ಟಾಟಾಸ್ಕೈನ ಈ ವೇಗದ ಬ್ರಾಡ್‌ಬ್ಯಾಂಡ್‌ ಪ್ಲ್ಯಾನಿನಲ್ಲಿ ಅಧಿಕ ಡೇಟಾ ಸಿಗುತ್ತೆ!

|

ಸದ್ಯ ದೇಶದಲ್ಲಿ ಲೀಡಿಂಗ್ ಬ್ರಾಡ್‌ಬ್ಯಾಂಡ್‌ ಪೂರೈಕೆದಾರ ಸಂಸ್ಥೆಯಾಗಿ ಗುರುತಿಸಿಕೊಂಡಿರುವ ಟಾಟಾಸ್ಕೈ ಹಲವು ಆಕರ್ಷಕ ಯೋಜನೆಗಳನ್ನು ಪರಿಚಯಿಸಿದೆ. ಅವುಗಳಲ್ಲಿ 100Mbps ವೇಗ ಬ್ರಾಡ್‌ಬ್ಯಾಂಡ್‌ ಯೋಜನೆಗಳೂ ಇವೆ ಹಾಗೂ 300Mbps ವೇಗದ ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್‌ಗಳು ಸೇರಿವೆ. ಇವುಗಳಲ್ಲಿ 300Mbps ವೇಗದ ಕೆಲವು ಯೋಜನೆಗಳು ಹೆಚ್ಚಿನ ಪ್ರಯೋಜನಗಳೊಂದಿಗೆ ಗ್ರಾಹಕರನ್ನು ಸೆಳೆದಿವೆ.

ಟಾಟಾಸ್ಕೈ

ಹೌದು, ಜನಪ್ರಿಯ ಟಾಟಾಸ್ಕೈ ಸಂಸ್ಥೆಯು ಇತ್ತೀಚಿಗೆ ತನ್ನ ಬ್ರಾಡ್‌ಬ್ಯಾಂಡ್ ಇಂಟರ್ನೆಟ್‌ ಸೇವೆಯಲ್ಲಿ ಹೊಸದಾಗಿ ಕೆಲವು 300 Mbps ಪ್ಲ್ಯಾನ್ ಬಿಡುಗಡೆ ಮಾಡಿದೆ. ಸಂಸ್ಥೆಯ 300 Mbps ಯೋಜನೆಗಳ ಆರಂಭಿಕ ಬೆಲೆಯು 1,600ರೂ. ಆಗಿದ್ದು, ಅನಿಯಮಿತ ಡೇಟಾ ಪ್ರಯೋಜನ ಜೊತೆಗೆ ಹಲವು ಸೌಲಭ್ಯಗಳನ್ನು ಪಡೆದಿದೆ. ಹಾಗಾದರೇ ಈ ಯೋಜನೆಯ ಪ್ರಯೋಜನಗಳೆನು ಹಾಗೂ ಜಿಯೋ, ಏರ್‌ಟೆಲ್‌ಗಳ 300 Mbps ಪ್ಲ್ಯಾನ್‌ ಬೆಲೆ ಎಷ್ಟು ಮುಂದೆ ನೋಡೋಣ ಬನ್ನಿರಿ.

ಬ್ರಾಡ್‌ಬ್ಯಾಂಡ್

ಟಾಟಾ ಸ್ಕೈ ಬ್ರಾಡ್‌ಬ್ಯಾಂಡ್ ಭಾರತದಾದ್ಯಂತ ಆಯ್ದ ನಗರಗಳಲ್ಲಿ 300 Mbps ವೇಗದ ಯೋಜನೆ ಹೊಂದಿದ್ದು, ಈ ಪ್ಲ್ಯಾನಿನ ತಿಂಗಳ ಶುಲ್ಕ 1,600ರೂ. ಆಗಿದೆ. ಹಾಗೆಯೇ ಈ ಬ್ರಾಡ್‌ಬ್ಯಾಂಡ್‌ ಯೋಜನೆಯು 3.3TB ಅಥವಾ 3,300GB FUP ಮಿತಿ ಹೊಂದಿದ್ದು, ಡೇಟಾ ರೋಲ್‌ಓವರ್ ಸೌಲಭ್ಯ ಇಲ್ಲ. ಹಾಗೆಯೇ ಈ ಯೋಜನೆಯನ್ನು ಆಯ್ಕೆ ಮಾಡುವ ಟಾಟಾ ಸ್ಕೈ ಬಳಕೆದಾರರು ಹಿಂತಿರುಗಿಸಬಹುದಾದ ಆಧಾರದ ಮೇಲೆ ಉಚಿತ ಡ್ಯುಯಲ್-ಬ್ಯಾಂಡ್ ರೂಟರ್ ಅನ್ನು ಪಡೆಯುತ್ತಾರೆ.

ಜಿಯೋಫೈಬರ್‌

ಜಿಯೋ ಕಂಪನಿಯ ಜಿಯೋಫೈಬರ್‌ನ 300 Mbps ಬ್ರಾಡ್‌ಬ್ಯಾಂಡ್ ಯೋಜನೆ ಬೆಲೆಯು 1,499ರೂ.ಗಳ ಆಗಿದೆ. ಈ ಯೋಜನೆಯಲ್ಲಿ ಗ್ರಾಹಕರಿಗೆ 12 ಒಟಿಟಿ ಅಪ್ಲಿಕೇಶನ್‌ಗಳಿಗೆ ಉಚಿತ ಆಕ್ಸಸ್‌ ನೀಡುತ್ತದೆ. ಅದೇ ರೀತಿ ಏರ್‌ಟೆಲ್‌ ಟೆಲಿಕಾಂನ ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಫೈಬರ್‌ನ 300 Mbps ಯೋಜನೆಯ ತಿಂಗಳ ಶುಲ್ಕ 1,800ರೂ. ಆಗಿದೆ.

ಸೌಲಭ್ಯ

ಇನ್ನು ಟಾಟಾಸ್ಕೈನ ಒಂದು ತಿಂಗಳ ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್‌ಗಳು ಸಹ ಆಕರ್ಷಕ ಪ್ರಯೋಜನಗಳನ್ನು ಪಡೆದಿವೆ. ಅವುಗಳಲ್ಲಿ ಆರಂಭಿಕ 950ರೂ.ಗಳ ಪ್ಲ್ಯಾನ್‌ 25 Mbps ವೇಗದ ಸೌಲಭ್ಯ ಹೊಂದಿದೆ. ಹಾಗೆಯೇ 1,250ರೂ.ಗಳ ಪ್ಲ್ಯಾನ್‌ನಲ್ಲಿ 50 Mbps ಇಂಟರ್ನೆಟ್ ವೇಗ ಇದ್ದು, 1,150ರೂ.ಗಳ ಪ್ಲ್ಯಾನ್‌ 100 Mbps ವೇಗವನ್ನು ಒಳಗೊಂಡಿದೆ.

Best Mobiles in India

English summary
The 300 Mbps broadband plan is the fastest plan offered by Tata Sky right now.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X