ಗ್ರಾಹಕರಿಗೆ ಗುಡ್‌ನ್ಯೂಸ್: ಟಾಟಾಸ್ಕೈ ಸೆಟ್‌ಟಾಪ್‌ ಬಾಕ್ಸ್‌ ಬೆಲೆಯಲ್ಲಿ ಭಾರೀ ಇಳಿಕೆ!

|

ದೇಶದ ಡಿಟಿಎಚ್‌ ವಲಯದಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಂಡಿರುವ ಟಾಟಾಸ್ಕೈ ಸಂಸ್ಥೆಯು ಆಕರ್ಷಕ ಸೆಟ್‌ಅಪ್‌ ಬಾಕ್ಸ್ ಯೋಜನೆಗಳ ಮೂಲಕ ಇತರೆ ಡಿಟಿಎಚ್‌ ಸಂಸ್ಥೆಗಳಿಗಿಂತ ಭಿನ್ನವಾಗಿ ಗುರುತಿಸಿಕೊಂಡಿದೆ. ಸಂಸ್ಥೆಯು ಈಗಾಗಲೇ ತನ್ನ ಡಿಟಿಎಚ್ ಸೆಟ್‌ಅಪ್ ಬಾಕ್ಸ್‌ ಡಿವೈಸ್‌ಗೆ ಆಕರ್ಷಕ ಪ್ರೈಸ್‌ ಟ್ಯಾಗ್‌ ನೀಡಿ ಗ್ರಾಹಕರನ್ನು ಸೆಳೆದಿತ್ತು. ಇದೀಗ ಟಾಟಾಸ್ಕೈ ತನ್ನ ಸೆಟ್‌ಅಪ್ ಬಾಕ್ಸ್ ಡಿವೈಸ್‌ಗಳ ಬೆಲೆಯಲ್ಲಿ ಭರ್ಜರಿ ಕಡಿತ ಘೋಷಿಸಿದ್ದು, ಹೀಗಾಗಿ ರಿಯಾಯಿತಿ ದರದಲ್ಲಿ ಸಂಸ್ಥೆಯ ಸೆಟ್‌ಟಾಪ್‌ ಬಾಕ್ಸ್‌ ಖರೀದಿಸಬಹುದಾಗಿದೆ.

ಕೊಡುಗೆಯು

ಹೌದು, ಟಾಟಾಸ್ಕೈ ಸಂಸ್ಥೆಯು ಪ್ರಸ್ತುತ ಸೆಟ್‌ಟಾಪ್‌ ಬಾಕ್ಸ್‌ ಡಿವೈಸ್‌ಗಳ ದರದಲ್ಲಿ ಇಳಿಕೆ ಮಾಡಿದೆ. ಸಂಸ್ಥೆಯ ತನ್ನ ಎಸ್‌ಡಿ ಸೆಟ್‌ಅಪ್‌ ಬಾಕ್ಸ್‌, ಹೆಚ್‌ಡಿ ಸೆಟ್‌ಅಪ್ ಬಾಕ್ಸ್, ಟಾಟಾಸ್ಕೈ ಬಿಂಜ್ ಪ್ಲಸ್‌ ಡಿವೈಸ್‌ಗಳ ಬೆಲೆಯಲ್ಲಿ ಈಗ ದರ ಕಡಿತ ಮಾಡಿದೆ. ಅಂದಹಾಗೇ ಈ ರಿಯಾಯಿತಿ ಕೊಡುಗೆಯು ಸೀಮಿತ ಅವಧಿಯವರೆಗೆ ಮಾತ್ರ ಎನ್ನಲಾಗಿದೆ. ಈ ಹಿಂದೆಯೂ ಈ ಡಿವೈಸ್‌ಗಳ ಬೆಲೆಯಲ್ಲಿ ಕಂಪನಿಯು ರಿಯಾಯಿತಿ ಘೋಷಿಸಿತ್ತು. ಹಾಗಾದರೇ ಟಾಟಾಸ್ಕೈ ಸೆಟ್‌ಟಾಪ್‌ ಬಾಕ್ಸ್‌ಗಳ ರಿಯಾಯಿತಿ ದರದ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ಟಾಟಾ ಸ್ಕೈ ಹೆಚ್‌ಡಿ ಎಸ್‌ಟಿಬಿ ಸೆಟ್‌ಟಾಪ್‌ ಬಾಕ್ಸ್

ಟಾಟಾ ಸ್ಕೈ ಹೆಚ್‌ಡಿ ಎಸ್‌ಟಿಬಿ ಸೆಟ್‌ಟಾಪ್‌ ಬಾಕ್ಸ್

ಟಾಟಾಸ್ಕೈ ಬಿಂಜ್‌ ಪ್ಲಸ್‌ ಸೆಟ್‌ಟಾಪ್‌ ಬಾಕ್ಸ್‌ ದರವು 1,499ರೂ. ಆಗಿದೆ. ಆದರೆ ಇದೀಗ ಬೆಲೆ ಇಳಿಕೆಯಿಂದಾಗಿ ಬಳಕೆದಾರರು ಈ ಡಿವೈಸ್‌ ಅನ್ನು 1,249ರೂ.ಗಳಿಗೆ ಖರೀದಿಸಬಹುದಾಗಿದೆ. ಈ ಡಿವೈಸ್ ಖರೀದಿಸುವ ಗ್ರಾಹಕರು TSKY150 ಕೂಪನ್ ಬಳಕೆ ಮಾಡಿದಾಗ 150ರೂ. ರಿಯಾಯಿತಿ ಸಿಗಲಿದೆ. ಟಾಟಾ ಸ್ಕೈ ಎಚ್‌ಡಿ ಎಸ್‌ಟಿಬಿ ಬಳಕೆದಾರರು ತಮ್ಮ ನೆಚ್ಚಿನ ಕಂಟೆಂಟ್‌ ಅನ್ನು ಹೆಚ್‌ಡಿ ಗುಣಮಟ್ಟದಲ್ಲಿ ವೀಕ್ಷಿಸಲು ಡಾಲ್ಬಿ ಡಿಜಿಟಲ್ ಸರೌಂಡ್ ಸೌಂಡ್‌ನ ಬೆಂಬಲದೊಂದಿಗೆ ಅನುಮತಿಸುತ್ತದೆ.

ಟಾಟಾ ಸ್ಕೈ + ಹೆಚ್‌ಡಿ ಎಸ್‌ಟಿಬಿ ಸೆಟ್‌ಟಾಪ್‌ ಬಾಕ್ಸ್

ಟಾಟಾ ಸ್ಕೈ + ಹೆಚ್‌ಡಿ ಎಸ್‌ಟಿಬಿ ಸೆಟ್‌ಟಾಪ್‌ ಬಾಕ್ಸ್

ಟಾಟಾ ಸ್ಕೈ + ಹೆಚ್‌ಡಿ ಎಸ್‌ಟಿಬಿ ದರವು 4,999 ರೂ. ಆಗಿದೆ. ಆದರೆ ಇದೀಗ ಬೆಲೆ ಇಳಿಕೆಯಿಂದಾಗಿ ಬಳಕೆದಾರರು ಈ ಡಿವೈಸ್‌ ಅನ್ನು 4,599 ರೂ.ಗಳಿಗೆ ಖರೀದಿಸಬಹುದಾಗಿದೆ. ಈ ಡಿವೈಸ್ ಖರೀದಿಸುವ ಗ್ರಾಹಕರು TSKY400 ಕೂಪನ್ ಬಳಕೆ ಮಾಡಿದಾಗ 400ರೂ. ರಿಯಾಯಿತಿ ಸಿಗಲಿದೆ. ಟಾಟಾ ಸ್ಕೈ + ಹೆಚ್‌ಡಿ ಎಸ್‌ಟಿಬಿ ಬಳಕೆದಾರರಿಗೆ 625 ಗಂಟೆಗಳ ಲೈವ್ ಟಿವಿ ವಿಷಯವನ್ನು ರೆಕಾರ್ಡ್ ಮಾಡಲು ಅನುಮತಿಸುತ್ತದೆ. ಇದರ ಜೊತೆಗೆ, ಬಳಕೆದಾರರು ತಮ್ಮ ನೆಚ್ಚಿನ ಸರಣಿಯನ್ನು ಎಸ್‌ಟಿಬಿಯೊಂದಿಗೆ ಸ್ಟ್ಯಾಂಡ್-ಬೈ ಮೋಡ್‌ನಲ್ಲಿ ರೆಕಾರ್ಡ್ ಮಾಡಬಹುದು.

ಟಾಟಾಸ್ಕೈ ಬಿಂಜ್‌ ಪ್ಲಸ್‌ ಸೆಟ್‌ಟಾಪ್‌ ಬಾಕ್ಸ್‌

ಟಾಟಾಸ್ಕೈ ಬಿಂಜ್‌ ಪ್ಲಸ್‌ ಸೆಟ್‌ಟಾಪ್‌ ಬಾಕ್ಸ್‌

ಟಾಟಾಸ್ಕೈ ಬಿಂಜ್‌ ಪ್ಲಸ್‌ ಸೆಟ್‌ಟಾಪ್‌ ಬಾಕ್ಸ್‌ STB ದರವು 2,499ರೂ. ಆಗಿದೆ. ಆದರೆ ಇದೀಗ ಬೆಲೆ ಇಳಿಕೆಯಿಂದಾಗಿ ಬಳಕೆದಾರರು ಈ ಡಿವೈಸ್‌ ಅನ್ನು 2,299 ರೂ.ಗಳಿಗೆ ಖರೀದಿಸಬಹುದಾಗಿದೆ. ಈ ಡಿವೈಸ್ ಖರೀದಿಸುವ ಗ್ರಾಹಕರು TSKY200 ಕೂಪನ್ ಬಳಕೆ ಮಾಡಿದಾಗ 200ರೂ. ರಿಯಾಯಿತಿ ಸಿಗಲಿದೆ. ಟಾಟಾ ಸ್ಕೈ ಬಿಂಜ್ ಸೇವೆಗೆ ಬಳಕೆದಾರರು ಒಂದು ತಿಂಗಳ ಉಚಿತ ಚಂದಾದಾರಿಕೆಯನ್ನು ಸಹ ಪಡೆಯುತ್ತಾರೆ, ಇದು ಟಾಟಾ ಸ್ಕೈ ಬಿಂಜ್ + ಎಸ್‌ಟಿಬಿ ಬಳಕೆದಾರರಿಗೆ ತಿಂಗಳಿಗೆ 299 ರೂಗಳಿಗೆ ಲಭ್ಯವಿದೆ. ಇದರ ಜೊತೆಗೆ, ಟಾಟಾ ಸ್ಕೈ ಬಿಂಜ್ + ಎಸ್‌ಟಿಬಿಯನ್ನು ಯಶಸ್ವಿಯಾಗಿ ಖರೀದಿಸಿ ಸಕ್ರಿಯಗೊಳಿಸಿದ ನಂತರ ಬಳಕೆದಾರರು ಅಮೆಜಾನ್ ಪ್ರೈಮ್ ವೀಡಿಯೊದ ಮೂರು ತಿಂಗಳ ಉಚಿತ ಚಂದಾದಾರಿಕೆಯನ್ನು ಸಹ ಪಡೆಯುತ್ತಾರೆ.

ಟಾಟಾಸ್ಕೈ ಬಿಂಜ್ ಪ್ಲಸ್‌ ಸೌಲಭ್ಯಗಳು

ಟಾಟಾಸ್ಕೈ ಬಿಂಜ್ ಪ್ಲಸ್‌ ಸೌಲಭ್ಯಗಳು

ಟಾಟಾಸ್ಕೈ ಬಿಂಜ್ ಪ್ಲಸ್‌ ಸೆಟ್‌ಟಾಪ್‌ ಬಾಕ್ಸ್‌, ಸಾಮಾನ್ಯ ಡಿಟಿಎಚ್ ಸೆಟ್‌ಟಾಪ್‌ಗಳಿಗಿಂತ ಭಿನ್ನವಾಗಿದೆ. ಬಿಂಜ್ ಪ್ಲಸ್‌ ಸೆಟ್‌ಟಾಪ್‌ ಬಾಕ್ಸ್‌ನಲ್ಲಿ ಇಂಟರ್ನೆಟ್ ಆಧಾರಿತ ಸೇವೆಗಳು ದೊರೆಯುತ್ತವೆ. ಗೂಗಲ್ ಪ್ಲೇ ಸ್ಟೋರ್ ಸೌಲಭ್ಯ ಇರುತ್ತದೆ ಹಾಗೂ ಅಸಿಸ್ಟಂಟ್ ಅಸಿಸ್ಟಂಟ್ ಆಧಾರಿತ ವಾಯಿಸ್ ಸರ್ಚ್ ಆಯ್ಕೆಯು ಒಳಗೊಂಡಿರುತ್ತದೆ. ಹೀಗಾಗಿ ಸೆಟ್‌ಟಾಪ್‌ ಬಾಕ್ಸ್‌ ಅನ್ನು ವಾಯಿಸ್‌ ಮೂಲಕವೇ ನಿಯಂತ್ರಣ ಮಾಡಬಹುದಾಗಿದೆ.

ಟಾಟಾಸ್ಕೈ ಎಸ್‌ಡಿ ಸೆಟ್‌ಟಾಪ್‌ ಬಾಕ್ಸ್‌

ಟಾಟಾಸ್ಕೈ ಎಸ್‌ಡಿ ಸೆಟ್‌ಟಾಪ್‌ ಬಾಕ್ಸ್‌

ಟಾಟಾಸ್ಕೈ ಎಸ್‌ಡಿ ಸೆಟ್‌ಟಾಪ್‌ ಬಾಕ್ಸ್ ಡಿವೈಸ್‌ನ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಟಾಟಾ ಸ್ಕೈ ಅಧಿಕೃತ ವೆಬ್‌ಸೈಟ್‌ನಿಂದ ಗ್ರಾಹಕರು ನೇರವಾಗಿ ಖರೀದಿಸಿದರೆ ಎಲ್ಲಾ ಎಸ್‌ಟಿಬಿಗಳು ಕಡಿಮೆ ಬೆಲೆಗೆ ಮಾತ್ರ ಲಭ್ಯವಿರುತ್ತವೆ ಎಂಬುದನ್ನು ಗಮನಿಸಿ. ಆಫ್‌ಲೈನ್ ಮಳಿಗೆಗಳಲ್ಲಿ ಕೊಡುಗೆ ಲಭ್ಯವಿರುವುದಿಲ್ಲ ಎನ್ನಲಾಗಿದೆ.

Most Read Articles
Best Mobiles in India

English summary
Tata Sky is offering its STBs including Tata Sky Binge+, Tata Sky HD, and Tata Sky+ HD STB for a reduced rate.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X