Home
ಸುದ್ದಿಜಾಲ

ಟಾಟಾಸ್ಕೈ ಬಿಂಜ್ ಪ್ಲಸ್‌ ಸೆಟ್‌ಟಾಪ್‌ ಬಾಕ್ಸ್‌ ಖರೀದಿ ಮೇಲೆ ಬಿಗ್ ಕ್ಯಾಶ್‌ಬ್ಯಾಕ್!

ಡಿಟಿಎಚ್ ವಲಯವು ಇದೀಗ ಸಾಕಷ್ಟು ಬದಲಾವಣೆಗಳು ನಡೆಯುತ್ತಿದ್ದು, ಪ್ರಮುಖ ಡಿಟಿಎಚ್ ಸೇವಾದಾರರರು ಹೊಸ ಸೌಲಭ್ಯಗಳನ್ನು ಪರಿಚಯಿಸುತ್ತಿದ್ದಾರೆ. ಆ ಪೈಕಿ ಟಾಟಾಸ್ಕೈ ಸಂಸ್ಥೆಯು ಮುಂಚೂಣಿಯಲ್ಲಿ ಕಾಣಿಸಿಕೊಂಡಿದ್ದು, ಹೊಸ ನಮೂನೆಯ ಅಪ್‌ಡೇಟ್ ಆವೃತ್ತಿಯ ಡಿಟಿಎಚ್ ಸೆಟ್‌ಟಾಪ್ ಬಾಕ್ಸ್‌ಗಳನ್ನು ಬಿಡುಗಡೆ ಮಾಡಿದೆ. ಆ ಲಿಸ್ಟಿಗೆ ಟಾಟಾಸ್ಕೈ ಬಿಂಜ್ ಪ್ಲಸ್‌ ಸೆಟ್‌ಟಾಪ್‌ ಬಾಕ್ಸ್ ಮುಂದುವರಿದ ಸೌಲಭ್ಯಗಳನ್ನು ಒಳಗೊಂಡಿದೆ.

ಟಾಟಾಸ್ಕೈ ಸಂಸ್ಥೆ

ಟಾಟಾಸ್ಕೈ ಸಂಸ್ಥೆಯು ಇತ್ತೀಚಿಗೆ ಲಾಂಚ್ ಮಾಡಿರುವ ಟಾಟಾಸ್ಕೈ ಬಿಂಜ್ ಪ್ಲಸ್‌ ಸೆಟ್‌ಟಾಪ್‌ನ ಖರೀದಿಯ ಮೇಲೆ ಇದೀಗ 1000ರೂ ಕ್ಯಾಶ್‌ಬ್ಯಾಕ್ ಘೋಷಿಸಿದೆ. ಈ ಸೌಲಭ್ಯವು ಈಗಾಗಲೇ ಟಾಟಾಸ್ಕೈ ಸೆಟ್‌ಟಾಪ್‌ ಬಾಕ್ಸ್‌ ಬಳಕೆ ಮಾಡುತ್ತಿರುವ ಗ್ರಾಹಕರಿಗೆ ಲಭ್ಯವಾಗಲಿದೆ. ಸೆಟ್‌ಟಾಪ್‌ ಬಾಕ್ಸ್‌ ಇನ್‌ಸ್ಟಾಲೇಶನ್ ಆ ದ 48 ಗಂಟೆಯೊಳಗೆ 1000ರೂ. ಕ್ಯಾಶ್‌ಬ್ಯಾಕ್ ಲಭ್ಯವಾಗಲಿದೆ. ಇನ್ನು ಹೊಸ ಗ್ರಾಹಕರಿಗೆ 5,999ರೂ. ಪ್ರೈಸ್‌ಟ್ಯಾಗ್‌ನಲ್ಲಿ ದೊರೆಯಲಿದೆ.

ಟಾಟಾಸ್ಕೈ ಬಿಂಜ್ ಪ್ಲಸ್‌ ಸೌಲಭ್ಯಗಳು

ಟಾಟಾಸ್ಕೈ ಬಿಂಜ್ ಪ್ಲಸ್‌ ಸೌಲಭ್ಯಗಳು

ಟಾಟಾಸ್ಕೈ ಬಿಂಜ್ ಪ್ಲಸ್‌ ಸೆಟ್‌ಟಾಪ್‌ ಬಾಕ್ಸ್‌, ಸಾಮಾನ್ಯ ಡಿಟಿಎಚ್ ಸೆಟ್‌ಟಾಪ್‌ಗಳಿಗಿಂತ ಭಿನ್ನವಾಗಿದೆ. ಬಿಂಜ್ ಪ್ಲಸ್‌ ಸೆಟ್‌ಟಾಪ್‌ ಬಾಕ್ಸ್‌ನಲ್ಲಿ ಇಂಟರ್ನೆಟ್ ಆಧಾರಿತ ಸೇವೆಗಳು ದೊರೆಯುತ್ತವೆ. ಗೂಗಲ್ ಪ್ಲೇ ಸ್ಟೋರ್ ಸೌಲಭ್ಯ ಇರುತ್ತದೆ ಹಾಗೂ ಅಸಿಸ್ಟಂಟ್ ಅಸಿಸ್ಟಂಟ್ ಆಧಾರಿತ ವಾಯಿಸ್ ಸರ್ಚ್ ಆಯ್ಕೆಯು ಒಳಗೊಂಡಿರುತ್ತದೆ. ಹೀಗಾಗಿ ಸೆಟ್‌ಟಾಪ್‌ ಬಾಕ್ಸ್‌ ಅನ್ನು ವಾಯಿಸ್‌ ಮೂಲಕವೇ ನಿಯಂತ್ರಣ ಮಾಡಬಹುದಾಗಿದೆ.

OTT ಆಪ್ಸ್‌ ಸೌಲಭ್ಯ

OTT ಆಪ್ಸ್‌ ಸೌಲಭ್ಯ

ಟಾಟಾಸ್ಕೈ ಬಿಂಜ್ ಪ್ಲಸ್‌ ಸೆಟ್‌ಟಾಪ್‌ ಬಾಕ್ಸ್‌ ವಿಡಿಯೊ ಸ್ಟ್ರೀಮಿಂಗ್ ಒದಗಿಸುವ OTT ಆಪ್ಸ್‌ಗಳ ಸಪೋರ್ಟ್‌ ಒಳಗೊಂಡಿದೆ. ಹಾಟ್‌ಸ್ಟಾರ್, ಸನ್‌ನೆಕ್ಸ್ಟ್, ಎರೊಸ್ ನವ್, ಜೀ5 ಮತ್ತು ಹಂಗಾಮಾ ಪ್ಲಸ್‌ ಅಪ್ಲಿಕೇಶನ್ ಗಳ ಸೌಲಭ್ಯ ಇದೆ. ಈ ಆಪ್ಸ್‌ ಅತ್ಯುತ್ತಮ ವಿಡಿಯೊ ಕಂಟೆಂಟ್ ಅಪ್ಲಿಕೇಶನ್‌ಗಳಾಗಿವೆ. ಕೆಲವು ಲೈವ್ ವಿಡಿಯೊ ವೀಕ್ಷಣೆಗೂ ಅನುಕೂಲ ಒದಗಿಸಲಿವೆ.

ಇತರೆ ಸೌಲಭ್ಯಗಳು

ಇತರೆ ಸೌಲಭ್ಯಗಳು

ಟಾಟಾಸ್ಕೈ ಬಿಂಜ್ ಪ್ಲಸ್‌ ಸೆಟ್‌ಟಾಪ್‌ ಬಾಕ್ಸ್‌ ಸುಮಾರು 5000 ಅಪ್ಲಿಕೇಶನ್ ಹಾಗೂ ಗೇಮ್ಸ್‌ಗಳು ಗೂಗಲ್ ಆಪ್‌ನಲ್ಲಿ ಲಭ್ಯವಾಗಲಿವೆ. ಇನ್ನು ಈ ಸೆಟ್‌ಟಾಪ್‌ ಬಾಕ್ಸ್‌ 2GB RAM ಮತ್ತು 8GB ಸ್ಟೋರೇಜ್ ಸ್ಥಳಾವಕಾಶವನ್ನು ಪಡೆದಿದೆ. ಅಪ್ಲಿಕೇಶನ್ ಡೌನ್‌ಲೋಡ್‌ ಸಹ ಮಾಡಿಕೊಳ್ಳಬಹುದಾಗಿದೆ.

Best Mobiles in India

English summary
Tata Sky Binge+ set-top box will be available at an effective price of Rs. 4,999, as the DTH operator is said to be offering a Rs. 1,000 cashback to its existing customers.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+