HD ಸೆಟ್‌ಟಾಪ್‌ ಬಾಕ್ಸ್‌: ಟಾಟಾಸ್ಕೈ, ಏರ್‌ಟೆಲ್‌, ಡಿಶ್‌ಟಿವಿ ಯಾವುದು ಬೆಸ್ಟ್‌?

|

ದೇಶದ ಡಿಟಿಎಚ್ ವಲಯದಲ್ಲಿ ಕಳೆದ ವರ್ಷ ಅನೇಕ ಮಹತ್ತರ ಬದಲಾವಣೆಗಳು ನಡೆದಿವೆ. ಚಾನೆಲ್‌ಗಳ ದರ ಪಟ್ಟಿಯಲ್ಲಿಯೂ ಏರಿಳಿತಗಳು ಕಂಡಿದ್ದು, ಸೆಟ್‌ಟಾಪ್ ಬಾಕ್ಸ್‌ ದರಗಳು ಇಳಿಕೆ ಆಗಿವೆ. ಸದ್ಯ ಹೆಚ್‌ಡಿ ಸೆಟ್‌ಟಾಪ್‌ ಬಾಕ್ಸ್‌ಗಳಿಗೆ ಹೆಚ್ಚಿನ ಬೇಡಿಕೆಯಿದ್ದು, ಟಾಟಾಸ್ಕೈ ಮತ್ತು ಏರ್‌ಟೆಲ್ ಲೀಡ್‌ನಲ್ಲಿ ಕಾಣಿಸಿಕೊಂಡಿವೆ. ಹಾಗೆಯೇ ಡಿಶ್‌ ಟಿವಿ ಡಿಟಿಎಚ್, ಸನ್‌ ಡೈರೆಕ್ಟ್‌ ಸಹ ಮಾರುಕಟ್ಟೆಯಲ್ಲಿ ಪೈಪೋಟಿ ನಡೆಸುತ್ತಿವೆ.

ಸ್ಮಾರ್ಟ್‌ಟಿವಿಗಳ ಬಳಕೆ

ಪ್ರಸ್ತುತ ಸ್ಮಾರ್ಟ್‌ಟಿವಿಗಳ ಬಳಕೆ ಹೆಚ್ಚಾಗಿದ್ದು, ಈ ನಿಟ್ಟಿನಲ್ಲಿ ಬಹುತೇಕ ಗ್ರಾಹಕರು ಹೆಚ್‌ಡಿ ಸೆಟ್‌ಟಾಪ್‌ ಬಾಕ್ಸ್‌ಗಳತ್ತ ಮುಖ ಮಾಡುತ್ತಾರೆ. ಡಿಟಿಎಚ್ ಪೂರೈಕೆದಾರ ಸಂಸ್ಥೆಗಳ ನಡುವೆಯು ಪೈಪೋಟಿ ಅಧಿಕವಾಗಿದ್ದು, ಬೆಲೆ ಇಳಿಕೆ ಮಾಡಿ ಗ್ರಾಹಕರನ್ನು ಸೆಳೆಯುತ್ತಿವೆ. ಅವುಗಳಲ್ಲಿ ಅತಾಈ ಮುಂಚೂಣಿಯಲ್ಲಿ ಕಾಣಿಸಿಕೊಂಡಿರುವ ಸಂಸ್ಥೆಯೆಂದರೇ ಟಾಟಾಸ್ಕೈ ಆಗಿದೆ. ಅದೇ ರೀತಿ ಏರ್‌ಟೆಲ್ ಸಹ 1500ರೂ.ಒಳಗೆ ಹೆಚ್‌ಡಿ ಸೆಟ್‌ಟಾಪ್‌ ನೀಡುತ್ತದೆ. ಹಾಗಾದರೆ ಇವುಗಳಲ್ಲಿ ಯಾವುದು ಬೆಸ್ಟ್‌ ಎನ್ನುವ ಗೊಂದಲ ಗ್ರಾಹಕರಲ್ಲಿ ಇರುತ್ತದೆ. ಅದಕ್ಕೆ ಉತ್ತರ ಈ ಲೇಖನದಲ್ಲಿದೆ. ಮುಂದೆ ಓದಿರಿ.

ಟಾಟಾಸ್ಕೈ ಹೆಚ್‌ಡಿ ಕನೆಕ್ಷನ್-1399ರೂ

ಟಾಟಾಸ್ಕೈ ಹೆಚ್‌ಡಿ ಕನೆಕ್ಷನ್-1399ರೂ

ಡಿಟಿಎಚ್ ವಲಯದಲ್ಲಿಯೇ ಅಗ್ರಸ್ಥಾನದಲ್ಲಿರುವ ಟಾಟಾಸ್ಕೈ. ಇತ್ತೀಚಿಗೆ ತನ್ನ ಹೆಚ್‌ಡಿ ಸೆಟ್‌ಟಾಪ್‌ ಬಾಕ್ಸ್ ಬೆಲೆಯನ್ನು ಇಳಿಕೆ ಮಾಡಿದ್ದು, ಇದೀಗ ಕೇವಲ 1399ರೂ.ಗಳಿಗೆ ಲಭ್ಯವಾಗಲಿದೆ. ಹಾಗೆಯೇ ಟಾಟಾಸ್ಕೈ ಎಸ್‌ಡಿ ಸೆಟ್‌ಟಾಪ್‌ ಬಾಕ್ಸ್ ದರವು ಕಡಮೆ ಇದೆ. ಹೆಚ್‌ಡಿ ಸೆಟ್‌ಟಾಪ ಬಾಕ್ಸ್‌ ಇನ್‌ಸ್ಟಾಲೇಶನ್ ಜೊತೆಗೆ ಯಾವುದೇ ಚಾನೆಲ್ ಪ್ಯಾಕ್‌ಗಳ ಕೊಡುಗೆ ಲಭ್ಯವಾಗುವುದಿಲ್ಲ. ಆದರೆ ಪ್ರಾದೇಶಿಕ ಭಾಷೆಗಳ ಚಾನೆಲ್ ಪ್ಯಾಕ್‌ಗಳು ಆಕರ್ಷಕ ಬೆಲೆಯಲ್ಲಿವೆ.

ಡಿಶ್‌ಟಿವಿ ಹೆಚ್‌ಡಿ ಕನೆಕ್ಷನ್-1590ರೂ

ಡಿಶ್‌ಟಿವಿ ಹೆಚ್‌ಡಿ ಕನೆಕ್ಷನ್-1590ರೂ

ಡಿಶ್‌ಟಿವಿ ಸಹ ಮಾರುಕಟ್ಟೆಯಲ್ಲಿ ಗುರುತಿಸಿಕೊಂಡಿದ್ದು, ಸಂಸ್ಥೆಯ ಡಿಶ್‌ನೆಕ್ಸ್ಟ್ ಹೆಚ್‌ಡಿ ಸೆಟ್‌ಟಾಪ್‌ ಬಾಕ್ಸ್ ಮಾರುಕಟ್ಟೆಯಲ್ಲಿ ಲಭ್ಯವಿದೆ. ಈ ಸೆಟ್‌ಟಾಪ್ ಬಾಕ್ಸ್ ಬೆಲೆಯು 1590ರೂ. ಆಗಿದ್ದು, ಜೊತೆಗೆ ವಾರೆಂಟಿ ಮತ್ತು ಕೂಪನ್ ಸೌಲಭ್ಯ ಸಿಗಲಿವೆ. ಎರಡು ವಿಧಧ ಹೆಚ್‌ಡಿ ಸೆಟ್‌ಟಾಪ್‌ ಬಾಕ್ಸ್ ವೇರಿಯಂಟ್ ಆಯ್ಕೆ ಹೊಂದಿದ್ದು, ಅವುಗಳು ಕ್ರಮವಾಗಿ ಡಿಟಿಎಚ್‌ ಹೆಚ್‌ಡಿ ಸೆಟ್‌ಟಾಪ್ ಬಾಕ್ಸ್ ಮತ್ತು ಡಿಟಿಎಚ್‌ ಹೆಚ್‌ಡಿ ಆರ್‌ಎಫ್ ಸೆಟ್‌ಟಾಪ್ ಬಾಕ್ಸ್ ಆಗಿವೆ. ಬೆಲೆಗಳು ಕ್ರಮವಾಗಿ 1,699ರೂ ಮತ್ತು 1,799ರೂ ಆಗಿದೆ.

ಏರ್‌ಟೆಲ್ ಹೆಚ್‌ಡಿ ಕನೆಕ್ಷನ್-1500ರೂ

ಏರ್‌ಟೆಲ್ ಹೆಚ್‌ಡಿ ಕನೆಕ್ಷನ್-1500ರೂ

ಜನಪ್ರಿಯ ಏರ್‌ಟೆಲ್ ಕಂಪನಿಯು ಸಹ ಹೆಚ್‌ಡಿ ಸೆಟ್‌ಟಾಪ್‌ ಬಾಕ್ಸ್ ಬೆಲೆಯು 1300ರೂ ಆಗಿದ್ದು, ಆದರೆ ಇನ್‌ಸ್ಟಾಲೇಶನ್ ಸೇರಿ ಒಟ್ಟು 1500ರೂ. ಆಗುತ್ತದೆ. ಹೆಚ್‌ಡಿ ಸೆಟ್‌ಟಾಪ್ ಬಾಕ್ಸ್ ಇನ್‌ಸ್ಟಾಲೇಶನ್ ಜೊತೆಗೆ ಒಂದು ವಾರದ ಉಚಿತ ಚಂದಾದಾರಿಕೆ ಲಭ್ಯವಾಗಲಿದೆ. ಹಾಗೆಯೇ ಏರ್‌ಟೆಲ್ ಎಸ್‌ಡಿ ಸೆಟ್‌ಟಾಪ್ ಬಾಕ್ಸ್ ಇನ್‌ಸ್ಟಾಲೇಶನ್ 1300ರೂ.ಗಳಿಗೆ ಲಭ್ಯವಾಗುತ್ತದೆ.

ಸನ್‌ ಡೈರೆಕ್ಟ್‌ ಹೆಚ್‌ಡಿ ಕನೆಕ್ಷನ್-1999ರೂ

ಸನ್‌ ಡೈರೆಕ್ಟ್‌ ಹೆಚ್‌ಡಿ ಕನೆಕ್ಷನ್-1999ರೂ

ದಕ್ಷಿಣ ಭಾರತದ ರಾಜ್ಯಗಳಲ್ಲಿ ಸನ್‌ ಡೈರೆಕ್ಟ್‌ ಡಿಟಿಎಚ್ ಜನಪ್ರಿಯವಾಗಿದ್ದು, ಈ ಸಂಸ್ಥೆಯ ಹೆಚ್‌ಡಿ ಸೆಟ್‌ಟಾಪ್ ಬಾಕ್ಸ್‌ 1999ರೂ. ಪ್ರೈಸ್‌ಟ್ಯಾಗ್ ಅನ್ನು ಹೊಂದಿದೆ. ಇತರೆ ಡಿಟಿಎಚ್ ಪೂರೈಕೆದಾರ ಸಂಸ್ಥೆಗಳಿಗೆ ಹೋಲಿಸಿದರೇ ಸನ್‌ ಡೈರೆಕ್ಟ್ ಸ್ವಲ್ಪ ದುಬಾರಿಯಾಗಿ ಕಾಣಿಸುತ್ತದೆ.

Best Mobiles in India

English summary
HD DTH connection in India has become a lot more affordable in 2019 and it now starts at just Rs 1,399.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X