Just In
- 1 min ago
13 ಇಂಚಿನ ಎಚ್ಪಿ ಸ್ಪೆಕ್ಟರ್ x360 ಕನ್ವರ್ಟಿಬಲ್ ಲ್ಯಾಪ್ಟಾಪ್ ಲಾಂಚ್!
- 36 min ago
ಬಿಡುಗಡೆಯಾದ ಪೋರ್ನ್ಹಬ್ ಇನ್ಸೈಟ್..! ದೇಶದಲ್ಲಿ ಕಡಿಮೆಯಾಯ್ತು ಪೋರ್ನ್ ವೀಕ್ಷಣೆ..!
- 3 hrs ago
ಟಿಕ್ಟಾಕ್ ಫಾಲೋವರ್ಸ್ ಹೆಚ್ಚಿಸಿಕೊಳ್ಳಬೇಕೆ?..ಹಾಗಿದ್ರೆ ಈ ಟಿಪ್ಸ್ ಮರೆಯದೆ ಬಳಸಿ!
- 4 hrs ago
ಹುವಾವೇ P40 ಲೈಟ್ ಸ್ಮಾರ್ಟ್ಫೋನ್ನ ಫೀಚರ್ಸ್ ಲೀಕ್!
Don't Miss
- News
ಮೆಟ್ರೋ ಮುಂದೆ ಜಿಗಿದು ವ್ಯಕ್ತಿ ಆತ್ಮಹತ್ಯೆ: ಮನೆಯಲ್ಲಿ ಪತ್ನಿ, ಮಗಳು ಸಾವಿಗೆ ಶರಣು
- Automobiles
ರೈತರ ಬೆಳೆ ರಕ್ಷಣೆಗಾಗಿ ಉಪಗ್ರಹ ತಯಾರಿಸಲು ಮುಂದಾದ ಯುವಕರು
- Sports
ಅಂಡರ್ಟೇಕರ್ vs ಬ್ರಾಕ್ ಲೆಸ್ನರ್, ರೋಮಾಂಚನಕಾರಿ ಕಾಳಗ: ವೀಡಿಯೋ
- Finance
ಚಿನ್ನದ ಮೇಲೆ ಹೂಡಿಕೆ ಮಾಡಲು ಬೊಂಬಾಟ್ ಐಡಿಯಾಗಳು
- Education
IAF ನೇಮಕಾತಿ: ದ್ವಿತೀಯ ಪಿಯುಸಿ ಪಾಸ್ ?... ತಿಂಗಳಿಗೆ 33,000/-ರೂ ವೇತನ ಪಡೆಯುವ ಅವಕಾಶ
- Lifestyle
ಮೇಕಪ್ ಹಚ್ಚಿದಾಗ ಎಂದಿಗೂ ಈ ಕೆಲಸಗಳನ್ನು ಮಾಡಲೇಬೇಡಿ
- Movies
ಕೆಜಿಎಫ್ ಚಾಪ್ಟರ್ 2 ಫಸ್ಟ್ ಲುಕ್ ಬಗ್ಗೆ ಸಂಜಯ್ ದತ್ ಹೇಳಿದ್ದೇನು?
- Travel
ಹಳ್ಳಿಗಾಡಿನ ಸೊಗಡನ್ನು ಅನುಭವಿಸಲು ಬೆಂಗಳೂರಿನ ಸುತ್ತಮುತ್ತ ಇರುವ ಈ ಸುಂದರ ಗ್ರಾಮಗಳಿಗೆ ಹೋಗಿ ಬನ್ನಿ
'ಟಾಟಾಸ್ಕೈ ಡಿ2ಎಚ್'ನಿಂದ ಸ್ಮಾರ್ಟ್ ಪ್ಲ್ಯಾನ್ಸ್ ಲಾಂಚ್ : ಆರಂಭಿಕ ಬೆಲೆ 206ರೂ!
ಭಾರತೀಯ ಡಿ2ಎಚ್ ಸರ್ವೀಸ್ ವಲಯದಲ್ಲಿಗ ಟಾಟಾಸ್ಕೈ ಸಂಸ್ಥೆಯು ಮುಂಚೂಣಿಯಲ್ಲಿ ಗುರುತಿಸಿಕೊಂಡಿದ್ದು, ಗ್ರಾಹಕರಿಗೆ ಹಲವು ಜನಪ್ರಿಯ ಪ್ಲ್ಯಾನ್‌ಗಳನ್ನು ನೀಡಿದೆ. ಈಗಾಗಲೇ ಟಾಟಾಸ್ಕೈ ತನ್ನ ಡಿ2ಎಚ್ ಗ್ರಾಹಕರಿಗೆ ಅನುಕೂಲಕರ ತಿಂಗಳ ಪ್ಲ್ಯಾನ್‌ಗಳ ಹಲವು ಗುಚ್ಛಗಳನ್ನು ಪರಿಚಯಿಸಿದೆ. ಪ್ರಾದೇಶಿಕ ಚಾನೆಲ್‌ಗಳನ್ನು ಮತ್ತು FTA ಚಾನೆಲ್ಸ್‌ಗಳನ್ನು ಒಳಗೊಂಡ ಸಂಸ್ಥೆಯ ಹಲವು 'ಸ್ಮಾರ್ಟ್ ಪ್ಲ್ಯಾನ್'ಗಳು ಗ್ರಾಹಕರನ್ನು ಸೆಳೆದಿವೆ. ಈಗ ಮತ್ತಷ್ಟು ಹೊಸ ಪ್ಲ್ಯಾನ್‌ಗಳನ್ನು ಲಾಂಚ್ ಮಾಡಿದೆ.

ಹೌದು, ಟಾಟಾಸ್ಕೈ ಸಂಸ್ಥೆಯು ಹೊಸದಾಗಿ ಕೆಲವು ಸ್ಮಾರ್ಟ್ ಪ್ಲ್ಯಾನ್‌ಗಳನ್ನು ಡಿ2ಎಚ್ ಗ್ರಾಹಕರಿಗೆ ಪರಿಚಯಿಸಿದೆ. ಈ ಹೊಸ ಸ್ಮಾರ್ಟ್ ಪ್ಲ್ಯಾನ್‌ಗಳು ಟ್ರಾಯ್ ನಿಗದಿ ಮಾಡಿರುವ NCF ಶುಲ್ಕ 153ರೂ.ಗಳ ಜೊತೆಗೆ ಮುಖ್ಯವಾಗಿ ಪ್ರಾದೇಶಿಕ ಭಾಷೆಯ ಚಾನೆಲ್‌ಗಳನ್ನು ಒಳಗೊಂಡಿರಲಿವೆ. ತಿಂಗಳಿಗೆ 206ರೂ.ಗಳ ಆರಂಭಿಕ ಬೆಲೆಯಿಂದ ಟಾಟಾಸ್ಕೈ ಸ್ಮಾರ್ಟ್ ಪ್ಲ್ಯಾನ್‌ಗಳು ಶುರುವಾಗಲಿದ್ದು, 249ರೂ. ಬೆಲೆಯ ಅಂತರದಲ್ಲಿ ಲಭ್ಯವಾಗಲಿವೆ.

ಹಿಂದಿ ಪ್ರಾದೇಶಿಕ ಚಾನೆಲ್ಸ್‌ಗಳನ್ನೊಳಗೊಂಡ 'ಹಿಂದಿ ಸ್ಮಾರ್ಟ್ ಪ್ಲ್ಯಾನ್' 249ರೂ. ಶುಲ್ಕವನ್ನು ನಿಗದಿ ಪಡಿಸಲಾಗಿದೆ. ಹಾಗೆಯೇ ಪಂಜಾಬಿ ಪ್ರಾದೇಶಿಕ ಚಾನೆಲ್ಸ್‌ಗಳನ್ನೊಳಗೊಂಡ 'ಪಂಜಾಬಿ ಸ್ಮಾರ್ಟ್ ಪ್ಲ್ಯಾನ್' ಸಹ 249ರೂ. ಬೆಲೆಯನ್ನು ಹೊಂದಿದೆ. ಇನ್ನು ಬಂಗಾಳಿ ಭಾಷೆಯ ಚಾನೆಲ್ಸ್‌ಗಳನ್ನು ಹೊಂದಿರುವ ಬಂಗಾಳಿ ಸ್ಮಾರ್ಟ್ ಪ್ಲ್ಯಾನ್ 220ರೂ.ಗಳಾಗಿದ್ದು, ಇವುಗಳೊಂದಿಗೆ FTA ಚಾನೆಲ್ಸ್ಗಳು ಸೇರಿಸಲಿವೆ.

ಕನ್ನಡ ಭಾಷೆಯ ಚಾನೆಲ್ಸ್‌ಗಳು ಮತ್ತು FTA ಚಾನೆಲ್ಸ್‌ಗಳ ಗುಚ್ಛದ ಕನ್ನಡ ಸ್ಮಾರ್ಟ್ ಪ್ಲ್ಯಾನ್ ಬೆಲೆಯು 249ರೂ.ಗಳಾಗಿದ್ದು, ಅದೇ ರೀತಿ ತೆಲಗು ಚಾನೆಲ್ಸ್‌ಗಳನ್ನು ಒಳಗೊಂಡಿರುವ ತೆಲಗು ಸ್ಮಾರ್ಟ್ ಪ್ಲ್ಯಾನ್ ಬೆಲೆಯು ಸಹ 249ರೂ.ಗಳೆಂದು ನಿಗದಿ ಮಾಡಲಾಗಿದೆ. ಗುಜರಾತಿ ಸ್ಮಾರ್ಟ್ ಪ್ಲ್ಯಾನ್ ಸಹ 249ರೂ ಆಗಿದೆ. ತಮಿಳ ಸ್ಮಾರ್ಟ್ ಪ್ಲ್ಯಾನ್ ದರವು 249ರೂ. ಆಗಿದ್ದು, ಈ ಪ್ಲ್ಯಾನಿನಲ್ಲಿ ತಮಿಳ ಪ್ರಾದೇಶಿಕ ಚಾನೆಲ್‌ಗಳು ಲಭ್ಯವಾಗಲಿವೆ.

ಇನ್ನು ಓಡಿಸಾ ಸ್ಮಾರ್ಟ್ ಪ್ಲ್ಯಾನ್ ಬೆಲೆಯು 211ರೂ.ಗಳಾಗಿದ್ದು, ಮರಾಠಿ ಸ್ಮಾರ್ಟ್ ಪ್ಲ್ಯಾನ್ ಶುಲ್ಕವು 206ರೂ.ಗಳಾಗಿದೆ. ಹಾಗೆಯೇ ಮಲಿಯಾಳಂ ಸ್ಮಾರ್ಟ್ ಪ್ಲ್ಯಾನ್ ಬೆಲೆಯು ಸಹ 249ರೂ.ಗಳಾಗಿದೆ. ಈ ಎಲ್ಲ ಹೊಸ ಸ್ಮಾರ್ಟ್ ಪ್ಲ್ಯಾನ್‌ಗಳು DRP ಮತ್ತು NCF ಶುಲ್ಕವನ್ನು ಒಳಗೊಂಡಿರುತ್ತವೆ. ಗ್ರಾಹಕರು ಈ ಪ್ಲ್ಯಾನ್‌ಗಳ ಚಂದಾದಾರಿಕೆಯನ್ನು ಪಡೆದುಕೊಳ್ಳಬಹುದಾಗಿದೆ. ಇದರೊಂದಿಗೆ ಆಡ್ ಆನ್ ಚಾನೆಲ್ಸ್‌ಗಳ ಆಯ್ಕೆಯು ಗ್ರಾಹಕರಿಗೆ ಲಭ್ಯ ಇರಲಿದೆ. ಹೆಚ್ಚುವರಿಯಾಗಿ ಚಾನೆಲ್ಸ್‌ಗಳಿಗೆ ಸಬ್‌ಸ್ಕ್ರೈಬ್ ಆಗಬಹುದಾಗಿದೆ.
-
22,990
-
29,999
-
14,999
-
28,999
-
34,999
-
1,09,894
-
15,999
-
36,591
-
79,999
-
71,990
-
14,999
-
9,999
-
64,900
-
34,999
-
15,999
-
25,999
-
46,669
-
19,999
-
17,999
-
9,999
-
22,160
-
18,200
-
18,270
-
22,300
-
32,990
-
33,530
-
14,030
-
6,990
-
20,340
-
12,790