ಆಶ್ಚರ್ಯಕರ ಘಟನೆ!..ಕಳೆದುಹೋದ ಗಂಡ ಟಿಕ್‌ಟಾಕ್ ನೆರವಿನಿಂದ ಪತ್ತೆ!
ಚೀನಾ ಮೂಲದ ಅತೀ ಜನಪ್ರಿಯ ಶಾರ್ಟ್ ವಿಡಿಯೊ ಅಪ್ಲಿಕೇಶನ್ ಟಿಕ್‌ಟಾಕ್ ಇತ್ತೀಚಿಗೆ ಹಲವಾರು ಕಾರಣಗಳಿಂದಾಗಿ ಬ್ಯಾನ್ ಆದೇಶ ಹೊಂದಿತ್ತು. ಆದರೆ ಸ್ಪಲ್ಪ ದಿನದಲ್ಲಿಯೇ ಮತ್ತೆ ಬ್ಯಾನ್ ಆದೇಶದಿಂದ ಟಿಕ್‌ಟಾಕ್ ಹೊರಬಂದಿದ್ದರೂ ಪ್ರಸ್ತುತ ಈ ಟಿಕ್‌ಟಾಕ್ ಆಪ್ ಅನ್ನು ಮತ್ತೆ ಬ್ಯಾನ್ ಮಾಡಬೇಕೆನ್ನುವ ಮಾತುಗಳು ಇವೆ. ಆದರೆ ಕಳೆದುಕೊಂಡ ವ್ಯಕ್ತಿಯನ್ನು ಮತ್ತೆ ಮನೆಗೆ ಸೇರಿಸಲು ಟಿಕ್‌ಟಾಕ್ ನೆರವಾಗಿದ್ದು, ಈಗ ಆಶ್ಚರ್ಯ ತಂದಿದೆ.

ಹೌದು, ತಮಿಳನಾಡು ಮೂಲದ ಕೃಷ್ಣಗಿರಿಯ ಸುರೇಶ ಎಂಬುವವರು, ವಿಲ್ಲೂಪುರಂನ ಜಯಪ್ರದಾ ಮಹಿಳೆಯನ್ನು ವಿವಾಹವಾಗಿದ್ದು, ಈ ದಂಪತಿಗಳಿಗೆ ಇಬ್ಬರೂ ಮಕ್ಕಳಿದ್ದಾರೆ. 2016ರಲ್ಲಿ ಒಂದುದಿನ ಸುರೇಶ ಮನೆಯಿಂದ ಹೋದವರು ವಾಪಸ ಬಂದಿರಲಿಲ್ಲ. ಗಾಬರಿಗೊಂಡ ಪತ್ನಿ ಜಯಪ್ರದಾ ಅವರು, ಸುರೇಶನ ಕುರಿತು ಸಂಬಂಧಿಕರು ಮತ್ತು ಸ್ನೇಹಿತರಲ್ಲಿ ವಿಚಾರಿಸಿದಾಗ ಯಾವುದೇ ಮಾಹಿತಿ ಲಭ್ಯವಾಗಿರುವುದಿಲ್ಲ.

ಜಯಪ್ರದ ಅವರು ಪರಿಚಯಸ್ಥ ಎಲ್ಲ ಸ್ಥಳಗಳಲ್ಲಿಯೂ ಸುರೇಶಗಾಗಿ ಹುಡುಕಾಡಿದರೂ ಯಾವುದೇ ಪ್ರಯೋಜನವಾಗದಿದ್ದಾಗ ಕೊನೆಗೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದರು. ಈ ಘಟನೆಯ ನಡೆದ ಸುಮಾರು 3ವರ್ಷಗಳ ನಂತರ ಜಯಪ್ರದ ಸಂಬಂಧಿಕರು ಟಿಕ್‌ಟಾಕ್‌ನಲ್ಲಿ ವಿಡಿಯೊ ನೋಡುತ್ತಿದ್ದಾಗ, ಸುರೇಶನಂತೆ ಹೋಲುವ ಒಬ್ಬ ವ್ಯಕ್ತಿಯ ವಿಡಿಯೊ ನೋಡಿದರು, ನಂತರ ಆ ವಿಡಿಯೊವನ್ನು ನೋಡಿದ ಜಯಪ್ರದ ಅವರು ಸುರೇಶ ಎನ್ನುವುದನ್ನು ದೃಢಪಡಿಸಿದರು.

ವಿಲ್ಲೂಪುರಂನ ಪೋಲಿಸ್‌ರು ಟಿಕ್‌ಟಾಕ್ ನೆರವಿನಿಂದ ಸುರೇಶನನ್ನು ಹೊಸುರನಲ್ಲಿ ಪತ್ತೆ ಹಚ್ಚಿದ್ದರು. ಆದರೆ ಸುರೇಶ ಹೊಸುರಿನ ಟ್ಯ್ರಾಕ್ಟರ್ ಗ್ಯಾರೇಜ್ ಒಂದರಲ್ಲಿ ಮೆಕ್ಯಾನಿಕ ಆಗಿ ಕೆಲಸಮಾಡುತ್ತಿದ್ದಾ ಮತ್ತು ಹೊಸುರಿನ ತೃತೀಯಲಿಂಗಿ ಮಹಿಳೆ ಜೊತೆಗೆ ಒಡನಾಟ ಹೊಂದಿದ್ದರು ಎನ್ನುವ ಸಂಗತಿ ಬೆಳಕಿಗೆ ಬಂದಿತ್ತು. ಆಗ ಪೋಲಿಸರು ಸುರೇಶ ಮತ್ತು ಜಯಪ್ರದ ದಂಪತಿಗಳಿಗೆ ಸಮಾಲೋಚನೆ ಮಾಡಿ ಮನೆಗೆ ಕಳುಹಿಸಿಕೊಟ್ಟಿದ್ದಾರೆ.
ಕಳೆದುಕೊಂಡ ವ್ಯಕ್ತಿಗಳು ವಾಟ್ಸಪ್ ಮೂಲಕ ಪತ್ತೆ ಆಗಿರುವ ಹಲವು ಉದಾಹರಣೆಗಳನ್ನು ನೋಡಿದ್ದೇವೆ ಅದೇ ತರಹ ಈ ಪ್ರಕರಣವು ವಿಡಿಯೊ ಆಪ್ ಟಿಕ್‌ಟಾಕ್ ನೆರವಿನಿಂದ ಸುಖಾಂತ್ಯ ಕಂಡಿದೆ. ಎಷ್ಟೋ ಬಾರಿ ಟೆಕ್ನಾಲಜಿ ಅನೇಕ ಅನುಕೂಲಗಳನ್ನು ಮಾಡಿಕೊಡುತ್ತದೆ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ ಎನ್ನಬಹುದು.


Click it and Unblock the Notifications








