ಟಾಟಾಸ್ಕೈ ಗ್ರಾಹಕರಿಗೆ ಸಿಹಿಸುದ್ದಿ: ಭರ್ಜರಿ ಕ್ಯಾಶ್‌ಬ್ಯಾಕ್ ಆಫರ್!
ದೇಶದ ಡಿಟಿಎಚ್ ವಲಯದಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಂಡಿರುವ ಟಾಟಾಸ್ಕೈ ಸಂಸ್ಥೆಯು ಈಗಾಗಲೇ ಗ್ರಾಹಕರಿಗೆ ಹಲವು ಆಕರ್ಷಕ ಆಫರ್ ಪರಿಚಯಿಸಿದ್ದು, ಇದೀಗ ತನ್ನ ಗ್ರಾಹಕರಿಗೆ ಮತ್ತೆ ಸಿಹಿಸುದ್ದಿ ನೀಡಿದೆ. ಟಾಟಾಸ್ಕೈ ಸಂಸ್ಥೆಯು ದೀರ್ಘಾವಧಿಯ ರೀಚಾರ್ಜ್ ಮೇಲೆ ಕ್ಯಾಶ್‌ಬ್ಯಾಕ್ ಕೊಡುಗೆ ಘೋಷಿಸಿದ್ದು, ಇದರಿಂದ ಗ್ರಾಹಕರಿಗೆ ಹೆಚ್ಚುವರಿ ವ್ಯಾಲಿಡಿಟಿ ವಾಯ್ದೆ ದೊರೆಯಲಿದೆ.

ಹೌದು, ಜನಪ್ರಿಯ ಟಾಟಾಸ್ಕೈ ಸಂಸ್ಥೆಯು ವಾರ್ಷಿಕ ರೀಚಾರ್ಜ್ ಮೇಲೆ 335ರೂ. ಕ್ಯಾಶ್‌ಬ್ಯಾಕ್ ನೀಡುವುದಾಗಿ ಹೇಳಿದ್ದು, ಆ ಕ್ಯಾಶ್‌ಬ್ಯಾಕ್ ಒಂದು ತಿಂಗಳ (30 ದಿನಗಳ ವ್ಯಾಲಿಡಿಟಿ) ಹೆಚ್ಚವರಿ ಸೇವೆ ದೊರೆಯಲಿದೆ. ಅಂದರೇ ಗ್ರಾಹಕರು 12 ತಿಂಗಳ ಟಾಟಾಸ್ಕೈ ಶುಲ್ಕವನ್ನು ಒಂದೇ ಬಾರಿಗೆ ರೀಚಾರ್ಜ್ ಮಾಡಿಸಿಕೊಂಡರೇ ಈ ಕ್ಯಾಶ್‌ಬ್ಯಾಕ್ ಲಭ್ಯವಾಗಲಿದೆ. ಕ್ಯಾಶ್‌ಬ್ಯಾಕ್‌ನಲ್ಲಿ ಲಭ್ಯವಾಗುವ 335ರೂ.ಗಳು ರೀಚಾರ್ಜ್ ಮಾಡಿಸಿಕೊಂಡ 48 ಗಂಟೆಗಳ ಒಳಗಾಗಿ ಗ್ರಾಹಕರ ಖಾತೆಗೆ ಜಮಾ ಆಗಲಿದೆ.

ಒಂದು ತಿಂಗಳ ಹೆಚ್ಚುವರಿ ಸೇವೆ
ವಾರ್ಷಿಕ ಟಾಟಾಸ್ಕೈ ಡಿಟಿಎಚ್ ಪ್ಲ್ಯಾನ್ ರೀಚಾರ್ಜ್ ಮಾಡಿಸಿಕೊಳ್ಳುವ ಗ್ರಾಹಕರಿಗೆ ಸಂಸ್ಥೆಯು ಒಂದು ತಿಂಗಳ (30 ದಿನಗಳು) ಹೆಚ್ಚುವರಿ ಸೇವೆ ನೀಡುವುದಾಗಿ ಹೇಳಿದೆ. 12 ತಿಂಗಳ ರೀಚಾರ್ಜ್ ಮಾಡಿಸಿದಾಗ 335ರೂ, ಕ್ಯಾಶ್‌ಬ್ಯಾಕ್ ಗ್ರಾಹಕರ ಡಿಟಿಎಚ್ ಖಾತೆಗೆ ಸೇರುತ್ತದೆ. ಅದೇ ಮೊತ್ತವು ಒಂದು ತಿಂಗಳ ಹೆಚ್ಚುವರಿ ಸೇವೆಗೆ ಬಳಕೆಯಾಗಲಿದೆ.

ಯಾವ ಪ್ಲ್ಯಾನ್‌ಗೆ ಅನ್ವಯ
ಟಾಟಾಸ್ಕೈನ ಈ ಕೊಡುಗೆಯು ಎಲ್ಲ ಚಾನೆಲ್ ಪ್ಲ್ಯಾನ್‌ಗಳಿಗೂ ಅನ್ವಯವಾಗಲಿದೆ. ಗ್ರಾಹಕರು ಟಾಟಾಸ್ಕೈನ ಯಾವುದೇ ಚಾನೆಲ್ ಪ್ಲ್ಯಾನ್ ಯೋಜನೆ ಹೊಂದಿದ್ದರೂ ಸಹ ವಾರ್ಷಿಕ ರೀಚಾರ್ಜ್ ಮೇಲೆ ಒಂದು ತಿಂಗಳು ಹೆಚ್ಚುವರಿ ಸೇವೆ ದೊರೆಯುತ್ತದೆ.

ವಿಶೇಷ ಆಯ್ಕೆ
ಟಾಟಾಸ್ಕೈ ತನ್ನ ಗ್ರಾಹಕರಿಗೆ ವಿಶೇಷ ಸೌಲಭ್ಯವೊಂದನ್ನು ಪರಿಚಯಿಸಿದೆ. ಗ್ರಾಹಕರು ಅವರ ಟಾಟಾಸ್ಕೈ ಡಿಟಿಎಚ್ ಖಾತೆಯನ್ನು ಸುಮಾರು 5 ದಿನಗಳವರೆಗೂ ತಾತ್ಕಾಲಿಕವಾಗಿ ತಡೆಹಿಡಿಯಬಹುದು/ಅಮಾನತಿನಲ್ಲಿಡುವ ಅವಕಾಶ ನೀಡಿದೆ. ಆದರೆ ಈ ಆಯ್ಕೆಯು ಕ್ಯಾಶ್‌ಬ್ಯಾಕ್ ಪಡೆದ ಗ್ರಾಹಕರಿಗೆ ಲಭ್ಯವಾಗಲಿದೆ.

ಡಿಟಿಎಚ್ ಸೆಟ್‌ಟಾಪ್ ಬಾಕ್ಸ್ ದರದಲ್ಲಿ ಏರಿಕೆ
ಇತ್ತೀಚಿಗೆ ಟಾಟಾಸ್ಕೈ ತನ್ನ ಡಿಟಿಎಚ್ ಸೆಟ್‌ಟಾಪ್ ಬಾಕ್ಸ್ ಬೆಲೆಯಲ್ಲಿ ಏರಿಕೆ ಮಾಡಿದೆ. ಟಾಟಾಸ್ಕೈ ಕಳೆದ ವರ್ಷದಲ್ಲಿ ಸೆಟ್‌ಟಾಪ್ ಬಾಕ್ಸ್ ದರಗಳಲ್ಲಿ ಇಳಿಕೆ ಮಾಡಿತ್ತು. ಆದ್ರೆ ಈಗ ಬೆಲೆ ಏರಿಕೆ ಮಾಡಿದೆ. 1,299ರೂ.ಗಳಿಗೆ ಲಭ್ಯವಿದ್ದ ಟಾಟಾಸ್ಕೈ ಎಸ್‌ಡಿ ಸೆಟ್‌ಟಾಪ್ ಬಾಕ್ಸ್ 100ರೂ. ಬೆಲೆ ಏರಿಕೆ ಆಗಿದ್ದು, ಈಗ 1,399ರೂ.ಗಳ ಪ್ರೈಸ್‌ಟ್ಯಾಗ್ ಹೊಂದಿದೆ. ಅದೇ ರೀತಿ 1,399ರೂ, ಬೆಲೆಯನ್ನು ಹೊಂದಿದ್ದ ಹೆಚ್‌ಡಿ ಸೆಟ್‌ಟಾಪ್ ಬಾಕ್ಸ್ ದರವು ಇದೀಗ 1,499ರೂ.ಗಳಿಗೆ ಲಭ್ಯವಾಗಲಿದೆ. ಒಟ್ಟು 100ರೂ. ಹೆಚ್ಚಳ ಕಂಡಿದೆ.


Click it and Unblock the Notifications








