ಟಾಟಾಸ್ಕೈ ಹೊಸ ಡಿಟಿಎಚ್ ಕನೆಕ್ಷನ್ ಬೆಲೆ ಏರಿಕೆ!

|

ಡಿಟಿಎಚ್ ವಲಯದಲ್ಲಿ ಮುಂಚೂಣಿಯ ಸ್ಥಾನದಲ್ಲಿ ಕಾಣಿಸಿಕೊಂಡಿರುವ ಟಾಟಾಸ್ಕೈ, ಕಡಿಮೆ ಬೆಲೆಯಲ್ಲಿ ಸೆಟ್‌ಟಾಪ್ ಬಾಕ್ಸ್‌ ಸೌಲಭ್ಯ ಕಲ್ಪಿಸಿತ್ತು. ಟ್ರಾಯ್‌ನ NTO 2.0 ಹೊಸ ನಿಯಮದಂತೆ NCF-ನೆಟವರ್ಕ್ ಕ್ಯಾಪಸಿಟಿ ಫೀ ಶುಲ್ಕವನ್ನು ಇಳಿಕೆ ಮಾಡಿದೆ. ಆದ್ರೆ ಇದೀಗ ತನ್ನ ಎಸ್‌ಡಿ ಮತ್ತು ಹೆಚ್‌ಡಿ ಸೆಟ್‌ಟಾಪ್ ಬಾಕ್ಸ್ ಬೆಲೆಯಲ್ಲಿ ಏರಿಕೆ ಮಾಡಿದೆ. ಇದರೊಂದಿಗೆ ಮಲ್ಟಿ ಟಿವಿ ಕನೆಕ್ಷನ್ ಬೆಲೆಯಲ್ಲಿಯೂ ಹೆಚ್ಚಳ ಮಾಡಿರುವ ಟಾಟಾಸ್ಕೈ ಗ್ರಾಹಕರಿಗೆ ತುಟ್ಟಿ ಅನಿಸಿದೆ.

ಟಾಟಾಸ್ಕೈ

ಹೌದು, ಟಾಟಾಸ್ಕೈ ತನ್ನ ಇಂದಿನಿಂದ (ಮಾ.4)ಎಸ್‌ಡಿ ಮತ್ತು ಹೆಚ್‌ಡಿ ಸೆಟ್‌ಟಾಪ್ ಬೆಲೆಯಲ್ಲಿ 100ರೂ.ಏರಿಕೆ ಮಾಡಿದೆ. ಈ ದರ ಹೆಚ್ಚಳವು ಹೊಸದಾಗಿ ಟಾಟಾಸ್ಕೈ ಸೆಟ್‌ಟಾಪ್ ಬಾಕ್ಸ್ ಇನ್‌ಸ್ಟಾಲ್ ಮಾಡಿಸಿಕೊಳ್ಳುವ ಗ್ರಾಹಕರಿಗೆ ಅನ್ವಯವಾಗಲಿದೆ. ಹಾಗೆಯೇ ಮಲ್ಟಿ ಟಿವಿ ಕನೆಕ್ಷನ್ ದರದಲ್ಲಿಯೂ 100ರೂ.ಏರಿಕೆ ಮಾಡಿದ್ದು, ಎಸ್‌ಡಿ ಮತ್ತು ಹೆಚ್‌ಡಿ ಮಾದರಿಯಲ್ಲಿ ಎರಡನೇ ಮಲ್ಟಿ ಟಿವಿ ಕನೆಕ್ಷನ್ ಪಡೆಯಬೇಕಿದ್ದರೇ ಸಹ ದರ ಏರಿಕೆ ಶುಲ್ಕ ಅನ್ವಯವಾಗಲಿದೆ.

ಡಿಟಿಎಚ್ - ದರ ಹೆಚ್ಚಳ

ಡಿಟಿಎಚ್ - ದರ ಹೆಚ್ಚಳ

ಟಾಟಾಸ್ಕೈ ಕಳೆದ ವರ್ಷದಲ್ಲಿ ಸೆಟ್‌ಟಾಪ್‌ ಬಾಕ್ಸ್ ದರಗಳಲ್ಲಿ ಇಳಿಕೆ ಮಾಡಿತ್ತು. ಆದ್ರೆ ಈಗ ಬೆಲೆ ಏರಿಕೆ ಮಾಡಿದೆ. 1,299ರೂ.ಗಳಿಗೆ ಲಭ್ಯವಿದ್ದ ಟಾಟಾಸ್ಕೈ ಎಸ್‌ಡಿ ಸೆಟ್‌ಟಾಪ್ ಬಾಕ್ಸ್ 100ರೂ. ಬೆಲೆ ಏರಿಕೆ ಆಗಿದ್ದು, ಈಗ 1,399ರೂ.ಗಳ ಪ್ರೈಸ್‌ಟ್ಯಾಗ್ ಹೊಂದಿದೆ. ಅದೇ ರೀತಿ 1,399ರೂ, ಬೆಲೆಯನ್ನು ಹೊಂದಿದ್ದ ಹೆಚ್‌ಡಿ ಸೆಟ್‌ಟಾಪ್‌ ಬಾಕ್ಸ್ ದರವು ಇದೀಗ 1,499ರೂ.ಗಳಿಗೆ ಲಭ್ಯವಾಗಲಿದೆ. ಒಟ್ಟು 100ರೂ. ಹೆಚ್ಚಳ ಕಂಡಿದೆ.

ಮಲ್ಟಿ ಟಿವಿ ಕನೆಕ್ಷನ್ ಬೆಲೆ ಏರಿಕೆ

ಮಲ್ಟಿ ಟಿವಿ ಕನೆಕ್ಷನ್ ಬೆಲೆ ಏರಿಕೆ

ಟಾಟಾಸ್ಕೈ ಸಂಸ್ಥೆಯು ತನ್ನ ಮಲ್ಟಿ ಟಿವಿ ಕನೆಕ್ಷನ್ ಬೆಲೆಯಲ್ಲಿಯೂ ಶೇ. 7.2 ಏರಿಕೆ ಮಾಡಿದೆ. ಪ್ರಸ್ತುತ ಬೆಲೆಯಲ್ಲಿ ಸುಮಾರು 100ರೂ. ಹೆಚ್ಚಳವಾಗಿದೆ. 999ರೂ.ಗಳ ಶುಲ್ಕ ಹೊಂದಿದ್ದ ಮಲ್ಟಿ ಟಿವಿ ಕನೆಕ್ಷನ್ ಇದೀಗ 1,199ರೂ.ಗಳಿಗೆ ಲಭ್ಯವಾಗಲಿದೆ.

ಏರ್‌ಟೆಲ್ ಮತ್ತು ಡಿಶ್‌ಟಿವಿ ದರ

ಏರ್‌ಟೆಲ್ ಮತ್ತು ಡಿಶ್‌ಟಿವಿ ದರ

ಏರ್‌ಟೆಲ್ ಡಿಜಿಟಲ್ ಟಿವಿ ಕನೆಕ್ಷನ್ ದರವು 1,100ರೂ. ಆಗಿದೆ. ಹಾಗೆಯೇ ಏರ್‌ಟೆಲ್ ಡಿಜಿಟಲ್ ಟಿವಿ ಹೆಚ್‌ಡಿ ಕನೆಕ್ಷನ್ ದರವು 1,300ರೂ.ಗಳಾಗಿದೆ. ಅದೇ ರೀತಿ ಡಿಶ್‌ ಟಿವಿ (ಡಿಶ್‌ಟಿವಿ ನೆಕ್ಸ್ಟ್ ) ಸೆಟ್‌ಟಾಪ್ ಬಾಕ್ಸ್ ಕನೆಕ್ಷನ್ ಶುಲ್ಕವು 1,490ರೂ.ಗಳು ಆಗಿದೆ. ಇನ್ನು ಡಿಶ್‌ಟಿವಿ ನೆಕ್ಸ್ಟ್ ಹೆಚ್‌ಡಿ ಸೆಟ್‌ಟಾಪ್ ಕನೆಕ್ಷನ್ ದರವು 1,590ರೂ. ಆಗಿದೆ.

ವಿಡಿಯೊಕಾನ್ ಮತ್ತು ಸನ್‌ಡೈರೆಕ್ಟ್ ದರ

ವಿಡಿಯೊಕಾನ್ ಮತ್ತು ಸನ್‌ಡೈರೆಕ್ಟ್ ದರ

ವಿಡಿಯೊಕಾನ್ ಎಸ್‌ಡಿ ಸೆಟ್‌ಟಾಪ್ ಬಾಕ್ಸ್ ದರವು 1,599ರೂ. ಆಗಿದ್ದು, ಹೆಚ್‌ಡಿ ಸೆಟ್‌ಟಾಪ್‌ ಬಾಕ್ಸ್‌ ದರವು 1,799ರೂ. ಬೆಲೆಯನ್ನು ಹೊಂದಿದೆ. ಸನ್‌ ಡೈರೆಕ್ಟ್‌ ಎಸ್‌ಡಿ ಸೆಟ್‌ಟಾಪ್ ಬಾಕ್ಸ್ ಶುಲ್ಕವು 1,799 ಹಾಗೂ ಹೆಚ್‌ಡಿ ಬಾಕ್ಸ್ ಬೆಲೆಯು 1,999ರೂ. ಆಗಿದೆ.

Most Read Articles
Best Mobiles in India

English summary
Tata Sky set-top-boxes will se a hike of Rs 100 and the new prices will be effective from February 4, 2020.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X