Home
ಸುದ್ದಿಜಾಲ

ಬಜೆಟ್‌ ಬೆಲೆಯಲ್ಲಿ ಬಿಡುಗಡೆ ಆಯ್ತು 'ಸಿಸ್ಕಾ HE1100 ಬೀಟ್‌ ಪ್ರೊ' ಇಯರ್‌ಫೋನ್‌!

ಜನಪ್ರಿಯ ಎಲೆಕ್ಟ್ರಾನಿಕ್ ಕಂಪನಿ 'ಸಿಸ್ಕಾ' ಇತ್ತೀಚಿಗೆ ಎಲ್‌ಇಡಿ ಬಲ್ಬ್‌ಗಳಿಂದ ಭಾರಿ ಗಮನಸೆಳೆದು ಮಾರುಕಟ್ಟೆಯಲ್ಲಿ ಗುರುತಿಸಿಕೊಂಡಿದೆ. ತನ್ನ ಮಾರುಕಟ್ಟೆಯ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುವ ಸಲುವಾಗಿ ಸಿಸ್ಕಾ ಕಂಪನಿಯು ಪವರ್‌ಬ್ಯಾಂಕ್‌, ಫಿಟ್ನೆಸ್‌ ಟ್ರಾಕರ್‌ ಮತ್ತು ಆಡಿಯೊ ಉತ್ಪನ್ನಗಳನ್ನು ಸಹ ಪರಿಚಯಿಸಿದೆ. ಇದೀಗ HE1100 ಬೀಟ್‌ ಪ್ರೊ ಹೆಸರಿನ ಇಯರ್‌ಫೋನ್‌ ಲಾಂಚ್‌ ಮಾಡಿದ್ದು, ಇದು ಮಾರುಕಟ್ಟೆಯಲ್ಲಿ ಸದ್ದು ಮಾಡುವ ಫೀಚರ್ಸ್‌ಗಳನ್ನು ಹೊಂದಿದೆ.

ಬಜೆಟ್‌ ಬೆಲೆಯಲ್ಲಿ ಬಿಡುಗಡೆ ಆಯ್ತು 'ಸಿಸ್ಕಾ  HE1100 ಬೀಟ್‌ ಪ್ರೊ' ಇಯರ್‌ಫೋನ್‌!

ಹೌದು, ಸಿಸ್ಕಾ ಕಂಪನಿಯು ಭಾರತೀಯ ಮಾರುಕಟ್ಟೆಗೆ ಹೊಸದಾಗಿ HE1100 ಬೀಟ್‌ ಪ್ರೊ ಇಯರ್‌ಫೋನ್‌ ಅನ್ನು ಬಿಡುಗಡೆ ಮಾಡಿದ್ದು, ಬೆಲೆ ಕೇವಲ 899ರೂ.ಗಳು ಆಗಿದೆ. ಅತ್ಯುತ್ತಮ ಸೌಂಡ್‌ ಹೊರಸೂಸುವ ಸಾಮರ್ಥ್ಯವನ್ನು ಹೊಂದಿದ್ದು, ಪ್ರಮುಖ ಇ ಕಾಮರ್ಸ್‌ ಜಾಲಾತಾಣಗಳಲ್ಲಿ ಖರೀದಿಗೆ ಲಭ್ಯವಿದೆ. ಹಾಗಾದರೇ ಸಿಸ್ಕಾ ಕಂಪನಿಯ HE1100 ಬೀಟ್‌ ಪ್ರೊ ಇಯರ್‌ಫೋನ್‌ ರಚನೆ ಹೇಗಿದೆ ಮತ್ತು ಫೀಚರ್ಸ್‌ಗಳೆನು ಎಂಬುದನ್ನು ಮುಂದೆ ನೋಡೋಣ.

ಬೀಟ್‌ ಸೌಂಡ್‌

ಬೀಟ್‌ ಸೌಂಡ್‌

ಸಿಸ್ಕಾ ಸಂಸ್ಥೆಯು ಹೊಸದಾಗಿ ಪರಿಚಯಿಸಿರುವ HE1100 ಬೀಟ್‌ ಪ್ರೊ ಹೆಸರಿಗೆ ತಕ್ಕನಾಗಿ ಸೌಂಡ್‌ ಕ್ವಾಲಿಟಿಯನ್ನು ಹೊಂದಿದ್ದು, ಡೀಪ್‌ ಬಾಸ್‌ ಸಾಮರ್ಥ್ಯವನ್ನು ಒಳಗೊಂಡಿದೆ. ಹೈ-ಪೈ ಸ್ಟೀರಿಯೊ ಸೌಂಡ್‌ ಗುಣಮಟ್ಟವನ್ನು ಸಹ ಹೊಂದಿದ್ದು, ಇದು ತನ್ನ ವರ್ಗದಲ್ಲಿಯೇ ಬೆಸ್ಟ್‌ ಎನ್ನಬಹುದಾಗಿದೆ.

ಕನೆಕ್ಟಿವಿಟಿ

ಕನೆಕ್ಟಿವಿಟಿ

ಸಿಸ್ಕಾ ಇಯರ್‌ಫೋನ್‌ 3.5ಎಂಎಂ ಆಡಿಯೊ ಕನೆಕ್ಟಿವಿಟಿ ಸೌಲಭ್ಯವನ್ನು ಪಡೆದಿದ್ದು, ವಿವಿಧ ಶ್ರೇಣೀಯ ಸ್ಮಾರ್ಟ್‌ಫೋನ್‌ಗಳಿಗೆ ಬೆಂಬಲ ನೀಡುತ್ತದೆ. ಹಾಗೆಯೇ ಲ್ಯಾಪ್‌ಟಾಪ್‌ಗಳಿಗೆ ಮತ್ತು ಕಂಪ್ಯೂಟರ್‌ಗಳಿಗೆ ಸಹ ಕನೆಕ್ಟ್‌ ಮಾಡಬಹುದಾಗಿದ್ದು, ಆಡಿಯೊ ಔಟ್‌ಪುಟ್‌ ಉತ್ತಮವಾಗಿ ಕೇಳುತ್ತದೆ.

ಬಜೆಟ್‌ ಪ್ರೈಸ್‌ಟ್ಯಾಗ್‌

ಬಜೆಟ್‌ ಪ್ರೈಸ್‌ಟ್ಯಾಗ್‌

ಸಿಸ್ಕಾ ಕಂಪನಿಯ ಈ ಹೊಸ ಇಯರ್‌ಫೋನ್‌ ಬಜೆಟ್‌ ಬೆಲೆಯ ಪ್ರೈಸ್‌ಟ್ಯಾಗ್‌ನಲ್ಲಿ ಬಿಡುಗಡೆಯಾಗಿದ್ದು, ಕಂಪನಿಯು ನಿಗದಿ ಮಾಡಿರುವ ಅಧಿಕೃತ ಬೆಲೆಯು 899ರೂ.ಗಳಾಗಿದೆ. ಆದರೆ ಕೇಲವು ಆನ್‌ಲೈನ್‌ ಶಾಪಿಂಗ್‌ ತಾಣಗಳಲ್ಲಿ ಇದರ ಬೆಲೆಯು ಇನ್ನು ಕಡಿಮೆಯಾಗಿದ್ದು (400ರೂ), ಆಫರ್‌ಗಳು ಲಭ್ಯವಾಗುವ ಅವಕಾಶ ಸಹ ಇರುತ್ತವೆ.

ಪೈಪೋಟಿ

ಪೈಪೋಟಿ

ಭಾರತೀಯ ಮಾರುಕಟ್ಟೆಯಲ್ಲಿ ಬಜೆಟ್‌ ಬೆಲೆಯ ಇಯರ್‌ಫೋನ್‌ಗಳಿಗೆ ಭಾರಿ ಡಿಮ್ಯಾಂಡ್‌ ಇದ್ದು, ಈ ಸಾಲಿಗಿಗ ಸಿಸ್ಕಾದ ಈ ಇಯರ್‌ಫೋನ್‌ ಸಹ ಸೇರಿಕೊಂಡಿದೆ. ಈ ಮೂಲಕ ಶಿಯೋಮಿ, ರಿಯಲ್‌ ಮಿ, ಬೋಟ್‌ ಮತ್ತು ಇತರೆ ಕಂಪನಿಗಳ ಇಯರ್‌ಫೋನ್‌ಗಳಿಗೆ ಪೈಪೋಟಿ ನೀಡಲಿದೆ ಎನ್ನಲಾಗಿದೆ.

ಲಭ್ಯತೆ

ಲಭ್ಯತೆ

ಸಿಸ್ಕಾ HE1100 ಬೀಟ್‌ ಪ್ರೊ ಇಯರ್‌ಫೋನ್‌ ದೇಶಿಯ ಮಾರುಕಟ್ಟೆಗೆ ರಿಲೀಸ್‌ ಆಗಿದ್ದು, ಪ್ರಮುಖ ಆಫ್‌ಲೈನ್‌ ಶಾಪ್‌ಗಳಲ್ಲಿ ಮತ್ತು ಆನ್‌ಲೈನ್‌ ತಾಣಗಳಲ್ಲಿಯೂ ಖರೀದಿಗೆ ದೊರೆಯಲಿದೆ. ಹಾಗೆಯೇ ಪ್ರಮುಖ ಇ ಕಾಮರ್ಸ್‌ ಜಾಲತಾಣಗಳಲ್ಲಿ ಲಭ್ಯವಿದ್ದು, ಕೆಲವು ವೇಳೆ ಆಫರ್‌ಗಳು ಸಹ ಇರಲಿವೆ.

Best Mobiles in India

English summary
The latest product in the company's audio range is the Syska HE1100 Beat Pro. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+