ಡೊಕೊಮೊ ಸರದಿ: ಭಾರತದಲ್ಲೇ ಅತೀ ಚೀಪೆಸ್ಟ್ ಪ್ಲಾನ್ ಲಾಂಚ್‌

Written By:

ರಿಲಾಯನ್ಸ್ ಜಿಯೋ 4G ಭಾರತ ಟೆಲಿಕಾಂ ಕ್ಷೇತ್ರಕ್ಕೆ ಕಾಲಿರಿಸಿದ ನಂತರ, ಏರ್‌ಟೆಲ್‌, ಬಿಎಸ್ಎನ್‌ಎಲ್‌, ವೊಡಾಫೋನ್ ಆಪರೇಟರ್‌ಗಳು ಮಾತ್ರ ಹೆಚ್ಚು ಆಗಾಗ ತಮ್ಮ ಟ್ಯಾರಿಫ್ ಪ್ಲಾನ್‌ ಅನ್ನು ಬದಲಿಸಿ, ಉತ್ತಮ ಆಫರ್‌ಗಳನ್ನು ನೀಡುತ್ತಿದ್ದಾರೆ. ಟೆಲಿಕಾಂಗಳ ಈ ನಡೆಯಿಂದ ಜಿಯೋ ಬಳಕೆದಾರರು ಮಾತ್ರವಲ್ಲದೇ, ಇತರೆ ಟೆಲಿಕಾಂ ಬಳಕೆದಾರರು ಅಷ್ಟೇ ಖುಷಿ ಆಗಿದ್ದಾರೆ. ಆದರೆ ಈಗ ಟಾಟಾ ಡೊಕೊಮೊ ಬಳಕೆದಾರರ ಸರದಿ ಶುರುವಾಗಿದೆ.

ಟಾಟಾ ಡೊಕೊಮೊ ಗ್ರಾಹಕರು ಅನ್‌ಲಿಮಿಟೆಡ್‌ ಉಚಿತ 3G ಡಾಟಾ ಪಡೆಯುವುದು ಹೇಗೆ?

ಡೊಕೊಮೊ ಸರದಿ: ಭಾರತದಲ್ಲೇ ಅತೀ ಚೀಪೆಸ್ಟ್ ಪ್ಲಾನ್ ಲಾಂಚ್‌

ಅಂದಹಾಗೆ ಟಾಟಾ ಡೊಕೊಮೊ 3G ಸೇವೆಯನ್ನು 9 ವೃತ್ತಗಳಲ್ಲಿ ಆಪರೇಟ್ ಮಾಡುತ್ತಿದ್ದು, ಭಾರತದ ಅತೀ ಕಡಿಮೆ ಬೆಲೆಯ 3G ಪ್ಲಾನ್‌ ಅನ್ನು ಪ್ರಕಟಣೆಗೊಳಿಸಿದೆ. ಆ ಪ್ಲಾನ್ ಯಾವುದು ಮತ್ತು ಇತರೆ ಸೇವೆಯ ಮಾಹಿತಿಯನ್ನು ಮುಂದೆ ಓದಿರಿ.

2000 ರೂಪಾಯಿವರೆಗಿನ ಡೆಬಿಟ್, ಕ್ರೆಡಿಟ್ ವ್ಯವಹಾರಕ್ಕೆ ಟ್ಯಾಕ್ಸ್ ಇಲ್ಲ!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಡೊಕೊಮೊ ತಂದಿರುವ ಹೊಸ ಪ್ಲಾನ್‌ ಏನು?

ಡೊಕೊಮೊ ತಂದಿರುವ ಹೊಸ ಪ್ಲಾನ್‌ ಏನು?

ಅಂದಹಾಗೆ ಡೊಕೊಮೊ ತಂದಿರುವ ಹೊಸ ಪ್ಲಾನ್‌ ಅನ್ನು ವೆಬ್‌ ಅಥವಾ ಆನ್‌ಲೈನ್‌ ಮೂಲಕ ಆಕ್ಟಿವೇಶನ್ ಪಡೆಯಬಹುದಾಗಿದ್ದು, ಗ್ರಾಹಕರು 10GB ಅತೀ ವೇಗದ ಡೇಟಾವನ್ನು ರೂ.495 ಕ್ಕೆ ಪಡೆಯಬಹುದು.

ಅತೀ ವೇಗದ ಇಂಟರ್ನೆಟ್ ಸೇವೆಯ ಈ ಆಫರ್ ಇತರೆ ಟೆಲಿಕಾಂ ಸೇವೆಗಳಿಗೆ ಹೋಲಿಸಿದರೆ, ಅವುಗಳ ಬೆಲೆಯ ಅರ್ಧದಷ್ಟಿದೆ. ಯಾಕಂದ್ರೆ ಇತರೆ ಕಂಪನಿಗಳು 10GB 3G, 4G ಡೇಟಾಗೆ ರೂ.999 ಬೆಲೆ ವಿದಿಸುತ್ತವೆ.

ಬಿಎಸ್‌ಎನ್‌ಎಲ್‌ ಮಾತ್ರ 10GB ಡೇಟಾವನ್ನು ರೂ.550 ಕ್ಕೆ ತಿಂಗಳಿಗೆ ಚಾರ್ಜ್ ಮಾಡುತ್ತಿದೆ. ಅನ್‌ಲಿಮಿಟೆಡ್‌ ಡೇಟಾ ಆಫರ್‌ ಬೇಕಾದಲ್ಲಿ ರೂ.1,000 ಪಾವತಿಸಬೇಕಾಗುತ್ತದೆ. ಆದರೆ ಬಿಎಸ್‌ಎನ್‌ಎಲ್‌ ರೀತಿಯಲ್ಲಿ ಟಾಟಾ ಡೊಕೊಮೊ ಪ್ಲಾನ್‌ ಭಾರತದಾದ್ಯಂತ ಲಭ್ಯವಿಲ್ಲ. ಕೆಲವು ಕೇಂದ್ರಗಳ ಗ್ರಾಹಕರು ಭರ್ಜರಿ ಡೇಟಾ ಪ್ಯಾಕ್ ಪಡೆಯಬಹುದು ಅಷ್ಟೇ.

ಆಫರ್ ಯಾರು ಪಡೆಯಬಹುದು?

ಆಫರ್ ಯಾರು ಪಡೆಯಬಹುದು?

ಟಾಟಾ ಡೊಕೊಮೊ ಕೇವಲ 9 ವೃತ್ತಗಳಲ್ಲಿ ಆಫರ್ ನೀಡುತ್ತಿದ್ದು, 'ಮಧ್ಯ ಪ್ರದೇಶ, ಛತ್ತೀಸಘಡ, ಗುಜರಾತ್, ಹರಿಯಾಣ ಕರ್ನಾಟಕ, ಕೇರಳ, ಮಹಾರಾಷ್ಟ್ರ-ಗೋವಾ, ಪಂಜಾಬ್, ತಮಿಳು ನಾಡು, ರಾಜಸ್ತಾನ, ಮತ್ತು ಉತ್ತರ ಪ್ರದೇಶಗಳಲ್ಲಿ ಲಭ್ಯ. ಈ ಆಫರ್‌ ಅನ್ನು ಪ್ರಕಟಗೊಳಿಸಲಾಗಿದೆ. ಆದರೆ ಎಲ್ಲಾ ವೃತ್ತಗಳಲ್ಲಿ ಲಭ್ಯತೆ ಇನ್ನೂ ವಿಸ್ತರಣೆ ಆಗಬೇಕಿದೆ.

ಡೊಕೊಮೊದ ಆಫರ್‌ ಏಕೆ?

ಡೊಕೊಮೊದ ಆಫರ್‌ ಏಕೆ?

ರಿಲಾಯನ್ಸ್ ಜಿಯೋ ಲಾಂಚ್‌ನಿಂದ ಟಾಟಾ ಡೊಕೊಮೊಗೂ ಸಹ ಒಡೆತ ಬಿದ್ದಿದೆ. ಜಿಯೋ ಸಿಮ್‌ ಉಚಿತ ಎಂಬ ಕಾರಣದಿಂದ, ಡೊಕೊಮೊ ಬಳಕೆದಾರರು ಪೋರ್ಟ್‌ ಆಗುವ, ಅಥವಾ ಸಿಮ್‌ ಬಳಕೆ ಸ್ಥಗಿತಗೊಳಿಸುವ ಸಾಧ್ಯತೆಗಳು ಹೆಚ್ಚು ಇರುವುದರಿಂದ ಡೊಕೊಮೊ ಈ ಆಫರ್ ಜಾರಿಗೊಳಿಸಿದೆ.

ಜಿಯೋ ಲಾಂಚ್‌ಗೂ ಮೊದಲು ನೋಡುವುದಾದರೆ, 'ರಿಲಾಯನ್ಸ್ ಕಂಮ್ಯೂನಿಕೇಷನ್, ಡೊಕೊಮೊ, ಏರ್‌ಸೆಲ್‌' ಟೆಲಿಕಾಂ ಪ್ಲೇಯರ್‌ಗಳು ಅತೀ ಕಡಿಮೆ ಕರೆ ದರ ಆಫರ್ ಮಾಡುತ್ತಿದ್ದವು.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

Read more about:
English summary
Tata DoCoMo Introduces India’s Cheapest Limited 3G Plan, Offers 10GB for Rs. 495. To know more visit kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot