ಕೇವಲ 590ರೂ.ಗಳಿಗೆ 'ಟಾಟಾಸ್ಕೈ'ನಿಂದ ಅನ್‌ಲಿಮಿಟೆಡ್‌ ಬ್ರಾಡ್‌ಬ್ಯಾಂಡ್ ಸೇವೆ!

|

ಪ್ರಸ್ತುತ ಇಂಟರ್ನೆಟ್‌ ಪ್ರತಿಯೊಬ್ಬರ ಅಗತ್ಯವಾಗಿದ್ದು, ಸ್ಮಾರ್ಟ್‌ಫೋನ ಸೇರಿದಂತೆ ಸ್ಮಾರ್ಟ್‌ ಡಿವೈಸ್‌ಗಳು ಕಾರ್ಯನಿರ್ವಹಿಸಲು ಇಂಟರ್ನೆಟ್ ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಬ್ರಾಡ್‌ಬ್ಯಾಂಡ್ ಇಂಟರ್ನೆಟ್ ಸೇವೆಯು ಜನಪ್ರಿಯವಾಗುತ್ತಿದ್ದು, ದೇಶಿಯ ಮಾರುಕಟ್ಟೆಯಲ್ಲಿ ಪೈಪೋಟಿ ತೀವ್ರವಾಗಿದೆ. ಅವುಗಳಲ್ಲಿ ಟಾಟಾಸ್ಕೈ ಕಂಪನಿಯು ಈಗ ಜಿಯೋ ಗಿಗಾಫೈಬರ್‌ಗೆ ನೇರ ಫೈಟ್ ಕೊಡಲು ಹೊಸ ಪ್ಲ್ಯಾನ್‌ ಬಿಡುಗಡೆ ಮಾಡಿದೆ.

ಕೇವಲ 590ರೂ.ಗಳಿಗೆ 'ಟಾಟಾಸ್ಕೈ'ನಿಂದ ಅನ್‌ಲಿಮಿಟೆಡ್‌ ಬ್ರಾಡ್‌ಬ್ಯಾಂಡ್ ಸೇವೆ!

ಹೌದು, ಜನಪ್ರಿಯ 'ಟಾಟಾಸ್ಕೈ' ಸಂಸ್ಥೆಯು ತನ್ನ ಬ್ರಾಡ್‌ಬ್ಯಾಂಡ್ ಇಂಟರ್ನೆಟ್‌ ಸೇವೆಯಲ್ಲಿ ಹೊಸದಾಗಿ ಅನ್‌ಲಿಮಿಟೆಡ್‌ ಬ್ರಾಡ್‌ಬ್ಯಾಂಡ್ ಪ್ಲ್ಯಾನ್‌ಗಳನ್ನು ಬಿಡುಗಡೆ ಮಾಡಿದ್ದು, ಅನ್‌ಲಿಮಿಟೆಡ್‌ ಪ್ಲ್ಯಾನುಗಳ ಆರಂಭಿಕ ಬೆಲೆಯು 590ರೂ.ಗಳು ಆಗಿದೆ. ಸದ್ಯ ಪ್ರಮುಖ 21 ನಗರಗಳಲ್ಲಿ ಮಾತ್ರ ಈ ಅನ್‌ಲಿಮಿಟೆಡ್ ಪ್ಲ್ಯಾನ್‌ಗಳ ಆಯ್ಕೆ ಲಭ್ಯವಿದ್ದು, ತಿಂಗಳ ಪೂರ್ತಿ ಅನಿಯಮಿತವಾಗಿ ಗ್ರಾಹಕರು ಇಂಟರ್ನೆಟ್‌ ಬಳಸಬಹುದಾಗಿದೆ.

ಕೇವಲ 590ರೂ.ಗಳಿಗೆ 'ಟಾಟಾಸ್ಕೈ'ನಿಂದ ಅನ್‌ಲಿಮಿಟೆಡ್‌ ಬ್ರಾಡ್‌ಬ್ಯಾಂಡ್ ಸೇವೆ!

ನೂತನ ಅನ್‌ಲಿಮಿಡೆಟ್ ಪ್ಲ್ಯಾನ್‌ಗಳೊಂದಿಗೆ ಗ್ರಾಹಕರಿಗೆ ಉಚಿತ ರೋಟರ್‌ ಸಹ ಲಭ್ಯವಾಗಲಿದ್ದು, ಈ ಪ್ಲ್ಯಾನ್‌ಗಳು ಒಂದು ತಿಂಗಳ, ಮೂರು ತಿಂಗಳ, ಆರು ತಿಂಗಳ ಮತ್ತು ವಾರ್ಷಿಕ ಅವಧಿಯ ವ್ಯಾಲಿಡಿಟಿಯ ಆಯ್ಕೆಗಳನ್ನು ಒಳಗೊಂಡಿದೆ. ಹಾಗಾದರೇ ಟಾಟಾಸ್ಕೈನ ಹೊಸ ಅನ್‌ಲಿಮಿಟೆಡ್ ಬ್ರಾಡ್‌ಬ್ಯಾಂಡ್ ಪ್ಲ್ಯಾನ್‌ಗಳ ವಿಶೇಷತೆಗಳೆನು ಮತ್ತು ವ್ಯಾಲಿಟಿಡಿಯ ಅವಧಿಯ ಕುರಿತು ತಿಳಿಯಲು ಮುಂದೆ ಓದಿರಿ.

ಓದಿರಿ : ಜೈಲು ಊಟ ಸವಿಯಬೇಕೆ?..ಹಾಗಿದ್ರೆ ಸ್ವಿಗ್ಗಿಯಲ್ಲಿ ಆರ್ಡರ್‌ ಮಾಡಿ! ಓದಿರಿ : ಜೈಲು ಊಟ ಸವಿಯಬೇಕೆ?..ಹಾಗಿದ್ರೆ ಸ್ವಿಗ್ಗಿಯಲ್ಲಿ ಆರ್ಡರ್‌ ಮಾಡಿ!

590ರೂ. ಪ್ಲ್ಯಾನ್

590ರೂ. ಪ್ಲ್ಯಾನ್

ಟಾಟಾಸ್ಕೈ ಸಂಸ್ಥೆಯು ಅನಿಯಮಿತ ಬ್ರಾಡ್‌ಬ್ಯಾಂಡ್‌ ಸೇವೆಯನ್ನು 590ರೂ.ಗಳ ಆರಂಭಿಕ ಬೆಲೆಯಲ್ಲಿ ಲಾಂಚ್‌ ಮಾಡಿದ್ದು, ಈ ಪ್ಲ್ಯಾನ್‌ ಒಂದು ತಿಂಗಳ ಅವಧಿಯ ವ್ಯಾಲಿಡಿಟಿಯನ್ನು ಹೊಂದಿರುತ್ತದೆ. 16Mbps ಡೌನ್‌ಲೋಡ್‌ ವೇಗದಲ್ಲಿವನ್ನು ಒಳಗೊಂಡಿರುವ ಈ ಪ್ಲ್ಯಾನಿನಲ್ಲಿ ಗ್ರಾಹಕರಿಗೆ ರೋಟರ್ ಉಚಿತವಾಗಿ ದೊರೆಯಲಿದೆ. ಸದ್ಯ ಅಹಮದಾಬಾದ್ ನಗರದಲ್ಲಿ ಈ ಪ್ಲ್ಯಾನ್ ಲಭ್ಯವಿದೆ.

ರೂಟರ್ ಉಚಿತ

ರೂಟರ್ ಉಚಿತ

ಟಾಟಾಸ್ಕೈ ಕಂಪನಿಯ ಪ್ರಮುಖ ನಗರ ಪ್ರದೇಶಗಳಿಗೆ ಅನ್‌ಲಿಮಿಟೆಡ್ ಪ್ಲ್ಯಾನ್‌ಗಳನ್ನು ಘೋಷಿಸಿದ್ದು, ಆದರೆ ಬೆಲೆಗಳು ಭಿನ್ನವಾಗಿವೆ. ಕಂಪನಿಯ ಯಾವುದೇ ಬೆಲೆಯ ಅನ್‌ಲಿಮಿಡೆಟ್ ಬ್ರಾಡ್‌ಬ್ಯಾಂಡ್ ಪ್ಲ್ಯಾನ್‌ ಖರೀದಿಸಿದರೂ ಸಹ ಗ್ರಾಹಕರಿಗೆ ರೂಟರ್ ಉಚಿತವಾಗಿ ದೊರೆಯಲಿದೆ. ಆದರೆ ಇನ್‌ಸ್ಟಾಲೆಷನ್‌ ಉಚಿತವಾಗಿ ಲಭ್ಯವಾಗುವುದಿಲ್ಲ.

ಓದಿರಿ : 48 ಗಂಟೆಗಳ 'ಅಮೆಜಾನ್ ಪ್ರೈಮ್‌ ಡೇ' ಸೇಲ್ ಶುರು!..ಈ ಫೋನ್‌ಗಳಿಗೆ ಬೆಸ್ಟ್‌ ಆಫರ್‌!ಓದಿರಿ : 48 ಗಂಟೆಗಳ 'ಅಮೆಜಾನ್ ಪ್ರೈಮ್‌ ಡೇ' ಸೇಲ್ ಶುರು!..ಈ ಫೋನ್‌ಗಳಿಗೆ ಬೆಸ್ಟ್‌ ಆಫರ್‌!

ಬೆಂಗಳೂರಿನಲ್ಲಿಯೂ ಲಭ್ಯ

ಬೆಂಗಳೂರಿನಲ್ಲಿಯೂ ಲಭ್ಯ

ಟಾಟಾಸ್ಕೈ ಸಂಸ್ಥೆಯು ಅನಿಯಮಿತ ಬ್ರಾಡ್‌ಬ್ಯಾಂಡ್‌ ಸೇವೆ ಬೆಂಗಳೂರಿನ ಗ್ರಾಹಕರಿಗೂ ಲಭ್ಯವಾಗಲಿದೆ. ಆದರೆ ಇಲ್ಲಿ ಆರಂಭಿಕ ಬೆಲೆಯು 999ರೂ.ಗಳು ಆಗಿದೆ. ಒಂದ್ಉ ತಿಂಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿರುವ ಈ ಪ್ಲ್ಯಾನ್‌ 10Mbps ಡೌನ್‌ಲೋಡಿಂಗ್ ವೇಗವನ್ನು ಹೊಂದಿರಲಿದೆ. ಈ ಪ್ಲ್ಯಾನಿನೊಂದಿಗೆ ಗ್ರಾಹಕರಿಗೆ ರೋಟರ್ ಉಚಿತವಾಗಿ ದೊರೆಯಲಿದೆ.

ಹಲವು ಆಯ್ಕೆಗಳು

ಹಲವು ಆಯ್ಕೆಗಳು

ಟಾಟಾಸ್ಕೈನ ಹೊಸ ಅನ್‌ಲಿಮಿಟೆಡ್ ಬ್ರಾಡ್‌ಬ್ಯಾಂಡ್ ಪ್ಲ್ಯಾನ್‌ಗಳು ವಿವಿಧ Mbps ಡೌನ್‌ಲೋಡ್‌ ವೇಗದ ಆಯ್ಕೆಗಳಲ್ಲಿ ದೊರೆಯಲಿದೆ. ಅದರಂತೆಯೇ ವಿವಿಧ ಶ್ರೇಣಿಯ ಪ್ರೈಸ್‌ಗಳ ಆಯ್ಕೆಗಳನ್ನು ಒಳಗೊಂಡಿವೆ. ಗ್ರಾಹಕರಿಗೆ ಅವರ ಇಂಟರ್ನೆಟ್ ಬಳಕೆಯ ಅಗತ್ಯಕ್ಕೆ ಅನುಗುಣವಾಗಿ ಪ್ಲ್ಯಾನ್‌ ಖರೀದಿಸಬಹುದಾಗಿದೆ.

ಓದಿರಿ : ಮೊದಲು ಖರೀದಿಸಿ, ಆಮೇಲೆ ಪಾವತಿಸಿ ಇದು ಪೇಟಿಎಮ್‌ನ 'ಪೋಸ್ಟ್‌ಪೇಡ್' ಸೇವೆ!ಓದಿರಿ : ಮೊದಲು ಖರೀದಿಸಿ, ಆಮೇಲೆ ಪಾವತಿಸಿ ಇದು ಪೇಟಿಎಮ್‌ನ 'ಪೋಸ್ಟ್‌ಪೇಡ್' ಸೇವೆ!

Most Read Articles
Best Mobiles in India

English summary
Tata Sky has introduced new unlimited broadband plans across 21 cities. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X