ಟಾಟಾಸ್ಕೈ ಗ್ರಾಹಕರಿಗೆ ಗುಡ್‌ನ್ಯೂಸ್‌!..ಮಲ್ಟಿಟಿವಿ ಕನೆಕ್ಷನ್ ಬೆಲೆ ಇಳಿಕೆ!

|

ಭಾರತೀಯ ಡಿ2ಎಚ್‌ ಮಾರುಕಟ್ಟೆ ಹಲವು ಬದಲಾವಣೆಗಳನ್ನು ಕಾಣುತ್ತಲೇ ಸಾಗಿದ್ದು, ಇದೀಗ ಡಿ2ಎಚ್‌ ಸಂಸ್ಥೆಗಳು ವಿಡಿಯೊ ಕಂಟೆಂಟ್‌ ಆಪ್ಸ್‌ ವೀಕ್ಷಣೆಯ ಸೌಲಭ್ಯಗಳನ್ನು ಸೇರಿಸುತ್ತಿವೆ. ಹಾಗೆಯೇ ಡಿ2ಎಚ್‌ ಪೂರೈಕೆದಾರ ಸಂಸ್ಥೆಗಳ ನಡುವೆ ಪೈಪೋಟಿಯೂ ಸಹ ವಿಸ್ತಾರಗೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಟಾಟಾಸ್ಕೈ ಸಂಸ್ಥೆಯು ಇತ್ತೀಚಿಗೆ ತನ್ನ ಗ್ರಾಹಕರಿಗೆ ಅನೇಕ ಅನುಕೂಲಕರ ಸೌಲಭ್ಯಗಳನ್ನು ಪರಿಚಯಿಸಿದ್ದು, ಇದೀಗ ಗ್ರಾಹಕರಿಗೆ ಮತ್ತೊಂದು ಸಿಹಿಸುದ್ದಿ ಕೊಟ್ಟಿದೆ.

ಮಲ್ಟಿಟಿವಿ ಕನೆಕ್ಷನ್‌ ಸೇವೆ

ಹೌದು, ಡಿ2ಎಚ್‌ ವಲಯದಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿರುವ ಟಾಟಾಸ್ಕೈ ಸಂಸ್ಥೆಯು ಹೆಚ್‌ಡಿ ಮಲ್ಟಿಟಿವಿ ಕನೆಕ್ಷನ್‌ ಸೇವೆಯ ಶುಲ್ಕದಲ್ಲಿ 400ರೂ.ಗಳನ್ನು ಇಳಿಕೆ ಮಾಡಿದೆ. ಈ ಮೊದಲು ಟಾಟಾಸ್ಕೈ ಹೆಚ್‌ಡಿ ಮಲ್ಟಿಟಿವಿ ಕನೆಕ್ಷನ್‌ ಪಡೆಯಲು ಗ್ರಾಹಕರು 1399ರೂ.ಗಳನ್ನು ಪಾವತಿಸಬೇಕಿತ್ತು. ಆದ್ರೆ ಇದೀಗ ಬೆಲೆ ಇಳಿಕೆಯಿಂದಾಗಿ 999ರೂ.ಗಳಿಗೆ ಮಲ್ಟಿಟಿವಿ ಕನೆಕ್ಷನ್ ಪಡೆದುಕೊಳ್ಳಬಹುದಾಗಿದೆ.

ಕನೆಕ್ಷನ್ ಶುಲ್ಕ 1299ರೂ.ಗಳು

ಮಲ್ಟಿಟಿವಿ ಕನೆಕ್ಷನ್‌ 999ರೂ.ಗಳಲ್ಲಿ ಟಾಟಾಸ್ಕೈ ಇನ್‌ಸ್ಟಾಲೇಶನ್‌, ಆಕ್ಟಿವೇಶನ್, ಹೆಚ್‌ಡಿ ಸೆಟ್‌ಟಾಪ್‌ ಬಾಕ್ಸ್‌ ಮತ್ತು ರಿಮೋಟ್‌ ಸೇರಿದಂತೆ 10 ಮೀಟರ್ ಕೇಬಲ್‌ ಸಹ ಒಳಗೊಂಡಿರಲಿವೆ. ಆದರೆ ಟಾಟಾಸ್ಕೈ ಡಿ2ಎಚ್‌ ಎಸ್‌ಡಿ ಸೆಟ್‌ಟಾಪ್‌ ಮಲ್ಟಿಟಿವಿ ಕನೆಕ್ಷನ್ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಎಸ್‌ಡಿ ಸೆಟ್‌ಟಾಪ್‌ ಮಲ್ಟಿಟಿವಿ ಕನೆಕ್ಷನ್ ಶುಲ್ಕ 1299ರೂ.ಗಳು ಆಗಿದೆ. ಹಾಗೆಯೇ ಗ್ರಾಹಕರ ಅನುಕೂಲಕ್ಕಾಗಿ ಇತ್ತೀಚಿಗೆ ಟಾಟಾಸ್ಕೈ ಹಲವು ಸ್ಮಾರ್ಟ್‌ ಪ್ಲ್ಯಾನ್‌ಗಳನ್ನು ಲಾಂಚ್ ಮಾಡಿದೆ. ಅವುಗಳ ಬಗ್ಗೆ ತಿಳಿಯಲು ಮುಂದೆ ಓದಿರಿ.

ಪ್ರಾದೇಶಿಕ ಚಾನೆಲ್‌ಗಳ ಪ್ಲ್ಯಾನ್‌

ಪ್ರಾದೇಶಿಕ ಚಾನೆಲ್‌ಗಳ ಪ್ಲ್ಯಾನ್‌

ಹಿಂದಿ ಪ್ರಾದೇಶಿಕ ಚಾನೆಲ್ಸ್‌ಗಳನ್ನೊಳಗೊಂಡ 'ಹಿಂದಿ ಸ್ಮಾರ್ಟ್ ಪ್ಲ್ಯಾನ್‌' 249ರೂ. ಶುಲ್ಕವನ್ನು ನಿಗದಿ ಪಡಿಸಲಾಗಿದೆ. ಹಾಗೆಯೇ ಪಂಜಾಬಿ ಪ್ರಾದೇಶಿಕ ಚಾನೆಲ್ಸ್‌ಗಳನ್ನೊಳಗೊಂಡ 'ಪಂಜಾಬಿ ಸ್ಮಾರ್ಟ್ ಪ್ಲ್ಯಾನ್‌' ಸಹ 249ರೂ. ಬೆಲೆಯನ್ನು ಹೊಂದಿದೆ. ಇನ್ನು ಬಂಗಾಳಿ ಭಾಷೆಯ ಚಾನೆಲ್ಸ್‌ಗಳನ್ನು ಹೊಂದಿರುವ ಬಂಗಾಳಿ ಸ್ಮಾರ್ಟ್‌ ಪ್ಲ್ಯಾನ್ 220ರೂ.ಗಳಾಗಿದ್ದು, ಇವುಗಳೊಂದಿಗೆ FTA ಚಾನೆಲ್ಸ್ಗಳು ಸೇರಿರಲಿವೆ.

ಕನ್ನಡ ಭಾಷೆಯ ಚಾನೆಲ್ಸ್‌ಗಳು

ಕನ್ನಡ ಭಾಷೆಯ ಚಾನೆಲ್ಸ್‌ಗಳು

ಕನ್ನಡ ಭಾಷೆಯ ಚಾನೆಲ್ಸ್‌ಗಳು ಮತ್ತು FTA ಚಾನೆಲ್ಸ್‌ಗಳ ಗುಚ್ಛದ ಕನ್ನಡ ಸ್ಮಾರ್ಟ್‌ ಪ್ಲ್ಯಾನ್‌ ಬೆಲೆಯು 249ರೂ.ಗಳಾಗಿದ್ದು, ಅದೇ ರೀತಿ ತೆಲಗು ಚಾನೆಲ್ಸ್‌ಗಳನ್ನು ಒಳಗೊಂಡಿರುವ ತೆಲಗು ಸ್ಮಾರ್ಟ್‌ ಪ್ಲ್ಯಾನ್‌ ಬೆಲೆಯು ಸಹ 249ರೂ.ಗಳೆಂದು ನಿಗದಿ ಮಾಡಲಾಗಿದೆ. ಗುಜರಾತಿ ಸ್ಮಾರ್ಟ್‌ ಪ್ಲ್ಯಾನ್‌ ಸಹ 249ರೂ ಆಗಿದೆ. ತಮಿಳ ಸ್ಮಾರ್ಟ್‌ ಪ್ಲ್ಯಾನ್‌ ದರವು 249ರೂ. ಆಗಿದ್ದು, ಈ ಪ್ಲ್ಯಾನಿನಲ್ಲಿ ತಮಿಳ ಪ್ರಾದೇಶಿಕ ಚಾನೆಲ್‌ಗಳು ಲಭ್ಯವಾಗಲಿವೆ.

ಸ್ಮಾರ್ಟ್‌ ಪ್ಲ್ಯಾನ್‌ಗಳು

ಸ್ಮಾರ್ಟ್‌ ಪ್ಲ್ಯಾನ್‌ಗಳು

ಇನ್ನು ಓಡಿಸಾ ಸ್ಮಾರ್ಟ್‌ ಪ್ಲ್ಯಾನ್ ಬೆಲೆಯು 211ರೂ.ಗಳಾಗಿದ್ದು, ಮರಾಠಿ ಸ್ಮಾರ್ಟ್‌ ಪ್ಲ್ಯಾನ್‌ ಶುಲ್ಕವು 206ರೂ.ಗಳಾಗಿದೆ. ಹಾಗೆಯೇ ಮಲಿಯಾಳಂ ಸ್ಮಾರ್ಟ್‌ ಪ್ಲ್ಯಾನ್‌ ಬೆಲೆಯು ಸಹ 249ರೂ.ಗಳಾಗಿದೆ. ಈ ಎಲ್ಲ ಹೊಸ ಸ್ಮಾರ್ಟ್‌ ಪ್ಲ್ಯಾನ್‌ಗಳು DRP ಮತ್ತು NCF ಶುಲ್ಕವನ್ನು ಒಳಗೊಂಡಿರುತ್ತವೆ. ಗ್ರಾಹಕರು ಈ ಪ್ಲ್ಯಾನ್‌ಗಳ ಚಂದಾದಾರಿಕೆಯನ್ನು ಪಡೆದುಕೊಳ್ಳಬಹುದಾಗಿದೆ. ಇದರೊಂದಿಗೆ ಆಡ್‌ ಆನ್ ಚಾನೆಲ್ಸ್‌ಗಳ ಆಯ್ಕೆಯು ಗ್ರಾಹಕರಿಗೆ ಲಭ್ಯ ಇರಲಿದೆ. ಹೆಚ್ಚುವರಿಯಾಗಿ ಚಾನೆಲ್ಸ್‌ಗಳಿಗೆ ಸಬ್‌ಸ್ಕ್ರೈಬ್ ಆಗಬಹುದಾಗಿದೆ.

Best Mobiles in India

English summary
Tata Sky has slashed the price for HD Multi TV connection. The set-top-box now available for Rs 999. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X