ಟಾಟಾ ಸ್ಕೈ ಫ್ಲೆಕ್ಸಿ ಪ್ಲಾನ್ ; ಒಂದು ತಿಂಗಳು ಉಚಿತ ಡಿಟಿಎಚ್‌ ಸೇವೆ!

|

ಟ್ರಾಯ್‌ ನಿಯಮದ ಹೊಸ ಬದಲಾವಣೆಗೆ ಗ್ರಾಹಕರು ಈಗತಾನೆ ಹೊಂದಿಕೊಳ್ಳುತ್ತಿದ್ದು, ಪ್ರಮುಖ ಡಿಟಿಎಚ್ ಸೇವಾದಾರರು ತಮ್ಮ ಬಳಕೆದಾರರನ್ನು ಕಾಯ್ದುಕೊಳ್ಳಲು ಹೊಸ ಆಕರ್ಷಕ ಯೋಜನೆಗಳನ್ನು ನೀಡುತ್ತಿದ್ದಾರೆ. ಅವುಗಳಲ್ಲಿ ಒಂದಾದ ಟಾಟಾ ಸ್ಕೈ ಡಿಟಿಎಚ್ ಸೇವಾ ಕಂಪನಿಯು ಇದೀಗ ತನ್ನ ಗ್ರಾಹಕರಿಗೆ ಸಂತಸದ ಸುದ್ದಿಯನ್ನು ನೀಡಿದ್ದು, ಹೊಸ 'ವಾರ್ಷಿಕ ಫ್ಲೆಕ್ಸಿ ಪ್ಲಾನ್‌' ಅನ್ನು ಬಿಡುಗಡೆ ಮಾಡಿದೆ.

ಟಾಟಾ ಸ್ಕೈ ಫ್ಲೆಕ್ಸಿ ಪ್ಲಾನ್ ; ಒಂದು ತಿಂಗಳು ಉಚಿತ ಡಿಟಿಎಚ್‌ ಸೇವೆ!

ಹೌದು, ಟಾಟಾ ಸ್ಕೈ ಡಿಟಿಎಚ್ ಕಂಪನಿಯು ಹೊಸದಾಗಿ 'ವಾರ್ಷಿಕ ಫ್ಲೆಕ್ಸಿ ಪ್ಲಾನ್'‌ ಅನ್ನು ಗ್ರಾಹಕರಿಗೆ ಪರಿಚಯಿಸಿದ್ದು, ಪ್ರಸ್ತುತ ಇರುವ ಪ್ಲಾನ್‌ ಅನ್ನು ಗ್ರಾಹಕರು ಒಂದು ವರ್ಷದ ಅವಧಿಗೆ ಮುಂಗಡ ರೀಜಾರ್ಜ್ ಮಾಡಿಕೊಂಡರೇ, ಒಂದು ತಿಂಗಳು ಉಚಿತ ಸೇವೆ ಸೀಗಲಿದೆ. ಅಂದರೇ ಬಳಕೆದಾರರ 12 ತಿಂಗಳ ಅವಧಿಯ ಹಣವು ಪಾವತಿಸಿದರೆ, 13 ತಿಂಗಳು ಡಿಟಿಎಚ್‌ ಸೇವೆಯು ಲಭ್ಯವಾಗಲಿದೆ. ಹಾಗಾದರೇ ಈ ಪ್ಲಾನಿನ ಮತ್ತಷ್ಟು ಮಾಹಿತಿಯನ್ನು ಮುಂದೆ ನೋಡೋಣ ಬನ್ನಿರಿ.

ಮುಂಗಡ ಪಾವತಿ

ಮುಂಗಡ ಪಾವತಿ

ಟಾಟಾ ಸ್ಕೈ ಡಿಟಿಎಚ್‌ ಬಳಕೆದಾರರು ಪ್ರಸ್ತುತ ತಿಂಗಳ ಪ್ಲಾನ್‌ನ ಮೊತ್ತ ಎಷ್ಟಿರುತ್ತದೋ, ಅದೇ ಮೊತ್ತವನ್ನು 12 ತಿಂಗಳಿಗೆ ಮುಂಗಡವಾಗಿ ಪಾವತಿಸುವ ಮೂಲಕ ಟಾಟಾ ಸ್ಕೈ ಡಿಟಿಎಚ್‌ ಕಂಪನಿಯ ವಾರ್ಷಿಕ ಫ್ಲೆಕ್ಸಿ ಪ್ಲಾನ್‌ ಪಡೆಯಬಹುದಾಗಿದೆ.

ಎಸ್‌ಎಮ್‌ಎಸ್‌ ಅಲರ್ಟ್‌

ಎಸ್‌ಎಮ್‌ಎಸ್‌ ಅಲರ್ಟ್‌

12 ತಿಂಗಳಿಗೆ ಮುಂಗಡವಾಗಿ ಹಣ ಪಾವತಿಸಿಬೇಕಾಗಿದ್ದು, ಒಂದು ವೇಳೆ ಬಳಕೆದಾರರು 'ಫ್ಲಾಕ್ಸಿ ಪ್ಲಾನಿಗೆ' ಆಯ್ಕೆ ಆದರೆ ಕಂಪನಿ ಎಸ್‌ಎಮ್‌ಎಸ್‌, ಇಮೇಲ್ ಅಥವಾ ಬಿಮೇಲ್ ಕಳುಹಿಸುವ ಮೂಲಕ ಬಳಕೆದಾರರಿಗೆ ಖಚಿತ ಪಡಿಸುತ್ತದೆ.

ಟಾಟಾ ಸ್ಕೈ ರೀಜಾರ್ಜ್

ಟಾಟಾ ಸ್ಕೈ ರೀಜಾರ್ಜ್

ಬಳಕೆದಾರರು ಈ ಪ್ಲಾನ್‌ ಲಾಭ ಪಡೆಯಲು ಮುಂಗಡವಾಗಿ ಹಣವನ್ನು ಪಾವತಿಸಲು ಕಂಪನಿಯ ಅಧಿಕೃತ ವೆಬ್‌ಸೈಟ್‌, ಕಂಪನಿಯ ಆಪ್‌ ಅಥವಾ ಅಧಿಕೃತ ಟಾಟಾ ಸ್ಕೈ ರೀಜಾರ್ಜ್ ಚಾನಲ್‌ಗಳ ಮೂಲಕ ಹಣ ಪಾವತಿಸಿಬೇಕು. ಬೇರೆ ಯಾವುದೇ ರೀತಿಯ ರೀಜಾರ್ಜ್‌ಗಳನ್ನು ಕಂಪನಿ ಪರಿಗಣಿಸುವುದಿಲ್ಲ ಎಂದು ಹೇಳಲಾಗಿದೆ.

ಸಂಪರ್ಕ ಕಡಿತವಾಗಿರಬಾರದು

ಸಂಪರ್ಕ ಕಡಿತವಾಗಿರಬಾರದು

ಬಳಕೆದಾರರು 5 ದಿನಗಳ ಕಾಲ ಅಥವಾ ದಿನಗಳ ಕಾಲ ಡಿಟಿಎಚ್‌ ಸಂಪರ್ಕ ಕಡಿತಗೊಂಡಿರಬಾರದು. ಒಂದು ವೇಳೆ 5 ರಿಂದ 10 ದಿನಗಳ ಕಾಲ ಬಳಕೆದಾರರ ಡಿಟಿಎಚ್‌ ಸಂಪರ್ಕ ಕಡಿತಗೊಂಡಿದ್ದರೇ, ಕಂಪನಿಯು ತನ್ನ ವಾರ್ಷಿಕ ಫ್ಲೆಕ್ಸಿ ಪ್ಲಾನ್‌ಗೆ ಅಂತಹ ಬಳಕೆದಾರರನ್ನು ಪರಿಗಣಿಸುವುದಿಲ್ಲ ಎನ್ನಲಾಗಿದೆ.

ಪ್ಲಾನ್ ಬದಲಾವಣೆ

ಪ್ಲಾನ್ ಬದಲಾವಣೆ

ಬಳಕೆದಾರರು ಟಾಟಾ ಸ್ಕೈ ಫ್ಲೆಕ್ಸಿ ಪ್ಲಾನ್‌ ಚಾಲ್ತಿ ಇರುವ ಸಮಯದಲ್ಲಿ ಚಾನಲ್‌ಗಳಲ್ಲಿ ಬದಲಾವಣೆ ಮಾಡಿಕೊಳ್ಳುವ ಆಯ್ಕೆ ಇದ್ದು, ಬಳಕೆದಾರರು ಹೊಸ ಚಾನಲ್ ಸೇರಿಸಿಕೊಳ್ಳಬಹುದು, ಡೀಲಿಟ್‌ ಮಾಡಬಹುದಾಗಿದೆ ಮತ್ತು ಇತರೆ ಪ್ಲಾನ್ ಬದಲಾವಣೆ ಮಾಡಿಕೊಳ್ಳಬಹುದಾಗಿದೆ.

Best Mobiles in India

English summary
Under the Tata Sky Flexi annual plan, users will be able to avail an additional one month of free subscription in form of a bonus credit and here's how you can become eligible for the Tata Sky offer.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X