Home
ಸುದ್ದಿಜಾಲ

ಟಾಟಾಸ್ಕೈನಿಂದ ಗುಡ್‌ನ್ಯೂಸ್‌: ಎರಡು ತಿಂಗಳು ಹೆಚ್ಚುವರಿ ಉಚಿತ ಸೇವೆ!

ದೇಶದ ಡಿಟಿಎಚ್ ವಲಯದಲ್ಲಿ ಲೀಡಿಂಗ್‌ನಲ್ಲಿರುವ ಟಾಟಾಸ್ಕೈ ಸಂಸ್ಥೆಯು ಲಾಕ್‌ಡೌನ್‌ ಅವಧಿಯಲ್ಲಿ ಗ್ರಾಹಕರ ಅನುಕೂಲಕ್ಕಾಗಿ ಹಲವು ಸೌಲಭ್ಯಗಳನ್ನು ಪರಿಚಯಿಸಿದೆ. ಇತ್ತೀಚಿಗಷ್ಟೆ ವ್ಯಾಲಿಡಿಟಿ ಅವಧಿಯನ್ನು ವಿಸ್ತರಿಸಿತ್ತು ಹಾಗೂ ಲೋನ್ ಕ್ರೆಡಿಟ್ ನೀಡುವ ಆಯ್ಕೆ ಸಹ ನೀಡಿತ್ತು. ಆದ್ರೆ ಮತ್ತೆ ಇದೀಗ ಎರಡು ತಿಂಗಳ ಹೆಚ್ಚುವರಿ ಉಚಿತ ಸೇವೆಯನ್ನು ನೀಡುವ ಘೋಷಣೆ ಮಾಡಿದೆ.

ಟಾಟಾಸ್ಕೈ ಡಿಟಿಎಚ್

ಹೌದು, ಟಾಟಾಸ್ಕೈ ಡಿಟಿಎಚ್ ಸಂಸ್ಥೆಯು ವಾರ್ಷಿಕ ರೀಚಾರ್ಜ್‌ಗೆ ಎರಡು ತಿಂಗಳ ಹೆಚ್ಚುವರಿ ಉಚಿತ ಸೇವೆಯನ್ನು ನೀಡಲಿದೆ. ಈ ದೀರ್ಘಕಾಲೀನ ರೀಚಾರ್ಜ್ ಆಯ್ಕೆಯನ್ನು ‘ಟಾಟಾ ಸ್ಕೈ ಕ್ಯಾಶ್‌ಬ್ಯಾಕ್' ಕೊಡುಗೆ ರೂಪದಲ್ಲಿ ಟಾಟಾಸ್ಕೈ ಒದಗಿಸುತ್ತಿದೆ. ಈ ವಾರ್ಷಿಕ ರೀಚಾರ್ಜ್‌ ಕೊಡುಗೆಯಲ್ಲಿ ಚಂದಾದಾರರಿಗೆ ಎರಡು ತಿಂಗಳ ಹೆಚ್ಚುವರಿ ಸೇವೆಯು ಲಭ್ಯವಾಗಲಿದೆ. ಲಾಕ್‌ಡೌನ್‌ ಅವಧಿಗೆ ಈ ಕೊಡುಗೆಯು ಗ್ರಾಹಕರಿಗೆ ಉಪಯುಕ್ತ ಅನಿಸಲಿದೆ.

ವಾರ್ಷಿಕ ರೀಚಾರ್ಜ್

ಸದ್ಯ ಟಾಟಾಸ್ಕೈ ಡಿಟಿಎಚ್‌ನ ವಾರ್ಷಿಕ ರೀಚಾರ್ಜ್‌ ಯೋಜನೆಯಲ್ಲಿ ಗ್ರಾಹಕರು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಒಂದು ತಿಂಗಳ ಹೆಚ್ಚುವರಿ ಸೇವೆಯು ಲಭ್ಯವಾಗುತ್ತಿದೆ. ಅದೇ ರೀತಿ ಈ ಹೊಸ ಕೊಡುಗೆಯಲ್ಲಿ ಎರಡು ತಿಂಗಳ ಹೆಚ್ಚುವರಿ ಸೇವೆಯು ಲಭ್ಯವಾಗುತ್ತದೆ. ಅಂದಹಾಗೆ ಈ ಕೊಡುಗೆಯು ಸಿಟಿಬ್ಯಾಂಕ್ ಖಾತೆಯ ಬಳಕೆದಾರರಿಗೆ ಮಾತ್ರ ಮೀಸಲಾಗಿದೆ. ಸಿಟಿಬ್ಯಾಂಕ್ ಬಳಕೆದಾರರು ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ ಮೂಲಕ ವಾರ್ಷಿಕ ರೀಚಾರ್ಜ್ ಮಾಡಿಸಿಕೊಂಡು ಈ ಕೊಡುಗೆ ಪಡೆಯಬಹುದಾಗಿದೆ.

ಕ್ಯಾಶ್‌ಬ್ಯಾಕ್ ಮೊತ್ತ

ವಾರ್ಷಿಕ ರೀಚಾರ್ಜ್ ಮಾಡಿಸಿಕೊಂಡ ಏಳು ಕೆಲಸದ ದಿನಗಳಲ್ಲಿ ಬಳಕೆದಾರರ ಖಾತೆಗೆ ಕ್ಯಾಶ್‌ಬ್ಯಾಕ್ ಮೊತ್ತವನ್ನು ಸಂಸ್ಥೆಯಿಂದ ಜಮಾ ಮಾಡಲಾಗುತ್ತದೆ. ಎರಡು ತಿಂಗಳ ಹೆಚ್ಚುವರಿ ಉಚಿತ ಸೇವೆಯ ಪೈಕಿ ಒಂದು ತಿಂಗಳ ಕ್ಯಾಶ್‌ಬ್ಯಾಕ್ ಅನ್ನು 48 ಗಂಟೆಗಳ ಒಳಗೆ ಜಮಾ ಮಾಡಲಾಗುವುದು ಮತ್ತು ಇನ್ನೊಂದು ತಿಂಗಳ ಕ್ಯಾಶ್‌ಬ್ಯಾಕ್ ಏಳು ದಿನಗಳಲ್ಲಿ ನೀಡಲಾಗುವುದು ಎಂದು ಸಂಸ್ಥೆಯು ಹೇಳಿದೆ. ಇನ್ನು ಈ ಕೊಡುಗೆ ಜೂನ್ 30, 2020 ರವರೆಗೆ ಲಭ್ಯವಿದೆ.

12 ಸೇವೆಗಳು ಉಚಿತ

12 ಸೇವೆಗಳು ಉಚಿತ

ಕೋವಿಡ್-19 ಲಾಕ್‌ಡೌನ್‌ ಪರಿಣಾಮ ಟಾಟಾ ಸ್ಕೈ 12 ಸೇವೆಗಳು ಉಚಿತ ಎಂದಿದೆ. ಅವುಗಳೆಂದರೇ ಡ್ಯಾನ್ಸ್ ಸ್ಟುಡಿಯೋ, ಫನ್ ಲರ್ನ್ ಪ್ರಿಸ್ಕೂಲ್, ಫನ್ ಲರ್ನ್ ಜೂನಿಯರ್, ಅಡುಗೆ/ಕುಕ್ಕಿಂಗ್ ಮತ್ತು ಕ್ಲಾಸ್‌ರೂಮ್/ತರಗತಿಗಳು ಸೇರಿವೆ. ಇದರೊಂದಿಗೆ ಕಂಪನಿಯು ಹೆಚ್ಚುವರಿಯಾಗಿ ಫಿಟ್ನೆಸ್, ಸ್ಮಾರ್ಟ್ ಮ್ಯಾನೇಜರ್, ಜಾವೇದ್ ಅಖ್ತರ್, ಬ್ಯೂಟಿ, ವೈದಿಕ್ ಮ್ಯಾಥ್ಸ್ ಜೊತೆಗೆ ಇಂಗ್ಲಿಷ್ ಜೊತೆಗೆ ಹಿಂದಿ ಮತ್ತು ತೆಲುಗು ಸೇವೆಗಳಲ್ಲಿ ಇಂಗ್ಲಿಷ್ ಅನ್ನು ಸಹ ನೀಡುತ್ತಿದೆ.

ಉಚಿತ ನೀಡಿರುವ ಸೇವೆಗಳ ಶುಲ್ಕ

ಉಚಿತ ನೀಡಿರುವ ಸೇವೆಗಳ ಶುಲ್ಕ

ಬ್ಯೂಟಿ, ಡ್ಯಾನ್ಸ್ ಸ್ಟುಡಿಯೋ ಮತ್ತು ಫನ್ ಲರ್ನ್ ಸೇರಿದಂತೆ ಟಾಟಾ ಸ್ಕೈ ಸೇವೆಗಳಲ್ಲಿ ಹೆಚ್ಚಿನವು ತಿಂಗಳಿಗೆ 59 ರೂ. ಶುಲ್ಕವನ್ನು ಹೊಂದಿವೆ. ಹಾಗೆಯೇ ಟಾಟಾ ಸ್ಕೈ ಅಡುಗೆ ಸಂಬಂಧಿದ ಸೇವೆಗಳ ಶುಲ್ಕವು 60 ರೂ. ಆಗಿದೆ. ಇನ್ನು ವೇದ ಗಣಿತ ಚಂದಾದಾರಿಕೆ ಶುಲ್ಕವು ದಿನಕ್ಕೆ 10 ರೂ. ಆಗಿದೆ. 91 ದಿನಗಳ ವ್ಯಾಲಿಡಿಟಿ ಅವಧಿ ಪಡೆದಿವೆ. ಆದ್ರೆ ಸದ್ಯ ಈ ಸೇವೆಗಳು ಉಚಿತವಾಗಿ ದೊರೆಯುತ್ತವೆ.

Best Mobiles in India

English summary
Tata Sky users with a Citibank credit or debit card can now get two months of extra service.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+