Home
ಸುದ್ದಿಜಾಲ

ಟಾಟಾಸ್ಕೈ ಬಿಂಜ್‌ ಪ್ಲಸ್‌ ಸೆಟ್‌ಅಪ್‌ ಬಾಕ್ಸ್‌ ಬೆಲೆಯಲ್ಲಿ ಇಳಿಕೆ!

ಡಿಟಿಎಚ್‌ ವಲಯದಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿರುವ ಟಾಟಾಸ್ಕೈ ಸಂಸ್ಥೆಯು ಭಿನ್ನ ಶ್ರೇಣಿಯಲ್ಲಿ ಸೇವೆಗಳನ್ನು ಪರಿಚಯಿಸಿದೆ. ಅವುಗಳಲ್ಲಿ ಬಿಂಜ್ ಪ್ಲಸ್‌ ಸೆಟ್‌ಟಾಪ್‌ ಡಿವೈಸ್‌ ಹೆಚ್ಚು ಆಕರ್ಷಕ ಅನಿಸಿದ್ದು, ಇಂಟರ್ನೆಟ್ ಆಧಾರಿತ ಸೇವೆಗಳನ್ನು ಒಳಗೊಂಡಿದೆ. ಇದೀಗ ಟಾಟಾಸ್ಕೈ ತನ್ನ ಬಿಂಜ್ ಪ್ಲಸ್‌ ಸೆಟ್‌ಅಪ್‌ ಬಾಕ್ಸ್‌ ದರದಲ್ಲಿ ಭರ್ಜರಿ ಬೆಲೆ ಇಳಿಕೆ ಮಾಡಿದ್ದು, ಗ್ರಾಹಕರಿಗೆ ಖುಷಿ ತಂದಿದೆ.

ದೀಪಾವಳಿ

ಟಾಟಾಸ್ಕೈ ಸಂಸ್ಥೆಯ ದೀಪಾವಳಿ ಹಬ್ಬದ ಅಂಗವಾಗಿ ಟಾಟಾಸ್ಕೈ ಬಿಂಜ್ ಪ್ಲಸ್‌ ಸೆಟ್‌ಟಾಪ್‌ನ ಬೆಲೆಯಲ್ಲಿ ಇದೀಗ 200ರೂ. ತಾತ್ಕಾಲಿಕ ಇಳಿಕೆ ಆಗಿದೆ. ಹೊಸ ಗ್ರಾಹಕರಿಗೆ ಈ ಡಿವೈಸ್‌ ಕೇವಲ 2,799 ರೂ.ಗಳಿಗೆ ಲಭ್ಯವಾಗಲಿದೆ. ಅದೇ ರೀತಿ ಟಾಟಾಸ್ಕೈ ಹೆಚ್‌ಡಿ ಬಿಂಜ್ + ಮತ್ತು ಪ್ಲಸ್‌ ಹೆಚ್‌ಡಿ STBsಗಳಿಗೂ ಆಫರ್ ಲಭ್ಯವಾಗಲಿದೆ. ಈ ಡಿವೈಸ್‌ ಖರೀದಿಸುವ ಗ್ರಾಹಕರು ಟಾಟಾ ಸ್ಕೈನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು. ಈ ಡಿವೈಸ್‌ ಫೀಚರ್ಸ್‌ಗಳ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ಟಾಟಾಸ್ಕೈ ಬಿಂಜ್ ಪ್ಲಸ್‌ ಸೌಲಭ್ಯಗಳು

ಟಾಟಾಸ್ಕೈ ಬಿಂಜ್ ಪ್ಲಸ್‌ ಸೌಲಭ್ಯಗಳು

ಟಾಟಾಸ್ಕೈ ಬಿಂಜ್ ಪ್ಲಸ್‌ ಸೆಟ್‌ಟಾಪ್‌ ಬಾಕ್ಸ್‌, ಸಾಮಾನ್ಯ ಡಿಟಿಎಚ್ ಸೆಟ್‌ಟಾಪ್‌ಗಳಿಗಿಂತ ಭಿನ್ನವಾಗಿದೆ. ಬಿಂಜ್ ಪ್ಲಸ್‌ ಸೆಟ್‌ಟಾಪ್‌ ಬಾಕ್ಸ್‌ನಲ್ಲಿ ಇಂಟರ್ನೆಟ್ ಆಧಾರಿತ ಸೇವೆಗಳು ದೊರೆಯುತ್ತವೆ. ಗೂಗಲ್ ಪ್ಲೇ ಸ್ಟೋರ್ ಸೌಲಭ್ಯ ಇರುತ್ತದೆ ಹಾಗೂ ಅಸಿಸ್ಟಂಟ್ ಅಸಿಸ್ಟಂಟ್ ಆಧಾರಿತ ವಾಯಿಸ್ ಸರ್ಚ್ ಆಯ್ಕೆಯು ಒಳಗೊಂಡಿರುತ್ತದೆ. ಹೀಗಾಗಿ ಸೆಟ್‌ಟಾಪ್‌ ಬಾಕ್ಸ್‌ ಅನ್ನು ವಾಯಿಸ್‌ ಮೂಲಕವೇ ನಿಯಂತ್ರಣ ಮಾಡಬಹುದಾಗಿದೆ.

OTT ಆಪ್ಸ್‌ ಪ್ರಯೋಜನಗಳು

OTT ಆಪ್ಸ್‌ ಪ್ರಯೋಜನಗಳು

ಟಾಟಾಸ್ಕೈ ಬಿಂಜ್ ಪ್ಲಸ್‌ ಸೆಟ್‌ಟಾಪ್‌ ಬಾಕ್ಸ್‌ ವಿಡಿಯೊ ಸ್ಟ್ರೀಮಿಂಗ್ ಒದಗಿಸುವ OTT ಆಪ್ಸ್‌ಗಳ ಸಪೋರ್ಟ್‌ ಒಳಗೊಂಡಿದೆ. ಹಾಟ್‌ಸ್ಟಾರ್, ಸನ್‌ನೆಕ್ಸ್ಟ್, ಎರೊಸ್ ನವ್, ಜೀ5 ಮತ್ತು ಹಂಗಾಮಾ ಪ್ಲಸ್‌ ಅಪ್ಲಿಕೇಶನ್ ಗಳ ಸೌಲಭ್ಯ ಇದೆ. ಈ ಆಪ್ಸ್‌ ಅತ್ಯುತ್ತಮ ವಿಡಿಯೊ ಕಂಟೆಂಟ್ ಅಪ್ಲಿಕೇಶನ್‌ಗಳಾಗಿವೆ. ಕೆಲವು ಲೈವ್ ವಿಡಿಯೊ ವೀಕ್ಷಣೆಗೂ ಅನುಕೂಲ ಒದಗಿಸಲಿವೆ.

ಇತರೆ ಸೌಲಭ್ಯಗಳು

ಇತರೆ ಸೌಲಭ್ಯಗಳು

ಟಾಟಾಸ್ಕೈ ಬಿಂಜ್ ಪ್ಲಸ್‌ ಸೆಟ್‌ಟಾಪ್‌ ಬಾಕ್ಸ್‌ ಸುಮಾರು 5000 ಅಪ್ಲಿಕೇಶನ್ ಹಾಗೂ ಗೇಮ್ಸ್‌ಗಳು ಗೂಗಲ್ ಆಪ್‌ನಲ್ಲಿ ಲಭ್ಯವಾಗಲಿವೆ. ಇನ್ನು ಈ ಸೆಟ್‌ಟಾಪ್‌ ಬಾಕ್ಸ್‌ 2GB RAM ಮತ್ತು 8GB ಸ್ಟೋರೇಜ್ ಸ್ಥಳಾವಕಾಶವನ್ನು ಪಡೆದಿದೆ. ಅಪ್ಲಿಕೇಶನ್ ಡೌನ್‌ಲೋಡ್‌ ಸಹ ಮಾಡಿಕೊಳ್ಳಬಹುದಾಗಿದೆ.

ಟಾಟಾಸ್ಕೈ ಎಸ್‌ಡಿ ಸೆಟ್‌ಟಾಪ್‌ ಬಾಕ್ಸ್‌

ಟಾಟಾಸ್ಕೈ ಎಸ್‌ಡಿ ಸೆಟ್‌ಟಾಪ್‌ ಬಾಕ್ಸ್‌

ಟಾಟಾಸ್ಕೈ ಎಸ್‌ಡಿ ಸೆಟ್‌ಟಾಪ್‌ ಬಾಕ್ಸ್‌ ಆರಂಭಿಕ ಸೆಟ್‌ಅಪ್ ಬಾಕ್ಸ್‌ ಮಾಡೆಲ್ ಆಗಿದೆ. ಎಸ್‌ಡಿ ಸೆಟ್‌ಟಾಪ್‌ ಬಾಕ್ಸ್ ಡಿವಿಡಿ ಕ್ವಾಲಿಟಿಯ ವಿಡಿಯೊ ಗುಣಮಟ್ಟ ಪಡೆದಿರುತ್ತದೆ. ಆಡಿಯೊ ಗುಣಮಟ್ಟವು ಸಿಡಿ ಕ್ವಾಲಿಟಿಯಲ್ಲಿರುತ್ತದೆ. ವಿವಿಧ ಚಾನೆಲ್ ಲಿಸ್ಟ್‌ ಇದ್ದು, ಗ್ರಾಹಕರು ಅವರಿಷ್ಟದ ಚಾನಲ್‌ ಗುಚ್ಛ ಆಯ್ಕೆ ಮಾಡಿಕೊಳ್ಳಬಹುದು.

ಟಾಟಾಸ್ಕೈ ಹೆಚ್‌ಡಿ ಸೆಟ್‌ಟಾಪ್‌ ಬಾಕ್ಸ್‌

ಟಾಟಾಸ್ಕೈ ಹೆಚ್‌ಡಿ ಸೆಟ್‌ಟಾಪ್‌ ಬಾಕ್ಸ್‌

ಟಾಟಾಸ್ಕೈ ಹೆಚ್‌ಡಿ ಸೆಟ್‌ಟಾಪ್‌ ಬಾಕ್ಸ್‌ನಲ್ಲಿ 1080i ವಿಡಿಯೊ ಕ್ವಾಲಿಟಿ ಹೊಂದಿರುವುದರೊಂದಿಗೆ, 16:9 ಅನುಪಾತ ರಚನೆ ಇರುತ್ತದೆ. ಜೊತೆಗೆ ಡಾಲ್ಬಿ ಸರೌಂಡ್‌ ಸೌಂಡ್‌ ಸೌಲಭ್ಯವನ್ನು ಹೊಂದಿರುತ್ತದೆ. vivid ಕಲರ್‌ ಸೌಲಭ್ಯ ಪಡೆದಿದೆ. ಹೊಸ ಮಾದರಿಯ ಸ್ಮಾರ್ಟ್‌ಟಿವಿ ಇದ್ದರೇ ಹೆಚ್‌ಡಿ ಸೆಟ್‌ಟಾಪ್‌ ಆಯ್ಕೆಯೇ ಉತ್ತಮ.

Best Mobiles in India

English summary
Tata Sky Binge+ Set-Top Box is now down to Rs 2,799 after Rs 200 off.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+