ಪ್ರತಿಷ್ಠಿತ ಮೊಬೈಲ್ ಕಂಪೆನಿಯಲ್ಲಿ 1500 ಉದ್ಯೋಗಿಗಳಿಗೆ ಕೊಕ್!..ಕಾರಣ ಏನು ಗೊತ್ತಾ?

|

ಸ್ಯಾಮ್​ಸಂಗ್, ಆಪಲ್ ಹಾಗೂ ಚೀನಾ ಮೂಲದ ಮೂಲಕ ಮೊಬೈಲ್ ಕಂಪೆನಿಗಳ ತೀವ್ರ ಪೈಪೋಟಿಗೆ ಬಳಲಿ ಬೆಂಡಾಗಿರುವ ತೈವಾನ್ ಮೂಲದ ಸ್ಮಾರ್ಟ್​ಫೋನ್ ಕಂಪನಿ ಹೆಚ್​ಟಿಸಿಗೆ ಮತ್ತೆ ಸಂಕಷ್ಟ ಎದುರಾಗಿದೆ. ಮೊಬೈಲ್ ಮಾರುಕಟ್ಟೆಯಲ್ಲಿ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ವಿಫಲವಾಗಿರುವ ಕಂಪೆನಿ ಉದ್ಯೋಗಿಗಳಿಗೆ ಕೊಕ್ ನೀಡುವ ತೀರ್ಮಾನಕ್ಕೆ ಬಂದಿದೆ.

ಹೌದು, 2017 ನೇ ವರ್ಷದ ನಾಲ್ಕು ತ್ರೈಮಾಸಿಕಗಳ ಅವಧಿಯಲ್ಲಿ ಹೆಚ್​ಟಿಸಿ ಕಂಪೆನಿ ಸುಮಾರು 554 ಮಿಲಿಯನ್​ ಡಾಲರ್ ನಷ್ಟವನ್ನು ಅನುಭವಿಸಿದೆ. ಇದರಿಂದ ಕಂಪನಿಗೆ ದೊಡ್ಡ ಹೊಡೆತ ಬಿದ್ದಿದ್ದು, ಇದರ ಪರಿಣಾಮ ಷೇರುದಾರರಿಗೂ ಪೆಟ್ಟು ತಟ್ಟಿದೆ. ಹಾಗಾಗಿ, ಕಂಪೆನಿಯಲ್ಲಿ ಸಾವಿರಾರು ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಲಾಗಿದೆ.

ಪ್ರತಿಷ್ಠಿತ ಮೊಬೈಲ್ ಕಂಪೆನಿಯಲ್ಲಿ 1500 ಉದ್ಯೋಗಿಗಳಿಗೆ ಕೊಕ್!..ಕಾರಣ ಏನು ಗೊತ್ತಾ

ದೊಡ್ಡ ಮಟ್ಟದ ನಷ್ಟ ಎದುರಿಸುತ್ತಿರುವ ತೈವಾನ್ ಮೂಲದ ಸ್ಮಾರ್ಟ್​ಫೋನ್ ಕಂಪನಿ ಹೆಚ್​ಟಿಸಿ ಸುಮಾರು 1500 ಮಂದಿಯನ್ನು ಕೆಲಸದಿಂದ ವಜಾಗೊಳಿಸಲು ನಿರ್ಧರಿಸಿದೆ. ಅಗತ್ಯಬಿದ್ದರೆ, ಇವರ ಜೊತೆ ಮತ್ತೆ ಸಾವಿರಾರು ಉದ್ಯೋಗಿಗಳು ಸಹ ಕೆಲಸ ಕಳೆದುಕೊಳ್ಳುವ ಪರಿಸ್ಥಿತಿ ಕಂಪೆನಿಯಲ್ಲಿ ನಿರ್ಮಾಣವಾಗಿದೆ ಎಂದು ಹೆಚ್​ಟಿಸಿ ಕಂಪೆನಿಯ ಮೂಲಗಳು ಮಾಹಿತಿ ನೀಡಿವೆ.

ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡುವ ಪ್ರಕ್ರಿಯೆ ಹೆಚ್​ಟಿಸಿ ಕಂಪನಿಗೆ ಹೊಸತೇನಲ್ಲ. ನಷ್ಟದ ನೆಪದಲ್ಲಿ ಸುಮಾರು 2000 ಮಂದಿಯನ್ನು ಈ ಹಿಂದೆ ವಜಾಗೊಳಿಸಿತ್ತು. ಆದರೆ, ಇತ್ತೀಚಿಗೆ ಗೂಗಲ್ ಜತೆಗೆ ಒಪ್ಪಂದ ಮಾಡಿಕೊಂಡ ನಂತರವೂ ಹೆಚ್​ಟಿಸಿ ಕಂಪೆನಿಯಲ್ಲಿ ಉದ್ಯೋಗಿಗಳಿಗೆ ಕೊಕ್ ನೀಡುವ ತೀರ್ಮಾನ ಮೊಬೈಲ್ ಮಾರುಕಟ್ಟೆಗೆ ಶಾಕ್ ನೀಡಿದಂತಿದೆ.

ಪ್ರತಿಷ್ಠಿತ ಮೊಬೈಲ್ ಕಂಪೆನಿಯಲ್ಲಿ 1500 ಉದ್ಯೋಗಿಗಳಿಗೆ ಕೊಕ್!..ಕಾರಣ ಏನು ಗೊತ್ತಾ

ಇನ್ನು 2017 ನೇ ವರ್ಷದಲ್ಲಿ ಹೆಚ್‌ಟಿಸಿ ಕಂಪೆನಿ ಅನುಭವಿಸಿರುವ ನಷ್ಟದ ಪ್ರಮಾಣವನ್ನು 2002ರ ಬಳಿಕ ತೈವಾನ್ ಶೇರು ಮಾರುಕಟ್ಟೆಯಲ್ಲಿನ ಅತ್ಯಂತ ದೊಡ್ಡ ನಷ್ಟವೆಂದು ವಿಶ್ಲೇಷಿಸಲಾಗಿದೆ. ಹಾಗಾಗಿಯೇ, ಗೂಗಲ್ ಜೊತೆಗಿನ ಒಪ್ಪಂದದ ನಂತರವೂ ಉದ್ಯೋಗಿಗಳ ವಜಾ ಕುರಿತು ತೀರ್ಮಾನಕ್ಕೆ ಬಂದಿರುವುದು ಆಶ್ಚರ್ಯವೇನಿಲ್ಲ ಎಂದು ಟೆಕ್ ತಜ್ಞರ ಅಭಿಪ್ರಾಯವಾಗಿದೆ.

ಓದಿರಿ: 'ಸ್ಮಾರ್ಟ್‌ಟಿವಿ' ಖರೀದಿಸುವ ಮುನ್ನ ತಿಳಿದಿರಲೇಬೇಕಾದ 7 ವಿಷಯಗಳಿವು!!

Best Mobiles in India

English summary
Taiwan's struggling smartphone maker HTC announced today it would slash 1,500 jobs. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X