Subscribe to Gizbot

ಉದ್ಯೋಗ ಅರಸುತ್ತಿರುವವರಿಗೆ ವರದಾಯಕ ಅಪ್ಲಿಕೇಶನ್‌ಗಳು

Written By:

ಮಾರುಕಟ್ಟೆಗೆ ಕಾಲಿಡುತ್ತಿರುವ ಅತ್ಯಾಧುನಿಕ ಸ್ಮಾರ್ಟ್‌ಫೋನ್‌ಗಳು ಒಂದಿಲ್ಲೊಂದು ವಿಶೇಷತೆಗಳ ಮೂಲಕ ಗ್ರಾಹಕರನ್ನು ಸೆಳೆಯುತ್ತಿದೆ. ಹಾಡು ಕೇಳಲು, ನಳಪಾಕ ಕಲೆ ಸಿದ್ಧಿಸಿಕೊಳ್ಳಲು, ಫೋಟೋಶಾಪಿಂಗ್, ತ್ವರಿತ ಮಾಹಿತಿಗಾಗಿ ಹೀಗೆ ಪ್ರತಿಯೊಂದು ರಂಗದಲ್ಲೂ ಸ್ಮಾರ್ಟ್‌ಫೋನ್‌ನ ಫೀಚರ್‌ಗಳು ಇನ್ನಷ್ಟು ಮಹತ್ವಪೂರ್ಣವಾಗಿ ನಮ್ಮನ್ನು ಸಮೀಪಿಸುತ್ತಿವೆ.

ಓದಿರಿ: ನಿಮ್ಮ ಮೊಬೈಲ್ ಭದ್ರತೆಗಾಗಿ ಅತ್ಯುತ್ತಮ ಅಪ್ಲಿಕೇಶನ್‌ಗಳು

ಇನ್ನು ಫೋನ್‌ಗಳಲ್ಲಿ ನಾವು ಅಳವಡಿಸಬಹುದಾದ ಅಪ್ಲಿಕೇಶನ್‌ಗಳು ಕೂಡ ಮಾಹಿತಿಯನ್ನು ಸಂಪೂರ್ಣವಾಗಿ ಬಳಕೆದಾರರಿಗೆ ನೀಡುತ್ತಿದ್ದು ಇದರಿಂದ ತಂತ್ರಜ್ಞಾನಕ್ಕೆ ನಾವು ಇನ್ನಷ್ಟು ಹತ್ತಿರವಾಗುತ್ತಿದ್ದೇವೆ. ಇಂದಿನ ಲೇಖನದಲ್ಲಿ ಉದ್ಯೋಗ ಮಾಹಿತಿಯನ್ನು ಒದಗಿಸುವ ಅಪ್ಲಿಕೇಶನ್ ವಿವರಗಳೊಂದಿಗೆ ನಾವು ಬರುತ್ತಿದ್ದು ಈ ಅಪ್ಲಿಕೇಶನ್‌ಗಳು ಉದ್ಯೋಗದ ಕುರಿತಾದ ಸಂಪೂರ್ಣ ಮಾಹಿತಿಯನ್ನು ಈ ಅಪ್ಲಿಕೇಶ್‌ಗಳು ನೀಡುತ್ತಿವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ನೌಕರಿ.ಕಾಮ್

ವರದಾಯಕ ಅಪ್ಲಿಕೇಶನ್‌ಗಳು

ನೌಕರಿ ಒಂದು ಉದ್ಯೋಗ ಪೋರ್ಟಲ್ ಆಗಿದ್ದು ಹೆಚ್ಚು ಜನಪ್ರಿಯ ಉದ್ಯೋಗ ಹುಡುಕಾಟ ಅಪ್ಲಿಕೇಶನ್ ಇದಾಗಿದೆ. ನಿಮ್ಮ ರೆಸ್ಯೂಮ್ ಅನ್ನು ಅಪ್‌ಲೋಡ್ ಮಾಡಿ ಇದರಲ್ಲಿ ಉದ್ಯೋಗವನ್ನು ಹುಡುಕಬಹುದಾಗಿದೆ.

ಗ್ಲಾಸ್ ಡೋರ್

ವರದಾಯಕ ಅಪ್ಲಿಕೇಶನ್‌ಗಳು

ಜಗತ್ತಿನಾದ್ಯಂತ ಹೆಚ್ಚು ಜನಪ್ರಿಯ ಉದ್ಯೋಗ ಹುಡುಕಾಟ ಸೈಟ್ ಅಪ್ಲಿಕೇಶನ್ ಇದಾಗಿದೆ. ನಿಮ್ಮ ಪ್ರೊಫೈಲ್‌ಗೆ ತಕ್ಕಂತೆ ಇರುವ ಉದ್ಯೋಗವನ್ನು ನಿಮಗೆ ಒದಗಿಸುತ್ತದೆ.

ಮಾನ್ಸಟರ್ ಜಾಬ್ಸ್

ವರದಾಯಕ ಅಪ್ಲಿಕೇಶನ್‌ಗಳು

ನೀವು ಉದ್ಯೋಗವನ್ನು ಅರಸುತ್ತಿದ್ದೀರಾ ಎಂದಾದಲ್ಲಿ ಮಾನ್ಸಟರ್ ಹೆಚ್ಚು ಅತ್ಯವಶ್ಯಕವಾದ ಅಂತೆಯೇ ಸರ್ಚ್ ಮಾಡಬಹುದಾದ ಅಪ್ಲಿಕೇಶನ್ ಆಗಿದೆ.

ಫ್ರಿಲಾನ್ಸರ್

ವರದಾಯಕ ಅಪ್ಲಿಕೇಶನ್‌ಗಳು

ಪೂರ್ಣ ಸಮಯದ ಉದ್ಯೋಗ ನಿಮಗೆ ಬೇಡವೇ ಹಾಗಿದ್ದರೆ ಫ್ರಿಲಾನ್ಸರ್ ನಿಮಗೆ ಹೆಚ್ಚು ಸಹಕಾರಿಯಾಗಿರುತ್ತದೆ. ಸೀಮಿತ ಅವಧಿಯಲ್ಲಿ ಪ್ರಾಜೆಕ್ಟ್ ಮುಗಿಸುವ ಅವಕಾಶವನ್ನು ಈ ಫ್ರಿಲಾನ್ಸರ್ ನಿಮಗೆ ಒದಗಿಸುತ್ತದೆ.

ಜಾಗ್ರನ್ ಜೋಶ್ ಸರ್ಕಾರಿ ನೌಕರಿ

ವರದಾಯಕ ಅಪ್ಲಿಕೇಶನ್‌ಗಳು

ನಿಜಕ್ಕೂ ಹೆಚ್ಚು ಪ್ರಯೋಜನಕಾರಿಯಾದ ಅಪ್ಲಿಕೇಶನ್ ಇದಾಗಿದ್ದು ಸರಕಾರಿ ಉದ್ಯೋಗವನ್ನು ಅರಸುತ್ತಿರುವವರು ನೀವಾಗಿದ್ದಲ್ಲಿ ಇದು ಹೆಚ್ಚು ಪರಿಪೂರ್ಣ ಎಂದೆನಿಸಿದೆ.

ಶೈನ್

ವರದಾಯಕ ಅಪ್ಲಿಕೇಶನ್‌ಗಳು

ಹಿಂದುಸ್ತಾನ್ ಟೈಮ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವವರು ಈ ಜಾಬ್ ಸರ್ಚ್ ಪರಿಕರದ ಹಿಂದಿದ್ದು ನಿಮ್ಮ ಸಾಮಾಜಿಕ ಜಾಲತಾಣವನ್ನು ಬಳಸಿಕೊಂಡು ಇದರಲ್ಲಿ ಉದ್ಯೋಗವನ್ನು ನಿಮಗೆ ಅರಸಬಹುದು.

ಲಿಂಕ್‌ಡ್‌ಇನ್ ಜಾಬ್ ಸರ್ಚ್

ವರದಾಯಕ ಅಪ್ಲಿಕೇಶನ್‌ಗಳು

ಲಿಂಕ್‌ಡ್‌ಇನ್‌ನಲ್ಲಿ ನಿಮ್ಮ ಮಾಹಿತಿಗಳನ್ನು ನೀವು ಭರ್ತಿ ಮಾಡದೇ ಬೇರೆ ಕಡೆ ಉದ್ಯೋಗ ಹುಡುಕಿ ಪ್ರಯೋಜನವಿಲ್ಲ. ಎಂಬುದನ್ನು ಅರಿತುಕೊಳ್ಳಿ. ಇದೊಂದು ಹೆಚ್ಚು ವೃತ್ತಿಪರವಾದ ನೆಟ್‌ವರ್ಕಿಂಗ್ ಟೂಲ್ ಆಗಿದೆ.

ಲೆಟ್ಸ್‌ಇಂಟರ್ನ್

ವರದಾಯಕ ಅಪ್ಲಿಕೇಶನ್‌ಗಳು

ನಿಮ್ಮ ಇಂಟರ್ನ್‌ಶಿಪ್ ಅವಧಿಯನ್ನು ಹೆಚ್ಚು ಪರಿಪೂರ್ಣಗೊಳಿಸುವ ಉದ್ಯೋಗ ಹುಡುಕಾಟ ಟೂಲ್ ಇದಾಗಿದೆ. ನಿಮ್ಮ ಇಂಟರ್ನ್‌ಶಿಪ್ ಚೆನ್ನಾಗಿ ನಡೆಯಿತೆಂದಲ್ಲಿ ನಂತರದ ಹಂತವಾದ ಉದ್ಯೋಗ ಹುಡುಕಾಟಕ್ಕೆ ಯಾವುದೇ ತೊಡಕುಂಟಾಗುವುದಿಲ್ಲ.

ಕ್ವಿಕರ್

ವರದಾಯಕ ಅಪ್ಲಿಕೇಶನ್‌ಗಳು

ಈ ಅಪ್ಲಿಕೇಶನ್ ಕೂಡ ಉದ್ಯೋಗ ಜಾಹೀರಾತನ್ನು ಒಳಗೊಂಡಿದ್ದು ಉದ್ಯೋಗ ಹುಡುಕಾಟಕ್ಕೆ ನಿಮಗೆ ನೆರವಾಗಲಿದೆ.

ಓಎಲ್‌ಎಕ್ಸ್

ವರದಾಯಕ ಅಪ್ಲಿಕೇಶನ್‌ಗಳು

ಕ್ವಿಕರ್‌ನಂತೆಯೇ ಓಎಲ್‌ಎಕ್ಸ್ ಕೂಡ ಹೆಚ್ಚಿನ ಜಾಬ್ ಕ್ಲಾಸಿಫೈಡ್‌ಗಳನ್ನು ಹೊಂದಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
It's that time of the year when thousands of students graduate from college and school and join the workforce. If you’re part of that crowd, these free apps can help you search for the ideal job or internship opportunity. Take a look.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot