Home
ಸುದ್ದಿಜಾಲ

ಟಾಟಾಸ್ಕೈನಿಂದ ಹೊಸದಾಗಿ 300 Mbps ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್ ಬಿಡುಗಡೆ!

ಪ್ರಸ್ತುತ ಸ್ಮಾರ್ಟ್‌ಫೋನ ಸೇರಿದಂತೆ ಸ್ಮಾರ್ಟ್‌ ಡಿವೈಸ್‌ಗಳು ಕಾರ್ಯನಿರ್ವಹಿಸಲು ಇಂಟರ್ನೆಟ್ ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಪ್ರತಿಷ್ಠಿತ ಬ್ರಾಡ್‌ಬ್ಯಾಂಡ್ ಪೂರೈಕೆದಾರ ಸಂಸ್ಥೆಗಳು ಆಕರ್ಷಕ ಪ್ಲ್ಯಾನ್‌ಗಳನ್ನು ಪರಿಚಯಿಸುತ್ತ ಸಾಗಿವೆ. ಅವುಗಳಲ್ಲಿ ಟಾಟಾಸ್ಕೈ ಕಂಪನಿಯು ಭಿನ್ನ ಶ್ರೇಣಿಯಲ್ಲಿ ಯೋಜನೆಗಳನ್ನು ಬಿಡುಗಡೆ ಮಾಡಿದ್ದು, ಇದೀಗ ಮತ್ತೊಂದು ಬ್ರಾಡ್‌ಬ್ಯಾಂಡ್‌ ಯೋಜನೆಯನ್ನು ಪರಿಚಯಿಸಿದೆ.

ಟಾಟಾಸ್ಕೈ

ಹೌದು, ಜನಪ್ರಿಯ ಟಾಟಾಸ್ಕೈ ಸಂಸ್ಥೆಯು ತನ್ನ ಬ್ರಾಡ್‌ಬ್ಯಾಂಡ್ ಇಂಟರ್ನೆಟ್‌ ಸೇವೆಯಲ್ಲಿ ಹೊಸದಾಗಿ ಈಗ 300 Mbps ಪ್ಲ್ಯಾನ್ ಬಿಡುಗಡೆ ಮಾಡಿದೆ. ಈ ಯೋಜನೆಯು 500GB ಡೇಟಾ ಪ್ರಯೋಜನವನ್ನು ಪಡೆದುಕೊಂಡಿದೆ. ಇನ್ನು ಈ ಯೋಜನೆಯು ತಿಂಗಳ ಶುಲ್ಕವು 1900ರೂ. ಆಗಿರಲಿದೆ ಎಂದು ಕಂಪನಿಯು ಹೇಳಿದೆ. ಹಾಗಾದರೇ ಟಾಟಾಸ್ಕೈನ ಹೊಸ 300 Mbps ಪ್ಲ್ಯಾನಿನ ವಿಶೇಷತೆಗಳೆನು ಮತ್ತು ವ್ಯಾಲಿಟಿಡಿಯ ಅವಧಿಯ ಕುರಿತು ತಿಳಿಯಲು ಮುಂದೆ ಓದಿರಿ.

ತಿಂಗಳ ಶುಲ್ಕ 1900ರೂ.

ತಿಂಗಳ ಶುಲ್ಕ 1900ರೂ.

ಟಾಟಾ ಸ್ಕೈ ಬ್ರಾಡ್‌ಬ್ಯಾಂಡ್ ಭಾರತದಾದ್ಯಂತ ಆಯ್ದ ನಗರಗಳಲ್ಲಿ ತಿಂಗಳಿಗೆ 1900 ರೂ.ಗೆ ಅನಿಯಮಿತ 300 ಎಂಬಿಪಿಎಸ್ ಯೋಜನೆಯನ್ನು ನೀಡುತ್ತದೆ ಎಂಬುದನ್ನು ಗಮನಿಸಬೇಕು. ಬಳಕೆದಾರರು 3300GB ಡೇಟಾ ಮಿತಿಯನ್ನು ತಲುಪಿದ ನಂತರ ಅನಿಯಮಿತ 300 Mbps ಯೋಜನೆಯ ವೇಗವು 3 Mbps ಗೆ ಕಡಿಮೆಯಾಗುತ್ತದೆ ಎಂದು ಆಪರೇಟರ್ ಹೈಲೈಟ್ ಮಾಡಿದ್ದಾರೆ.

ಪ್ಲ್ಯಾನ್ ಲಭ್ಯತೆ

ಪ್ಲ್ಯಾನ್ ಲಭ್ಯತೆ

ಟಾಟಾಸ್ಕೈ ಕಂಪನಿಯ ಹೊಸ 300 ಎಂಬಿಪಿಎಸ್ ಯೋಜನೆಯು ಪ್ರಸ್ತುತ ಗಜಿಯಾಬಾದ್, ಮೀರಾ ಭಾಯಂದರ್, ನವೀ ಮುಂಬೈ ಮತ್ತು ನೋಯ್ಡಾ ಸೇರಿದಂತೆ ಸಂಸ್ಥೆಯು ತನ್ನ 300 ಎಂಬಿಪಿಎಸ್ ಯೋಜನೆಯನ್ನು ಒದಗಿಸುವ ಎಲ್ಲಾ ಪ್ರದೇಶಗಳಲ್ಲಿ ಅನಿಯಮಿತ 300 ಎಂಬಿಪಿಎಸ್ ಯೋಜನೆ ಲಭ್ಯವಿದೆ. ಹಾಗೆಯೇ ಹೊಸ 300 ಎಂಬಿಪಿಎಸ್ ಸ್ಥಿರ ಜಿಬಿ ಯೋಜನೆ ಪ್ರಸ್ತುತ ಬೆಂಗಳೂರು, ಚೆನ್ನೈ, ಗ್ರೇಟರ್ ನೋಯ್ಡಾ, ಗುರಗಾಂವ್, ಮುಂಬೈ, ನವದೆಹಲಿ, ಪಿಂಪ್ರಿ ಚಿಂಚ್ವಾಡ್, ಪುಣೆ ಮತ್ತು ಥಾಣೆಗಳಲ್ಲಿ ಚಂದಾದಾರಿಕೆಗಾಗಿ ಲಭ್ಯವಿದೆ ಎಂದು ಹೇಳಲಾಗಿದೆ.

ಉಚಿತ ರೂಟರ್

ಉಚಿತ ರೂಟರ್

ಟಾಟಾ ಸ್ಕೈ ಬ್ರಾಡ್‌ಬ್ಯಾಂಡ್ ಹೊಸ 300 ಎಂಬಿಪಿಎಸ್ ಸ್ಥಿರ ಜಿಬಿ ಯೋಜನೆ ಮಾಸಿಕ, ತ್ರೈಮಾಸಿಕ, ಅರೆ ವಾರ್ಷಿಕ ಮತ್ತು ವಾರ್ಷಿಕ ಆಧಾರದ ಮೇಲೆ ಚಂದಾದಾರಿಕೆಗೆ ಲಭ್ಯವಿದೆ ಎಂದು ಹೇಳಲಾಗ್ತಿದೆ. ಆಪರೇಟರ್ ತನ್ನ ಸ್ಥಿರ ಜಿಬಿ ಯೋಜನೆಗಳಿಗೆ ಚಂದಾದಾರರಾಗಿರುವ ಎಲ್ಲಾ ಬಳಕೆದಾರರಿಗೆ ಡೇಟಾ ರೂಲ್ಓವರ್ ಆಯ್ಕೆಯನ್ನು ಉಚಿತ ರೂಟರ್ ಜೊತೆಗೆ ಒದಗಿಸುತ್ತದೆ. ಸ್ಥಿರ ಜಿಬಿ ತ್ರೈಮಾಸಿಕ, ಅರೆ ವಾರ್ಷಿಕ ಮತ್ತು ವಾರ್ಷಿಕ ಪ್ಯಾಕ್‌ಗಳಿಗೆ ಚಂದಾದಾರರಾಗಿರುವ ಬಳಕೆದಾರರಿಗೆ ಉಚಿತ ಸ್ಥಾಪನೆಯನ್ನು ಸಹ ನೀಡಲಾಗುವುದು.

Best Mobiles in India

English summary
Tata Sky Limited has introduced a new 300 Mbps plan with 500GB data limit per month.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+