ಮಿಸ್‌ ಕಾಲ್‌ ಮಾಡಿ ಉಚಿತ 'ಟಾಟಾಸ್ಕೈ ಫೈರ್‌ ಟಿವಿ ಸ್ಟಿಕ್' ಸೇವೆ ಪಡೆಯಿರಿ!

|

ಪ್ರಸ್ತುತ ಟೆಲಿವಿಷನ್ ವೀಕ್ಷಣೆಯಲ್ಲಿ ಬಹಳಷ್ಟು ಬದಲಾಣೆಯನ್ನು ಕಾಣುತ್ತಿದ್ದೆವೆ. ಕೇಬಲ್‌ ಕನೆಕ್ಷನ್‌ನಿಂದ ಟಿವಿ ವೀಕ್ಷಿಸುವ ಪರಂಪರೆ ಬಹುತೇಕ ಮಾಯವಾಗಿದ್ದು, ಈಗ ಇಂಟರ್ನೆಟ್‌ ಆಧಾರಿತ ಟಿವಿ ವೀಕ್ಷಣೆ ಹೆಚ್ಚು ಜನಪ್ರಿಯಗೊಳ್ಳುತ್ತಿವೆ. ಅದರಲ್ಲೂ ಇದೀಗ ಆಂಡ್ರಾಯ್ಡ್‌ ಟಿವಿಗಳ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿದ್ದು, ಜೊತೆಗೆ ವಾಯರ್‌ಲೆಸ್‌ ಕನೆಕ್ಟಿವಿಟಿಯ 'ಫೈರ್‌ ಟಿವಿ ಸ್ಟಿಕ್‌' ಬಳಕೆಯು ಸಹ ಏರುಗತಿಯತ್ತ ಸಾಗಿದೆ. ಈ ದಿಸೆಯಲ್ಲಿ ಟಾಟಾಸ್ಕೈ ಸಂಸ್ಥೆಯು ಗ್ರಾಹಕರಿಗೆ ಗುಡ್‌ನ್ಯೂಸ್‌ ನೀಡಿದೆ.

ಮಿಸ್‌ ಕಾಲ್‌ ಮಾಡಿ ಉಚಿತ 'ಟಾಟಾಸ್ಕೈ ಫೈರ್‌ ಟಿವಿ ಸ್ಟಿಕ್' ಸೇವೆ ಪಡೆಯಿರಿ!

ಹೌದು, ಡೈರೆಕ್ಟ್‌ ಟು ಹೋಮ್ ಸೇವೆಯ ಜನಪ್ರಿಯ ಟಾಟಾಸ್ಕೈ ಕಂಪನಿಯು ಇತ್ತೀಚಿಗೆ (Binge) ಬಿಂಜ್ ಸೇವೆಯನ್ನು ಆರಂಭಿಸಿದ್ದು, ಈ ಸೇವೆಯಲ್ಲಿ ಹೊಸದಾಗಿ OTT-ಪ್ಲಾಟ್‌ಫಾರ್ಮ್(Over the top media servies) ಮತ್ತು ಲೈವ್‌ ಟಿವಿ ಸೇವೆಯನ್ನು ಒಂದೇ ಪ್ಯಾಕೆಜ್‌ನಲ್ಲಿ ಪರಿಚಯಿಸಲಿದೆ. ಈ ಹೊಸ ಪ್ಲ್ಯಾನಿನಲ್ಲಿ ಟಾಟಾಸ್ಕೈ ಬಳಕೆದಾರರಿಗೆ ಒಂದು ತಿಂಗಳು ಉಚಿತ 'ಅಮೆಜಾನ್ ಫೈರ್‌ ಟಿವಿ ಸ್ಟಿಕ್' (ಟಾಟಾಸ್ಕೈ ಎಡಿಷನ್) ದೊರೆಯಲಿದೆ.

ಮಿಸ್‌ ಕಾಲ್‌ ಮಾಡಿ ಉಚಿತ 'ಟಾಟಾಸ್ಕೈ ಫೈರ್‌ ಟಿವಿ ಸ್ಟಿಕ್' ಸೇವೆ ಪಡೆಯಿರಿ!

ಒಂದು ಮಿಸ್‌ಕಾಲ್‌ ಮಾಡಿದರೇ ಸಾಕು ಟಾಟಾಸ್ಕೈ ಬಿಂಜ್ ಆಫರ್‌ ಮನೆ ಬಾಗಿಲಿಗೆ ಬರಲಿದೆ. ಈ ವೇಳೆ ಗ್ರಾಹಕರಿಗೆ ಒಂದು ತಿಂಗಳು ಉಚಿತ ಎರಿಸ್‌ ನವ್, ಹಾಟ್‌ಸ್ಟಾರ್‌, ಜೀ5, ಹಂಗಾಮಾ ಪ್ಲೇ, ಸನ್‌ನೆಕ್ಸ್ಟ್ ಸೇರಿದಂತೆ ಮೂರು ತಿಂಗಳು ಅಮೆಜಾನ್ ಪ್ರೈಮ್‌ ವಿಡಿಯೊ ಸೇವೆಗಳು ಲಭ್ಯವಾಗಲಿವೆ. ಹಾಗಾದರೇ ಟಾಟಾಸ್ಕೈ ಈ ಹೊಸ ಸೇವೆಯು ಮತ್ತಿತರ ಯಾವೆಲ್ಲಾ ಪ್ರಯೋಜನಗಳನ್ನು ಒಳಗೊಂಡಿದೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಟಾಟಾಸ್ಕೈ ಬಿಂಜ್ ಆಫರ್

ಟಾಟಾಸ್ಕೈ ಬಿಂಜ್ ಆಫರ್

D2H ಸೇವೆಯಿಂದ ಜನಪ್ರಿಯತೆ ಗಳಿಸಿರುವ ಟಾಟಾಸ್ಕೈ ಕಂಪನಿಯು ಈಗ ಆನ್‌ಲೈನ್‌ ಟಿವಿ ಸ್ಟ್ರಿಮಿಂಗ್ ಸೇವೆಯಲ್ಲೂ ಮಿಂಚಲೂ ಮುಂದಾಗಿದೆ. ಅದಕ್ಕಾಗಿ ಟಾಟಾಸ್ಕೈ ಬಿಂಜ್ ಆಫರ್‌ ಪರಿಚಯಿಸಿದ್ದು, ಕಂಪನಿಯು ಈ ಆಫರ್‌ನಲ್ಲಿ ಗ್ರಾಹಕರಿಗೆ ಟಾಟಾಸ್ಕೈ ಎಡಿಷನ್ ಇರುವ ಅಮೆಜಾನ್‌ ಫೈರ್‌ ಸ್ಟಿಕ್ ಒಂದು ತಿಂಗಳು ಉಚಿತವಾಗಿ ನೀಡಲು ನಿರ್ಧರಿಸಿದೆ.

ಸೇವೆ ಪಡೆಯುವುದು ಹೇಗೆ

ಸೇವೆ ಪಡೆಯುವುದು ಹೇಗೆ

ಟಾಟಾಸ್ಕೈನ ಬಿಂಜ್ ಆಫರ್‌(Tata Sky Binge) ಪಡೆಯಲು ಗ್ರಾಹಕರು ಈ ನಂಬರ್‌ಗೆ ಮಿಸ್‌ ಕಾಲ್‌ ಮಾಡಿಬೇಕು '8460984609' ಅಥವಾ ಕಸ್ಟಮರ್‌ ಕೇರ್ ನಂಬರ್‌ 1800-208-6633 ಗೆ ಕರೆ ಮಾಡಿ ಆಫರ್‌ಗೆ ಅಪ್ಲೈ ಮಾಡಬೇಕು. 24ಗಂಟೆಗಳಲ್ಲಿ ಕಂಪನಿಯ ಪ್ರತಿನಿಧಿ ಗ್ರಾಹಕರು ನೀಡಿದ ವಿಳಾಸಕ್ಕೆ ಟಾಟಾಸ್ಕೈ ಎಡಿಷನ್ ಇರುವ ಫೈರ್‌ ಟಿವಿ ಸ್ಟಿಕ್ ತಂದು ಉಚಿತವಾಗಿ ನೀಡುವರು.

ಉಚಿತ ಸೇವೆ ಲಭ್ಯ

ಉಚಿತ ಸೇವೆ ಲಭ್ಯ

ಟಾಟಾಸ್ಕೈ ಎಡಿಷನ್ ಇರುವ ಅಮೆಜಾನ್‌ ಫೈರ್‌ಟಿವಿ ಸ್ಟಿಕ್ ಜೊತೆಗೆ ಗ್ರಾಹಕರಿಗೆ ಒಂದು ತಿಂಗಳು ಉಚಿತ ಎರಿಸ್‌ ನವ್ (Eros Now), ಹಾಟ್‌ಸ್ಟಾರ್‌, ಜೀ5, ಹಂಗಾಮಾ ಪ್ಲೇ, ಸನ್‌ನೆಕ್ಸ್ಟ್ ವಿಡಿಯೊ ಸ್ಟ್ರಿಮಿಂಗ್ ಸೇವೆಗಳ ಪ್ರಯೋಜನಗಳು ದೊರೆಯಲಿವೆ. ಸೇವೆ ಮುಂದುವರಿಸಲೂ ಆ ನಂತರ 249ರೂ.ಗಳ ರೀಚಾರ್ಜ್‌ ಮಾಡಬೇಕು. ಹಾಗೆಯೇ ಮೂರು ತಿಂಗಳು ಉಚಿತ ಅಮೆಜಾನ್ ಪ್ರೈಮ್‌ ವಿಡಿಯೊ ಚಂದಾದಾರಿಕೆ ಸಹ ಲಭ್ಯವಾಗಲಿದೆ.

ಲೈವ್‌ ಟಿವಿ ಚಾನಲ್‌ಗಳು

ಲೈವ್‌ ಟಿವಿ ಚಾನಲ್‌ಗಳು

ಟಾಟಾಸ್ಕೈನ ಬಿಂಜ್ ಆಫರ್‌ ಆಪ್‌ನಲ್ಲಿ ಆನ್‌ಲೈನ್‌ ಜನಪ್ರಿಯ ವಿಡಿಯೊ ಸ್ಟ್ರಿಮಿಂಗ್ ಸೇವೆಗಳನ್ನು ನೋಡಬಹುದಾಗಿದೆ. ಹಾಗೆಯೇ ಇದರೊಂದಿಗೆ ಡಿಟುಎಚ್‌ ಸೇವೆಯಲ್ಲಿ ಲಭ್ಯವಾಗುವ ಲೈವ್‌ ಟಿವಿ ಚಾನಲ್‌ಗಳನ್ನು ಸಹ ಗ್ರಾಹಕರು ವೀಕ್ಷಣೆ ಮಾಡಬಹುದಾಗಿದೆ. ಆರಂಭದ ಉಚಿತ ಸೇವೆ ಮುಗಿದ ಬಳಿಕ ಗ್ರಾಹಕರು ರೀಚಾರ್ಜ್ ಮಾಡಿಕೊಂಡು ಸೇವೆ ಮುಂದುವರೆಸಬಹುದು.

ಓದಿರಿ : ಏರ್‌ಟೆಲ್‌ನ 399ರೂ. ರೀಚಾರ್ಜ್‌ ಪ್ಲ್ಯಾನ್‌ನಲ್ಲಿ ಹೆಚ್ಚುವರಿ 33GB ಉಚಿತ ಡೇಟಾ! ಓದಿರಿ : ಏರ್‌ಟೆಲ್‌ನ 399ರೂ. ರೀಚಾರ್ಜ್‌ ಪ್ಲ್ಯಾನ್‌ನಲ್ಲಿ ಹೆಚ್ಚುವರಿ 33GB ಉಚಿತ ಡೇಟಾ!

Best Mobiles in India

English summary
Tata Sky Binge offers the best of OTT platforms and live TV in one single package. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X