ಟಾಟಾಸ್ಕೈ D2Hನಿಂದ ಡಬಲ್ ಧಮಾಕಾ ಕೊಡುಗೆ; ಆರು ಸೇವೆಗಳಿಗೆ ಭಾರಿ ರಿಯಾಯಿತಿ!

|

ದೇಶದ ಮುಂಚೂಣಿಯ ಡೈರೆಕ್ಟ್-ಟು-ಹೋಮ್ (ಡಿಟಿಎಚ್) ಆಪರೇಟರ್ ಟಾಟಾ ಸ್ಕೈ ಈಗಾಗಲೇ ಹಲವು ಭಿನ್ನ ಆಫರ್‌ಗಳ ಮೂಲಕ ಗ್ರಾಹಕರ ಗಮನ ಸೆಳೆದಿದೆ. ಲಾಕ್‌ಡೌನ್‌ ಅವಧಿಯಲ್ಲಿ ರೀಚಾರ್ಜ್‌ ಮಾಡಿಸಿಕೊಳ್ಳಲು ಅನಾನುಕೂಲ ಆದ ಗ್ರಾಹಕರಿಗೆ ಲೋನ್ ಆಯ್ಕೆ ನೀಡಿತ್ತು. ಹಾಗೂ ಕೆಲವೊಂದು ಚಾನೆಲ್‌ಗಳ ಸೇವೆಯನ್ನು ಕೆಲವು ದಿನಗಳ ಅವಧಿಗೆ ಉಚಿತವಾಗಿ ನೀಡಿತ್ತು, ಇದೀಗ ಡಬಲ್ ಧಮಾಕಾ ಆಫರ್ ಅಡಿಯಲ್ಲಿ ಆರು ಸೇವಾ ಚಾನೆಲ್‌ಗಳ ಬೆಲೆಯನ್ನು 50% ರಷ್ಟು ಕಡಿಮೆ ಮಾಡುವುದಾಗಿ ಹೇಳಿ ಗ್ರಾಹಕರನ್ನು ಆಕರ್ಷಿಸಿದೆ.

ಟಾಟಾಸ್ಕೈ

ಹೌದು, ಜನಪ್ರಿಯ ಟಾಟಾಸ್ಕೈ ಈಗ ಡಬಲ್ ಧಮಾಕಾ ಆಫರ್ ಘೋಷಿಸಿದೆ. ಈ ಕೊಡುಗೆಯಲ್ಲಿ ಆರು ಚಾನೆಲ್‌ಗಳ ಸೇವೆಯ ಮೊತ್ತದಲ್ಲಿ ಶೇ.50%ರಷ್ಟು ರಿಯಾಯಿತಿ ಲಭ್ಯವಾಗಲಿದೆ. ಇನ್ನು ಈ ವಿಶೇಷ ಕೊಡುಗೆಯು ಜುಲೈ 26 ರಿಂದ ಚಾಲ್ತಿಯಲ್ಲಿದ್ದು, ಇದೇ ಆಗಸ್ಟ್ 2 ರವರೆಗೆ ಲಭ್ಯವಾಗಲಿದೆ ಎಂದು ಕಂಪನಿ ತಿಳಿಸಿದೆ. ಹಾಗೆಯೇ ಬಳಕೆದಾರರಿಗೆ Zeetos ಲಾಯಲಿಟಿ ಕಾರ್ಯಕ್ರಮವಾಗಿದ್ದು, Zeetos ಪಾಯಿಂಟ್ಸ್‌ ಗಳಿಸಿ ಆಟಿಕೆ ಪಡೆಯುವ ಅವಕಾಶಗಳಿವೆ.

ರಿಯಾಯಿತಿ ಪಡೆದ ಟಾಟಾ ಸ್ಕೈ ಸೇವೆಗಳು

ರಿಯಾಯಿತಿ ಪಡೆದ ಟಾಟಾ ಸ್ಕೈ ಸೇವೆಗಳು

ಟಾಟಾ ಸ್ಕೈ ಸ್ಮಾರ್ಟ್ ಗೇಮ್ಸ್, ಫನ್ ಲರ್ನ್, ಡ್ಯಾನ್ಸ್ ಸ್ಟುಡಿಯೋ, ಇಂಗ್ಲಿಷ್, ವೈದಿಕ್ ಮ್ಯಾಥ್ಸ್ ಮತ್ತು ಫಿಟ್ನೆಸ್ ಸೇರಿದಂತೆ ಆರು ಟಾಟಾ ಸ್ಕೈ ಸೇವಾ ಚಾನೆಲ್‌ಗಳಲ್ಲಿ ಡಬಲ್ ಧಮಾಕಾ ಆಫರ್ ಅನ್ವಯವಾಗುತ್ತದೆ ಎಂದು ಹೇಳಲಾಗಿದೆ.

ಶೇ.50% ಡಿಸ್ಕೌಂಟ್ ಕೊಡುಗೆ

ಶೇ.50% ಡಿಸ್ಕೌಂಟ್ ಕೊಡುಗೆ

ಟಾಟಾ ಸ್ಕೈ ಸೆಲ್ಫ್ ಕೇರ್ ಪೋರ್ಟಲ್ನೊಂದಿಗೆ 2020 ರ ಆಗಸ್ಟ್ 2 ರವರೆಗೆ ಆರು ಸೇವೆಗಳು ತಿಂಗಳಿಗೆ 30 ರೂಗಳಿಗೆ ಲಭ್ಯವಿದೆ. ಇದು ಸೇವಾ ಚಾನೆಲ್‌ಗಳ ಹೊಸ ಬೆಲೆಗಳನ್ನು ಪ್ರತಿಬಿಂಬಿಸುತ್ತದೆ. ಟಾಟಾ ಸ್ಕೈ ಸಾಮಾನ್ಯವಾಗಿ ಆರು ಸೇವೆಗಳಿಗೆ ತಿಂಗಳಿಗೆ 60 ರೂ. ಮೊದಲ ಐದು ದಿನಗಳವರೆಗೆ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಬಳಕೆದಾರರು ಸೇವಾ ಚಾನೆಲ್‌ಗಳನ್ನು ವೀಕ್ಷಿಸಬಹುದು.

Zeetos ಪ್ರೋಗ್ರಾಂ

Zeetos ಪ್ರೋಗ್ರಾಂ

ಟಾಟಾ ಸ್ಕೈ ಫನ್ ಲರ್ನ್, ಸ್ಮಾರ್ಟ್ ಗೇಮ್ಸ್, ಇಂಗ್ಲಿಷ್ ಮತ್ತು ಡ್ಯಾನ್ಸ್ ಸ್ಟುಡಿಯೊದಂತಹ ಸೇವಾ ಚಾನೆಲ್‌ಗಳಲ್ಲಿ Zeetos ಪ್ರೋಗ್ರಾಂ ಅನ್ವಯವಾಗುತ್ತದೆ ಎಂದು ಹೇಳಲಾಗುತ್ತದೆ. ಕ್ವಿಜ್ ಮತ್ತು ಆಟಗಳಂತಹ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ಬಳಕೆದಾರರು ಪ್ರತಿದಿನ 1200 Zeetos ಪಾಯಿಂಟ್‌ಗಳನ್ನು ಗಳಿಸಬಹುದು ಎಂದು ಟಾಟಾ ಸ್ಕೈ ತನ್ನ ಸೈಟ್‌ನಲ್ಲಿ ಹೈಲೈಟ್ ಮಾಡಿದೆ.

ಟಾಟಾ ಸ್ಕೈ

ಹಾಗೆಯೇ ಟಾಟಾ ಸ್ಕೈ ತನ್ನ ಬಳಕೆದಾರರಿಗೆ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ದರ್ಶನ್, ಫ್ಯಾಮಿಲಿ ಹೆಲ್ತ್, ಕ್ಲಾಸ್‌ರೂಮ್ ಮತ್ತು ಭೋಜ್‌ಪುರಿ ಸಿನಿಮಾದಂತಹ ಸೇವಾ ಚಾನೆಲ್‌ಗಳನ್ನು ನೀಡುತ್ತದೆ.

Best Mobiles in India

English summary
Tata sky Double Dhamaka Offer is said to be applicable on six Tata Sky service channels.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X