ATMನಲ್ಲಿ ಬರಲಿದೆ ರೂ.200ರ ನೋಟು..! ಯಾವಾಗ..?

|

ದೇಶದಲ್ಲಿ ಹೊಸ ನೋಟುಗಳ ಸದ್ದು ಜೋರಾಗಿದೆ. ಆದರೆ ಇನ್ನು ಸಹ ಚಿಲ್ಲರೆ ಸಮಸ್ಯೆ ದೂರವಾಗಿಲ್ಲ. ಇದಲ್ಲದೇ ATMಗಳಲ್ಲಿ ಸಣ್ಣ ಮೊತ್ತದ ನೋಟುಗಳು ದೊರೆಯುವಂತೆ ಮಾಡಲು ಭಾರತೀಯ ರಿಸರ್ವ್ ಬ್ಯಾಂಕ್ ಮುಂದಾಗಿದೆ. ಇದರಿಂದಾಗಿ ATMಗಳಲ್ಲಿ ಇನ್ನು ಮುಂದೆ ರೂ.200 ನೋಟುಗಳನ್ನು ಬಿಡುಗಡೆ ಮಾಡಲು ಯೋಜನೆಯನ್ನು ರೂಪಿಸಿದೆ.

ATMನಲ್ಲಿ ಬರಲಿದೆ ರೂ.200ರ ನೋಟು..! ಯಾವಾಗ..?

ಓದಿರಿ: ಜಿಯೋ ಸುನಾಮಿ ಆಫರ್: ಹೆಚ್ಚು ವ್ಯಾಲಿಡಿಟಿ - 50% ಹೆಚ್ಚು ಡೇಟಾ - ರೂ.50 ಕಡಿತ...!

ರೂ.2000 ನೋಟುಗಳು ಚಲಾವಣೆಗೆ ಬಂದ ಬಳಿಕ ಚಿಲ್ಲರೆ ಸಮಸ್ಯೆ ನಿವಾರಿಸುವ ಸಲುವಾಗಿ ರೂ.200 ನೋಟುಗಳು ಚಲಾವಣೆಗೆ ಬಂದಿತ್ತು. ಕಳೆದ ಸೆಪ್ಟೆಂಬರ್‌ನಿಂದ ಈ ನೋಟುಗಳು ಚಲಾವಣೆಯಲ್ಲಿದ್ದರೂ ಕೇವಲ ಬ್ಯಾಂಕ್‌ಗಳ ಮೂಲಕದವಷ್ಟೇ ವಿತರಿಸಲಾಗುತ್ತಿದೆ. ಇನ್ನು ಮುಂದೆ ATMಗಳಲ್ಲಿ ಇನ್ನು ಮುಂದೆ ರೂ.200 ನೋಟುಗಳು ದೊರೆಯಲಿದೆ ಎನ್ನಲಾಗಿದೆ.

ಚಿಲ್ಲರೆ ಸಮಸ್ಯೆಗೆ ಪರಿಹಾರ:

ಚಿಲ್ಲರೆ ಸಮಸ್ಯೆಗೆ ಪರಿಹಾರ:

ಮಾರುಕಟ್ಟೆಯಲ್ಲಿ ಹೆಚ್ಚಗುತ್ತಿರುವ ಚಿಲ್ಲರೆ ಸಮಸ್ಯೆಯನ್ನು ನೀಗಿಸಲು ರೂ.200ಗಳನ್ನು ಸಾಧ್ಯವಾದಷ್ಟು ಬೇಗ ಎಟಿಎಂಗಳ ಮೂಲಕ ನೀಡಬೇಕೆಂದು ಬ್ಯಾಂಕ್‌ಗಳಿಗೆ ಭಾರತೀಯ ರಿಸರ್ವ್ ಬ್ಯಾಂಕ್ ಆದೇಶಿಸಿದೆ ಎನ್ನಲಾಗಿದೆ. ಎಟಿಎಂ ತಯಾರಕರು ಶೀಘ್ರವೇ ರೂ.200 ನೋಟುಗಳನ್ನು ಬಿಡುಗಡೆ ಮಾಡುವಂತೆ ಎಟಿಎಂನನ್ನು ವಿನ್ಯಾಸ ಮಾಡಲಿದ್ದಾರೆ ಎನ್ನಲಾಗಿದೆ.

ಬದಲಾಗುತ್ತಿದೆ ಎಟಿಎಂಗಳು:

ಬದಲಾಗುತ್ತಿದೆ ಎಟಿಎಂಗಳು:

ಇದೇ ಮೊದಲು ರೂ.2000 ಬಿಡುಗಡೆಯಾದ ಸಂದರ್ಭದಲ್ಲಿ ATMಗಳಲ್ಲಿ ಹೊಸ ನೋಟುಗಳು ವಿಲೆವಾರಿಯಾಗಲಿಲ್ಲ. ಇದಕ್ಕಾಗಿ ಎಟಿಎಂ ಮಿಷಿನ್‌ಗಳನ್ನು ಬದಲಾಯಿಸಲಾಯಿತು. ಇದೇ ಮಾದರಿಯಲ್ಲಿ ಬ್ಯಾಂಕ್‌ಗಳು ರೂ.200 ನೋಟು ಎಟಿಎಂಗಳಲ್ಲಿ ತುಂಬಲು ಸಾಧ್ಯವಾಗುವಂತೆ ತಮ್ಮ ಎಂಟಿಎಂಗಳನ್ನು ಬದಲಾಯಿಸಿಕೊಳ್ಳಲು ಮುಂದಾಗಿವೆ.

2 ನಿಮಿಷದಲ್ಲಿ Aadhaar-ಮೊಬೈಲ್ ಲಿಂಕ್ ಮಾಡುವುದು ಹೇಗೆ..? ಸಿಂಪಲ್ ಟಿಪ್ಸ್..!
ಶೀಘ್ರವೇ ಲಭ್ಯ:

ಶೀಘ್ರವೇ ಲಭ್ಯ:

ಆರು ತಿಂಗಳಲ್ಲಿ ಎಟಿಎಂಗಳಲ್ಲಿ ರೂ.200 ನೋಟು ಲಭ್ಯವಾಗಲಿದೆ ಎಂದು ಆರ್‌ಬಿಐ ಮೂಲಗಳು ತಿಳಿಸಿವೆ ಎನ್ನಲಾಗಿದೆ. ಆದರೆ ಈ ಬಗ್ಗೆ ಆರ್‌ಬಿಐ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಹೊಸ ರೂ.200 ನೋಟುಗಳನ್ನು ಎಟಿಎಂ ಮೂಲಕ ಸಿಗಬೇಕಾದರೆ ಎಲ್ಲಾ ಎಂಟಿಎಂ ಯಂತ್ರಗಳನ್ನು ಬದಲಾಯಿಸ ಬೇಕಾಗಿದೆ ಎನ್ನುವ ಮಾತು ಕೇಳಿಬಂದಿದೆ.

Best Mobiles in India

English summary
Take Rs 200 notes to ATMs, RBI tells banks. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X