಬಲದೊಂದಿಗೆ ಸ್ವಿಫ್ಟ್ ಕೀ ಆಂಡ್ರಾಯ್ಡ್‌ನಲ್ಲಿ

By Shwetha
|

ಕೀಬೋರ್ಡ್ ಅಪ್ಲಿಕೇಶನ್ ಆದ ಸ್ವಿಫ್ಟ್‌ಕೀ ಯನ್ನು ಆಂಡ್ರಾಯ್ಡ್‌ಗಾಗಿ ಹೆಚ್ಚಿನ ಜನರು ಇದೀಗ ಬಳಸುತ್ತಿದ್ದಾರೆ. ಇದರ ವಿಸ್ತರಿತ ಮಮೋಹಕ ವೈಶಿಷ್ಟ್ಯಗಳಿಗೆ ನಿಜಕ್ಕೂ ಧನ್ಯವಾದಗಳನ್ನು ಅರ್ಪಿಸಬೇಕು. ಸಲಹೆಗಳು, ಹೆಚ್ಚವರಿ ಭಾಷಾ ಬೆಂಬಲ, ಥೀಮ್ಸ್ ಮತ್ತು ಇನ್ನಷ್ಟು ವಿಶೇಷತೆಗಳ ಮೂಲಕ ಸ್ವಿಫ್ಟ್ ಕೀ ಬಂದಿದೆ. ಇನ್ನು ಭಾರತೀಯ ಬಳಕೆದಾರರನ್ನು ಮನಸ್ಸಿನಲ್ಲಿರಿಸಿಕೊಂಡು ಇದರ ಡೆವಲಪರ್‌ಗಳು ಒಂದು ಅಪ್ಲಿಕೇಶನ್ ಅನ್ನು ನವೀಕರಿಸಿದ್ದು ಇದು 10 ಭಾರತೀಯ ಭಾಷೆಗಳನ್ನು ಬೆಂಬಲಿಸುತ್ತಿದೆ ಮತ್ತು ಎರಡು ಉಪ ಪ್ರಾಂತ್ಯ ಭಾಷೆಗಳನ್ನು ಬೆಂಬಲಿಸುತ್ತಿದೆ.

ಇದನ್ನೂ ಓದಿ: ದುಬಾರಿ ಬ್ಲ್ಯಾಕ್‌ಬೆರ್ರಿ ಪಾಸ್‌ಪೋರ್ಟ್‌ ಖರೀದಿಗೆ ಸೂಪರ್ ತಾಣ

ಆಂಡ್ರಾಯ್ಡ್‌ಗಾಗಿ ಸ್ವಿಫ್ಟ್‌ಕೀ ಅನ್ನು ಒಮ್ಮೆ ಅಪ್‌ಡೇಟ್ ಮಾಡಿದ ನಂತರ, ಅಸ್ಸಾಮಿ, ಗುಜರಾತಿ, ಬೆಂಗಾಳಿ, ಮಲಯಾಳಮ್, ಕನ್ನಡ, ಮರಾಠಿ, ಒರಿಯಾ, ಪಂಜಾಬಿ, ತಮಿಳು ಮತ್ತು ತೆಲುಗುವನ್ನು ಬೆಂಬಲಿಸಲಿದೆ. ನೇಪಾಳಿ ಮತ್ತು ಸಿಂಹಳ ಭಾಷೆಗಳನ್ನು ಹೊರತುಪಡಿಸಿ ಈ ಭಾಷೆಗಳನ್ನು ಕೂಡ ಸ್ವಿಫ್ಟ್ ಕೀ ಬೆಂಬಲಿಸಲದೆ.

ಆಂಡ್ರಾಯ್ಡ್‌ನಲ್ಲಿ ಸ್ವಿಫ್ಟ್ ಕೀ ಬೆಂಬಲ ಕನ್ನಡ ಭಾಷೆಗೂ

ಇನ್ನಷ್ಟು ಹೆಚ್ಚಿನ ವೇಗ ಮತ್ತು ಭಾಷಾ ಸುಧಾರಣೆಗಳೊಂದಿಗೆ ಡೆವಲಪರ್‌ಗಳು ಈ ಸ್ವಿಫ್ಟ್ ಕೀಯನ್ನು ಅಭಿವೃದ್ಧಿಪಡಿಸಿದ್ದು ಹೆಚ್ಚಿನ ಆಂಡ್ರಾಯ್ಡ್ ಬಳಕೆದಾರರು ಇದರ ಪ್ರಯೋಜನವನ್ನು ಪಡೆದುಕೊಳ್ಳಲಿದ್ದಾರೆ. ಇದನ್ನು ಅಭಿವೃದ್ಧಿಪಡಿಸಲು ಸ್ವಿಫ್ಟ್ ಕೀ ಡೆವಲಪರ್‌ಗಳು ಸಾಕಷ್ಟು ಸಮಯವನ್ನು ತೆಗೆದುಕೊಂಡಿದ್ದು ಈ ಸಮಯದಲ್ಲಿ ಇದರ ಶ್ರೇಣ ಕೊಂಚ ಇಳಿಕೆಯನ್ನು ಕಂಡಿತ್ತು. ಆದರೆ ಇದರ ಅಭಿವೃದ್ಧಿಯು ಹೆಚ್ಚು ವೇಗದ ಟೈಪಿಂಗ್ ಅನ್ನು ಬಳಕೆದಾರರಿಗೆ ಒದಗಿಸಿದ್ದು, ಹತ್ತರಿಂದ ಹದಿನೆಂಟು ಶೇಕಡಾ ವೇಗವನ್ನು ಟೈಪಿಂಗ್ ಪಡೆದುಕೊಂಡಿದೆ.

ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಆಂಡ್ರಾಯ್ಡ್‌ಗಾಗಿ ಸ್ವಿಫ್ಟ್‌ಕೀ ನವೀಕರಣವು ಇದೀಗ ಲಭ್ಯವಿದ್ದು ಆದಷ್ಟು ಬೇಗನೇ ನಿಮ್ಮ ಆಂಡ್ರಾಯ್ಡ್ ಡಿವೈಸ್‌ಗಳನ್ನು ಇದು ತಲುಪಲಿದೆ.

Best Mobiles in India

English summary
This article tells about SwiftKey for Android adds more Indian languages, improved performance.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X