ಟಾಟಾಸ್ಕೈನಿಂದ ಜಸ್ಟ್‌ 149ರೂ.ಗೆ ಹೊಸ ಬಿಂಜ್ ಯೋಜನೆ ಬಿಡುಗಡೆ!

|

ಭಾರತದ ಪ್ರಮುಖ ಡೈರೆಕ್ಟ್-ಟು-ಹೋಮ್ (ಡಿಟಿಎಚ್) ಸೇವಾ ಪೂರೈಕೆದಾರ ಟಾಟಾ ಸ್ಕೈ ತನ್ನ ಬಿಂಜ್ ಸೇವೆಗಾಗಿ ಹೊಸ ಆರಂಭಿಕ ಯೋಜನೆಯನ್ನು ಇದೀಗ ಬಿಡುಗಡೆ ಮಾಡಿದೆ. ಹೊಸ ಯೋಜನೆ 149ರೂ.ಗಳ ಪ್ರೈಸ್‌ಟ್ಯಾಗ್‌ ಅನ್ನು ಪಡೆದಿದೆ. ಸ್ಮಾರ್ಟ್‌ಫೋನ್‌ಗಳಿಗಾಗಿ ಟಾಟಾ ಸ್ಕೈ ಬಿಂಜ್ ಆಪ್‌ ಘೋಷಣೆಯೊಂದಿಗೆ ಈ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಈಗ ಬಳಕೆದಾರರು ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಳ್ಳಬಹುದು ಮತ್ತು ಬಿಂಜ್ ಯೋಜನೆಗಳಲ್ಲಿ ಒಂದಕ್ಕೆ ಚಂದಾದಾರರಾಗಬಹುದು.

ಬಳಕೆದಾರರು

ಹೌದು, ಜನಪ್ರಿಯ ಟಾಟಾಸ್ಕೈ ಇದೀಗ ಮೊಬೈಲ್‌ ಬಳಕೆದಾರರಿಗಾಗಿ ಬಿಂಜ್ ಆಪ್‌ ಸೇವೆಗೆ ಎಂಟ್ರಿ ಲೆವೆಲ್‌ ಯೋಜನೆಯನ್ನು ಶುರು ಮಾಡಿದೆ. ಈ ಆಪ್‌ ಇತರೆ ಓಟಿಟಿ ಆಪ್‌ಗಳಂತೆ ಕಾರ್ಯನಿರ್ವಹಿಸಲಿದ್ದು, ಬಳಕೆದಾರರು ಪ್ರಯಾಣದಲ್ಲಿರುವಾಗ ಓವರ್-ದಿ-ಟಾಪ್ (ಒಟಿಟಿ) ವಿಷಯವನ್ನು ವೀಕ್ಷಿಸಬಹುದು. ಇನ್ನು ಟಾಟಾಸ್ಕೈ ಬಿಂಜ್ ಯೋಜನೆಗಳು ಕ್ರಮವಾಗಿ - 149ರೂ, 299ರೂ. ಮತ್ತು 299ರೂ. ಯೋಜನೆಗಳ ಆಯ್ಕೆ ಹೊಂದಿದೆ.

ಬಳಕೆದಾರರಿಗಾಗಿ

ಟಾಟಾ ಸ್ಕೈ ಕಂಪನಿಯು ಪರಿಚಯಿಸಿರುವ 149ರೂ. ಯೋಜನೆಯ ಕೇವಲ ಮೊಬೈಲ್ ಬಳಕೆದಾರರಿಗಾಗಿ ನೀಮಿತವಾಗಿದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೇ ನೀವು ಟಾಟಾ ಸ್ಕೈ ಬಿಂಜ್ + ಸೆಟ್-ಟಾಪ್ ಬಾಕ್ಸ್ (ಎಸ್‌ಟಿಬಿ) ಅಥವಾ ಅಮೆಜಾನ್ ಫೈರ್ ಟಿವಿ ಸ್ಟಿಕ್ ಟಾಟಾ ಸ್ಕೈ ಆವೃತ್ತಿಯನ್ನು ಹೊಂದಿರುವ ಕಂಪನಿಯ ಸಕ್ರಿಯ ಚಂದಾದಾರರಲ್ಲದಿದ್ದರೆ, ಈ ಸೇವೆಯನ್ನು ಆಕ್ಸಸ್ ಮಾಡಲು ಸಾಧ್ಯವಾಗುವುದಿಲ್ಲ.

ವಿಷಯವನ್ನು

ಹೊಸ 149ರೂ. ಯೋಜನೆಯು ಬಳಕೆದಾರರಿಗೆ 3 ಕ್ಕೂ ಹೆಚ್ಚು ಮೊಬೈಲ್ ಸ್ಕ್ರೀನ್‌ಗಳಲ್ಲಿ ಬಿಂಜ್ ಸೇವೆಯಿಂದ ವಿಷಯವನ್ನು ಪ್ರವೇಶಿಸಲು ಅನುವು ಮಾಡಿಕೊಡುತ್ತದೆ. ಇನ್ನು 299ರೂ ಯೋಜನೆಯು ಬಳಕೆದಾರರಿಗೆ ಒಂದು ಟಿವಿ ಸ್ಕ್ರೀನ್ ಅಥವಾ 3 ಮೊಬೈಲ್ ಸ್ಕ್ರೀನ್ಗಳಲ್ಲಿ ವಿಷಯವನ್ನು ವೀಖ್ಷಿಸಲು ಅನುವು ಮಾಡಿಕೊಡುತ್ತದೆ. ಹೋಲಿಕೆ ಮಾಡಿ ನೋಡಿದರೇ ಹೊಸ 149ರೂ. ಯೋಜನೆ ಗಮನ ಸೆಳೆಯುವಂತಿದೆ.

ಅನುವು

ಟಾಟಾಸ್ಕೈ ಬಿಂಜ್ ಯೋಜನೆಗಳ ನಡುವೆ ಹೆಚ್ಚಿನ ವ್ಯತ್ಯಾಸಗಳಿವೆ. 299ರೂ ಯೋಜನೆಯು ಬಳಕೆದಾರರಿಗೆ 10 ಕ್ಕೂ ಹೆಚ್ಚು ವಿವಿಧ ಪ್ಲಾಟ್‌ಫಾರ್ಮ್‌ಗಳಿಂದ ಒಟಿಟಿ ವಿಷಯವನ್ನು ವೀಕ್ಷಿಸಲು ಅನುವು ಮಾಡಿಕೊಡುತ್ತದೆ. ಆದಾಗ್ಯೂ, 149ರೂ ಯೋಜನೆಯೊಂದಿಗೆ, ಬಳಕೆದಾರರು ಕೇವಲ 7 ಪ್ಲಾಟ್‌ಫಾರ್ಮ್‌ಗಳಿಂದ ವಿಷಯವನ್ನು ವೀಕ್ಷಿಸುವುದಕ್ಕೆ ಮಾತ್ರ ಸೀಮಿತವಾಗಿರುತ್ತದೆ. ನೀವು ಹೊಸ ಬಳಕೆದಾರರಾಗಿದ್ದರೆ, ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ನೀವು ಬಿಂಜ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬಹುದು ಮತ್ತು 7 ದಿನಗಳ ಉಚಿತ ಪ್ರಯೋಗ ಸೇವೆ ಪಡೆಯಬಹುದು.

ಒಟಿಟಿ

ಟಾಟಾ ಸ್ಕೈ ಬಿಂಜ್ ಎನ್ನುವುದು ಟಾಟಾ ಸ್ಕೈಯಿಂದ ಒಟಿಟಿ ಕಂಟೆಂಟ್ ಒಟ್ಟುಗೂಡಿಸುವ ಸೇವೆಯಾಗಿದೆ. ಕಂಪನಿಯ ಹೊಸ 149ರೂ. ಯೋಜನೆಯೊಂದಿಗೆ, ಬಳಕೆದಾರರು ಈ ಪ್ಲಾಟ್‌ಫಾರ್ಮ್‌ನಲ್ಲಿ ಜೀ5 ಪ್ರೀಮಿಯಂ, ಸೋನಿ LIV, ವೂಟ್ ಸೆಲೆಕ್ಟ್, ಇರೋಸ್ ನೌ (Eros Now), ವೂಟ್ ಕಿಡ್ಸ್, ಹಂಗಮಾ ಪ್ಲೇ, ಮತ್ತು ShemarooMeನಂತಹ ಓಟಿಟಿ ಸೇವೆಗಳನ್ನು ಉಚಿತ ಚಂದಾದಾರಿಕೆಯನ್ನು ಪಡೆಯುತ್ತಾರೆ.

ಟಾಟಾಸ್ಕೈ ಬಿಂಜ್ ಪ್ಲಸ್‌ ಸೆಟ್‌ಟಾಪ್‌ ಬಾಕ್ಸ್ ಸೌಲಭ್ಯಗಳು

ಟಾಟಾಸ್ಕೈ ಬಿಂಜ್ ಪ್ಲಸ್‌ ಸೆಟ್‌ಟಾಪ್‌ ಬಾಕ್ಸ್ ಸೌಲಭ್ಯಗಳು

ಟಾಟಾಸ್ಕೈ ಬಿಂಜ್ ಪ್ಲಸ್‌ ಸೆಟ್‌ಟಾಪ್‌ ಬಾಕ್ಸ್‌, ಸಾಮಾನ್ಯ ಡಿಟಿಎಚ್ ಸೆಟ್‌ಟಾಪ್‌ಗಳಿಗಿಂತ ಭಿನ್ನವಾಗಿದೆ. ಬಿಂಜ್ ಪ್ಲಸ್‌ ಸೆಟ್‌ಟಾಪ್‌ ಬಾಕ್ಸ್‌ನಲ್ಲಿ ಇಂಟರ್ನೆಟ್ ಆಧಾರಿತ ಸೇವೆಗಳು ದೊರೆಯುತ್ತವೆ. ಗೂಗಲ್ ಪ್ಲೇ ಸ್ಟೋರ್ ಸೌಲಭ್ಯ ಇರುತ್ತದೆ ಹಾಗೂ ಅಸಿಸ್ಟಂಟ್ ಅಸಿಸ್ಟಂಟ್ ಆಧಾರಿತ ವಾಯಿಸ್ ಸರ್ಚ್ ಆಯ್ಕೆಯು ಒಳಗೊಂಡಿರುತ್ತದೆ. ಹೀಗಾಗಿ ಸೆಟ್‌ಟಾಪ್‌ ಬಾಕ್ಸ್‌ ಅನ್ನು ವಾಯಿಸ್‌ ಮೂಲಕವೇ ನಿಯಂತ್ರಣ ಮಾಡಬಹುದಾಗಿದೆ. ಟಾಟಾಸ್ಕೈ ಬಿಂಜ್ ಪ್ಲಸ್‌ ಸೆಟ್‌ಟಾಪ್‌ ಬಾಕ್ಸ್‌ ವಿಡಿಯೊ ಸ್ಟ್ರೀಮಿಂಗ್ ಒದಗಿಸುವ OTT ಆಪ್ಸ್‌ಗಳ ಸಪೋರ್ಟ್‌ ಒಳಗೊಂಡಿದೆ. ಹಾಟ್‌ಸ್ಟಾರ್, ಸನ್‌ನೆಕ್ಸ್ಟ್, ಎರೊಸ್ ನವ್, ಜೀ5 ಮತ್ತು ಹಂಗಾಮಾ ಪ್ಲಸ್‌ ಅಪ್ಲಿಕೇಶನ್ ಗಳ ಸೌಲಭ್ಯ ಇದೆ. ಈ ಆಪ್ಸ್‌ ಅತ್ಯುತ್ತಮ ವಿಡಿಯೊ ಕಂಟೆಂಟ್ ಅಪ್ಲಿಕೇಶನ್‌ಗಳಾಗಿವೆ. ಕೆಲವು ಲೈವ್ ವಿಡಿಯೊ ವೀಕ್ಷಣೆಗೂ ಅನುಕೂಲ ಒದಗಿಸಲಿವೆ.

Best Mobiles in India

English summary
Tata Sky Binge Gets a New Rs 149 Mobile Only Plan.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X