ಟಾಟಾ ಸ್ಕೈ: ಟಿವಿ ನೋಡಿ ದಿನ ಮಾತ್ರ ಪಾವತಿ ಮಾಡಿ
ಟಿವಿ ನೋಡಿದ ದಿನ ಮಾತ್ರವೇ ಪಾವತಿಯನ್ನು ಮಾಡುವ "ಡೈಲಿ ರೀಚಾರ್ಜ್" ವೋಚರ್ ಅನ್ನು ಟಾಟಾ ಸ್ಕೈ ಪ್ರಸ್ತುತಪಡಿಸಿದೆ. ಇದರಲ್ಲಿ ಕನಿಷ್ಟ ಪಾವತಿ ರೂ 8 ಆಗಿದ್ದು, ರೀಚಾರ್ಜ್ ವೋಚರ್‌ನಲ್ಲೇ ಅತಿ ಕಡಿಮೆ ಪಾವತಿ ಇದಾಗಿದೆ.
ಓದಿರಿ: ಆಧುನಿಕ ಭವಿಷ್ಯದ ನೋಟ ಈ ಟಾಪ್ ಮ್ಯೂಸಿಯಮ್‌ಗಳಲ್ಲಿ

ಟಾಟಾ ಸ್ಕೈ ಮುಖ್ಯಸ್ಥರಾದ ಹರೀತ್ ನಾಗ್‌ಪಾಲ್ ಪ್ರಕಾರ, ದೇಶಾದ್ಯಂತ ನಮ್ಮ ಈ ಡೈಲಿ ರೀಚಾರ್ಜ್ ಉತ್ತಮ ಪ್ರತಿಕ್ರಿಯೆಯನ್ನು ಪಡೆಯಲಿದೆ. ಈ ಸೇವೆಯು ರೂ 8, 10, 20, 50 ಮತ್ತು 100 ಗಳಲ್ಲಿ ಲಭ್ಯವಿದೆ. ಗ್ರಾಹಕರು ತಮ್ಮ ಅನುಕೂಲತೆಗೆ ತಕ್ಕಂತೆ ಇದರಲ್ಲಿ ಪಾವತಿ ಮಾಡುವ ಸೌಲಭ್ಯವನ್ನು ಒದಗಿಸಲಾಗಿದೆ.
ಓದಿರಿ: ಉದ್ಯೋಗ ಅರಸುತ್ತಿರುವವರಿಗೆ ವರದಾಯಕ ಅಪ್ಲಿಕೇಶನ್‌ಗಳು

ಸಣ್ಣ ನಗರಗಳು ಅಂತೆಯೇ ಹಳ್ಳಿ ಪ್ರದೇಶಗಳಿಗೆ ಈ ಪಾವತಿಯು ಅನುಕೂಲಕರವಾಗಿದ್ದು ಜಾಗತಿಕವಾಗಿ ಮಾರುಕಟ್ಟೆಯಲ್ಲಿ ಭದ್ರ ಹೆಜ್ಜೆಗಳನ್ನಿರಿಸಲು ಈ ಸೌಲಭ್ಯ ಸಂಸ್ಥಗೆ ಅವಕಾಶವನ್ನೀಯಲಿದೆ ಎಂದು ನಾಗ್‌ಪಾಲ್ ತಿಳಿಸಿದ್ದಾರೆ. ಟಾಟಾ ಸ್ಕೈ ಇದೀಗ 4 ಕೆ ಸೇವೆಯಲ್ಲಿ ಮುಂದುವರಿಯುತ್ತಿದ್ದು, ಈ ಸೇವೆಯು ಸಣ್ಣ ಹಳ್ಳಿ ಮತ್ತು ನಗರ ಪ್ರದೇಶಗಳಿಗೆ ಲಕ್ಷ್ಯವನ್ನಿತ್ತಿದೆ.


Click it and Unblock the Notifications