ಟಾಟಾಸ್ಕೈ 'ಸ್ಮಾರ್ಟ್‌ ಚಾನೆಲ್ ಪ್ಯಾಕ್': ತಿಂಗಳ ಶುಲ್ಕ 100ರೂ. ಗಡಿ ದಾಟಲ್ಲ!

|

ಪ್ರಸ್ತುತ ಭಾರತೀಯ ಡಿಟಿಎಚ್ ಹಾಗೂ ಕೇಬಲ್ ಟಿವಿ ವಲಯದಲ್ಲಿ ಸಾಕಷ್ಟು ಏರಿಳಿತಗಳು ನಡೆದಿವೆ. ಇದೇ ಮಾರ್ಚ್ 1 ರಿಂದ ಟ್ರಾಯ್ ಸಂಸ್ಥೆಯು ಕೇಬಲ್ ಟಿವಿ ನಿಯಮದಲ್ಲಿ ಮತ್ತೆ ಬದಲಾವಣೆ ಮಾಡುವುದಾಗಿ ತಿಳಿಸಿದ್ದು ಒಂದೆಡೆ ಆದರೆ, ಪ್ರಮುಖ ಡಿಟಿಎಚ್ ಪೂರೈಕೆದಾರರು ಚಂದಾದಾರರನ್ನು ಹೆಚ್ಚಿಸಿಕೊಳ್ಳಲು ವಿಶೇಷ ಆಫರ್‌ ನೀಡುತ್ತ ಸಾಗಿವೆ. ಅವುಗಳಲ್ಲಿ ಟಾಟಾಸ್ಕೈ ಈಗ ಹೆಚ್ಚುವರಿ ಚಾನೆಲ್ ಪ್ಯಾಕ್‌ಗಳಿಗೆ ಆಫರ್ ಘೋಷಿಸಿದೆ.

 ಟಾಟಾಸ್ಕೈ ಸಂಸ್ಥೆ

ಡಿಟಿಎಚ್‌ ಪೂರೈಕೆಯಲ್ಲಿ ಮುಂಚೂಣಿಯಲ್ಲಿರುವ ಟಾಟಾಸ್ಕೈ ಸಂಸ್ಥೆಯು ಇದೀಗ ತನ್ನ 'ಸ್ಮಾರ್ಟ್‌ ಚಾನೆಲ್ ಪ್ಯಾಕ್' ಬೆಲೆಯಲ್ಲಿ ರಿಯಾಯಿತಿ ನೀಡಿದೆ. ಸಂಸ್ಥೆಯು ಸ್ಮಾರ್ಟ್‌ ಚಾನೆಲ್‌ ಪ್ಯಾಕ್‌ಗಳಿಗೆ ಆಫರ್ ತಿಳಿಸಿದ್ದು, ಈ ಚಾನೆಲ್‌ ಗುಚ್ಛಗಳು ಪ್ರಾದೇಶಿಕ ಭಾಷೆಗಳ ಚಾನೆಲ್‌ಗಳನ್ನು ಒಳಗೊಂಡಿವೆ. ಹೀಗಾಗಿ ಪ್ರಾದೇಶಿಕ ಚಾನೆಲ್‌ಗಳ ವೀಕ್ಷಣೆಗೆ ಈ ಚಾನಲ್ ಗುಚ್ಛಗಳು ಪೂರಕವಾಗಿವೆ. ನೂತನ ಪ್ಯಾಕ್‌ಗಳಲ್ಲಿ ಹಿಂದಿ ಚಾನೆಲ್‌ ಪ್ಯಾಕ್ ಹೊರತುಪಡಿಸಿ, ಉಳಿದ ಇತರೆ ಹೊಸ ಚಾನೆಲ್‌ ಪ್ಲ್ಯಾನ್‌ಗಳು 100ರೂ. ಪ್ರೈಸ್‌ ಟ್ಯಾಗ್ ಒಳಗಡೆ ಇವೆ.

ಅಗ್ಗದ ಬೆಲೆಯ ಪ್ಯಾಕ್‌ಗಳು

ಅಗ್ಗದ ಬೆಲೆಯ ಪ್ಯಾಕ್‌ಗಳು

ಟಾಟಾಸ್ಕೈ ಡಿಟಿಎಚ್ ಸಂಸ್ಥೆಯು ಮೆಟ್ರೊ ಪ್ಯಾಕ್, ಸ್ಮಾರ್ಟ್‌ ಪ್ಯಾಕ್, ಬೇಸಿಕ್ ಪ್ಯಾಕ್ ಸೇರಿದಂತೆ ಹಲವು ಆಕರ್ಷಕ ಚಾನೆಲ್ ಗುಚ್ಛಗಳನ್ನು ಹೊಂದಿದೆ. ಆ ಲಿಸ್ಟಿನಲ್ಲಿನ ಪ್ರಾದೇಶಿಕ ಭಾಷೆಗಳ 'ಸ್ಮಾರ್ಟ್‌ ಚಾನೆಲ್ ಪ್ಯಾಕ್‌'ಗಳಿ ಶುಲ್ಕ ಕಡಿಮೆ ಮಾಡಿದೆ. ಈ ಹೊಸ ಚಾನೆಲ್‌ ಗುಚ್ಛಗಳ ತಿಂಗಳ ಬೆಲೆಗಳು 100ರೂ.ಬೆಲೆಯ ಒಳಗೆ ಇವೆ. (ಹಿಂದಿ ಚಾನೆಲ್ ಗುಚ್ಛ ಹೊರತುಪಡಿಸಿ)

ಯಾವ ಚಾನೆಲ್‌ಗಳು ಇವೆ

ಯಾವ ಚಾನೆಲ್‌ಗಳು ಇವೆ

ಗ್ರಾಹಕರು ಈಗಾಗಲೇ ಹೊಂದಿರುವ ಚಾನೆಲ್‌ ಪ್ಲ್ಯಾನ್‌ಗೆ ಹೆಚ್ಚುವರಿಯಾಗಿ ಈ ಸ್ಮಾರ್ಟ್‌ ಚಾನೆಲ್ ಪ್ಯಾಕ್ ರೀಚಾರ್ಜ್ ಮಾಡಿಸುವ ಆಯ್ಕೆ ಆಗಿದೆ. ಇನ್ನು ಟಾಟಾಸ್ಕೈನ ಸ್ಮಾರ್ಟ್‌ ಚಾನೆಲ್‌ ಪ್ಯಾಕ್‌ಗಳು ಮನರಂಜನೆಯ ಚಾನೆಲ್‌ಗಳು ಹಾಗೂ ನ್ಯೂಸ್‌ ಚಾನೆಲ್‌ಗಳನ್ನು ಒಳಗೊಂಡಿವೆ. ಈ ಪ್ಯಾಕ್‌ಗಳಲ್ಲಿ ಎಸ್‌ಡಿ ಚಾನೆಲ್‌ಗಳನ್ನು ಸೌಲಭ್ಯ ಪಡೆದಿದ್ದು, ಯಾವುದೇ ಹೆಚ್‌ಡಿ ಚಾನೆಲ್‌ಗಳು ಲಭ್ಯವಾಗುವುದಿಲ್ಲ.

ಪ್ರಾದೇಶಿಕ ಭಾಷೆಯ ಚಾನೆಲ್‌ಗಳು

ಪ್ರಾದೇಶಿಕ ಭಾಷೆಯ ಚಾನೆಲ್‌ಗಳು

ಓಡಿಶಾ ಸ್ಮಾರ್ಟ್‌ ಚಾನೆಲ್ ಪ್ಯಾಕ್ ತಿಂಗಳ ದರವು 56.64ರೂ. ಆಗಿದ್ದು, ಒಟ್ಟು 20 ಚಾನೆಲ್‌ಗಳನ್ನು ಒಳಗೊಂಡಿರಲಿದೆ. ಬೆಂಗಾಲಿ ಸ್ಮಾರ್ಟ್‌ ಚಾನೆಲ್‌ ಪ್ಯಾಕ್‌ ತಿಂಗಳ ಶುಲ್ಕವು 58.06ರೂ ಆಗಿದ್ದು, 9ಎಸ್‌ಡಿ ಚಾನೆಲ್‌ಗಳನ್ನು ಹೊಂದಿದೆ. ಅದೇ ರೀತಿ ಮರಾಠಿ ಸ್ಮಾರ್ಟ್‌ ಚಾನೆಲ್ ಪ್ಯಾಕ್‌ ತಿಂಗಳ ದರವು 52.16ರೂ ಆಗಿದ್ದು, ಜನಪ್ರಿಯ ಮರಾಠಿ ಚಾನೆಲ್‌ಗಳು ಲಭ್ಯ ಇರಲಿವೆ. ಇನ್ನು ತಿಂಗಳ ಮೊತ್ತ 91.27ರೂ.ಗಳಿಗೆ ತಮಿಳ ಸ್ಮಾರ್ಟ್‌ ಚಾನೆಲ್ ಪ್ಯಾಕ್ ಲಭ್ಯವಾಗಲಿದೆ. ಹಾಗೆಯೇ 88.5ರೂ.ಗಳಿಗೆ ತೆಲಗು ಸ್ಮಾರ್ಟ್‌ ಚಾನೆಲ್ ಪ್ಯಾಕ್ ಲಭ್ಯ ಇದ್ದು, ಈ ಪ್ಯಾಕ್ 10 ಎಸ್‌ಡಿ ಚಾನೆಲ್‌ ಹೊಂದಿದೆ. ಹಿಂದಿ ಸ್ಮಾರ್ಟ್‌ ಚಾನೆಲ್‌ ತಿಂಗಳ ದರವು 105ರೂ ಆಗಿದೆ.

ಟ್ರಾಯ್‌ನ ಹೊಸ ನಿಯಮ

ಟ್ರಾಯ್‌ನ ಹೊಸ ನಿಯಮ

ಟ್ರಾಯ್ ಸಂಸ್ಥೆಯು ಇದೇ ಮಾರ್ಚ್ 1, 2020ಕ್ಕೆ ಅನ್ವಯವಾಗುವಂತೆ ಹೊಸ ನಿಯಮ ಜಾರಿ ಮಾಡಲಿದ್ದು, ಕೇಬಲ್ ಟಿವಿ NCF ಶುಲ್ಕವನ್ನು 130ರೂ.ಗೆ (ಟ್ಯಾಕ್ಸ್ ಹೊರತುಪಡಿಸಿ) ಇಳಿಕೆ ಮಾಡಲಿದೆ. ಸದ್ಯ NCF ಶುಲ್ಕವು 153ರೂ. ಆಗಿದೆ. ಟ್ರಾಯ್ 2019ರ ಆರಂಭದಲ್ಲಿ ಜಾರಿ ಮಾಡಿದ್ದ ನಿಯಮದ ಟಿವಿ ಕೇಬಲ್‌ ತಿಂಗಳ ಶುಲ್ಕದ ಬಗ್ಗೆ ಗ್ರಾಹಕರಲ್ಲಿ ಗೊಂದಲಗಳಿದ್ದವು ಆ ನಿಟ್ಟಿನಲ್ಲಿ ಟ್ರಾಯ್ ಈಗ ನಿಯಮದಲ್ಲಿ ಬದಲಾವಣೆ ತರಲು ಮುಂದಾಗಿದೆ. ಆ ಬಳಿಕ ಚಾನೆಲ್‌ಗಳ ತಿಂಗಳ ದರ ಇನ್ನಷ್ಟು ಕಡಿಮೆ ಆಗುವ ಸಾಧ್ಯತೆಗಳಿವೆ.

Best Mobiles in India

English summary
Tata Sky is offering lots of channel packs options to the subscribers which include Lite packs, Metro Packs, Smart channel packs and more. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X