Home
ಸುದ್ದಿಜಾಲ

ಚೀನಾದೊಂದಿಗೆ ಸೆಣಸಲಿದೆ ಟಾಟಾ, ಭಾರತದಲ್ಲಿ ಶೀಘ್ರವೇ ಐಫೋನ್‌ಗಳ‌ ಉತ್ಪಾದನೆ ಸ್ಟಾರ್ಟ್‌!

ಐಫೋನ್‌ಗಳು ಕ್ಷಣಕ್ಷಣಕ್ಕೂ ತಮ್ಮ ಬೇಡಿಕೆಯನ್ನು ಹೆಚ್ಚು ಮಾಡಿಕೊಳ್ಳುತ್ತಲೇ ಇವೆ. ಅದರಲ್ಲೂ ಐಫೋನ್‌ 15 ಸಂಬಂಧ ವಿವಿಧ ಮಾಹಿತಿಗಳು ಲೀಕ್‌ ಆಗುತ್ತಿದ್ದು, ಈ ನಡುವೆ ಐಫೋನ್‌ ಮೇಲಿನ ಕ್ರೇಜ್‌ ಜನರಿಗೆ ಇನ್ನಷ್ಟು ಹೆಚ್ಚಾಗಿದೆ. ಇದರೊಂದಿಗೆ ಭಾರತದಲ್ಲಿ ಮತ್ತೊಂದು ಪ್ರಮುಖ ಘಟನೆ ಜರುಗುತ್ತಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಟಾಟಾ ಐಫೋನ್‌ಗಳನ್ನು ತಯಾರಿಸಲಿದೆ.

ಹೌದು, ದೇಶದ ಹಿರಿಯ ಉದ್ಯಮಿ ಆಗಿರುವ ರತನ್ ಟಾಟಾ ಅವರ ಟಾಟಾ ಗ್ರೂಪ್ ಶೀಘ್ರದಲ್ಲೇ ಸ್ಮಾರ್ಟ್‌ಫೋನ್‌ ತಯಾರಿಸುವ ಉದ್ಯಮಕ್ಕೆ ಎಂಟ್ರಿ ನೀಡಲಿದೆ. ಅಂದರೆ ಈ ಟಾಟಾ ಗ್ರೂಪ್ ಶೀಘ್ರದಲ್ಲೇ ಐಫೋನ್ ಉತ್ಪಾದನೆಯನ್ನು ಆರಂಭ ಮಾಡಬಹುದು. ಈ ವಿಷಯಕ್ಕೆ ಸಂಬಂಧಿಸಿದಂತೆ ಆಪಲ್ ಪೂರೈಕೆದಾರ ವಿಸ್ಟ್ರಾನ್ ಕಾರ್ಪ್ ಜೊತೆ ಮಾತುಕತೆ ನಡೆಸುತ್ತಿದೆ. ಹೀಗಾಗಿ ಶೀಘ್ರದಲ್ಲೇ ಇಬ್ಬರ ನಡುವೆ ಒಪ್ಪಂದ ಆಗಬಹುದು ಎನ್ನಲಾಗಿದೆ.

ಚೀನಾದೊಂದಿಗೆ ಸೆಣಸಲಿದೆ ಟಾಟಾ, ಶೀಘ್ರವೇ ಐಫೋನ್‌ಗಳ‌ ಉತ್ಪಾದನೆ ಸ್ಟಾರ್ಟ್‌!

ಕರ್ನಾಟಕದಲ್ಲಿ ಐಫೋನ್‌ ತಯಾರಿಕೆ: ಈ ವಿಶೇಷ ಘಟನೆಯಲ್ಲಿ ಗಮನಿಸಬೇಕಾದ ಪ್ರಮುಖ ವಿಷಯ ಏನೆಂದರೆ ಈ ಐಫೋನ್ ತಯಾರಕ ವಿಸ್ಟ್ರಾನ್‌ನ ಸ್ಥಾವರವು ಕರ್ನಾಟಕದಲ್ಲಿದೆ. ಅದರಂತೆ ಟಾಟಾ ಹಾಗೂ ವಿಸ್ಟ್ರಾನ್ ಮಾತುಕತೆ ಮುಗಿದರೆ ಟಾಟಾ ಈ ಕರ್ನಾಟಕದಲ್ಲಿನ ಸ್ಥಾವರವನ್ನು ಸ್ವಾಧೀನಪಡಿಸಿಕೊಳ್ಳಲಿದೆ ಎಂದು ಹೇಳಲಾಗುತ್ತಿದೆ. ಈ ಮೂಲಕ ಟಾಟಾದ ಈ ದೃಢ ಹೆಜ್ಜೆ ಚೀನಾಕ್ಕೆ ಕಠಿಣ ಸವಾಲಾಗಿ ಪರಿಣಮಿಸಲಿದೆ.

ಶತಕೋಟಿ ಮೌಲ್ಯದ ಫೋನ್‌ ತಯಾರಿಸುವ ಗುರಿ: ಈ ತೈವಾನ್‌ನ ವಿಸ್ಟ್ರಾನ್ ಕಂಪನಿಯು ಒಪ್ಪಂದದ ಮೇಲೆ ಎಲೆಕ್ಟ್ರಾನಿಕ್ ವಸ್ತುಗಳನ್ನು ತಯಾರು ಮಾಡುತ್ತಿದ್ದು, ಅದರಂತೆ ಕರ್ನಾಟಕ ಈ ಸ್ಥಾವರದಿಂದ ಈ ವರ್ಷ $ 1.8 ಶತಕೋಟಿ ಮೌಲ್ಯದ ಐಫೋನ್‌ಗಳನ್ನು ತಯಾರಿಸುವ ಗುರಿಯನ್ನು ಹೊಂದಿದೆ. ಇದಕ್ಕಾಗಿ ಸರ್ಕಾರದ ಪ್ರೋತ್ಸಾಹವನ್ನೂ ಸಹ ನಿರೀಕ್ಷೆ ಮಾಡಲಾಗುತ್ತಿದೆ. ಇದಿಷ್ಟು ಮಾತ್ರವಲ್ಲದೆ ಮುಂದಿನ ವರ್ಷದ ವೇಳೆಗೆ ತನ್ನ ಉದ್ಯೋಗಿಗಳನ್ನು ಮೂರು ಪಟ್ಟು ಹೆಚ್ಚಿಸುವತ್ತ ಗಮನಹರಿಸುತ್ತಿದೆ.

ಅದಾಗ್ಯೂ ಆಪಲ್‌ ಫೋನ್‌ಗಳ ಪ್ರಮುಖ ತಯಾರಿಕಾ ಕಂಪೆನಿಗಳಲ್ಲಿ ಒಂದಾಗಿರುವ ಈ ವಿಸ್ಟ್ರಾನ್ ಭಾರತದಲ್ಲಿ ಮುಂದಿನ ದಿನಗಳಲ್ಲಿ ಐಫೋನ್ ತಯಾರಿಕೆಯಿಂದ ಹೊರಬರಲು ಸಜ್ಜಾಗಿದೆ. ಇದರಿಂದಾಗಿಯೇ ಈ ಕಂಪನಿಯನ್ನು ಈಗ ಟಾಟಾ ಖರೀದಿ ಮಾಡಲು ಆಸಕ್ತಿ ತೋರಿಸಿರುವುದು. ಆದರೂ ಸಹ ಟಾಟಾ, ವಿಸ್ಟ್ರಾನ್ ಹಾಗೂ ಆಪಲ್ ಈ ಬಗ್ಗೆ ಯಾವುದೇ ಮಾಹಿತಿಯನ್ನು ಸಾರ್ವಜನಿಕವಾಗಿ ಬಿಟ್ಟುಕೊಟ್ಟಿಲ್ಲ.

ಪ್ರಮುಖ ಮೂಲಗಳ ಪ್ರಕಾರ, ಟಾಟಾ ಮತ್ತು ವಿಸ್ಟ್ರಾನ್ ನಡುವೆ ಮಾತುಕತೆ ನಡೆಯುತ್ತಿದ್ದು, ಅವರು ಆಗಸ್ಟ್‌ನಲ್ಲಿ ಒಪ್ಪಂದವನ್ನು ಅಂತಿಮಗೊಳಿಸಬಹುದು ಎಂದು ಸಹ ಹೇಲಾಗುತ್ತಿದೆ. ಟಾಟಾದ ಈ ಡೀಲ್ ಪೂರ್ಣಗೊಂಡರೆ ಭಾರತದಲ್ಲಿ ಐಫೋನ್ ತಯಾರಿಸುವ ಮೊದಲ ಕಂಪನಿ ಟಾಟಾ ಆಗಲಿದೆ. ಇದರೊಂದಿಗೆ ಭಾರತದಲ್ಲಿ ತಯಾರಿಸಿದ ಐಫೋನ್‌ಗಳು ಶೀಘ್ರದಲ್ಲೇ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲಿದ್ದು, ಈಗಿರುವ ಬೆಲೆಗಿಂತ ಕಡಿಮೆ ಬೆಲೆಗೂ ಲಭ್ಯ ಇರಲಿದೆ ಎನ್ನಲಾಗಿದೆ.

ಚೀನಾಕ್ಕೆ ಪ್ರಬಲ ಪೈಪೋಟಿ: ಕೊರೊನಾ ನಂತರದ ಸಮಯದಲ್ಲಿ ವಿವಿಧ ಸಮಸ್ಯೆಗಳ ಪರಿಣಾಮ ವಿದೇಶಿ ಕಂಪನಿಗಳು ಚೀನಾವನ್ನು ಬಿಟ್ಟ ಭಾರತದಲ್ಲಿ ಹೂಡಿಕೆ ಮಾಡಲು ಮುಂದೆ ಬರುತ್ತಿವೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಭಾರತ ಸಹ ಈ ರೀತಿಯ ಹೂಡಿಕೆಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಲೇ ಬರುತ್ತಿದೆ. ಇದರಿಂದಾಗಿ ಭಾರತ ವಿಶ್ವಮಟ್ಟದಲ್ಲಿ ಆಗಾಗ್ಗೆ ದೊಡ್ಡ ರೀತಿಯಲ್ಲಿ ಸದ್ದು ಮಾಡುತ್ತಲೇ ಇರುತ್ತದೆ.

ಇನ್ನು ಈ ವಿಸ್ಟ್ರಾನ್ ಕಾರ್ಪೊರೇಷನ್ ಕಾರ್ಖಾನೆ $600 ಮಿಲಿಯನ್‌ಗಿಂತಲೂ ಹೆಚ್ಚು ಮೌಲ್ಯದ್ದಾಗಿದೆ. ಹಾಗೆಯೇ ಇಲ್ಲಿ 10,000 ಕ್ಕೂ ಹೆಚ್ಚು ಕೆಲಸಗಾರರನ್ನು ನೇಮಿಸಿಕೊಳ್ಳಲಾಗಿದ್ದು, ಸದ್ಯಕ್ಕೆ ಐಫೋನ್ 14 ಸರಣಿ ಫೋನ್‌ಗಳ ಜೋಡಣೆ ಕಾರ್ಯ ನಡೆಯುತ್ತಿದೆ. ಹಾಗೆಯೇ ಜೂನ್ 30 ಕ್ಕೆ ಕೊನೆಗೊಂಡ ಮೂರು ತಿಂಗಳಲ್ಲಿ ವಿಸ್ಟ್ರಾನ್ ಸುಮಾರು $500 ಮಿಲಿಯನ್ ಐಫೋನ್‌ಗಳನ್ನು ಭಾರತದಿಂದ ರಫ್ತು ಮಾಡಿದೆ.

ಚೀನಾದೊಂದಿಗೆ ಸೆಣಸಲಿದೆ ಟಾಟಾ, ಶೀಘ್ರವೇ ಐಫೋನ್‌ಗಳ‌ ಉತ್ಪಾದನೆ ಸ್ಟಾರ್ಟ್‌!

ಇದರೊಂದಿಗೆ 155 ವರ್ಷಗಳಷ್ಟು ಹಳೆಯದಾದ ಟಾಟಾ ಗ್ರೂಪ್ ತನ್ನ ವ್ಯವಹಾರವನ್ನು ಉಪ್ಪಿನಿಂದ ಆರಂಭಿಸಿ ಟೆಕ್ನಾಲಜಿ ವರೆಗೆ ಬಂದು ನಿಂತಿದೆ. ಅಂದರೆ ಜನರಿಗೆ ಅಗತ್ಯವಾದ ಎಲ್ಲಾ ಸೇವೆಗಳನ್ನು ಇದು ನೀಡುತ್ತಿದೆ. ಇದರ ಜೊತೆಗೆ ಕಳೆದ ಕೆಲವು ವರ್ಷಗಳಿಂದ ಟಾಟಾ ಹೊಸ ಸೇವೆಗಳ ಕಡೆ ಮುಖ ಮಾಡಿದ್ದು, ಎಲೆಕ್ಟ್ರಾನಿಕ್ಸ್ ಉತ್ಪಾದನೆ ಮತ್ತು ಇ-ಕಾಮರ್ಸ್‌ನಲ್ಲಿ ಹೆಚ್ಚಿನ ಹೂಡಿಕೆ ಮಾಡುತ್ತಿದೆ.

ಟಾಟಾ ಈಗಾಗಲೇ ತಮಿಳುನಾಡು ರಾಜ್ಯದಲ್ಲಿ ನೂರಾರು ಎಕರೆ ಭೂಮಿಯಲ್ಲಿ ಇರುವ ತನ್ನ ದೊಡ್ಡ ಕಾರ್ಖಾನೆಯಲ್ಲಿ ಐಫೋನ್ ಚಾಸಿಸ್ ಅನ್ನು ತಯಾರಿಸುವ ಕೆಲಸ ಮಾಡುತ್ತಿದೆ. ಇದರೊಂದಿಗೆ ಟಾಟಾ ಚಿಪ್‌ಮೇಕಿಂಗ್‌ನಲ್ಲೂ ತನ್ನದೇ ಆದ ರೀತಿಯಲ್ಲಿ ಹೆಸರು ಮಾಡಲು ಮುಂದಾಗಿದ್ದು, ಭವಿಷ್ಯದಲ್ಲಿ ದೊಡ್ಡ ಟೆಕ್‌ ಕಂಪೆನಿಗಳಿಗೆ ಪ್ರತಿಸ್ಪರ್ಧಿ ಆಗುವುದರಲ್ಲಿ ಎರಡು ಮಾತಿಲ್ಲ.

Best Mobiles in India

English summary
india's senior businessman Ratan Tata's TATA Group will soon enter the smartphone manufacturing industry. That means this Tata group is in long talks with Apple supplier Wistron Corp.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+