Home
ಸುದ್ದಿಜಾಲ

ಟಾಟಾಸ್ಕೈ, ಡಿಶ್‌ಟಿವಿ, ಡಿ2ಎಚ್ ಸಂಸ್ಥೆಗಳಿಂದ ಕ್ರೆಡಿಟ್ ಸೌಲಭ್ಯ!

ಮಹಾಮಾರಿ ಕೊರೊನಾ ವೈರಸ್‌ ವ್ಯಾಪಕವಾಗಿ ಹರಡುವುದನ್ನು ತಡೆಯಲು ಸರ್ಕಾರ ಇದೀಘ ಮೂರನೇ ಅವಧಿಗೆ ಲಾಕ್‌ಡೌನ್ ಘೋಷಣೆ ಮಾಡಿದೆ. ಸದ್ಯ ಲಾಕ್‌ಡೌನ್ ಮತ್ತೆ ಮುಂದುವರೆದಿರುವುದರಿಂದ ಹೊರಗಡೆ ಹೋಗಿ ಡಿಟಿಎಚ್‌ ರೀಚಾರ್ಜ್ ಮಾಡಿಸಿಕೊಳ್ಳಲು ಅನಾನುಕೂಲವಾಗಿರುತ್ತದೆ. ಇನ್ನೂ ಕೆಲವರಿಗೆ ಆನ್‌ಲೈನ್‌ನಲ್ಲಿ ರೀಚಾರ್ಜ್ ಮಾಡಿಕೊಳ್ಳುವುದು ಗೊತ್ತಿರುವುದಿಲ್ಲ. ಈ ನಿಟ್ಟಿನಲ್ಲಿ ಅವರ ನೆರವಿಗೆ ಡಿಟಿಎಚ್‌ ಸಂಸ್ಥೆಗಳು ವಿಶೇಷ ಸೌಲಭ್ಯ ನೀಡಿವೆ.

ದೇಶದ ಡಿಟಿಎಚ್ ಸೇವಾ

ಹೌದು, ದೇಶದ ಡಿಟಿಎಚ್ ಸೇವಾ ವಲಯದಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿರುವ ಟಾಟಾಸ್ಕೈ, ಡಿಶ್‌ಟಿವಿ ಮತ್ತು ಡಿ2ಎಚ್‌ ಡಿಟಿಎಚ್‌ ಸಂಸ್ಥೆಗಳು ಕ್ರೆಡಿಟ್ ಸೌಲಭ್ಯವನ್ನು ಘೋಷಿಸಿವೆ. ಬಹುತೇಕರು ಆನ್‌ಲೈನ್‌ ಮೂಲಕವೇ ಡಿಟಿಎಚ್‌ ರೀಚಾರ್ಜ್ ಮಾಡಿಕೊಳ್ಳುತ್ತಾರೆ, ಆದರೆ ಆನ್‌ಲೈನ್‌ ಮೂಲಕ ರೀಚಾರ್ಜ್ ಮಾಡಿಕೊಳ್ಳುವುದು ಅರಿಯದವರೂ ಇದ್ದಾರೆ, ಹೀಗಾಗಿ ಅಂತಹ ಗ್ರಾಹಕರು ಲಾಕ್‌ಡೌನ್‌ನಿಂದಾಗಿ ಹೊರಗಡೆ ಹೋಗಿ ರೀಚಾರ್ಜ್ ಮಾಡಿಸಿಕೊಳ್ಳಲಾಗದ ಗ್ರಾಹಕರಿಗೆ ನೆರವಾಗಲೆಂದು ಈ ಸೌಲಭ್ಯವನ್ನು ಪರಿಚಯಿಸಿವೆ.

ಟಾಟಾಸ್ಕೈ-ಎಮರ್ಜೆನ್ಸಿ ಕ್ರೆಡಿಟ್ ಸರ್ವೀಸ್

ಟಾಟಾಸ್ಕೈ-ಎಮರ್ಜೆನ್ಸಿ ಕ್ರೆಡಿಟ್ ಸರ್ವೀಸ್

ದೇಶದ ಲೀಡಿಂಗ್ ಡಿಟಿಎಚ್ ಟಾಟಾಸ್ಕೈ ಎಮರ್ಜೆನ್ಸಿ ಕ್ರೆಡಿಟ್ ಸರ್ವೀಸ್‌ ಸೇವೆಯನ್ನು ಪರಿಚಯಿಸಿದೆ. ಟಾಟಾಸ್ಕೈ ಡಿಟಿಎಚ್ ರೀಚಾರ್ಜ್ ಮುಗಿದ ಗ್ರಾಹಕರು ಈ ಸೌಲಭ್ಯವನ್ನು ಪಡೆಯಬಹುದಾಗಿದ್ದು, ಗ್ರಾಹಕರು ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ 080-61999922 ಈ ನಂಬರ್‌ಗೆ ಮಿಸ್‌ ಕಾಲ್ ಮಾಡುವ ಮೂಲಕ ಕ್ರೆಡಿಟ್ ಸೌಲಭ್ಯವನ್ನು ಸಕ್ರಿಯ ಮಾಡಿಕೊಳ್ಳಬಹುದಾಗಿದೆ. ಆ ನಂತರದಲ್ಲಿ ಪಡೆದ ಕ್ರೆಡಿಟ್‌ ಹಣದ ಜೊತೆಗೆ ಹೆಚ್ಚುವರಿ ಶುಲ್ಕ ಸಹ ನೀಡಬೇಕಿರುತ್ತದೆ.

ಡಿಶ್ ಟಿವಿ-ಪೇ ಲೇಟರ್ ಸರ್ವಿಸ್

ಡಿಶ್ ಟಿವಿ-ಪೇ ಲೇಟರ್ ಸರ್ವಿಸ್

ಜನಪ್ರಿಯ ಡಿಶ್ ಟಿವಿ ಡಿಟಿಎಚ್‌ ಸಂಸ್ಥೆಯು ತನ್ನ ಚಂದಾದಾರರಿಗೆ ‘ಪೇ ಲೇಟರ್ ಸರ್ವಿಸ್' ಅನ್ನು ಆರಂಭಿಸಿದೆ. ಲಾಕ್‌ಡೌನ್‌ನಿಂದಾಗಿ ಹೊರಗಡೆ ಹೋಗಿ ಡಿಟಿಎಚ್ ರೀಚಾರ್ಜ್ ಮಾಡಿಸಿಕೊಳ್ಳಲಾಗದ ಚಂದಾದಾರರಿಗೆ ಅನುಕೂಲವಾಗಲೆಂದು ತ್ವರಿತ ಕ್ರೆಡಿಟ್ ನೀಡಲು ಈ ಸೌಲಭ್ಯ ನೀಡಿದೆ. ಈ ಕ್ರೆಡಿಟ್ ಸೌಲಭ್ಯ ಪಡೆಯಲಿಚ್ಛಿಸುವ ಚಂದಾದಾರರು ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ 1800-274-9050 ಗೆ ಮಿಸ್ಡ್ ಕಾಲ್ ನೀಡಬಹುದಾಗಿದೆ.

D2H-ತ್ವರಿತ ಕ್ರೆಡಿಟ್ ಸೌಲಭ್ಯ

D2H-ತ್ವರಿತ ಕ್ರೆಡಿಟ್ ಸೌಲಭ್ಯ

ದೇಶದ ಡಿಟಿಎಚ್ ವಲಯದಲ್ಲಿ ಪ್ರಮುಖ ಡಿಟಿಎಚ್‌ ಕಂಪನಿಗಳಲ್ಲಿ ಒಂದಾದ ಡಿ 2 ಹೆಚ್ ಸಹ ತನ್ನ ಚಂದಾದಾರರಿಗೆ ತ್ವರಿತ ಕ್ರೆಡಿಟ್ ಸೌಲಭ್ಯವನ್ನು ನೀಡುತ್ತಿದೆ. ಈ ತ್ವರಿತ ಕ್ರೆಡಿಟ್ ಸೌಲಭ್ಯದಲ್ಲಿ ಡಿ 2 ಹೆಚ್ ಸಂಸ್ಥೆಯು ಸೇವಾ ಶುಲ್ಕವನ್ನು ಸೇರಿಸಿದೆ. ಹೀಗಾಗಿ ಡಿ 2 ಹೆಚ್ ತ್ವರಿತ ಕ್ರೆಡಿಟ್ ಸೌಲಭ್ಯವನ್ನು ಆರಿಸಿಕೊಳ್ಳುವ ಚಂದಾದಾರರು ಆ ನಂತರ ಕ್ರೆಡಿಟ್ ಮೊತ್ತದ ಜತೆ ಹೆಚ್ಚುವರಿ 10 ರೂ. ಸೇವಾ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

Best Mobiles in India

English summary
Tata Sky, Dish TV and D2h are offering instant credit facility to subscribers who are not able to recharge their accounts due to lockdown.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+