ಹೊಸ ವರ್ಷಕ್ಕೆ ಟೆಲಿಕಾಂ ಚಂದಾದಾರರಿಗೆ ತಟ್ಟಲಿದೆ ಬೆಲೆ ಏರಿಕೆಯ ಬಿಸಿ!

|

ದೇಶದ ಟೆಲಿಕಾಂ ವಲಯದಲ್ಲಿ ಕಳೆದ ವರ್ಷ ಭಾರೀ ಮಹತ್ತರ ಬೆಳವಣಿಗೆಗಳು ನಡೆದಿವೆ. ಏರ್‌ಟೆಲ್, ವೋಡಾಫೋನ್ ಹಾಗೂ ಜಿಯೋ ಟೆಲಿಕಾಂ ಸಂಸ್ಥೆಗಳು ತನ್ನ ಪ್ಲ್ಯಾನ್‌ಗಳ ಬೆಲೆಯಲ್ಲಿ ಹೆಚ್ಚಳ ಮಾಡಿ ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ಮುಟ್ಟಿಸಿದ್ದವು. ಈ ಹೊಸ ವರ್ಷಕ್ಕೂ ಟೆಲಿಕಾಂಗಳು ತಮ್ಮ ಟಾರೀಫ್ ಬೆಲೆಯಲ್ಲಿ ಏರಿಕೆ ಮಾಡುವ ಸಾಧ್ಯತೆಗಳಿವೆ ಎಂದು ಎಕನಾಮಿಕ್ ಟೈಮ್ಸ್ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಹೊಸ ವರ್ಷಕ್ಕೆ ಟೆಲಿಕಾಂ ಚಂದಾದಾರರಿಗೆ ತಟ್ಟಲಿದೆ ಬೆಲೆ ಏರಿಕೆಯ ಬಿಸಿ!

ಹೌದು, ಆರ್ಥಿಕ ನಷ್ಟ ಭರಿಸಲು ಹಾಗೂ ಸ್ಥಿರತೆ ಕಾಪಾಡಲು ವೊಡಾಫೋನ್ ಐಡಿಯಾ (ವಿ) ಮತ್ತು ಏರ್‌ಟೆಲ್‌ ಟೆಲಿಕಾಂಗಳು ಸುಂಕವನ್ನು ಹೆಚ್ಚಿಸಲು ನೋಡುತ್ತಿವೆ ಎನ್ನಲಾಗಿದೆ. ಇದೇ ಡಿಸೆಂಬರ್ ಅಂತ್ಯದಲ್ಲಿ ಇಲ್ಲವೇ ಬರುವ ಹೊಸ ವರ್ಷದ ಆರಂಭದಲ್ಲಿ ಟಾರೀಫ್ ಯೋಜನೆಗಳ ದರಗಳಲ್ಲಿ 15-20% ರಷ್ಟು ಹೆಚ್ಚಾಗಬಹುದು ಎನ್ನಲಾಗಿದೆ. ವೊಡಾಫೋನ್ ನಂತರ ಏರ್‌ಟೆಲ್‌ ಸಹ ದರ ಏರಿಕೆ ಮಾಡುವ ಸಾಧ್ಯತೆಗಳಿದ್ದು, ವೊಡಾಫೋನ್ ಹಾಗೂ ಏರ್‌ಟೆಲ್‌ ನಡೆ ನೋಡಿ ಜಿಯೋ ಹೆಜ್ಜೆ ಇಡುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಹೊಸ ವರ್ಷಕ್ಕೆ ಟೆಲಿಕಾಂ ಚಂದಾದಾರರಿಗೆ ತಟ್ಟಲಿದೆ ಬೆಲೆ ಏರಿಕೆಯ ಬಿಸಿ!

ಆದಾಗ್ಯೂ, ಜಿಯೋ ಅದನ್ನು ಅನುಸರಿಸುತ್ತಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಅದರ ಬಳಕೆದಾರರ ಸೇರ್ಪಡೆಯ ವೇಗವು ನಿಧಾನವಾಗಿದೆ. ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ, ಏರ್‌ಟೆಲ್‌ 14 ಮಿಲಿಯನ್‌ಗೆ ಹೋಲಿಸಿದರೆ ಜಿಯೋ 7 ಮಿಲಿಯನ್ ಗ್ರಾಹಕರನ್ನು ಸೇರಿಸಿದೆ. ವಿ ಟೆಲಿಕಾಂ 8 ಮಿಲಿಯನ್ ಬಳಕೆದಾರರನ್ನು ಕಳೆದುಕೊಂಡಿದೆ.

ಹೊಸ ವರ್ಷಕ್ಕೆ ಟೆಲಿಕಾಂ ಚಂದಾದಾರರಿಗೆ ತಟ್ಟಲಿದೆ ಬೆಲೆ ಏರಿಕೆಯ ಬಿಸಿ!

ವಿ ಹೊಂದಾಣಿಕೆಯ ಒಟ್ಟು ಆದಾಯ (ಎಜಿಆರ್) 50,400 ಕೋಟಿ ರೂ.ಗಳ ಬಾಕಿ ಮೊತ್ತದ ವಾರ್ಷಿಕ ಕಂತುಗಳನ್ನು ಒಳಗೊಂಡಂತೆ ಪಾವತಿ ಬಾಧ್ಯತೆಗಳನ್ನು ಪೂರೈಸಲು ಮತ್ತು ಪ್ರತಿಸ್ಪರ್ಧಿಗಳೊಂದಿಗೆ ಅಂತರವನ್ನು ಕಡಿಮೆ ಮಾಡಲು ಮತ್ತು ಚಂದಾದಾರರನ್ನು ಉಳಿಸಿಕೊಳ್ಳಲು ತನ್ನ 4 ಜಿ ನೆಟ್‌ವರ್ಕ್‌ನಲ್ಲಿ ಹೂಡಿಕೆ ಮಾಡಲು ಸಹಾಯ ಮಾಡಲು ತುರ್ತಾಗಿ ದರಗಳನ್ನು ಹೆಚ್ಚಿಸುವ ಅಗತ್ಯವಿದೆ ಎಂದು ತಜ್ಞರು ಹೇಳಿದ್ದಾರೆ.

ಕಳೆದ ಡಿಸೆಂಬರ್‌ನಲ್ಲಿ ಟೆಲಿಕಾಂಗಳು ತಮ್ಮ ಟಾರೀಫ್‌ಗಳ ಬೆಲೆಯಲ್ಲಿ ಏರಿಕೆ ಮಾಡಿ ಗ್ರಾಹಕರಿಗೆ ಶಾಕ್ ನೀಡಿದವು. ಅದೇ ರೀತಿ ಈ ವರ್ಷದ ಅಂತ್ಯಕ್ಕೆ ಅಥವಾ ನೂತನ ವರ್ಷದ ಆರಂಭದಲ್ಲಿ ವೊಡಾಪೋನ್ ಹಾಗೂ ಏರ್‌ಟೆಲ್‌ ಟೆಲಿಕಾಂಗಳು ಟಾರೀಫ್‌ ದರದಲ್ಲಿ ಪರಿಷ್ಕರಣೆ ಮಾಡುವ ಸಾಧ್ಯತೆಗಳು ಅಧಿಕ ಎನ್ನಲಾಗಿದೆ.

Best Mobiles in India

English summary
Vodafone Idea Tariffs Likely to See 15-20% Hike Very Soon.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X