ಟಾಟಾಸ್ಕೈ DTH ಮಲ್ಟಿ ಟಿವಿ ಕನೆಕ್ಷನ್ ಶುಲ್ಕದಲ್ಲಿ ಭಾರಿ ಇಳಿಕೆ!
ದೇಶದ ಡಿಟಿಎಚ್ ವಲಯದಲ್ಲಿ ಮುಂಚೂಣಿಯಲ್ಲಿರುವ ಟಾಟಾಸ್ಕೈ ಸಂಸ್ಥೆಯು ಇತ್ತೀಚಿಗಷ್ಟೆ ಹೆಚ್‌ಡಿ ಮತ್ತು ಎಸ್‌ಡಿ ಸೆಟ್‌ಅಪ್ ಬಾಕ್ಸ್‌ಗಳ ಬೆಲೆ ಇಳಿಕೆ ಮಾಡಿತ್ತು. ಹಾಗೆಯೇ ಹೊಸ ಪ್ರಾದೇಶಿಕ ಚಾನೆಲ್ ಪ್ಲ್ಯಾಕ್‌ಗಳನ್ನು ಪರಿಚಯಿಸಿದ್ದು, ಅವು ಕಡಿಮೆ ತಿಂಗಳವನ್ನು ಹೊಂದಿವೆ. ಅದೇ ಸರ್‌ಪ್ರೈಸ್ ನೀಡುವ ಹಾದಿಯಲ್ಲಿ ಮುನ್ನಡೆದಿರುವ ಟಾಟಾಸ್ಕೈ ಇದೀಗ ತನ್ನ ಗ್ರಾಹಕರಿಗೆ ಮತ್ತೊಂದು ಭಾರಿ ಸಿಹಿಸುದ್ದಿ ನೀಡಿದೆ.

ಹೌದು, ಟಾಟಾಸ್ಕೈ ಸಂಸ್ಥೆಯು ಡಿಟಿಎಚ್ ಹೆಚ್‌ಡಿ ಮಲ್ಟಿಟಿವಿ ಸೆಟ್‌ಅಪ್ ಕನೆಕ್ಷನ್ ಶುಲ್ಕದಲ್ಲಿ ಇಳಿಕೆ ಮಾಡಿದೆ. ಈ ಮೊದಲು ಒಂದೇ ಡಿಟಿಎಚ್‌ನಲ್ಲಿ ಎರಡನೇ ಟಿವಿಗೆ ಕನೆಕ್ಷನ್ ಪಡೆಯ ಬೇಕಿದ್ದರೇ ಗ್ರಾಹಕರು 1,199ರೂ ಶುಲ್ಕ ನೀಡಬೇಕಿತ್ತು. ಆದ್ರೆ ಈಗ 999ರೂ.ರೂ ನೀಡಿ ಎರಡನೇ ಟಿವಿಗೆ ಕನೆಕ್ಷನ್ ಪಡೆಯಬಹುದಾಗಿದೆ. ಈ ಕೊಡುಗೆ ಟಾಟಾಸ್ಕೈ ಹೆಚ್‌ಡಿ ಗ್ರಾಹಕರಿಗೆ ಅನ್ವಯವಾಗಲಿದೆ.

ಇನ್ನು ಟಾಟಾಸ್ಕೈ ಹೆಚ್‌ಡಿ ಸೆಟ್‌ಅಪ್ ಬಾಕ್ಸ್ ಕನೆಕ್ಷನ್ ಶುಲ್ಕವು 1,499ರೂ.ಗಳಾಗಿದ್ದು, ಹಾಗೆಯೇ ಎಸ್‌ಡಿ ಸೆಟ್‌ಅಪ್ ಬಾಕ್ಸ್ ಕನೆಕ್ಷನ್ ಶುಲ್ಕವು 1,399ರೂ.ಗಳಾಗಿದೆ. ಇವುಗಳೊಂದಿಗೆ ಟಾಟಾಸ್ಕೈ ಇನ್ನರಡು ಸೆಟ್‌ಟಾಪ್ ಬಾಕ್ಸ್ ಆಯ್ಕೆಗಳನ್ನು ಹೊಂದಿದ್ದು, ಅವುಗಳು ಕ್ರಮವಾಗಿ ಟಾಟಾಸ್ಕೈ ಹೆಚ್‌ಡಿ 4K ಸೆಟ್‌ಟಾಪ್ ಬಾಕ್ಸ್ ಆಗಿದೆ ಶುಲ್ಕವು 5,990ರೂ. ಮತ್ತು ಟಾಟಾಸ್ಕೈ PVR ಸೆಟ್‌ಟಾಪ್ ಬಾಕ್ಸ್ ಶುಲ್ಕವು 8,900,ರೂ. ಆಗಿದೆ.

ಕಂಪನಿಯು ಇತ್ತೀಚೆಗೆ ತನ್ನ ನಾಲ್ಕು ಆಡ್-ಆನ್ ಹಿಂದಿ ಪ್ಯಾಕ್‌ಗಳ ಬೆಲೆಗಳನ್ನು ಪರಿಷ್ಕರಿಸಿತು ಮತ್ತು ಎರಡು ಹೊಸ ಪ್ಲ್ಯಾನ್‌ಗಳನ್ನು ಸೇರಿಸಿತು. ಸದ್ಯದ ಪ್ಯಾಕ್‌ಗಳಾದ ಹಿಂದಿ ಮೂವೀಸ್ ಮಿನಿ, ಹಿಂದಿ ಮೂವೀಸ್ ಮಿನಿ ಎಚ್‌ಡಿ, ಹಿಂದಿ ಎಂಟರ್ಟೈನ್ಮೆಂಟ್ ಮಿನಿ ಮತ್ತು ಹಿಂದಿ ಎಂಟರ್ಟೈನ್ಮೆಂಟ್ ಮಿನಿ ಎಚ್‌ಡಿ ಬೆಲೆಗಳನ್ನು ಪರಿಷ್ಕರಿಸಲಾಗಿದೆ. ಈ ನಡುವೆ, ಹಿಂದಿ ಮೂವೀಸ್ ಮತ್ತು ಹಿಂದಿ ಮೂವೀಸ್ ಹೆಚ್‌ಡಿ ಹೊಸದಾಗಿ ಸೇರಿಸಲಾದ ಚಾನೆಲ್‌ಗಳಾಗಿದೆ.

ಇನ್ನು ಹಿಂದಿ ಮೂವೀಸ್ ಮಿನಿ ಹೆಚ್ ಪ್ಯಾಕ್ ಈ ಹಿಂದೆ 97.47 ರೂಗಳಿಗೆ ಲಭ್ಯವಿತ್ತು. ಈಗ, ರೂ. 28.32 ಬೆಲೆ ಕಡಿತವಾಗಿದ್ದು, 69.15 ರೂಗಳಿಗೆ ಖರೀದಿಸಬಹುದು. ಪ್ಯಾಕ್ 9 ಎಸ್‌ಡಿ ಮತ್ತು 5 ಹೆಚ್‌ಡಿ ಚಾನೆಲ್‌ಗಳನ್ನು ನೀಡುತ್ತದೆ. ಹಿಂದಿ ಎಂಟರ್ಟೈನ್ಮೆಂಟ್ ಮಿನಿ ಪ್ಯಾಕ್‌ನಲ್ಲಿ 73.40 ರೂ.ಗಳಿಂದ 62.78 ರೂ.ಗೆ ಬೆಲೆ ಇಳಿಕೆಯಾಗಿದೆ. ಪ್ಯಾಕ್ 10 ಎಸ್‌ಡಿ ಚಾನೆಲ್ ಒದಗಿಸುತ್ತದೆ.

ಹೊಸ ವರ್ಷಕ್ಕೆ ಲಾಂಚ್ ಆಗಲಿದೆ 108MP ಕ್ಯಾಮೆರಾದ 'ರೆಡ್ಮಿ ನೋಟ್ 10' ಸ್ಮಾರ್ಟ್‌ಫೋನ್!
ಶಿಯೋಮಿ ಕಂಪನಿಯು ಇತ್ತೀಚಿಗಷ್ಟೆ ಯುರೋಪ್‌ನಲ್ಲಿ ''ಮಿ CC9 ಪ್ರೊ'' ಹೆಸರಿನಲ್ಲಿ ವಿಶ್ವದ ಮೊದಲ 108ಎಂಪಿ ಸೆನ್ಸಾರ್ ಕ್ಯಾಮೆರಾ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ. ಈ ದೈತ್ಯ ಸ್ಮಾರ್ಟ್‌ಫೋನ್ ಅನ್ನು ಭಾರತದಲ್ಲಿ ''ರೆಡ್ಮಿ ನೋಟ್ 10'' ಹೆಸರಿನಲ್ಲಿ ಪರಿಚಯಿಸಲು ಶಿಯೋಮಿ ಸಜ್ಜಾಗಿದೆ. ಈ ಫ್ಲ್ಯಾಗ್‌ಶಿಫ್ ಸ್ಮಾರ್ಟ್‌ಫೋನ್ ದೇಶದಲ್ಲಿಯು 108ಎಂಪಿ ಸೆನ್ಸಾರ್ ಕ್ಯಾಮೆರಾ ವಿಶೇಷದೊಂದಿಗೆ ಲಾಂಚ್ ಆಗಲಿದ್ದು, ಮಾರುಕಟ್ಟೆಯಲ್ಲಿ ಹೊಸ ಸಂಚಲನ ಮೂಡಿಸಲಿದೆ.
ಹೌದು, ಶಿಯೋಯು ಭಾರತದಲ್ಲಿ ರೆಡ್ಮಿ ನೋಟ್ 10 ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲು ತಯಾರಾಗಿದ್ದು, ಇದೇ ಜನವರಿ 2020ರಲ್ಲಿ ಲಾಂಚ್ ಮಾಡುವುದು ಬಹುತೇಕ ಖಚಿತವಾಗಿದೆ. ಇನ್ನು ಈ ಸ್ಮಾರ್ಟ್‌ಫೋನ್ ಪೆಂಟಾ ಕ್ಯಾಮೆರಾ ಸೆಟ್‌ಅಪ್ ಒಳಗೊಂಡಿದ್ದು, 5,260mAh ಬ್ಯಾಟರಿ ಲೈಫ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಜೊತೆಗೆ 8GB RAM ಮತ್ತು 256GB ಸ್ಟೋರೇಜ್ ಆಯ್ಕೆಯು ಪ್ಲಸ್ ಪಾಯಿಂಟ್ ಆಗಿದೆ. ಇನ್ನು ''ಮಿ ನೋಟ್ 10'' ಸ್ಮಾರ್ಟ್‌ಫೋನಿನ ಇತರೆ ಫೀಚರ್ಸ್‌ಗಳೆನಿರಲಿವೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಡಿಸ್‌ಪ್ಲೇ ಮತ್ತು ಡಿಸೈನ್
ಮಿ ನೋಟ್ 10 ಸ್ಮಾರ್ಟ್‌ಫೋನ್ 1080x2340 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.47 ಇಂಚಿನ ಪೂರ್ಣ ಹೆಚ್‌ಡಿಯ AMOLED ಡಿಸ್‌ಪ್ಲೇ ಒಳಗೊಂಡಿರಲಿದ್ದು, ವಾಟರ್ ಡ್ರಾಪ್ ನಾಚ್ ಡಿಸೈನ್ ಇರಲಿದೆ. ಹಾಗೆಯೇ ಈ ಫೋನಿನ ಡಿಸ್‌ಪ್ಲೇಯು ಫಿಂಗರ್‌ಪ್ರಿಂಟ್ ಸೆನ್ಸಾರ್ ರಚನೆಯನ್ನು ಪಡೆದಿರಲಿದೆ. ವಿಡಿಯೊ ಮತ್ತು ಗೇಮ್ಸ್‌ಗೆ ಪೂರಕ ಅನಿಸಲಿದೆ.

ಪ್ರೊಸೆಸರ ಮತ್ತು ಮೆಮೊರಿ
ಮಿ ನೋಟ್ 10 ಸ್ಮಾರ್ಟ್‌ಫೋನ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 730G ಚಿಪ್‌ಸೆಟ್ ಪ್ರೊಸೆಸರ್ ಇದರಲ್ಲಿ ಕಾರ್ಯನಿರ್ವಹಿಸಲಿದೆ. ಇದಕ್ಕೆ ಬೆಂಬಲವಾಗಿ ಆಂಡ್ರಾಯ್ಡ್ 10 ಓಎಸ್ ಇರುವ ಸಾಧ್ಯತೆಗಳಿವೆ. ಇದರೊಂದಿಗೆ 8GB RAM ಮತ್ತು 256GB ಸ್ಟೋರೇಜ್ ಸಾಮರ್ಥ್ಯದ ಆಯ್ಕೆ ಪಡೆದಿರುವ ನಿರೀಕ್ಷೆಗಳಿವೆ. ಎಸ್‌ಡಿ ಕಾರ್ಡ್ ಮೂಲಕ ಬಾಹ್ಯ ಮೆಮೊರಿ ವಿಸ್ತರಿಸಲು ಅವಕಾಶ ಲಭ್ಯ ಇರಲಿದೆ.

ಪೆಂಟಾ ಕ್ಯಾಮೆರಾ ಸ್ಪೆಷಲ್
ಮಿ ನೋಟ್ 10 ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ಪೆಂಟಾ ಕ್ಯಾಮೆರಾ ರಚನೆಯನ್ನು ಹೊಂದಿರಲಿದ್ದು, ಮುಖ್ಯ ಕ್ಯಾಮೆರಾವು 108ಎಂಪಿ ಸೆನ್ಸಾರ್ ಸಾಮರ್ಥ್ಯದಲ್ಲಿರಲಿದೆ. ಉಳಿದಂತೆ 20ಎಂಪಿ ಅಲ್ಟ್ರಾ ವೈಲ್ಡ್ ಆಂಗಲ್ ಕ್ಯಾಮೆರಾ, 12ಎಂಪಿಯ + 5ಎಂಪಿಯ ಟೆಲಿಫೋಟೊ ಸೆನ್ಸಾರ್ ಕ್ಯಾಮೆರಾ ಹಾಗೂ 2ಎಂಪಿಯ ಮೈಕ್ರೊ ಕ್ಯಾಮೆರಾ ಸೆಟ್‌ಅಪ್ ಇರಲಿದೆ. ಇನ್ನು ಸೆಲ್ಫಿಗಾಗಿ 32ಎಂಪಿ ಸೆನ್ಸಾರ್ ಕ್ಯಾಮೆರಾ ಇರಲಿದೆ.

ಬ್ಯಾಟರಿ ಪವರ್
ಮಿ ನೋಟ್ 10 ಸ್ಮಾರ್ಟ್‌ಫೋನ್ 5,260mAh ಸಾಮರ್ಥ್ಯದ ಬ್ಯಾಟರಿ ಬಾಳಿಕೆ ಪಡೆದಿರಲಿದ್ದು, ಇದರೊಂದಿಗೆ 30W ಸಾಮರ್ಥ್ಯದ ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಸಹ ಇರಲಿದೆ. ಇದರೊಂದಿಗೆ ವೈಫೈ, ಜಿಪಿಎಸ್, ಬ್ಲೂಟೂತ್, ಕ್ಯಾಮೆರಾ ಜೂಮ್ ಆಯ್ಕೆಗಳು ಸೇರಿದಂತೆ ಇನ್ನಿತರೆ ಅಗತ್ಯ ಸೌಲಭ್ಯಗಳನ್ನು ಒಳಗೊಂಡಿರಲಿದೆ.


Click it and Unblock the Notifications








