ಟಾಟಾಸ್ಕೈನಲ್ಲಿ ಕನ್ನಡ ಚಾನೆಲ್‌ಗಳ ತಿಂಗಳ ಪ್ಯಾಕ್‌ ಶುಲ್ಕ 249.ರೂ ಮಾತ್ರ!

|

ದೇಶದ ಡಿಟಿಎಚ್‌ ವಲಯದಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿರುವ ಟಾಟಾಸ್ಕೈ ಈಗಾಗಲೇ ಗ್ರಾಹಕರಿಗೆ ಭಿನ್ನ ಭಿನ್ನ ಪ್ಯಾಕೆಜ್‌ಗಳಲ್ಲಿ ತಿಂಗಳ ಪ್ಲ್ಯಾನ್‌ಗಳನ್ನು ನೀಡಿದೆ. ಗ್ರಾಹಕರಿಗೆ ಅನುಕೂಲವಾಗಲೆಂದು ತಿಂಗಳ ಪ್ರಾದೇಶಿಕ ಚಾನೆಲ್ ಪ್ಯಾಕ್‌ಗಳನ್ನು ಸಹ ಪರಿಚಯಿಸಿ ಸೈ ಎನಿಸಿಕೊಂಡಿದೆ. ಆದ್ರೆ ಇದೀಗ ಮತ್ತೆ ಮೂರು ತಿಂಗಳ ಪ್ಯಾಕ್‌ಗಳನ್ನು ಬಿಡುಗಡೆ ಮಾಡಿದ್ದು, ಅವು ಕನ್ನಡ ಚಾನೆಲ್‌ಗಳನ್ನು ಒಳಗೊಂಡಿವೆ.

ಟಾಟಾಸ್ಕೈ

ಹೌದು, ಟಾಟಾಸ್ಕೈ ಸಂಸ್ಥೆಯು ಹೊಸದಾಗಿ ಮೂರು ಕನ್ನಡ ಚಾನೆಲ್‌ಗಳ ವಿಶೇಷ ಪ್ಯಾಕ್‌ಗಳನ್ನು ಬಿಡುಗಡೆ ಮಾಡಿದೆ. ಅವುಗಳು ಕ್ರಮವಾಗಿ ಕನ್ನಡ ಲೈಟ್‌ ಪ್ಲಸ್‌ ಪ್ಯಾಕ್, ಕನ್ನಡ ವ್ಯಾಲ್ಯೂ ಪ್ಲಸ್‌ ಪ್ಯಾಕ್ ಮತ್ತು ಕನ್ನಡ ಲೈಟ್‌ ಪ್ಲಸ್‌ ಪ್ಯಾಕ್ ಹೆಸರಿನಲ್ಲಿವೆ. ಈ ಮೂರು ವಿಶೇಷ ಪ್ಯಾಕ್‌ಗಳು ತಿಂಗಳ, ಆರು ತಿಂಗಳ ಮತ್ತು ವಾರ್ಷಿಕ ಆಯ್ಕೆಯ ವ್ಯಾಲಿಡಿಟಿ ಅವಧಿಯನ್ನು ಪಡೆದುಕೊಂಡಿವೆ. ಹಾಗಾದರೇ ಟಾಟಾಸ್ಕೈ ಪರಿಚಯಿಸಿರುವ ಹೊಸ ಕನ್ನಡ ಪ್ಯಾಕ್‌ಗಳ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಮುಂದೆ ನೋಡೋಣ ಬನ್ನಿರಿ.

ತಿಂಗಳ ಕನ್ನಡ ಲೈಟ್‌ ಪ್ಲಸ್‌ ಪ್ಯಾಕ್

ತಿಂಗಳ ಕನ್ನಡ ಲೈಟ್‌ ಪ್ಲಸ್‌ ಪ್ಯಾಕ್

ಟಾಟಾಸ್ಕೈನ್ ಈ ಕನ್ನಡ ಲೈಟ್‌ ಪ್ಲಸ್‌ ಪ್ಯಾಕ್‌ನಲ್ಲಿ 45 ಸ್ಟ್ಯಾಂಡರ್ಡ್ ಡೆಫಿನಿಶನ್‌ (ಎಸ್‌ಡಿ) ಚಾನೆಲ್ಸ್‌ಗಳು ಲಭ್ಯವಾಗುತ್ತವೆ. ಅವುಗಳಲ್ಲಿ ಒಟ್ಟು 12 ಕನ್ನಡ ಪ್ರಾದೇಶಿಕ ಚಾನೆಲ್ಸ್‌ಗಳು ಇರುತ್ತವೆ. ಜೊತೆಗೆ ಒಂದು ಹಿಂದಿ ಮ್ಯೂವಿಸ್‌, ಎರಡು ಹಿಂದಿ ನ್ಯೂಸ್‌, ಮೂರು ಕಿಡ್ಸ್‌ ಚಾನೆಲ್ಸ್, ಆರು ತೆಲಗು ಪ್ರಾದೇಶಿಕ ಚಾನೆಲ್ಸ್‌, ಒಂದು ಇಂಗ್ಲೀಷ್‌ ನ್ಯೂಸ್ ಚಾನೆಲ್, ಎಂಡು ತಮಿಳ ಪ್ರಾದೇಶಿಕ ಚಾನೆಲ್ಸ್, ಎರಡು ಉರ್ದು, ಒಂದು ಮ್ಯೂಸಿಕ್, ಮೂರು ನಾಲೆಡ್ಜ್ ಚಾನೆಲ್ಸ್‌ ಮತ್ತು ಆರು ಮಲಯಾಳಂ ಚಾನೆಲ್ಸ್‌ಗಳು ಸೇರಿರುತ್ತವೆ.

ಆರು ಕನ್ನಡ ಲೈಟ್‌ ಪ್ಲಸ್‌ ಪ್ಯಾಕ್

ಆರು ಕನ್ನಡ ಲೈಟ್‌ ಪ್ಲಸ್‌ ಪ್ಯಾಕ್

ಟಾಟಾಸ್ಕೈ ಪರಿಚಯಿಸಿರುವ ಆರು ತಿಂಗಳ ಕನ್ನಡ ಪ್ಯಾಕ್‌ನಲ್ಲಿ ಒಟ್ಟು 74 ಚಾನೆಲ್ಸ್‌ಗಳು ಲಭ್ಯವಾಗುತ್ತವೆ. ಅವುಗಳಲ್ಲಿ ಒಟ್ಟು 12 ಕನ್ನಡ ಪ್ರಾದೇಶಿಕ ಚಾನೆಲ್ಸ್‌ಗಳು ಸೇರಿದಂತೆ ಮಲಯಾಳಂ ಚಾನೆಲ್ಸ್, ತಮಿಳ, ತೆಲಗು, ಕಿಡ್ಸ್‌, ನ್ಯೂಸ್‌, ಹಿಂದಿಯ ಕೆಲವು ಆಯ್ದ ಚಾನೆಲ್ಸ್‌ಗಳು ಸಹ ಲಭ್ಯವಾಗಲಿವೆ. ಜೊತೆಗೆ ಸ್ಪೋರ್ಟ್ಸ್‌ ಚಾನೆಲ್ಸ್‌ಗಳು ಸಹ ದೊರೆಯುತ್ತವೆ.

ವಾರ್ಷಿಕ್ ಕನ್ನಡ ಲೈಟ್‌ ಪ್ಲಸ್‌ ಪ್ಯಾಕ್

ವಾರ್ಷಿಕ್ ಕನ್ನಡ ಲೈಟ್‌ ಪ್ಲಸ್‌ ಪ್ಯಾಕ್

ಕನ್ನಡ ಲೈಟ್‌ ಪ್ಲಸ್‌ ಪ್ಯಾಕ್‌ನಲ್ಲಿರುವಂತೆ 'ವಾರ್ಷಿಕ್ ಕನ್ನಡ ಲೈಟ್‌ ಪ್ಲಸ್‌' ಪ್ಯಾಕ್‌ನಲ್ಲಿಯೂ ಸಹ 45 ಸ್ಟ್ಯಾಂಡರ್ಡ್ ಡೆಫಿನಿಶನ್‌ (ಎಸ್‌ಡಿ) ಚಾನೆಲ್ಸ್‌ಗಳು ಲಭ್ಯವಾಗುತ್ತವೆ. ಅವುಗಳಲ್ಲಿ ಒಟ್ಟು 12 ಕನ್ನಡ ಪ್ರಾದೇಶಿಕ ಚಾನೆಲ್ಸ್‌ಗಳು ಇರುತ್ತವೆ. ಜೊತೆಗೆ ಒಂದು ಹಿಂದಿ ಮ್ಯೂವಿಸ್‌, ಎರಡು ಹಿಂದಿ ನ್ಯೂಸ್‌, ಮೂರು ಕಿಡ್ಸ್‌ ಚಾನೆಲ್ಸ್, ಆರು ತೆಲಗು ಪ್ರಾದೇಶಿಕ ಚಾನೆಲ್ಸ್‌, ಒಂದು ಇಂಗ್ಲೀಷ್‌ ನ್ಯೂಸ್ ಚಾನೆಲ್, ಎಂಡು ತಮಿಳ ಪ್ರಾದೇಶಿಕ ಚಾನೆಲ್ಸ್, ಎರಡು ಉರ್ದು, ಒಂದು ಮ್ಯೂಸಿಕ್, ಮೂರು ನಾಲೆಡ್ಜ್ ಚಾನೆಲ್ಸ್‌ ಮತ್ತು ಆರು ಮಲಯಾಳಂ ಚಾನೆಲ್ಸ್‌ಗಳು ಸೇರಿರುತ್ತವೆ.

ಪ್ಯಾಕ್‌ಗಳ ಬೆಲೆ

ಪ್ಯಾಕ್‌ಗಳ ಬೆಲೆ

ಕನ್ನಡ ಲೈಟ್‌ ಪ್ಲಸ್‌ ಪ್ಯಾಕ್ ತಿಂಗಳ ಮೊತ್ತ 249ರೂ. ಆಗಿದ್ದು, ಇದು ಟಾಕ್ಸ್‌ ಮತ್ತು NCFಯನ್ನು ಒಳಗೊಂಡಿರುತ್ತದೆ. ಹಾಗೆಯೇ ಆರು ತಿಂಗಳ ಕನ್ನಡ ಲೈಟ್‌ ಪ್ಲಸ್‌ ಪ್ಯಾಕ್ ಮೊತ್ತ 1,878ರೂ.ಗಳಾಗಿದೆ. ವಾರ್ಷಿಕ್ ಕನ್ನಡ ಲೈಟ್‌ ಪ್ಲಸ್‌ ಪ್ಯಾಕ್ ಮೊತ್ತ 2,988ರೂ.ಗಳಾಗಿದೆ. 1,878ರೂ.ಗಳ ಆರು ತಿಂಗಳ ಕನ್ನಡ ಲೈಟ್‌ ಪ್ಲಸ್‌ ಪ್ಯಾಕ್, ತಿಂಗಳಿಗೆ ನೋಡುವುದಾದರೇ 313ರೂ. ಆಗುತ್ತದೆ ಎನ್ನಲಾಗಿದೆ.

Best Mobiles in India

English summary
The Kannada plan from Tata Sky offers a total of 45 SD channels which includes 1 Hindi movie and 3 knowledge channels. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X