Just In
Don't Miss
- News
ಹೊಸ ವರ್ಷಕ್ಕೆ ಈ ಬಾರಿ ಚಿತ್ರದುರ್ಗದಲ್ಲಿ ಸೊಪ್ಪಿನ ಕಡಲೆ ಸಿಗೋದು ಡೌಟು
- Sports
ಪಂತ್ ಮತ್ತೆ ವಿಫಲ ಸ್ಥಾನ, ಪಡೆಯಲು ಸಫಲ; ಇದು ಯಾರ ಕೃಪಾಕಟಾಕ್ಷದ ಫಲ
- Lifestyle
ಬಿಳಿ ಕಾಳುಮೆಣಸಿನಲ್ಲಿರುವ ಆರೋಗ್ಯಕರ ಗುಣಗಳಿವು
- Education
Bank Of Maharashtra Recruitment 2019: 300 ಸಾಮಾನ್ಯ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ
- Automobiles
ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೊಳಿಸಿದ ಜೆಮೊಪಾಯ್
- Finance
ಡಾಲರ್ ಎದುರು ಹೆಚ್ಚಿದ ರುಪಾಯಿ ಬಲ: 6 ವಾರಗಳಲ್ಲಿ ಗರಿಷ್ಠ ಮಟ್ಟ
- Movies
ಮಧ್ಯರಾತ್ರಿ ಆರಾಧ್ಯ ದೈವನ ಹುಟ್ಟು ಹಬ್ಬ ಆಚರಿಸಿದ ವಿಜಿ 'ಸಲಗ' ಟೀಮ್
- Travel
ದಕ್ಷಿಣ ಭಾರತಕ್ಕೆ ಪ್ರವಾಸ ಹೋದ್ರೆ ಈ ಅತ್ಯುತ್ತಮ ಪಾನೀಯಗಳು, ತಿಂಡಿಗಳು ಮತ್ತು ಭಕ್ಷ್ಯಗಳನ್ನೂ ಟ್ರೈ ಮಾಡಿ!
ಟಾಟಾಸ್ಕೈ ಬಳಕೆದಾರರಿಗೆ ಖುಷಿ ಸಮಾಚಾರ!..ವಾಟ್ಸಪ್‌ನಲ್ಲಿ ಬ್ಯಾಲೆನ್ಸ್ ತಿಳಿಯಿರಿ!
ಪ್ರಸ್ತುತ ಬಹುತೇಕ ಅಗತ್ಯ ಕೆಲಸಗಳು ಸ್ಮಾರ್ಟ್‌ಫೋನ್ ಡಿವೈಸ್ ಮೂಲಕವೇ ಮಾಡಿಬಿಡಬಹುದಾಗಿದ್ದು, ಅದಕ್ಕೆ ಸಾಮಾಜಿಕ ಜಾಲತಾಣಗಳು ಮತ್ತು ಕೆಲವು ಆಪ್ಸ್‌ಗಳು ಅತ್ಯುತ್ತಮ ಸಾಥ್ ನೀಡುತ್ತಿವೆ. ಈ ನಿಟ್ಟಿನಲ್ಲಿ ಇದೀಗ ಜನಪ್ರಿಯ ಟಾಟಾಸ್ಕೈ ಡಿಟಿಎಚ್ ಸಂಸ್ಥೆಯು ವಾಟ್ಸಪ್ ಪ್ಲಾಟ್‌ಫಾರ್ಮ್ ಬಳಸಿಕಂಡು ತನ್ನ ಗ್ರಾಹಕರಿಗೆ ಅನುಕೂಲಕರ ಸೇವೆ ನೀಡಲು ಮುಂದಾಗಿದೆ
ಹೌದು, ಟಾಟಾಸ್ಕೈ ಸಂಸ್ಥೆಯು ಈಗ ವಾಟ್ಸಪ್ ಬ್ಯುಸಿನೆಸ್ ಅಕೌಂಟ್ ಅನ್ನು ತೆರೆದಿದ್ದು, ಈ ಮೂಲಕ ಗ್ರಾಹಕರಿಗೆ ತ್ವರಿತವಾಗಿ ಅಗತ್ಯ ಸೇವೆ ನೀಡಲು ಸಜ್ಜಾಗಿದೆ. ಗ್ರಾಹಕರು ತಮ್ಮ ಟಾಟಾಸ್ಕೈ ಅಕೌಂಟ್‌ನ ಮಾಹಿತಿಯನ್ನು ತಿಳಿಯಲು, ಡಿಟಿಎಚ್ ರೀಚಾರ್ಜ್ ಮಾಡಿಸಿಕೊಳ್ಳಲು ಮತ್ತು ರೀಚಾರ್ಜ್ ಮಾಡಿದ ಮೇಲೆ ಅಕೌಂಟ್ ರಿಪ್ರೇಶ್ ಮಾಡಲು ಕಂಪೆನಿಯ ಹೊಸ ವಾಟ್ಸಪ್ ಖಾತೆಯ ನೆರವು ಪಡೆಯಬಹುದಾಗಿದೆ.
ಕಳೆದ ವರ್ಷವೇ 2018ರಲ್ಲಿ ಟಾಟಾಸ್ಕೈ ಸಂಸ್ಥೆಯು ವಾಟ್ಸಪ್ ಬ್ಯುಸಿನೆಸ್ ಖಾತೆಯನ್ನು ತೆರೆದಿದ್ದು, ಆದ್ರೆ ಇದೀಗ ಆ ಅಕೌಂಟ್ ಕಾರ್ಯರೂಪಕ್ಕೆ ಬಂದಿದೆ. ಈ ವಾಟ್ಸಪ್ ಅಕೌಂಟ್‌ನಲ್ಲಿ ಗ್ರಾಹಕರು ಅಕೌಂಟ್ ಬ್ಯಾಲೆನ್ಸ್, ಇನ್‌ಸ್ಟಂಟ್ ರೀಚಾರ್ಜ್ ಆಯ್ಕೆ, ಅಗತ್ಯ ಸಂದರ್ಭದಲ್ಲಿ ರೀಚಾರ್ಜ್ ಮಾಡಿಸಿಕೊಳ್ಳಲು, ಅಕೌಂಟ್ ರಿಫ್ರೇಶ್ ಮಾಡಿಸಲು ಕಂಪೆನಿಯ ವಾಟ್ಸಪ್ ಬ್ಯುಸಿನೆಸ್ ಖಾತೆ ಗ್ರಾಹಕರಿಗೆ ಉಪಯುಕ್ತ ಎನಸಲಿದೆ. ಹಾಗಾದರೇ ಟಾಟಾಸ್ಕೈ ವಾಟ್ಸಪ್ ಖಾತೆಯ ಹೊಸ ಸೇವೆಗಳ ಕುರಿತು ಇನ್ನಷ್ಟು ಮಾಹಿತಿಯನ್ನು ಮುಂದೆ ನೋಡೋಣ ಬನ್ನಿರಿ.

ವಾಟ್ಸಪ್‌ನಲ್ಲಿ ಲಭ್ಯವಾಗುವ ಸೇವೆಗಳು
ಟಾಟಾಸ್ಕೈ ಸಂಸ್ಥೆಯು ತನ್ನ ಗ್ರಾಹಕರು ವಾಟ್ಸಪ್‌ನಲ್ಲಿಯೇ ಈಗ ಹಲವು ಸೇವೆಗಳನ್ನು ನೀಡುತ್ತಿದೆ. ಅವುಗಳಲ್ಲಿ ಮುಖ್ಯವಾಗಿ ಬ್ಯಾಲೆನ್ಸ್ ಚೆಕ್ ಮಾಡುವುದು, ಪ್ರಸ್ತುತ ಚಾನೆಲ್ ಪ್ಯಾಕ್ ಬಗ್ಗೆ ಮಾಹಿತಿ ತಿಳಿಯುವುದು, ಇನ್‌ಸ್ಟಂಟ್ (ತ್ವರಿತವಾಗಿ) ರೀಚಾರ್ಜ್ ಮಾಡಿಕೊಳ್ಳುವ ಅವಕಾಶ, ಅಕೌಂಟ್ ರಿಫ್ರೇಶ್ ಮಾಡುವ ಸೌಲಭ್ಯ, ಎಮರ್ಜನ್ಸಿ ಟಾಪ್ಅಪ್ ಸೇವೆಗಳನ್ನು ದೊರಕಿಸಲು ಅಣಿಯಾಗಿದೆ.

ಟಾಟಾಸ್ಕೈ ವಾಟ್ಸಪ್ ಸೇವೆ ಪಡೆಯುವುದು ಹೇಗೆ?
ಟಾಟಾಸ್ಕೈ ಗ್ರಾಹಕರು ಈಗ ವಾಟ್ಸಪ್ ಮೂಲಕವೇ ತಮ್ಮ ಖಾತೆಯ ಬ್ಯಾಲೆನ್ಸ್ ಚೆಕ್ ಮಾಡಬಹುದಾಗಿದ್ದು, ಅದಕ್ಕಾಗಿ ಕಂಪೆನಿಯು ಬ್ಯುಸಿನೆಸ್ ಖಾತೆಯ ನಂಬರ್ +91 1800 208 6633 ನೀಡಿದೆ. ಈ ನಂಬರ್ ಅನ್ನು ಗ್ರಾಹಕರು ತಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಸೇವ್ ಮಾಡಿಕೊಂಡು ಒಂದು ಮೆಸೆಜ್ ಕಳುಹಿಸಬೇಕು. ಆನಂತರ ಕಂಪೆನಿಯಿಂದ ರಿಪ್ಲೇ ಬರುವುದು ಮತ್ತು ವಾಟ್ಸಪ್ ಸೇವೆ ಚಾಲ್ತಿ ಆಗುವುದು. ಮತ್ತು ರಿಜಿಸ್ಟರ್ ಮೊಬೈಲ್ ನಂಬರ್‌ನಿಂದ 92296-92296 ಮಿಸ್‌ಕಾಲ್ ಮಾಡಿ ಅಥವಾ 56633 ನಂಬರ್‌ಗೆ WHATSAPP ಎಂದು ಎಸ್‌ಎಮ್‌ಎಸ್ ಸಹ ಮಾಡಿ ಟಾಟಾಸ್ಕೈ ವಾಟ್ಸಪ್ ಸೇವೆ ಪಡೆಯಬಹುದು.

ಬ್ಯಾಲೆನ್ಸ್ ಚೆಕ್ ಮಾಡಲು ಹೀಗೆ ಮಾಡಿ
ಟಾಟಾಸ್ಕೈ ಸಂಸ್ಥೆಯ ವಾಟ್ಸಪ್ ಬ್ಯುಸಿನೆಸ್ ಅಕೌಂಟ್‌ನಲ್ಲಿ ಒಟ್ಟು ಎಂಟು ಸೇವೆಗಳು ದೊರೆಯಲಿವೆ. ಗ್ರಾಹಕರು ವಾಟ್ಸಪ್‌ನಲ್ಲಿ ಟಾಟಾಸ್ಕೈ ಬ್ಯಾಲೆನ್ಸ್ ಚೆಕ್ ಮಾಡಲು ಕ್ಯಾಪಿಟಲ್ ಅಕ್ಷರದಲ್ಲಿ 'BALANCE' ಎಂದು ಬರೆದು ಮೆಸೆಜ್ ಮಾಡಿದರೇ, ಕಂಪೆನಿಯಿಂದ ಬ್ಯಾಲೆನ್ಸ್ ಎಷ್ಟಿದೆ ಎಂದು ಮರಳಿ ಮೆಸೆಜ್ ಬರುತ್ತದೆ. ಅಂದಹಾಗೇ ಗ್ರಾಹಕರು ಟಾಟಾಸ್ಕೈನಲ್ಲಿ ರಿಜಿಸ್ಟರ್ ಆದ ಮೊಬೈಲ್ ನಂಬರ್‌ನಿಂದಲೇ ಮೆಸೆಜ್ ಮಾಡಬೇಕು.

ಸೇವೆಯನ್ನು ನಿಲ್ಲಿಸಲು ಅವಕಾಶ
ವಾಟ್ಸಪ್ ಬ್ಯುಸಿನೆಸ್ ಖಾತೆಯನ್ನು ತೆರೆದಿರುವ ಟಾಟಾಸ್ಕೈ ಸಂಸ್ಥೆಯು ತನ್ನ ಗ್ರಾಹಕರಿಗೆ ಅಗತ್ಯ ಸೌಲಭ್ಯಗಳನ್ನ ನೀಡಲು ಕ್ರಮಕೈಕೊಂಡಿದೆ. ಹಾಗೆಯೇ ಈ ಸೇವೆಯನ್ನು ಗ್ರಾಹಕರು ಯಾವುದೇ ಸಮಯದಲ್ಲಿ ಬೇಕಾದರು ನಿಲ್ಲಿಸುವ ಅವಕಾಶವನ್ನು ಸಹ ನೀಡಿದೆ. ಅದಕ್ಕಾಗಿ ಗ್ರಾಹಕರು ತಮ್ಮ ರಿಜಿಸ್ಟರ್ ಖಾತೆಯಿಂದ ಕ್ಯಾಪಿಟಲ್ ಅಕ್ಷರಗಳಲ್ಲಿ 'STOP' ಎಂದು ಟೈಪ್ ಮಾಡಿ ಮೆಸೆಜ್ ಕಳುಹಿಸಿದರೇ ಆಯಿತು ಸೇವೆ ಸ್ಥಗಿತವಾಗುತ್ತದೆ.
-
22,990
-
29,999
-
14,999
-
28,999
-
34,999
-
1,09,894
-
15,999
-
36,591
-
79,999
-
71,990
-
14,999
-
9,999
-
64,900
-
34,999
-
15,999
-
25,999
-
46,669
-
19,999
-
17,999
-
9,999
-
22,160
-
18,200
-
18,270
-
22,300
-
33,530
-
14,030
-
6,990
-
20,340
-
12,790
-
7,090