ರಿಲಯನ್ಸ್ ಬಿಪಿ ಮೊಬಿಲಿಟಿ ಮತ್ತು ಸ್ವಿಗ್ಗಿ ಒಪ್ಪಂದ; ಇನ್ನು ಎಲೆಕ್ಟ್ರಾನಿಕ್‌ ವಾಹನಗಳಲ್ಲಿ ಡೆಲಿವರಿ!

|

ಸದೃಢವಾದ ಎಲೆಕ್ಟ್ರಿಕ್ ವಾಹನಗಳ (EV) ವ್ಯವಸ್ಥೆ ಅಸ್ತಿತ್ವಕ್ಕೆ ತರುವ ನಿಟ್ಟಿನಲ್ಲಿ ರಿಲಯನ್ಸ್ ಬಿಪಿ ಮೊಬಿಲಿಟಿ ಲಿಮಿಟೆಡ್ ಮತ್ತು ಸ್ವಿಗ್ಗಿ ಸಂಘಟಿತ ಪ್ರಯತ್ನಕ್ಕೆ ಮುಂದಾಗಿದೆ. ಭಾರತದ ವಿತರಣಾ ವ್ಯವಸ್ಥೆಯಲ್ಲಿ ಬ್ಯಾಟರಿ ಚಾಲಿತ ವಾಹನಗಳ ನಿಯೋಜಿಸುವ ಪ್ರಯೋಗಕ್ಕೆ ಚಾಲನೆ ನೀಡುತ್ತಿರುವುದಾಗಿ ಈ ಸಹಭಾಗಿತ್ವ ಘೋಷಿಸಿದೆ. ಈ ಪಾಲುದಾರಿಕೆಯು ಬ್ಯಾಟರಿ ಚಾಲಿತ ಎಲೆಕ್ಟ್ರಿಕ್ ವಾಹನಗಳನ್ನು (ಇವಿ) ಅಳವಡಿಸಿಕೊಳ್ಳುವುದನ್ನು ಉತ್ತೇಜಿಸುವ ಗುರಿಯನ್ನು ಹೊಂದಿದ್ದು, ಜಿಯೋ-ಬಿಪಿಯ ಬ್ಯಾಟರಿ ಸ್ವಾಪ್ ಕೇಂದ್ರಗಳ ನೆಟ್‌ವರ್ಕ್ ಮತ್ತು ಸ್ವಿಗ್ಗಿಯ ವಿತರಣಾ ಪಾಲುದಾರರ ನೆಟ್‌ವರ್ಕ್ ಬೆಂಬಲಿಸುತ್ತದೆ.

ರಿಲಯನ್ಸ್ ಬಿಪಿ ಮೊಬಿಲಿಟಿ ಮತ್ತು ಸ್ವಿಗ್ಗಿ ಒಪ್ಪಂದ!

ಎರಡು ಪ್ರಮುಖ ಉದ್ಯಮಗಳ ಈ ಪಾಲುದಾರಿಕೆಯು ನವೀನ ವ್ಯಾಪಾರ ಮಾದರಿಗಳ ಮೂಲಕ ಪರಿಸರ ಸ್ನೇಹಿ ಮತ್ತು ವೆಚ್ಚ-ಪರಿಣಾಮಕಾರಿ ಪರಿಹಾರವನ್ನು ರಚಿಸುವ ಜೊತೆಗೆ ಪ್ರಮಾಣ, ತಲುಪುವಿಕೆ ಮತ್ತು ತಂತ್ರಜ್ಞಾನದ ಸಾಮರ್ಥ್ಯಗಳನ್ನು ಸಂಯೋಜಿಸುವ ಗುರಿಯನ್ನು ಹೊಂದಿದೆ. ಆರ್‌ಬಿಎಂಎಲ್‌ ಮತ್ತು ಸ್ವಿಗ್ಗಿ ನೆರವಿನಿಂದ ವಿವಿಧ ಸ್ಥಳಗಳಲ್ಲಿ ಜಿಯೋ-ಬಿಪಿ ಬ್ಯಾಟರಿ ವಿನಿಮಯ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದ್ದು, ವಾಹನಗಳಿಗೆ ಬೇಕಾದ ಬ್ಯಾಟರಿ ವಿನಿಮಯಕ್ಕೆ ಸಂಬಂಧಿಸಿದ ನೆರವನ್ನು ಒದಗಿಸುತ್ತಿದ್ದು, ಡೆಲಿವರಿ ಪಾಲುದಾರರಾದ ಸ್ವಿಗ್ಗಿ ಮತ್ತು ಅದರ ಸಿಬ್ಬಂದಿಗೆ ಅಗತ್ಯವಿರುವ ಎಲ್ಲ ತಾಂತ್ರಿಕ ನೆರವು ಮತ್ತು ತರಬೇತಿಯನ್ನು ಒದಗಿಸುತ್ತದೆ.

ರಿಲಯನ್ಸ್ ಬಿಪಿ ಮೊಬಿಲಿಟಿ ಮತ್ತು ಸ್ವಿಗ್ಗಿ ಒಪ್ಪಂದ!

ಈ ಕುರಿತು ರಿಲಯನ್ಸ್ ಬಿಪಿ ಮೊಬಿಲಿಟಿ ಲಿಮಿಟೆಡ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರೀಶ್ ಸಿ. ಮೆಹ್ತಾ ಮಾತನಾಡಿ , "ಎಲೆಕ್ಟ್ರಿಕ್ ಮೊಬಿಲಿಟಿಯ ಭಾರತ ಸರ್ಕಾರದ ಮುನ್ನೋಟವನ್ನು ಬೆಂಬಲಿಸುವ ಉದ್ದೇಶದಿಂದ, ಆರ್‌ಬಿಎಂಎಲ್‌ ಇ -ಮೊಬಿಲಿಟಿ ಸೇವೆಗಳಿಗೆ ಮುಂದಾಗಿದೆ. ಅಲ್ಲದೆ ಅದಕ್ಕೆ ಪೂರಕವಾದ ವ್ಯವಸ್ಥೆಯನ್ನು ರಚಿಸಲು ಬದ್ಧವಾಗಿದೆ. ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಅಳವಡಿಕೆಯನ್ನು ತೀವ್ರಗೊಳಿಸಲು ಸಹಾಯ ಮಾಡುವ ಜೊತೆಗೆ ವಿದ್ಯುನ್ಮಾನೀಕರಣದಲ್ಲಿ ಬಿಪಿಯ ಜಾಗತಿಕ ಕಲಿಕೆಯನ್ನು ಸದುಪಯೋಗಪಡಿಸಿಕೊಳ್ಳಲಾಗುತ್ತಿದೆ.

ರಿಲಯನ್ಸ್ ಬಿಪಿ ಮೊಬಿಲಿಟಿ ಮತ್ತು ಸ್ವಿಗ್ಗಿ ಒಪ್ಪಂದ!

ಆರ್‌ಬಿಎಂಎಲ್‌ ಎಲ್ಲಾ ಪಾಲುದಾರರಿಗೆ ಡಿಜಿಟಲ್ ಸಕ್ರಿಯಗೊಳಿಸಿದ ಸೇವೆಗಳನ್ನು ನೀಡುವ, ಇವಿ ಚಾರ್ಜಿಂಗ್ ಹಬ್‌ಗಳು ಮತ್ತು ಬ್ಯಾಟರಿ ವಿನಿಮಯ ಕೇಂದ್ರಗಳನ್ನು ಒಳಗೊಂಡ ಸದೃಢ ಮತ್ತು ಸುಸ್ಥಿರ ಮೂಲಸೌಕರ್ಯವನ್ನು ಅಸ್ತಿತ್ವಕ್ಕೆ ತರುತ್ತಿದೆ.. ಸ್ವಿಗ್ಗಿಯೊಂದಿಗಿನ ನಮ್ಮ ಸಹಯೋಗವು ದೇಶದ ವಿತರಣೆ ಮತ್ತು ಸಾರಿಗೆ ಕಂಪನಿಗಳಲ್ಲಿ ಸಂಚಲನ ಉಂಟು ಮಾಡಲಿದ್ದು, ಇವಿ ಅಳವಡಿಕೆಯನ್ನು ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿದೆ. ಸ್ವಿಗ್ಗಿ ಮತ್ತು ಅವರ ವಿತರಣಾ ಪಾಲುದಾರರು ನಮ್ಮ ವ್ಯಾಪಕವಾದ ಬ್ಯಾಟರಿ ಸ್ವಾಪ್ ಕೇಂದ್ರಗಳ ನೆರವಿನಿಂದ ಅಪಾರ ಲಾಭ ಪಡೆಯುತ್ತಾರೆ ಎಂದು ನಮಗೆ ವಿಶ್ವಾಸವಿದೆʼʼ ಎಂದು ಹೇಳಿದರು.

ಸ್ವಿಗ್ಗಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ. ಶ್ರೀಹರ್ಷ ಮಜೆಟಿ ಅವರು ಮಾತನಾಡಿ, "ವ್ಯವಹಾರದ ಬೆಳವಣಿಗೆಯು ತನ್ನ ಪಾಲುದಾರರ ಹಿತಾಸಕ್ತಿಗಳು, ಸಮುದಾಯದ ಹಿತಾಸಕ್ತಿ ಮತ್ತು ಪರಿಸರದ ಮೇಲೆ ಪ್ರಭಾವವನ್ನು ಕಡಿಮೆ ಮಾಡುವುದರ ಜೊತೆಜೊತೆಗೆ ಸಾಗಬೇಕು. ನಮ್ಮ ಪಾಲುದಾರರಾದ ಸ್ವಿಗ್ಗಿ ಪ್ರತಿದಿನ ಸರಾಸರಿ 80- 100 ಕಿಮೀ ಪ್ರಯಾಣಿಸುವ ಮೂಲಕ ಪ್ರತಿ ತಿಂಗಳು ಲಕ್ಷಾಂತರ ಆರ್ಡರ್‌ಗಳನ್ನು ನೀಡುತ್ತದೆ. ನಮ್ಮ ಗ್ರಾಹಕರಿಗೆ ಹೆಚ್ಚಿನ ಅನುಕೂಲವನ್ನು ಒದಗಿಸುವ ನಿಟ್ಟಿನಲ್ಲಿ ನಾವು ಕೆಲಸ ಮಾಡುವ ಜೊತೆಗೆ, ನಮ್ಮ ಕಾರ್ಯಾಚರಣೆಗಳು ಪರಿಸರದ ಮೇಲೆ ಯಾವ ಪರಿಣಾಮ ಬೀರುತ್ತವೆ ಎಂಬ ಬಗ್ಗೆಯೂ ನಾವು ಎಚ್ಚರವಹಿಸುತ್ತೇವೆ

Best Mobiles in India

English summary
Swiggy Partners With Reliance BP Mobility To Build EV Vehicles for Delivery.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X