ಟಾಟಾಸ್ಕೈ DTH ಕೊಡುಗೆ: ಗ್ರಾಹಕರಿಗೆ ಸಿಗಲಿದೆ 2 ತಿಂಗಳು ಹೆಚ್ಚುವರಿ ಉಚಿತ ಸೇವೆ!
ಭಾರತದ ಡಿಟಿಎಚ್ ಕ್ಷೇತ್ರದಲ್ಲಿ ಜನಪ್ರಿಯ ಸ್ಥಾನ ಪಡೆದಿರುವ ಟಾಟಾಸ್ಕೈ ಸಂಸ್ಥೆಯು ತನ್ನ ಗ್ರಾಹಕರ ಅನುಕೂಲಕ್ಕಾಗಿ ಹಲವು ಸೌಲಭ್ಯಗಳನ್ನು ಈಗಾಗಲೇ ಪರಿಚಯಿಸಿದೆ. ಲಾಕ್‌ಡೌನ್ ಸಂದರ್ಭದಲ್ಲಿಯು ವ್ಯಾಲಿಡಿಟಿ ಅವಧಿಯನ್ನು ವಿಸ್ತರಿಸಿತ್ತು ಹಾಗೂ ಲೋನ್ ಕ್ರೆಡಿಟ್ ನೀಡುವ ಆಯ್ಕೆ ಸಹ ನೀಡಿತ್ತು. ಹಾಗೆಯೇ ಎರಡು ತಿಂಗಳ ಹೆಚ್ಚುವರಿ ಉಚಿತ ಸೇವೆಯನ್ನು ನೀಡುವ ಘೋಷಣೆ ಮಾಡಿತ್ತು. ಈಗ ಮತ್ತೆ ಹೆಚ್ಚುವರಿ ಸೇವೆಯನ್ನು ತಿಳಿಸಿದೆ.

ಹೌದು, ಟಾಟಾಸ್ಕೈ ಡಿಟಿಎಚ್ ಸಂಸ್ಥೆಯು ವಾರ್ಷಿಕ ರೀಚಾರ್ಜ್‌ಗೆ ಎರಡು ತಿಂಗಳ ಹೆಚ್ಚುವರಿ ಉಚಿತ ಸೇವೆಯನ್ನು ಘೋಷಿಸಿದೆ. ಲಾಂಗ್ ಟರ್ಮ್ ರೀಚಾರ್ಜ್ ಆಯ್ಕೆಯನ್ನು ರೀಚಾರ್ಜ್ ಮಾಡಿಸಿಕೊಳ್ಳುವ ಗ್ರಾಹಕರಿಗೆ ಕ್ಯಾಶ್‌ಬ್ಯಾಕ್ ರೂಪದಲ್ಲಿ ಎರಡು ತಿಂಗಳ ಹೆಚ್ಚುವರಿ ಅವಧಿಯ ಕೊಡುಗೆಯನ್ನು ಟಾಟಾಸ್ಕೈ ಒದಗಿಸುತ್ತಿದೆ. ಈ ವಾರ್ಷಿಕ ರೀಚಾರ್ಜ್ ಕೊಡುಗೆಯು ದೀರ್ಘಾವಧಿ ವ್ಯಾಲಿಡಿಟಿ ಬಯಸುವ ಚಂದಾದಾರರಿಗೆ ಹೆಚ್ಚು ಉಪಯುಕ್ತ ಅನಿಸಲಿದೆ.

ಒಂದು ವರ್ಷದ ಅಥವಾ ಅದಕ್ಕಿಂತಲೂ ಅಧಿಕ ವ್ಯಾಲಿಡಿಟಿಯ ಡಿಟಿಎಚ್ ಯೋಜನೆಗಳನ್ನು ರೀಚಾರ್ಜ್ ಮಾಡಿಸಿಕೊಳ್ಳುವ ಗ್ರಾಹಕರಿಗೆ ಈ ಕೊಡುಗೆ ಲಭ್ಯವಾಗಲಿದೆ. ಇನ್ನು ಈ ಯೋಜನೆಯನ್ನು ಟಾಟಾಸ್ಕೈ ಮೊಬೈಲ್ ಆಪ್ ಅಥವಾ ಸಂಸ್ಥೆಯ ಅಧಿಕೃತ ವೆಬ್‌ಸೈಟ್ ಮೂಲಕ ರೀಚಾರ್ಜ್ ಮಾಡಿಸಿಕೊಳ್ಳಬಹುದಾಗಿದೆ.

ಸದ್ಯ ಟಾಟಾಸ್ಕೈ ಡಿಟಿಎಚ್‌ನ ವಾರ್ಷಿಕ ರೀಚಾರ್ಜ್ ಯೋಜನೆಯಲ್ಲಿ ಗ್ರಾಹಕರು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಒಂದು ತಿಂಗಳ ಹೆಚ್ಚುವರಿ ಸೇವೆಯು ಲಭ್ಯವಾಗುತ್ತಿದೆ. ಅದೇ ರೀತಿ ಈ ಹೊಸ ಕೊಡುಗೆಯಲ್ಲಿ ಎರಡು ತಿಂಗಳ ಹೆಚ್ಚುವರಿ ಸೇವೆಯು ಲಭ್ಯವಾಗುತ್ತದೆ. ಅಂದಹಾಗೆ ಈ ಕೊಡುಗೆಯು ಬ್ಯಾಂಕ್ ಆಫ್ ಬರೋಡಾ ಬಳಕೆದಾರರಿಗೆ ಮಾತ್ರ ಮೀಸಲಾಗಿದೆ. ಬ್ಯಾಂಕ್ ಆಫ್ ಬರೋಡಾದ ಬಳಕೆದಾರರು ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಮೂಲಕ ವಾರ್ಷಿಕ ರೀಚಾರ್ಜ್ ಮಾಡಿಸಿಕೊಂಡು ಈ ಕೊಡುಗೆ ಪಡೆಯಬಹುದಾಗಿದೆ.

ವಾರ್ಷಿಕ ರೀಚಾರ್ಜ್ ಮಾಡಿಸಿಕೊಂಡ ಏಳು ಕೆಲಸದ ದಿನಗಳಲ್ಲಿ ಬಳಕೆದಾರರ ಖಾತೆಗೆ ಕ್ಯಾಶ್‌ಬ್ಯಾಕ್ ಮೊತ್ತವನ್ನು ಸಂಸ್ಥೆಯಿಂದ ಜಮಾ ಮಾಡಲಾಗುತ್ತದೆ. ಎರಡು ತಿಂಗಳ ಹೆಚ್ಚುವರಿ ಉಚಿತ ಸೇವೆಯ ಪೈಕಿ ಒಂದು ತಿಂಗಳ ಕ್ಯಾಶ್‌ಬ್ಯಾಕ್ ಅನ್ನು 48 ಗಂಟೆಗಳ ಒಳಗೆ ಜಮಾ ಮಾಡಲಾಗುವುದು ಮತ್ತು ಇನ್ನೊಂದು ತಿಂಗಳ ಕ್ಯಾಶ್‌ಬ್ಯಾಕ್ ಏಳು ದಿನಗಳಲ್ಲಿ ನೀಡಲಾಗುವುದು ಎಂದು ಸಂಸ್ಥೆಯು ಹೇಳಿದೆ. ಇನ್ನು ಈ ಕೊಡುಗೆ ಜೂನ್ 2020 ಅಂತ್ಯದ ವರೆಗೂ ಲಭ್ಯವಿದೆ ಎನ್ನಲಾಗಿದೆ.


Click it and Unblock the Notifications








