ಟಾಟಾಸ್ಕೈ ಬ್ರಾಡ್‌ಬ್ಯಾಂಡ್‌ನ ಈ ಪ್ಲ್ಯಾನ್‌ಗಳು ವೇಗದ ಇಂಟರ್ನೆಟ್ ಸೌಲಭ್ಯ ಪಡೆದಿವೆ!

|

ದೇಶದ ಬ್ರಾಡ್‌ಬ್ಯಾಂಡ್‌ ವಲಯದಲ್ಲಿ ಈಗ ಸಾಕಷ್ಟು ಬದಲಾವಣೆಗಳು ನಡೆದಿವೆ. ಟಾಟಾಸ್ಕೈ ಬ್ರಾಡ್‌ಬ್ಯಾಂಡ್‌ ಕಂಪನಿಯು ಮುಂಚೂಣಿಯಲ್ಲಿ ಗುರುತಿಸಿಕೊಂಡಿದೆ. ಸಂಸ್ಥೆಯು ಈಗಾಗಲೇ ಹಲವು ಆಕರ್ಷಕ ಯೋಜನೆಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಅವುಗಳಲ್ಲಿ ಅನ್‌ಲಿಮಿಟೆಡ್‌ ಡೇಟಾ ಯೋಜನೆಗಳು ಹೆಚ್ಚು ಗ್ರಾಹಕರನ್ನು ಸೆಳೆದಿವೆ. ಅದೇ ಹಾದಿಯಲ್ಲಿ ಟಾಟಾಸ್ಕೈ ಇದೀಗ ಅನ್‌ಲಿಮಿಟೆಡ್‌ ಪ್ಲ್ಯಾನ್ ನಲ್ಲಿ ಅಧಿಕ ಡೇಟಾದ ಕೊಡುಗೆ ತಿಳಿಸಿದೆ.

ಟಾಟಾಸ್ಕೈ

ಹೌದು, ಟಾಟಾಸ್ಕೈ ಸಂಸ್ಥೆಯು ಹಲವು ಬ್ರಾಡ್‌ಬ್ಯಾಂಡ್‌ ಯೋಜನೆಗಳ ಆಯ್ಕೆ ಹೊಂದಿದ್ದು, ಅವುಗಳಲ್ಲಿ 1ತಿಂಗಳ, 3ತಿಂಗಳ, 6ತಿಂಗಳ ಹಾಗೂ ವಾರ್ಷಿಕ ಅವಧಿಯ ಯೋಜನೆಗಳು ಇವೆ. ಇನ್ನು ಈ ಯೋಜನೆಗಳು ಭಿನ್ನ ಪ್ರೈಸ್‌ಟ್ಯಾಗ್‌ ಹೊಂದಿದ್ದು, ಬೇರೆ ಬೇರೆ ಡೇಟಾ ಪ್ರಯೋಜನ ಪಡೆದಿವೆ. ಸಂಸ್ಥೆಯ ಅನ್‌ಲಿಮಿಡೆಟ್‌ ಬ್ರಾಡ್‌ಬ್ಯಾಂಡ್‌ ಯೋಜನೆಗಳು 300Mbps ವರೆಗೂ ವೇಗದ ಡೇಟಾ ಸೌಲಭ್ಯವನ್ನು ಒಳಗೊಂಡಿವೆ. ಅಂತಹ ಟಾಟಾಸ್ಕೈ ಯೋಜನೆಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗಿದೆ ಮುಂದೆ ಓದಿರಿ.

ಒಂದು ತಿಂಗಳ ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್‌ಗಳು

ಒಂದು ತಿಂಗಳ ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್‌ಗಳು

ಟಾಟಾ ಸ್ಕೈ ಬ್ರಾಡ್‌ಬ್ಯಾಂಡ್ ಸೇವೆಯು ಹಲವು ವಿಶೇಷ ಪ್ಲ್ಯಾನ್‌ಗಳನ್ನು ಬಿಡುಗಡೆ ಮಾಡಿದೆ. ಅವುಗಳಲ್ಲಿ ಆರಂಭಿಕ 950ರೂ.ಗಳ ಪ್ಲ್ಯಾನ್‌ 25 Mbps ವೇಗದ ಸೌಲಭ್ಯ ಹೊಂದಿದೆ. ಹಾಗೆಯೇ 1,250ರೂ.ಗಳ ಪ್ಲ್ಯಾನ್‌ನಲ್ಲಿ 50 Mbps ಇಂಟರ್ನೆಟ್ ವೇಗ ಇದ್ದು, 1,150ರೂ.ಗಳ ಪ್ಲ್ಯಾನ್‌ 100 Mbps ವೇಗವನ್ನು ಒಳಗೊಂಡಿದೆ. ಇದೇ ರೀತಿ 1,900ರೂ.ಗಳ ಪ್ಲ್ಯಾನ್‌ನಲ್ಲಿ 300 Mbps ವರೆಗೂ ಇಂಟರ್ನೆಟ್ ವೇಗ ಲಭ್ಯವಾಗಲಿದೆ.

ಮೂರು ತಿಂಗಳ ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್‌ಗಳು

ಮೂರು ತಿಂಗಳ ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್‌ಗಳು

ಮೂರು ತಿಂಗಳ ಯೋಜನೆಗಳಲ್ಲಿ 2,700 ರೂ.ಪ್ಲ್ಯಾನ್ ಆರಂಭಿಕವಾಗಿದೆ. ಈ ಯೋಜನೆಯು 25 Mbps ವೇಗದಲ್ಲಿ ಅನಿಯಮಿತ ಡೇಟಾವನ್ನು ನೀಡುತ್ತದೆ. ಎರಡನೇ ಯೋಜನೆ 3,000 ರೂ.ಗಳ ದರ ಹೊಂದಿದ್ದು, 50 Mbps ವೇಗದಲ್ಲಿ ಅನಿಯಮಿತ ಡೇಟಾವನ್ನು ನೀಡುತ್ತದೆ. ಅದೇ ರೀತಿ ಮೂರನೇ ಯೋಜನೆ 3,300 ರೂ. ಆಗಿದ್ದು, 100 Mbps ವೇಗದಲ್ಲಿ ಅನಿಯಮಿತ ಡೇಟಾವನ್ನು ನೀಡುತ್ತದೆ. ಇನ್ನು ಕೊನೆಯ ಯೋಜನೆ 5,400 ರೂ. ಬೆಲೆಯನ್ನು ಪಡೆದಿದ್ದು, 300 Mbps ವೇಗದಲ್ಲಿ ಅನಿಯಮಿತ ಡೇಟಾವನ್ನು ನೀಡುತ್ತದೆ. ಎಲ್ಲಾ ಯೋಜನೆಗಳೊಂದಿಗೆ ಉಚಿತ ರೂಟರ್, ಉಚಿತ ಇನ್‌ಸ್ಟಾಲೇಶನ್‌ ಸೇವೆ ಸಿಗಲಿದೆ.

ಆರು ತಿಂಗಳ ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್‌ಗಳು

ಆರು ತಿಂಗಳ ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್‌ಗಳು

ಟಾಟಾ ಸ್ಕೈ ಬ್ರಾಡ್‌ಬ್ಯಾಂಡ್‌ನ ಆರು ತಿಂಗಳ ಯೋಜನೆಗಳು 4,860 ರೂ. ಪ್ಲ್ಯಾನ್‌ನಿಂದ ಆರಂಭವಾಗುತ್ತವೆ. ಈ ಯೋಜನೆಯು 25 Mbps ವೇಗದಲ್ಲಿ ಅನಿಯಮಿತ ಡೇಟಾವನ್ನು ನೀಡುತ್ತದೆ. ಎರಡನೇ ಯೋಜನೆ 5,400 ರೂ. ದರವನ್ನು ಹೊಂದಿದ್ದು, ಅನಿಯಮಿತ ಡೇಟಾ ಜೊತೆ 50 Mbps ಇಂಟರ್ನೆಟ್ ವೇಗ ಇರಲಿದೆ. ಮೂರನೇ ಯೋಜನೆ 5,940 ರೂ. ಪ್ರೈಸ್‌ ಆಗಿದ್ದು, 100 Mbps ವೇಗದಲ್ಲಿ ಅನಿಯಮಿತ ಡೇಟಾವನ್ನು ನೀಡುತ್ತದೆ. ನಾಲ್ಕನೇ ಯೋಜನೆ 9,720 ರೂ. ಆಗಿದ್ದು, 300 Mbps ವೇಗದಲ್ಲಿ ಅನಿಯಮಿತ ಡೇಟಾವನ್ನು ಹೊಂದಿದೆ.

ವಾರ್ಷಿಕ ಅವಧಿಯ ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್‌ಗಳು

ವಾರ್ಷಿಕ ಅವಧಿಯ ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್‌ಗಳು

ವಾರ್ಷಿಕ ಅವಧಿಯ ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್‌ಗಳು 9,180 ರೂ. ಪ್ಲ್ಯಾನ್‌ ಮೊದಲನೇಯದ್ದಾಗಿದೆ. ಈ ಯೋಜನೆಯು ಅನಿಯಮಿತ ಡೇಟಾವನ್ನು 25 Mbps ವೇಗದಲ್ಲಿ ನೀಡುತ್ತದೆ. ಎರಡನೇ ಯೋಜನೆ 10,200 ರೂ. ದರ ಪಡೆದಿದ್ದು, ಅನಿಯಮಿತ ಡೇಟಾದ ಜೊತೆ 50 Mbps ವೇಗ ಇಂಟರ್ನೆಟ್ ಸೇವೆ ನೀಡುತ್ತದೆ. ಮೂರನೇ ಯೋಜನೆ 11,220 ರೂ. ಆಗಿದ್ದು, ಅನಿಯಮಿತ ಡೇಟಾವನ್ನು 100 Mbps ವೇಗದಲ್ಲಿ ನೀಡುತ್ತದೆ. ಹಾಗೆಯೇ ಕೊನೆಯ ಯೋಜನೆ 18,360 ರೂ. ಬೆಲೆ ಹೊಂದಿದ್ದು, 300 Mbps ವೇಗದಲ್ಲಿ ಅನಿಯಮಿತ ಡೇಟಾವನ್ನು ನೀಡುತ್ತದೆ.

Most Read Articles
Best Mobiles in India

English summary
Tata Sky is offering broadband internet plans with both fixed GB data limit and Unlimited data as well.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X