ಜೈಲು ಊಟ ಸವಿಯಬೇಕೆ?..ಹಾಗಿದ್ರೆ ಸ್ವಿಗ್ಗಿಯಲ್ಲಿ ಆರ್ಡರ್‌ ಮಾಡಿ!

|

ತಪ್ಪು ಮಾಡಿ ಜೈಲು ಸೇರಿದ ಖೈದಿಗಳಷ್ಟೆ ಜೈಲು ಊಟ ಮಾಡಬೇಕು ಎನ್ನುವ ನಿಯಮಗಳು ಈಗ ಬದಲಾಗಿವೆ!.ಯಾವುದೇ ತಪ್ಪು ಮಾಡದೇ, ಇದ್ರು ಸಹ ನೀವು ಬಂಧಿಖಾನೆಯ ಊಟ ಸವಿಯಬಹುದು. ಇದು ನಿಮಗೆ ಅಚ್ಚರಿ ಎನಿಸಿದರೂ ನೀವು ನಂಬಲೇ ಬೇಕಾದ ಸತ್ಯವಿದು. ಏಕೆಂದರೇ ಜನಪ್ರಿಯ ಫುಡ್‌ ಡೆಲಿವರಿ ಅಪ್ಲಿಕೇಶನ್ 'ಸ್ವಿಗ್ಗಿ' ಇಂತಹ ಪ್ರಯತ್ನವೊಂದನ್ನು ಶುರುಮಾಡಿ ಎಲ್ಲರೂ ಹುಬ್ಬೆರಿಸುವಂತೆ ಮಾಡಿದೆ.

ಜೈಲು ಊಟ ಸವಿಯಬೇಕೆ?..ಹಾಗಿದ್ರೆ ಸ್ವಿಗ್ಗಿಯಲ್ಲಿ ಆರ್ಡರ್‌ ಮಾಡಿ!

ಹೌದು, ಕೇರಳದ ವಿಯೂರ್ ಕೇಂದ್ರ ಜೈಲಿನಲ್ಲಿ ಖೈದಿಗಳು ತಯಾರಿಸಿದ ಅಡುಗೆಯನ್ನು ಗ್ರಾಹಕರಿಗೆ ತಲುಪಿಸಲು ಅಲ್ಲಿನ ಜೈಲು ಅಧಿಕಾರಿಗಳು ಸ್ವಿಗ್ಗಿ ಸಂಸ್ಥೆಯೊಂದಿಗೆ ಟೈಅಪ್‌ ಮಾಡಿಕೊಂಡಿದ್ದಾರೆ. ಇದೇ ಜುಲೈ 11ರಂದು ಕೇರಳದಲ್ಲಿ ಮೊದಲ ಬಾರಿಗೆ ಈ ಸೇವೆಯು ಆರಂಭವಾಗಿದ್ದು, ಇದರಿಂದ ಗ್ರಾಹಕರು ಸಹ ಜೈಲು ಊಟದ ರುಚಿಯನ್ನು ಸವಿಯುವ ಅವಕಾಶ ಲಭ್ಯವಾದಂತಾಗಿದೆ.

ಜೈಲು ಊಟ ಸವಿಯಬೇಕೆ?..ಹಾಗಿದ್ರೆ ಸ್ವಿಗ್ಗಿಯಲ್ಲಿ ಆರ್ಡರ್‌ ಮಾಡಿ!

ಈ ಸೇವೆಯ ಮೊದಲ ಹಂತದಲ್ಲಿ ಖೈದಿಗಳು ತಯಾರಿಸಿದ ಬಿರಿಯಾನಿಯನ್ನು ಕೊಂಬೊ ಆಫರ್‌ನಡಿ ಕೇವಲ 127ರೂ.ಗಳಿಗೆ ನೀಡಲಾರಂಭಿಸಿದ್ದು, ಈ ಕೊಂಬೊ ಪ್ಯಾಕ್ 300ಗ್ರಾಂ ಬಿರಿಯಾನಿ, ಒಂದು ಚಿಕನ್ ಲೆಗ್ ಪೀಸ್, ಸಲಾಡ್, ಉಪ್ಪಿನಖಾಯಿ ಸೇರಿದಂತೆ ಒಂದು ವಾಟರ್‌ಬಾಟಲ್ ಅನ್ನು ಸಹ ಒಳಗೊಂಡಿದೆ. ಹಾಗೆಯೇ ಮುಂದಿನ ದಿನಗಳಲ್ಲಿ ಮತ್ತಷ್ಟು ಖ್ಯಾದ್ಯಗಳು ಸೇರಿಕೊಳ್ಳಲಿವೆ ಎನ್ನಲಾಗಿದೆ.

ಜೈಲು ಊಟ ಸವಿಯಬೇಕೆ?..ಹಾಗಿದ್ರೆ ಸ್ವಿಗ್ಗಿಯಲ್ಲಿ ಆರ್ಡರ್‌ ಮಾಡಿ!

ಇಂಥಹ ಸೇವೆಯು ಇದೆ ಮೊದಲ ಬಾರಿಗೆ ಅಲ್ಲ. ಕೇರಳದ ಫ್ರೀಡೋಮ್ ಫುಡ್‌ ಫ್ಯಾಕ್ಟರಿ ಎನ್ನುವ ಸಂಸ್ಥೆಯವರು 2011ರಿಂದಲೇ ಜೈಲಿನ ಖೈದಿಗಳು ತಯಾರಿಸದ ವೈವಿಧ್ಯವಯ ಖ್ಯಾದ್ಯಗಳನ್ನು ಗ್ರಾಹಕರಿಗೆ ಮಾರಾಟ ಮಾಡುವ ಸೇವೆಯನ್ನು ನೀಡುತ್ತಿದೆ. ಆದರೆ ಇದೇ ಮೊದಲ ಬಾರಿಗೆ ಆನ್‌ಲೈನ್‌ ಮೂಖೇನ್ ಗ್ರಾಹಕರು ಜೈಲಿನ ಖ್ಯಾದ್ಯಗಳನ್ನು ಆರ್ಡರ್‌ ಮಾಡುವ ಅವಕಾಶ ಲಭ್ಯಮಾಡಲಾಗಿದೆ ಎಂದು ವಿಯೂರ್ ಕೇಂದ್ರ ಜೈಲಿನ ಅಧೀಕ್ಷಕರಾದ ನಿರ್ಮಲಾನಂದ ನಾಯರ್ ಹೇಳಿದ್ದಾರೆ.

ಓದಿರಿ : ಫೇಸ್‌ಬುಕ್‌ಗೆ ಆಘಾತ ನೀಡಿದ ಗೂಗಲ್‌ನ ಹೊಸ 'ಶೂಲೆಸ್'‌ ಆಪ್‌! ಓದಿರಿ : ಫೇಸ್‌ಬುಕ್‌ಗೆ ಆಘಾತ ನೀಡಿದ ಗೂಗಲ್‌ನ ಹೊಸ 'ಶೂಲೆಸ್'‌ ಆಪ್‌!

ರುಚಿ ಮತ್ತು ಕಡಿಮೆ ಬೆಲೆಯಿಂದ ಈಗಾಗಲೇ ಜೈಲಿನ ಫುಡ್‌ ಗ್ರಾಹಕರಿಗೆ ಇಷ್ಟವಾಗಿದ್ದು, ಸುಮಾರು 100 ಜನ ಖೈದಿಗಳು ಆಹಾರ ತಯಾರಿಸುತ್ತಿದ್ದಾರೆ. ಜೈಲಿನಲ್ಲಿ ಪ್ರಸ್ತುತ ಪ್ರತಿದಿನ ಸುಮಾರು 25000 ಚಪಾತಿ ಮತ್ತು 500 ವಿವಿಧ ಬಿರಿಯಾನಿ ಖ್ಯಾದ್ಯಗಳು ಸಿದ್ಧವಾಗುತ್ತಿವೆ ಎನ್ನಲಾಗಿದ್ದು, ಜೈಲು ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿಯೇ ಖೈದಿಗಳು ಖ್ಯಾದ್ಯಗಳನ್ನು ತಯಾರಿಸುತ್ತಾರೆ.

ಓದಿರಿ : 48 ಗಂಟೆಗಳ 'ಅಮೆಜಾನ್ ಪ್ರೈಮ್‌ ಡೇ' ಸೇಲ್ ಶುರು!..ಈ ಫೋನ್‌ಗಳಿಗೆ ಬೆಸ್ಟ್‌ ಆಫರ್‌!ಓದಿರಿ : 48 ಗಂಟೆಗಳ 'ಅಮೆಜಾನ್ ಪ್ರೈಮ್‌ ಡೇ' ಸೇಲ್ ಶುರು!..ಈ ಫೋನ್‌ಗಳಿಗೆ ಬೆಸ್ಟ್‌ ಆಫರ್‌!

Best Mobiles in India

English summary
The prison authorities have tied up with Swiggy, online food delivery player, to deliver food from the Central Jail premises. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X