Just In
- 17 min ago
ಫೈರ್-ಬೋಲ್ಟ್ನ ಈ ಸ್ಮಾರ್ಟ್ವಾಚ್ ಖರೀದಿಗೆ ಲಭ್ಯ!..ಇದರ ಲುಕ್ಗೆ ನೀವು ಕ್ಲೀನ್ ಬೋಲ್ಡ್!
- 1 hr ago
ಸೋನಿ ಸಂಸ್ಥೆಯಿಂದ ಹೊಸ ಮಾದರಿಯ ವಾಕ್ಮ್ಯಾನ್ ಲಾಂಚ್!..ಜಬರ್ದಸ್ತ್ ಫೀಚರ್ಸ್!
- 1 hr ago
ಸ್ಯಾಮ್ಸಂಗ್ ಗ್ಯಾಲಕ್ಸಿ S22 ಬೆಲೆಯಲ್ಲಿ ಏಕಾಏಕಿ ಭಾರೀ ಇಳಿಕೆ!..ಸಖತ್ ಆಫರ್!
- 2 hrs ago
ಬ್ಯಾಂಕ್ ಹೆಸರಲ್ಲಿ ಬಂದ SMS ನಲ್ಲಿನ ಲಿಂಕ್ ಕ್ಲಿಕ್ ಮಾಡಿದ ಮಹಿಳೆ; ಮುಂದಾಗಿದ್ದೇನು?
Don't Miss
- Movies
ಹಂಪಿ ಉತ್ಸವ: ಗಾಯಕ ಕೈಲಾಶ್ ಖೇರ್ ಮೇಲೆ ಬಾಟಲಿ ಎಸೆತ, ಇಬ್ಬರು ವಶಕ್ಕೆ!
- News
ಮಂಚದ ಜೊತೆ ಡ್ಯಾನ್ಸ್ ಮಾಡಿದ ವ್ಯಕ್ತಿ: ಬಿದ್ದು ಬಿದ್ದು ನಕ್ಕ ನೆಟ್ಟಿಗರು- ವಿಡಿಯೋ
- Finance
ಅದಾನಿ ಗ್ರೂಪ್ನ ಷೇರು ಕುಸಿತವು ಜಲಿಯನ್ ವಾಲಾಬಾಗ್ ಹತ್ಯಾಕಾಂಡಕ್ಕೆ ಹೋಲಿಸಿದ ಅದಾನಿ ಗ್ರೂಪ್ ಸಿಎಫ್ಒ- ಕಾರಣ
- Sports
ಟಿ20 ವಿಶ್ವಕಪ್ ಗೆದ್ದ ಭಾರತ ಮಹಿಳಾ ತಂಡಕ್ಕೆ ವಿಶೇಷ ಅಭಿನಂದನೆ ತಿಳಿಸಿದ ಹಿರಿಯರ ಕ್ರಿಕೆಟ್ ತಂಡ
- Lifestyle
ಸಮಂತಾ ಮಯೋಸೈಟಿಸ್ನಿಂದ ಚೇತರಿಸಿಕೊಳ್ಳಲು ಪಾಲಿಸುತ್ತಿರುವ ಡಯಟ್
- Automobiles
130 km ರೇಂಜ್ ನೀಡುವ 'ecoDryft' ಬೈಕ್ ಬಿಡುಗಡೆ... .ರೂ.99,999ಕ್ಕೆ ಸಿಗುತ್ತೆ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಟಾಟಾಸ್ಕೈ ಡಿ2ಎಚ್‌ನಲ್ಲಿ 153ರೂ.ಗಳಿಗೆ 200 ಚಾನೆಲ್ ಲಭ್ಯ!
ಭಾರತೀಯ ಟೆಲಿವಿಷನ್ ವಲಯವು ಸಾಕಷ್ಟು ಬದಲಾವಣೆ ಕಂಡಿದ್ದು, ಪ್ರಸಕ್ತ ವರ್ಷದ ಆರಂಭದಲ್ಲಿ ಟ್ರಾಯ್ ಸಂಸ್ಥೆಯು ಚಾನೆಲ್‌ಗಳ ಬೆಲೆಯಲ್ಲಿ ಹೊಸ ಬದಲಾವಣೆಯನ್ನು ತಂದಿತು. ಈ ಬದಲಾವಣೆಯು ಉಚಿತ ಡಿಡಿ ಚಾನೆಲ್‌ಗಳೊಂದಿಗೆ, ಗ್ರಾಹಕರು ತಮಗೆ ಇಷ್ಟವಿದ್ದ ಚಾನಲ್‌ಗಳನ್ನು ಮಾತ್ರ ಆಯ್ದುಕೊಳ್ಳುವ ಅವಕಾಶವನ್ನು ನೀಡಿತು. ಈ ನಿಟ್ಟಿನಲ್ಲಿ ಚಾನಲ್ ಪೂರೈಕೆದಾರ ಸಂಸ್ಥೆಗಳು ಗ್ರಾಹಕರನ್ನು ಸೆಳೆಯಲು ಪೈಪೋಟಿ ನಡೆಸಿತ್ತ ಸಾಗಿದ್ದು, ಈ ನಡುವೆ ಇದೀಗ ಟಾಟಾಸ್ಕೈ ಒಂದು ಹೆಜ್ಜೆ ಮುಂದಿಟ್ಟಿದೆ.

ಹೌದು, ಟಾಟಾ ಸ್ಕೈ ಸಂಸ್ಥೆಯು NCF (Network Capacity Fee) ಕೇಬಲ್ ದರದಲ್ಲಿ ತನ್ನ ಗ್ರಾಹಕರಿಗೆ ಈಗ 200 ಚಾನಲ್ ನೀಡಲು ಮುಂದಾಗಿದೆ. ಇತ್ತೀಚಿಗೆ ಟ್ರಾಯ್ 153ರೂ.ಕನಿಷ್ಠ ಕೇಬಲ್ ದರವನ್ನು ನಿಗದಿಪಡಿಸಿತು. ಈ ಮೊತ್ತಕ್ಕೆ ಕೆಲವು ಚಾನಲ್ ಪೂರೈಕೆದಾರರು ಸುಮಾರು 150 ಉಚಿತ ಚಾನಲ್‌ಗಳನ್ನು ಪ್ರಸಾರಮಾಡುತ್ತಿದ್ದು, ಆದ್ರೆ ಟಾಟಾಸ್ಕೈ ಕನಿಷ್ಠ ಮೊತ್ತಕ್ಕೆ ಒಟ್ಟು 200 ಚಾನೆಲ್‌ಗಳನ್ನು ನೀಡುವುದಾಗಿ ತಿಳಿಸಿದೆ.

ಟಾಟಾ ಸ್ಕೈನ ಈ ಹೊಸ ಸ್ಲಾಬ್‌ನಲ್ಲಿ 153ರೂ.ಗಳಿಗೆ, 29ಡಿಡಿ ಚಾನೆಲ್‌ಗಳು, 166 FTA (free to air) ಚಾನೆಲ್‌ಗಳು ಮತ್ತು ಟಾಟಾಸ್ಕೈ ಸಂಸ್ಥೆಯ 5 ಸರ್ವೀಸ್ ಚಾನೆಲ್‌ಗಳು ಒಳಗೊಂಡಂತೆ ಒಟ್ಟು 200 ಚಾನೆಲ್‌ಗಳನ್ನು ಪ್ರಸಾರವಾಗಲಿವೆ. ಅವುಗಳಲ್ಲಿ ಟಾಟಾಸ್ಕೈ ದರ್ಶನ್, ಟಾಟಾಸ್ಕೈ ಕಿಡ್ಸ್ ಸಿನಿಮಾ, ಟಾಟಾಸ್ಕೈ ಭೋಜ್‌ಪೂರಿ ಸಿನಿಮಾ, ಟಾಟಾಸ್ಕೈ ಶೋ ಬಜ್ ಮತ್ತು ಟಾಟಾಸ್ಕೈ ಫ್ಯಾಮಿಲಿ ಹೆಲ್ತ್ ಚಾನೆಲ್‌ಗಳು ಸಂಸ್ಥೆಯ ಸರ್ವೀಸ್ ಚಾನೆಲ್‌ಗಳಾಗಿವೆ.

ಟಾಟಾ ಸ್ಕೈ ಇತ್ತೀಚಿಗೆ ವಾಚ್ ಪೋರ್ಟೆಲ್ ಲಾಂಚ್ ಮಾಡಿದ್ದು, ಟಾಟಾಸ್ಕೈ ಡಿ2ಎಚ್‌ನಲ್ಲಿ ಚಂದಾದಾರರು ಲೈವ್ ಟಿವಿ, ಸಿನಿಮಾ ಮತ್ತು ಇತರೆ ಕಂಟೆಂಟ್ ವೀಕ್ಷಣೆ ಮಾಡಬಹುದಾಗಿದೆ. ಹಾಗೆಯೇ ಹೊಸದಾಗಿ ಟಾಟಾಸ್ಕೈ ಬಿಂಜ್(Binge) ಸೇವೆಯನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಗ್ರಾಹಕರಿಗೆ ಉಚಿತ ಅಮೆಜಾನ್ ಫೈರ್‌ಸ್ಟಿಕ್ ಲಭ್ಯವಾಗಲಿದೆ. ಆ ಮೂಲಕ ಚಂದಾದಾರರು ಹಾಟ್‌ಸ್ಟಾರ್, ಪ್ರೈಮ್ ವಿಡಿಯೊ ಸೇರಿದಂತೆ ಜನಪ್ರಿಯ (OTT) ವಿಡಿಯೊ ಸ್ಟ್ರೀಮಿಂಗ್ ಆಪ್ಸ್ ನೋಡಬಹುದು.
ಟಾಟಾ ಸ್ಕೈ ಸಂಸ್ಥೆಯು ವಾಟ್ಸಪ್ ಖಾತೆಯ ಮೂಲಕವು ಚಂದಾದಾರರಿಗೆ ಅಗತ್ಯ ಸೇವೆಯನ್ನು ನೀಡಲು ಶುರುಮಾಡಿದ್ದು, ಬಳಕೆದಾರರು ಟೆಕ್ಸ್ಟ್ ಮೆಸೆಜ್ ಮಾಡುವ ಮೂಲಕ ಅವರ ಖಾತೆಯ ಬ್ಯಾಲೆನ್ಸ್ ಮೊತ್ತ ತಿಳಿಯಬಹುದು, ಇದರೊಂದಿಗೆ ಹೊಸ ಚಾನೆಲ್ ಸೇರಿಸಬಹುದು ಮತ್ತು ಚಾನೆಲ್ ಕ್ಯಾನ್ಸಲ್ ಸಹ ಮಾಬಹುದು. ಡಿ2ಎಚ್ ಅಕೌಂಟ್ ರಿಫ್ರೇಶ್, ಅಕೌಂಟ್ ಬ್ಯಾಲೆನ್ಸ್ ಮುಗಿಯುವ ವೇಳೆ ಟಾಪ್‌ಅಪ್ ಮಾಡಿಸಬಹುದು ಸೌಲಬ್ಯಗಳು ದೊರೆಯುತ್ತವೆ.

ಜಿಯೋ ಎಫೆಕ್ಟ್ : 399ರೂ. ಬ್ರಾಡ್‌ಬ್ಯಾಂಡ್ ಪ್ಲ್ಯಾನ್‌ನಲ್ಲಿ ಆಫರ್ ನೀಡಿದ BSNL!
ದೇಶಿಯ ಟೆಲಿಕಾಂ ವಲಯದಲ್ಲಿ ಇದೀಗ ಬದಲಾವಣೆಯ ಪರ್ವ ಆರಂಭವಾಗಿದ್ದು, ಜಿಯೋ ಗಿಗಾಫೈಬರ್ ಬ್ರಾಡ್‌ಬ್ಯಾಂಡ್ ವಲಯಕ್ಕೆ ಅದ್ಧೂರಿಯಾಗಿ ದುಮುಕಿದೆ. ಜಿಯೋ ಅತ್ಯುತ್ತಮ ಬ್ರಾಡ್‌ಬ್ಯಾಂಡ್ ಆಫರ್‌ಗಳನ್ನು ಘೋಷಿಸಿದ ಬೆನ್ನಲ್ಲೇ ಜಿಯೋಗೆ ಸ್ಪರ್ಧೆ ನೀಡುಲು ಬಿಎಸ್‌ಎನ್‌ಎಲ್ ಸಂಸ್ಥೆಯು ಮುಂದಾಗಿದೆ. ಹೀಗಾಗಿ ಸಂಸ್ಥೆಯು ತನ್ನ ಬ್ರಾಡ್‌ಬ್ಯಾಂಡ್ ಪ್ಯಾಕ್‌ಗಳಲ್ಲಿ ಅತ್ಯುತ್ತಮ ಆಫರ್ ನೀಡಲು ಆರಂಭಿಸಿದೆ.
ಹೌದು, ಬಿಎಸ್‌ಎನ್‌ಎಲ್ ತನ್ನ ಜನಪ್ರಿಯ ವಾರ್ಷಿಕ್ 399ರೂ.ಗಳ ಬ್ರಾಡ್‌ಬ್ಯಾಂಡ್ ಪ್ಲ್ಯಾನ್‌ನಲ್ಲಿ ಹೆಚ್ಚುವರಿಯಾಗಿ 999ರೂ.ಗಳ ಅಮೆಜಾನ್ ಪ್ರೈಮ್ ಸದಸ್ಯತ್ವ ಉಚಿತವಾಗಿ ನೀಡುವುದಾಗಿ ತಿಳಿಸಿದೆ. ಈ ಮೊದಲು ಕೇವಲ ವಾರ್ಷಿಕ 499ರೂ. ಮತ್ತು ಅದಕ್ಕೂ ಮೇಲ್ಪಟ್ಟ ಪ್ಲ್ಯಾನ್‌ನೊಂದಿಗೆ ಮಾತ್ರ ಉಚಿತವಾಗಿ ಅಮೆಜಾನ್ ಪ್ರೈಮ್ ಸದಸ್ಯತ್ವ ನೀಡುತ್ತಿತ್ತು. ಇದರೊಂದಿಗೆ ಕ್ಯಾಶ್‌ಬ್ಯಾಕ್ ಆಫರ್‌ಗಳು ಲಭ್ಯ ಇದೆ.
ಬಿಎಸ್‌ಎನ್‌ಎಲ್ ವಿವಿಧ ರೇಂಜ್‌ನ ಬ್ರಾಡ್‌ಬ್ಯಾಂಡ್ ಪ್ಲ್ಯಾನ್‌ಗಳನ್ನು ಒಳಗೊಂಡಿದ್ದು, ಅವುಗಳಲ್ಲಿ 849ರೂ.್ಳ ಪ್ಲ್ಯಾನ್ ವೇಗದ ಬ್ರಾಡ್‌ಬ್ಯಾಂಡ್ ಪ್ಲ್ಯಾನ್ ಆಗಿ ಗುರುತಿಸಿಕೊಂಡಿದೆ. ಈ ಪ್ಲ್ಯಾನ್‌ನಲ್ಲಿ ಇಂಟರ್ನೆಟ್ ವೇಗವು 50 Mbps ಆಗಿದ್ದು, 600GB ಡೇಟಾ ಲಿಮಿಟ್ ನೀಡಿದೆ. ಹಾಗಾದರೇ ಬಿಎಸ್‌ಎನ್‌ಎಲ್‌ನ ಬ್ರಾಡ್‌ಬ್ಯಾಂಡ್ ಪ್ಲ್ಯಾನ್‌ಗಳ ಕುರಿತು ಇನ್ನಷ್ಟು ಮಾಹಿತಿ ಮುಂದೆ ನೋಡೋಣ ಬನ್ನಿರಿ.

BSNL-ಅಮೆಜಾನ್ ಪ್ರೈಮ್
ಬಿಎಸ್‌ಎನ್‌ಎಲ್ ಗ್ರಾಹಕರನ್ನು ಆಕರ್ಷಿಸಲು ತನ್ನ ಬ್ರಾಡ್‌ಬ್ಯಾಂಡ್ ಸೇವೆಯೊಂದಿಗೆ ಅಮೆಜಾನ್ ಪ್ರೈಮ್ ಸದಸ್ಯತ್ವ ನೀಡಲು ಶುರುಮಾಡಿತು. ಆರಂಭದಲ್ಲಿ 749ರೂ. ಮತ್ತು ಅದಕ್ಕಿಂತ ಅಧಿಕ ಬೆಲೆಯ ಪ್ಲ್ಯಾನ್‌ಗಳಿಗೆ ಮಾತ್ರ ಉಚಿತ ಅಮೆಜಾನ್ ಸದಸ್ಯತ್ವ ನೀಡುತ್ತಿತ್ತು. ಆನಂತರ 499ರೂ.ಗಳ ಪ್ಲ್ಯಾನಿಗೂ ಸಹ ಉಚಿತ ಅಮೆಜಾನ್ ಪ್ರೈಮ್ ಸದಸ್ಯತ್ವ ಒದಗಿಸಲು ಕಂಪನಿ ಮುಂದಾಯಿತು.

ಜಿಯೋ ಎಫೆಕ್ಟ್
ಜಿಯೋ ಇದೀಗ ಗಿಗಾಫೈಬರ್ ಲಾಂಚ್ ಮಾಡಿದ್ದು, ಹೀಗಾಗಿ ಜಿಯೋದ ಎಂಟ್ರಿಯು ಬ್ರಾಡ್‌ಬ್ಯಾಂಡ್ ಮಾರುಕಟ್ಟೆಗೂ ಎಫೆಕ್ಟ್ ಆಗಿದೆ. ಜಿಯೋ ಪರಿಣಾಮದಿಂದಾಗಿ ಇತರೆ ಬ್ರಾಡ್‌ಬ್ಯಾಂಡ್ ಸಂಸ್ಥೆಗಳು ಆಫರ್ ನೀಡಲು ಸಜ್ಜಾಗಿದ್ದು, ಈ ನಿಟ್ಟಿನಲ್ಲಿ ಬಿಎಸ್‌ಎನ್‌ಎಲ್ ತನ್ನ 399ರೂ.ಗಳ ವಾರ್ಷಿಕ ಬ್ರಾಡ್‌ಬ್ಯಾಂಡ್ ಪ್ಲ್ಯಾನ್‌ನಲ್ಲಿ 999ರೂ.ಗಳ ಅಮೆಜಾನ್ ಪ್ರೈಮ್ ಸದಸ್ಯತ್ವವನ್ನು ಉಚಿತ ವಾಗಿ ನೀಡುತ್ತಿದೆ.

ಅಮೆಜಾನ್ ಪ್ರೈಮ್ ಸೇವೆ
ಅಮೆಜಾನ್ ಪ್ರೈಮ್ ಸೇವೆಯಲ್ಲಿ, ಪ್ರೈಮ್ ಮ್ಯೂಸಿಕ್, ಪ್ರೈಮ್ ವಿಡಿಯೊ, ಅಮೆಜಾನ್ ಇ ಕಾಮರ್ಸ್ ತಾಣದಲ್ಲಿ ಖರೀದಿಸದ ವಸ್ತುಗಳ ಉಚಿತ ಡೆಲಿವರಿ ಸೇವೆ ಮತ್ತು ವಿಶೇಷ ಸೇಲ್ ವೇಳೆ ಒಂದು ದಿನ ಮೊದಲೇ ಖರೀದಿಗೆ ಅವಕಾಶ ಸೇರಿದಂತೆ ಇನ್ನು ಅತ್ಯುತ್ತಮ ಸೌಲಭ್ಯಗಳ ಲಭ್ಯವಾಗಲಿದೆ. ಅಮೆಜಾನ್ ಪ್ರೈಮ್ ವಾರ್ಷಿಕ ಚಂದಾದಾರಿಕೆಯ ಶುಲ್ಕವು 999ರೂ.ಗಳಾಗಿದೆ. ತಿಂಗಳ ಶುಲ್ಕ 129ರೂ ಆಗಿದೆ.

ಬಿಎಸ್ಎನ್‌ಎಲ್ ಕ್ಯಾಶ್‌ಬ್ಯಾಕ್
ಬಿಎಸ್‌ಎನ್‌ಎಲ್ನ ಆಯ್ದ ವಾರ್ಷಿಕ ಬ್ರಾಡ್‌ಬ್ಯಾಂಡ್ ಪ್ಲ್ಯಾನ್‌ಗಳ ಮೇಲೆ ಕಂಪನಿಯು ಶೇ.15%, ಶೇ. 20% ಮತ್ತು ಶೇ.25% ಕ್ಯಾಶ್‌ಬ್ಯಾಕ್ ಲಭ್ಯವಾಗಲಿದೆ. 499ರೂ. ವರೆಗಿನ ಪ್ಲ್ಯಾನ್‌ಗಳಿಗೆ ಶೇ.15% ರಷ್ಟು ಕ್ಯಾಶ್‌ಬ್ಯಾಕ್ ಲಭ್ಯವಾಗಲಿದೆ. ಸುಮಾರು 499ರೂ.ಗಳಿಂದ 900ರೂ.ವರೆಗಿನ ಪ್ಲ್ಯಾನ್‌ಗಳಿಗೆ ಶೇ. 20% ಹಾಗೂ 900ರೂ.ಗಿಂತ ಅಧಿಕ ಪ್ಲ್ಯಾನ್ಗಳಿಗೆ ಶೇ.25% ಕ್ಯಾಶ್‌ಬ್ಯಾಕ್ ದೊರೆಯಲಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470