ಏ.7ರಂದು ಟಾಟಾ ನ್ಯೂ ಆಪ್‌ ಲಾಂಚ್‌; ಅಮೆಜಾನ್, ಪೇಟಿಎಮ್‌ಗೆ ಶುರುವಾಗಿದೆ ನಡುಕ!

|

ಟಾಟಾ ಗ್ರೂಪ್‌ (Tata Group) ನ ಸೂಪರ್ ಅಪ್ಲಿಕೇಶನ್ ಟಾಟಾ ನ್ಯೂ (Tata Neu) ಕುತೂಹಲ ಮೂಡಿಸಿದ್ದು, ಈ ಆಪ್ ಇದೇ ಏಪ್ರಿಲ್ 7 ರಂದು ಬಿಡುಗಡೆ ಮಾಡಲು ಸಿದ್ಧವಾಗಿದೆ. ಟಾಟಾ ಕಂಪನಿಯು ಅಪ್ಲಿಕೇಶನ್‌ನ ಗೂಗಲ್‌ ಪ್ಲೇ ಸ್ಟೋರ್‌ (Google Play Store) ಪುಟದಲ್ಲಿ ಟೀಸರ್ ಚಿತ್ರದ ಮೂಲಕ ಘೋಷಣೆ ಮಾಡಿದೆ. ಇದು ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯಾವಳಿಯೊಂದಿಗೆ ಮೊದಲ ಬಾರಿಗೆ ಸೂಪರ್ ಅಪ್ಲಿಕೇಶನ್ ಅನ್ನು ಸಾರ್ವಜನಿಕವಾಗಿ ಜಾಹೀರಾತು ಮಾಡಲು ಪ್ರಾರಂಭಿಸಿದೆ. ಅಮೆಜಾನ್, ಪೇಟಿಎಮ್‌ ಹಾಗೂ ಜಿಯೋ ಮಾರ್ಟ್‌ ತಾಣಗಳಿಗೆ ನಡುಕ ಶುರುವಾಗಿದೆ.

ಏ.7ರಂದು ಟಾಟಾ ನ್ಯೂ ಆಪ್‌ ಲಾಂಚ್‌; ಅಮೆಜಾನ್, ಪೇಟಿಎಮ್‌ಗೆ ಶುರುವಾಗಿದೆ ನಡುಕ!

ಏನಿದು ಟಾಟಾ ನ್ಯೂ?
ಟಾಟಾ ನ್ಯೂ ಎಂಬುದು ಸಂಘಟಿತ ಕಂಪನಿಯ ಸೂಪರ್ ಅಪ್ಲಿಕೇಶನ್ ಆಗಿದ್ದು ಅದು ತನ್ನ ಎಲ್ಲಾ ಡಿಜಿಟಲ್ ಸೇವೆಗಳು ಮತ್ತು ಅಪ್ಲಿಕೇಶನ್‌ಗಳನ್ನು ಒಂದೇ ವೇದಿಕೆಯಲ್ಲಿ ಒಟ್ಟು ಗೂಡಿಸುತ್ತದೆ. ಅದರ ಪ್ಲೇ ಸ್ಟೋರ್ ಪುಟದಲ್ಲಿ, ಅಪ್ಲಿಕೇಶನ್‌ ಬಗ್ಗೆ, ಅತ್ಯಾಧುನಿಕ ಡಿಜಿಟಲ್ ವಿಷಯವನ್ನು ಅನುಭವಿಸಿ, ಪಾವತಿಗಳನ್ನು ಮಾಡಿ, ನಿಮ್ಮ ಹಣಕಾಸು ನಿರ್ವಹಿಸಿ, ನಿಮ್ಮ ಮುಂದಿನ ರಜಾದಿನವನ್ನು ಅಥವಾ ಬಹುಶಃ ನಿಮ್ಮ ಮುಂದಿನ ಊಟವನ್ನು ಯೋಜಿಸಿ ಟಾಟಾ ನ್ಯೂ ಪ್ರಪಂಚದಲ್ಲಿ ಅನ್ವೇಷಿಸಲು ಮತ್ತು ಅನುಭವಿಸಲು ಸಾಕಷ್ಟು ಇವೆ ಎಂದು ಅದು ಅಪ್ಲಿಕೇಶನ್‌ ಬಗ್ಗೆ ವಿವರಣೆ ನೀಡಿದೆ.

ಏ.7ರಂದು ಟಾಟಾ ನ್ಯೂ ಆಪ್‌ ಲಾಂಚ್‌; ಅಮೆಜಾನ್, ಪೇಟಿಎಮ್‌ಗೆ ಶುರುವಾಗಿದೆ ನಡುಕ!

ಟಾಟಾ ನ್ಯೂ ಆಪ್‌ನಲ್ಲಿ ಲಭ್ಯ ಆಗುವ ಸೇವೆಗಳು ಯಾವುವು?

ಏರ್‌ಏಶಿಯಾ ಇಂಡಿಯಾ, ಏರ್ ಇಂಡಿಯಾದಲ್ಲಿ ಫ್ಲೈಟ್ ಟಿಕೆಟ್‌ಗಳನ್ನು ಬುಕ್ ಮಾಡುವುದು ಅಥವಾ ತಾಜ್ ಗ್ರೂಪ್ ಪ್ರಾಪರ್ಟಿಗಳಲ್ಲಿ ಹೋಟೆಲ್‌ಗಳನ್ನು ಕಾಯ್ದಿರಿಸುವುದು, ಬಿಗ್ ಬಾಸ್ಕೆಟ್ ನಿಂದ ದಿನಸಿ ವಸ್ತುಗಳನ್ನು ಆರ್ಡರ್ ಮಾಡುವುದು, 1mg ಯಿಂದ ಔಷಧಿಗಳು ಅಥವಾ ವೆಸ್ಟ್‌ಸೈಡ್‌ ನಿಂದ ಎಲೆಕ್ಟ್ರಾನಿಕ್ಸ್ ಮತ್ತು ವೆಸ್ಟ್‌ಸೈಡ್‌ನಿಂದ ಉಡುಪು ಗಳನ್ನು ಖರೀದಿಸುವಂತಹ ವಿವಿಧ ಟಾಟಾ ಗ್ರೂಪ್ ಡಿಜಿಟಲ್ ಸೇವೆಗಳು ಟಾಟಾ ನ್ಯೂ ಅಪ್ಲಿಕೇಶನ್ ಮೂಲಕ ಸಾಧ್ಯವಾಗುತ್ತದೆ. ಕಂಪನಿಯು ತನ್ನ ಬಳಕೆದಾರರಿಗೆ ನ್ಯೂ (Neu) ಕಾಯಿನ್‌ಗಳೊಂದಿಗೆ ಬಹುಮಾನ ನೀಡುತ್ತದೆ, ಅದು ಅಪ್ಲಿಕೇಶನ್ ಮೂಲಕ ಒದಗಿಸಲಾದ ಸೇವೆಗಳಲ್ಲಿ ರಿಡೀಮ್ ಮಾಡಬಹುದಾಗಿದೆ.

ಏ.7ರಂದು ಟಾಟಾ ನ್ಯೂ ಆಪ್‌ ಲಾಂಚ್‌; ಅಮೆಜಾನ್, ಪೇಟಿಎಮ್‌ಗೆ ಶುರುವಾಗಿದೆ ನಡುಕ!

ಯುಪಿಐ ಸೇವೆ ಸಹ ಲಭ್ಯ ಇರಲಿದೆ
ಇದಲ್ಲದೆ, ಟಾಟಾ ನ್ಯೂ ಆಪ್‌ನಲ್ಲಿ ಬಳಕೆದಾರರಿಗೆ ಯಾವುದೇ ಸ್ಥಳೀಯ ಅಂಗಡಿ ಅಥವಾ ಮಾಲ್‌ನಲ್ಲಿ ಕ್ಯೂಆರ್ ಕೋಡ್ ವ್ಯವಸ್ಥೆಯ ಮೂಲಕ ಪಾವತಿಗಳನ್ನು ಮಾಡಲು ಟಾಟಾ ಪೇ ಯುಪಿಐ ಮೂಲಕ ನೀಡುವ ಯುಪಿಐ ಪಾವತಿ ಆಯ್ಕೆಯನ್ನು ಬಳಸಿಕೊಂಡು ಅನುಮತಿಸುತ್ತದೆ. ಇದರ ಜೊತೆಗೆ ಟಾಟಾ ನ್ಯೂಯು ಬಳಕೆದಾರರಿಗೆ ತಮ್ಮ ವಿದ್ಯುತ್ ಬಿಲ್‌ ಗಳನ್ನು ಪಾವತಿಸಲು, ಮೊಬೈಲ್ ಫೋನ್‌ಗಳನ್ನು ರೀಚಾರ್ಜ್ ಮಾಡಲು, ಡಿಟಿಎಚ್ ಮತ್ತು ಸ್ಥಿರ ಇಂಟರ್ನೆಟ್ ಸೇವೆಯನ್ನು ಸಹ ಅನುಮತಿಸುತ್ತದೆ. ಹೆಚ್ಚುವರಿಯಾಗಿ, ಬಳಕೆದಾರರು ತಮ್ಮ ಖರ್ಚಿನ ಮೇಲೆ ನ್ಯೂ- Neu ಕಾಯಿನ್‌ಗಳೊಂದಿಗೆ ಬಹುಮಾನ ವನ್ನು ಪಡೆಯುತ್ತಾರೆ ಎಂದು ಟಾಟಾ ಹೇಳಿದೆ. ಅಪ್ಲಿಕೇಶನ್ ಮೂಲಕ ಒದಗಿಸುವ ಸೇವೆಗಳಲ್ಲಿ ರಿಡೀಮ್ ಮಾಡಬಹುದಾಗಿದೆ.

ಅಮೆಜಾನ್, ಪೇಟಿಎಮ್, ರಿಲಯನ್ಸ್‌ ಜಿಯೋ ನಂತಹ ಹಲವಾರು ಇತರ ಇಂಟರ್ನೆಟ್ ಸಂಸ್ಥೆ ಗಳು ತಮ್ಮ ಸೂಪರ್ ಅಪ್ಲಿಕೇಶನ್‌ಗಳ ಆವೃತ್ತಿಯನ್ನು ನಿರ್ಮಿಸಿವೆ. ಅಲ್ಲಿ ಅವರು ಪಾವತಿಗಳು, ಕಂಟೆಂಟ್ ಸ್ಟ್ರೀಮಿಂಗ್, ಶಾಪಿಂಗ್, ಪ್ರಯಾಣ ಬುಕಿಂಗ್, ದಿನಸಿ ಇತ್ಯಾದಿಗಳಂತಹ ಸೇವೆಗಳ ವಿಶಾಲ ಆಯ್ಕೆ ಒದಗಿಸುತ್ತವೆ. ಇನ್ನು ಈ ಟಾಟಾ ನ್ಯೂ ಆಪ್‌ ಅಮೆಜಾನ್, ಪೇಟಿಎಮ್, ರಿಲಯನ್ಸ್‌ ಜಿಯೋ ನಂತಹ ಸೂಪರ್ ಅಪ್ಲಿಕೇಶನ್‌ ಗಳೊಂದಿಗೆ ನೇರವಾಗಿ ಸ್ಪರ್ಧಿಸಲಿದೆ.

Best Mobiles in India

Read more about:
English summary
Tata Neu App to Launch on April 7: Never seen before Points redemption for users.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X