Subscribe to Gizbot

ಡೊಕೊಮೊದಿಂದ ಕಡಿಮೆ ಬೆಲೆಯ ವೈಫೈ ಡೊಂಗಲ್‌

Posted By:

ಟಾಟಾ ಡೊಕೊಮೊ ತನ್ನ ಗ್ರಾಹಕರಿಗೆ ವೈಫೈ ಡೊಂಗಲ್‌ ಮೂಲಕ ಕಡಿಮೆ ಬೆಲೆಯಲ್ಲಿ ಇಂಟರ್‌ನೆಟ್‌ ಸೌಲಭ್ಯ ನೀಡಲು ಮುಂದಾಗಿದೆ.ಈ ಸಂಬಂಧ ಐದು ಗ್ಯಾಜೆಟ್‌ಗಳಿಗೆ ಇಂಟರ್‌ನೆಟ್‌ ಸಂಪರ್ಕ ನೀಡಬಹುದಾದ ವೈಫೈ ಡೊಂಗಲ್‌ನ್ನು ಬಿಡುಗಡೆ ಮಾಡಿದೆ.

ಕ್ವಾಲ್ಕಂ ಗೋಬಿ ಮತ್ತು ಡ್ಯುಯಲ್‌ ಕೋರ್‌ ಪ್ರೊಸೆಸರ್‌ ತಂತ್ರಜ್ಞಾನವಿರುವ ಬ್ಯಾಟರಿ ಆಧಾರಿತ ವಿಂಗಲ್‌‌(wingle) ಡೊಂಗಲ್‌ನ್ನು ಡೊಕೊಮೊ ಪರಿಚಯಿಸಿದೆ. 1,999 ರೂ ಬೆಲೆಯಿರುವ ಈ ವಿಂಗಲ್‌ನಿಂದ ಬಳಕೆದಾರರು ತಮ್ಮದೇ ಆದ ವೈಫೈ ವಲಯ ಸೃಷ್ಟಿಸಿ, ಏಕಕಾಲದಲ್ಲಿ 6.2 Mbps ವೇಗದಲ್ಲಿ ಲ್ಯಾಪ್‌ಟಾಪ್‌,ಸ್ಮಾರ್ಟ್‌ಫೋನ್‌‌,ಟ್ಯಾಬ್ಲೆಟ್‌ಗಳಿಗೆ ಇಂಟರ್‌ನೆಟ್‌ ಸಂಪರ್ಕ‌ ಪಡೆಯಬಹುದು.

 ಡೊಕೊಮೊದಿಂದ ಕಡಿಮೆ ಬೆಲೆಯ ವೈಫೈ ಡೊಂಗಲ್‌

ಇದೇ ಸಂದರ್ಭದಲ್ಲಿ ಡೊಕೊಮೊ ತನ್ನ ಬಳಕೆದಾರರಿಗೆ 3GB(650ರೂ.)6GB(950 ರೂ.)15GB(1,500 ರೂ.)ಅನ್‌ಲಿಮಿಟೆಡ್‌ ಡೇಟಾ ಹೊಸ ವೈಫೈ ಪ್ಲ್ಯಾನ್‌ ಬಿಡುಗಡೆ ಮಾಡಿದೆ.

ಆರಂಭದಲ್ಲಿ ಸಿಡಿಎಂಎ ಬಳಕೆದಾರರು ಮಾತ್ರ ಈ ಹೊಸ ಸೇವೆಯನ್ನು ಪಡೆಯಬಹುದಾಗಿದ್ದು,10-15ದಿನಗಳಲ್ಲಿ ಜಿಎಸ್‌ಎಂ ಬಳಕೆದಾರರಿಗೆ ಹೊಸ ಡೊಂಗಲ್‌ ಬಿಡುಗಡೆ ಮಾಡಲಾಗುವುದು ಡೊಕೊಮೊ ಹೇಳಿದೆ.


ಇದನ್ನೂ ಓದಿ: ಮನೆಯ ಸುರಕ್ಷತೆಗೆ ಹೊಸ ಡೋರ್‌ಬೆಲ್‌!

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot