Home
ಸುದ್ದಿಜಾಲ

ಟಾಟಾಸ್ಕೈನಿಂದ ಭರ್ಜರಿ ಕೊಡುಗೆ; ಆರು ತಿಂಗಳು ಬಿಂಜ್‌ ಚಂದಾದಾರಿಕೆ ಉಚಿತ!

ಭಾರತದ ಡಿಟಿಹೆಚ್‌ ವಲಯದಲ್ಲಿ ಲೀಡಿಂಗ್‌ನಲ್ಲಿ ಕಾಣಿಸಿಕೊಂಡಿರುವ ಟಾಟಾಸ್ಕೈ ಸಂಸ್ಥೆಯು ವಿಶೇಷ ಆಫರ್‌ಗಳ ಮೂಲಕ ಗ್ರಾಹಕರಿಂದ ಸೈ ಎನಿಸಿಕೊಂಡಿದೆ. ಈಗಾಗಲೇ ಈ ಸಂಸ್ಥೆಯು ಮುಂದುವರೆದು ಟಾಟಾಸ್ಕೈ ಬಿಂಜ್ ಪ್ಲಸ್‌ ಆಂಡ್ರಾಯ್ಡ್‌ ಸೆಟ್‌ಅಪ್‌ ಬಾಕ್ಸ್‌ ಅನ್ನು ಪರಿಚಯಿಸಿ ಗಮನ ಸೆಳೆದಿದೆ. ಈಗ ಟಾಟಾಸ್ಕೈ ತನ್ನ ಬಿಂಜ್ ಪ್ಲಸ್‌ ಸೆಟ್‌ಅಪ್‌ ಬಾಕ್ಸ್‌ಗೆ ಭರ್ಜರಿ ಕೊಡುಗೆ ಘೋಷಿಸಿದ್ದು, ಗ್ರಾಹಕರು ತಿರುಗಿನೋಡುವಂತೆ ಮಾಡಿದೆ.

ಟಾಟಾಸ್ಕೈ

ಹೌದು, ಟಾಟಾಸ್ಕೈ ಸಂಸ್ಥೆಯು ತನ್ನ ಜನಪ್ರಿಯ ಆಂಡ್ರಾಯ್ಡ್‌ ಆಧಾರರಿತ ಟಾಟಾಸ್ಕೈ ಬಿಂಜ್ ಪ್ಲಸ್‌ ಖರೀದಿಯಲ್ಲಿ ಈಗ 2000ರೂ. ರಿಯಾಯತಿ ತಿಳಿಸಿದೆ. ಹೀಗಾಗಿ ಟಾಟಾಸ್ಕೈ ಬಿಂಜ್ ಪ್ಲಸ್‌ ಗ್ರಾಹಕರು 3,999ರೂ.ಗಳ ಸಬ್ಸಿಡಿ ದರದಲ್ಲಿ ಲಭ್ಯವಾಗಲಿದೆ. ಬಳಕೆದಾರರು ಈ ಡಿವೈಸ್‌ ಸಿಂಗಲ್‌ ರಿಮೋಟ್‌ನಿಂದ ಲೈವ್‌ ಚಾನಲ್‌ಗಳನ್ನು ಹಾಗೂ ಜನಪ್ರಿಯ OTT- ವಿಡಿಯೊ ಸ್ಟ್ರೀಮಿಂಗ್ ಅಪ್ಲಿಕೇಶನ್‌ಗಳನ್ನು ವೀಕ್ಷಿಸಬಹುದಾಗಿದೆ. ಇನ್ನಷ್ಟು ಮಾಹಿತಿಗಾಗಿ ಮುಂದಿನ ಸ್ಕೈಡರ್‌ಗಳನ್ನು ಓದಿರಿ.

ಹೊಸ ಆಫರ್

ಹೊಸ ಆಫರ್

ಸಾಕಷ್ಟು ಅಪ್‌ಡೇಟ್ ಸೌಲಭ್ಯಗಳ ಟಾಟಾಸ್ಕೈ ಬಿಂಜ್ ಪ್ಲಸ್‌ ಸೆಟ್‌ಅಪ್‌ ಸಾಧನದ ಈಗ 3999ರೂ.ಗಳ ರಿಯಾಯಿತಿ ದರದಲ್ಲಿ ಲಭ್ಯವಾಗಲಿದ್ದು, ಪ್ರಯೋಜನಗಳು ಸಹ ಡಬಲ್‌ ಇವೆ. ಈ ಹೊಸ ಕೊಡುಗೆಯಲ್ಲಿ ಬಿಂಜ್ ಪ್ಲಸ್‌ ಸಾಧನದೊಂದಿಗೆ 6 ತಿಂಗಳ ಬಿಂಜ್‌ ಚಂದಾದಾರಿಕೆ ಲಭ್ಯವಾಗಲಿದ್ದು, ಸನ್‌ನೆಕ್ಸ್ಟ್, ಹಂಗಾಮಾ, ಹಾಟ್‌ಸ್ಟಾರ್ ಡಿಸ್ನಿ, ಎರಸನೋ ಆಪ್ಸ್‌ಗಳನ್ನು ಒಳಗೊಂಡಿದೆ.

ಟಾಟಾಸ್ಕೈ ಬಿಂಜ್‌ ಪ್ಲಸ್‌ ಸೌಲಭ್ಯಗಳು

ಟಾಟಾಸ್ಕೈ ಬಿಂಜ್‌ ಪ್ಲಸ್‌ ಸೌಲಭ್ಯಗಳು

ಟಾಟಾಸ್ಕೈ ಬಿಂಜ್ ಪ್ಲಸ್‌ ಸೆಟ್‌ಟಾಪ್‌ ಬಾಕ್ಸ್‌, ಸಾಮಾನ್ಯ ಡಿಟಿಎಚ್ ಸೆಟ್‌ಟಾಪ್‌ಗಳಿಗಿಂತ ಭಿನ್ನವಾಗಿದೆ. ಬಿಂಜ್ ಪ್ಲಸ್‌ ಸೆಟ್‌ಟಾಪ್‌ ಬಾಕ್ಸ್‌ನಲ್ಲಿ ಇಂಟರ್ನೆಟ್ ಆಧಾರಿತ ಸೇವೆಗಳು ದೊರೆಯುತ್ತವೆ. ಗೂಗಲ್ ಪ್ಲೇ ಸ್ಟೋರ್ ಸೌಲಭ್ಯ ಇರುತ್ತದೆ ಹಾಗೂ ಅಸಿಸ್ಟಂಟ್ ಅಸಿಸ್ಟಂಟ್ ಆಧಾರಿತ ವಾಯಿಸ್ ಸರ್ಚ್ ಆಯ್ಕೆಯು ಒಳಗೊಂಡಿರುತ್ತದೆ. ಹೀಗಾಗಿ ಸೆಟ್‌ಟಾಪ್‌ ಬಾಕ್ಸ್‌ ಅನ್ನು ವಾಯಿಸ್‌ ಮೂಲಕವೇ ನಿಯಂತ್ರಣ ಮಾಡಬಹುದಾಗಿದೆ.

ಆಂತರಿಕ ಸ್ಟೋರೇಜ್‌ಗೆ ಸ್ಥಳಾವಕಾಶ

ಆಂತರಿಕ ಸ್ಟೋರೇಜ್‌ಗೆ ಸ್ಥಳಾವಕಾಶ

ಟಾಟಾಸ್ಕೈ ಬಿಂಜ್ ಪ್ಲಸ್‌ ಸೆಟ್‌ಟಾಪ್‌ ಬಾಕ್ಸ್‌ ಸುಮಾರು 5000 ಅಪ್ಲಿಕೇಶನ್ ಹಾಗೂ ಗೇಮ್ಸ್‌ಗಳು ಗೂಗಲ್ ಆಪ್‌ನಲ್ಲಿ ಲಭ್ಯವಾಗಲಿವೆ. ಇನ್ನು ಈ ಸೆಟ್‌ಟಾಪ್‌ ಬಾಕ್ಸ್‌ 2GB RAM ಮತ್ತು 8GB ಸ್ಟೋರೇಜ್ ಸ್ಥಳಾವಕಾಶವನ್ನು ಪಡೆದಿದೆ. ಅಪ್ಲಿಕೇಶನ್ ಡೌನ್‌ಲೋಡ್‌ ಸಹ ಮಾಡಿಕೊಳ್ಳಬಹುದಾಗಿದೆ. ಹಾಗೂ ಈ ಡಸಾಧನವು ಬಿಲ್ಟ್‌ ಇನ್‌ ಕ್ರೋಮ್‌ಕಾಸ್ಟ್‌ ಸೌಲಭ್ಯ ಹೊಂದಿದ್ದು, ಹೆಚ್‌ಡಿಎಮ್‌ಐ ಔಟ್‌ಪುಟ್‌ ಬೆಂಬಲ ಸಹ ಪಡೆದಿದೆ.

China ಆಪ್ಸ್‌ಗೆ ಸರಿಸಮನಾದ Apps‌ ಲಿಸ್ಟ್ ಇಲ್ಲಿದೆ ನೋಡಿ!
OTT ಆಪ್ಸ್‌ಗಳ ಸಪೋರ್ಟ್

OTT ಆಪ್ಸ್‌ಗಳ ಸಪೋರ್ಟ್

ಟಾಟಾಸ್ಕೈ ಬಿಂಜ್ ಪ್ಲಸ್‌ ಸೆಟ್‌ಟಾಪ್‌ ಬಾಕ್ಸ್‌ ವಿಡಿಯೊ ಸ್ಟ್ರೀಮಿಂಗ್ ಒದಗಿಸುವ OTT ಆಪ್ಸ್‌ಗಳ ಸಪೋರ್ಟ್‌ ಒಳಗೊಂಡಿದೆ. ಹಾಟ್‌ಸ್ಟಾರ್, ಸನ್‌ನೆಕ್ಸ್ಟ್, ಎರೊಸ್ ನವ್, ಜೀ5 ಮತ್ತು ಹಂಗಾಮಾ ಪ್ಲಸ್‌ ಅಪ್ಲಿಕೇಶನ್ ಗಳ ಸೌಲಭ್ಯ ಇದೆ. ಈ ಆಪ್ಸ್‌ ಅತ್ಯುತ್ತಮ ವಿಡಿಯೊ ಕಂಟೆಂಟ್ ಅಪ್ಲಿಕೇಶನ್‌ಗಳಾಗಿವೆ. ಕೆಲವು ಲೈವ್ ವಿಡಿಯೊ ವೀಕ್ಷಣೆಗೂ ಅನುಕೂಲ ಒದಗಿಸಲಿವೆ. ಹಾಗೆಯೇ ಇದು 4K, ಹೆಚ್‌ಡಿ, ಎಲ್‌ಇಡಿ, ಎಲ್‌ಸಿಡಿ ಮತ್ತು ಪ್ಲಾಸ್ಮಾ ಮಾದರಿಯ ಡಿಸ್‌ಪ್ಲೇ ಸೌಲಭ್ಯದ ಟಿವಿಗಳ ಸಪೋರ್ಟ್‌ ಸಹ ಪಡೆದಿದೆ.

Best Mobiles in India

English summary
Tata Sky Binge+ provides the benefit of six months OTT content that the user can watch on their STBs.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+